ಜ್ಞಾನದ ಮಾತು
ಒಬ್ಬ ವ್ಯಾಪಾರಿಯು ತಮ್ಮ ದೇಶದಲ್ಲಿ ಒಳ್ಳೆಯ ವ್ಯಾಪಾರ ಮಾಡುತ್ತಿದ್ದನು. ಅವನಿಗೆ ಹೊರದೇಶಕ್ಕೆ ಹೋಗಿ ವ್ಯಾಪಾರ ಮಾಡಿ ಒಳ್ಳೆಯ ದುಡ್ಡು ಸಂಪಾದಿಸಬೇಕೆಂಬ ಅಸೆ ಇತ್ತು. ಈ ವಿಷಯವನ್ನು ತಮ್ಮ ತಂದೆ ತಾಯಿಗೆ ಹೇಳಿದಾಗ ಮೊದಲು ನೀನು ಮದುವೆಯಾಗು ಎಂದು ಹೇಳಿದರು. ಅವರ ಮಾತಿಗೆ ಒಪ್ಪಿ ಮದುವೆಯಾದನು. ಅವನ ಮನಸ್ಸಿನಲ್ಲಿ ಹೊರ ದೇಶಕ್ಕೆ ಹೋಗುವ ಕನಸು ಹಾಗೆ ಉಳಿದಿತ್ತು. ಒಂದು ದಿನ ತನ್ನ ಹೆಂಡತಿಯ ಬಳಿ ಈ ವಿಷಯವನ್ನು ಹೇಳಿ ಅವಳ ಒಪ್ಪಿಗೆಯನ್ನು ಪಡೆದು ಗರ್ಭವತಿಯಾದ ಹೆಂಡತಿಯನ್ನು ತಂದೆ ತಾಯಿಯ