MOTIVATIONAL MYSTRY STORY REAL N REEL

D. B ಕೂಪರ್ ರೋಚಕ ಕಥೆ – 4 ನವೆಂಬರ್ 1971 ರ ಈ ನಿಗೂಢ ಘಟನೆ, ಅತ್ಯಂತ ರೋಚಕ ಮತ್ತು ಬಗೆಹರಿಯಲಾಗದ ಒಂದು ರಹಸ್ಯ.

24 ನವೆಂಬರ್ 1971 ರ ಈ ನಿಗೂಢ ಘಟನೆ, ಅತ್ಯಂತ ರೋಚಕ ಮತ್ತು ಬಗೆಹರಿಯಲಾಗದ ಒಂದು ರಹಸ್ಯ.

ಅಮೆರಿಕಾಕದ ನಾರ್ತ್ ವೆಸ್ಟ್ ಓರಿಯಂಟ್ ಏರ್ಲೈನ್ಸ್ ನ ಒಂದು ವಿಮಾನ ಪೋರ್ಟ್ಲ್ಯಾಂಡ್ ನಿಂದ ಟೇಕ್ ಆಫ್ ಮಾಡಿತ್ತು.   ಇದು ಕೇವಲ ಅರ್ಧ ಗಂಟೆಯ ಪಕ್ಕದ ಸಿಯಟಿನ್ಗೆ ಹೊರಟಿತ್ತು.   ಇದರಲ್ಲಿ ಹೆಚ್ಚಿನ ಪ್ರಯಾಣಿಕರೇನೂ ಇರಲಿಲ್ಲ. ಕೇವಲ 36 ಪ್ರಯಾಣಿಕರು ಹಾಗೂ 6 ಜನ ಸಿಬ್ಬಂದಿ ವರ್ಗ.

ಆದರೆ ಈ ಎಲ್ಲಾ ಪ್ರಯಾಣಿಕರಿಗೂ, ತಮ್ಮೊಡನೆ ಇವತ್ತು ಒಬ್ಬ ಫ್ಲೈಟ್ ಹೈಜಾಕರ್ ಕೂತ್ತಿದ್ದಾನೆ ಅನ್ನೋ ಸಣ್ಣ ಸಂಶಯವು ಇರಲಿಲ್ಲ.   ಹೌದು ಒಬ್ಬ ಸುಮಾರು ಮದ್ಯ ವಯಸ್ಸಿನ ವ್ಯಕ್ತಿ. ಅವನ ಹೆಸರೇ D  B ಕೂಪರ್.

ನೋಡ್ಲಿಕ್ಕೆ ಈ ವ್ಯಕ್ತಿ ಒಬ್ಬ ಸಾಮಾನ್ಯ ಬಿಸಿನೆಸ್ ವ್ಯಕ್ತಿಯಂತೆ ಕಾಣುತ್ತಿದ್ದ. ಅವನ ವಸ್ತ್ರ ಧಾರಣೆಯೂ ಹಾಗೆ ಇತ್ತು. ಬಿಳಿ ಬಣ್ಣದ ಶರ್ಟ್ ಬ್ಲಾಕ್ ಪ್ಯಾಂಟ್ ಮತ್ತು ಬ್ಲೇಜ್ ದರಿಸಿದ್ದ ಸುಮಾರು 40 ರ ಆಸು ಪಾಸಿನ ವ್ಯಕ್ತಿ. ಈ ವ್ಯಕ್ತಿ ಎಲ್ಲಾ ಸೀಟ್ ಗಳನ್ನೂ ಕಡೆಗಣಿಸಿ ಕೊನೆಯ ಸೀಟ್ ಅಂದರೆ No 18 E ನಲ್ಲಿ ಕುಳಿತುಕೊಳ್ಳುತ್ತಾನೆ.

 

ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಈ ವ್ಯಕ್ತಿ ಅಲ್ಲೇ ಪಕ್ಕದಲ್ಲಿ ಹಾದು ಹೋಗುವ ಏರ್ ಹೋಸ್ಟೆಸ್ ಗೆ ತನ್ನ ಪರಿಚಯ ಮಾಡಿ ಕೊಡುತ್ತಾನೆ. ತನ್ನ ಹೆಸರು ಡ್ಯಾನ್ ಕೂಪರ್, ಇನ್ನು ಆ ಏರ್ ಹೋಸ್ಟೆಸ್ ನ ಹೆಸರು ಫ್ಲೋರೆನ್ಸ್ ಶಾಫ್ನರ್.

ಈ ವ್ಯಕ್ತಿ ತುಂಬಾನೇ ನಗು ಮುಖದಿಂದ ಆ ಏರ್ ಹೋಸ್ಟೆಸ್ ಗೆ ಒಂದು ಕಾಗದದ ತುಂಡೊಂದನ್ನು ಕೊಡುತ್ತಾನೆ.  ಆಕೆ ಅದನ್ನ ನೋಡಿ ಇವನು ತನ್ನೊಡನೆ ಫ್ಲರ್ಟ್ ಮಾಡುತ್ತಿದ್ದಾನೆ ಎಂದು ತಪ್ಪಾಗಿ ಯೋಚಿಸಿ ಆ ಪೇಪರ್ ನ ತುಣುಕನ್ನು ತನ್ನ ಪಾಕೆಟ್ನಲ್ಲಿರಿಸುತ್ತಾಳೆ.

ಇದನ್ನು ಗಮನಿಸಿದ ಡ್ಯಾನ್ ಕೂಪರ್ ಆಕೆಗೆ ಕರೆದು, ತಾನು ಕೊಟ್ಟ ಚೀಟಿಯನ್ನು ನೀನು ಓದಿದರೆ ಉತ್ತಮ ಎಂದು ತಿಳಿಸುತ್ತಾನೆ.   ಇದನ್ನು ಕೇಳಿದೊಡನೆ ಶಾಫ್ನರ್ ಆ ಚೀಟಿಯನ್ನು ತೆರೆದು ನೋಡುತ್ತಾಳೆ.   ಅದರಲ್ಲಿ ಹೀಗೆ ಬರೆದಿರುತ್ತೆ. “ಐ ಹ್ಯಾವ್ ಆ ಬಾಂಬ್ ಇನ್ ಮೈ ಸೂಟ್ಕೇಸ್, ಐ ವಾಂಟ್ ಯು ಟು ಸೈಟ ನೆಕ್ಸ್ಟ್ ಟು ಮೀ” ಇದನ್ನು ಓದಿದಾಕ್ಷಣ ಶಾಫ್ನರ್ ಅವನ ಪಕ್ಕದಲ್ಲಿ ಕುಳಿತು ಕೊಳ್ಳುತ್ತಾಳೆ.

ಆದರೆ ಅವಳಿಗೆ ಆ ವ್ಯಕ್ತಿಯ ಬಳಿ ಬಾಂಬ್ ಇರಬಹುದು ಎಂಬ ಯಾವ ಶಂಕೆಯೂ ಬರುವುದಿಲ್ಲ.  ಆಗ ಆ ವ್ಯಕ್ತಿ ತನ್ನ ಸೂಟ್ಕೇಸ್ ನ ತೆರೆದು ಕೆಂಪು ಕಪ್ಪು ಮಿಶ್ರಿತ ತಂತಿಗಳಿರುವ ಸೆಟ್ ಅಪ್ ಒಂದನ್ನು ತೋರಿಸುತ್ತಾನೆ. ಇದನ್ನು ನೋಡಿದಾಗ ಅವಳಿಗೆ ಉಳಿದ ವಿಚಾರ ತಿಳಿಯುತ್ತೆ.

ಈಗ ಈ ವ್ಯಕ್ತಿ ತನ್ನ ಬೇಡಿಕೆಯನ್ನ ಹೊಸ್ಟ್ರೆಸ್ಸ್ ಎದುರಿಗೆ ಇಡುತ್ತಾನೆ. ತನಗೆ ಬರೋಬ್ಬರಿ 2  ಲಕ್ಷ ಡಾಲರ್  ನಗದು, ಒಂದು ಬ್ಯಾಗ್ನಲ್ಲಿರಿಸಿ ಸಂಜೆ 5 ಗಂಟೆಯ ಒಳಗೆ ಕೊಡಬೇಕು ಎಂದು ತಿಳಿಸುತ್ತಾನೆ.  ಇದರ ಜೊತೆಗೆ ಮುಂದೆ ಹಾಗೂ ಹಿಂದೆ ಇರುವ 2 ಪ್ಲಸ್ 2 ಒಟ್ಟಿಗೆ ನಾಲ್ಕು ಪ್ಯಾರಾಛೂಟ್ ತನಗೆ ಒದಗಿಸಬೇಕೆಂದು ತಿಳಿಸುತ್ತಾನೆ.

ತಾವು ಲ್ಯಾಂಡ್ ಆಗುತ್ತಿದ್ದಂತೆ, ಬೇಕಾದಷ್ಟು ತೈಲವನ್ನು ತುಂಬಿಸಿಕೊಳ್ಳಬೇಕು. ಏನಾದರು ಹೆಚ್ಚು ಬುದ್ದಿವಂತಿಕೆ ತೋರಿಸಲು ಪ್ರಯತ್ನಿಸಿದರೆ ತಕ್ಷಣವೇ ಬಾಂಬ್ ಒಡೆಯುತ್ತೆ ಎಂದು ವಾರ್ನಿಂಗ್ ಮಾಡುತ್ತಾನೆ. ಈಗ ಶಾಫ್ನರ್ ಈ ಚೀಟಿಯ ವಿಚಾರವನ್ನು ಯಾವುದೇ ಪ್ರಯಾಣಿಕರಿಗೂ ಸಂಶಯ ಬಾರದಂತೆ ಕಾಕ್ ಪಿಟ್ ನಲ್ಲಿರುವ ಪೈಲೆಟ್ ನ ಕೈಗಿಡುತ್ತಾಳೆ.

ಅದರಂತೆ ಶಾಫ್ನರ್ ತನ್ನ ಇನ್ನೊಬ್ಬ ಸಿಬ್ಬಂದಿಯಾದ ಟೀನಾ ಮ್ಯಾಕ್ಲೌ ಗು ಈ ವಿಚಾರವನ್ನು ತಿಳಿಸುತ್ತಾಳೆ. ಈಗ ಇವರಿಬ್ಬರ ಸಹಾಯದಿಂದ ಪೈಲಟ್ ಹಾಗೂ ಕೂಪರ್ ಮದ್ಯದಲ್ಲಿ ಬೇಕಾದ ಸಂಭಾಷಣೆ ಸದ್ದಿಲ್ಲದೇ ನಡೆಯುತ್ತೆ.

ಪೈಲಟ್ ಈ ವಿಚಾರವನ್ನ ಏರ್ ಟ್ರಾಫಿಕ್ ಆಫೀಸರ್ ಗೆ ತಿಳಿಸಿ ಈ ವಿಚಾರ ಏರ್ಲೈನ್ ನ ಪ್ರೆಸಿಡೆಂಟ್ ಡೊನಾಲ್ಡ್ ನಿರೋಬ್ ಗೆ ತಿಳಿಸಲಾಗುತ್ತೆ. ಈ ಪ್ರೆಸಿಡೆಂಟ್ ಕೂಪರ್ ಇಟ್ಟಿರುವ ಬೇಡಿಕೆಯನ್ನು ಆದಷ್ಟು ಬೇಗ ಒದಗಿಸುವ ನಿರ್ದಾರವನ್ನು ತೆಗುದುಕೊಳ್ಳುತ್ತಾರೆ.

FBI ಜೊತೆಗೆ ಸೇರಿ ಸಿಯಾಟಲ್ ಬ್ಯಾಂಕ್ ಗೆ ಮಾತನಾಡಿ  ಕೇಳಿದಷ್ಟು ಮೊತ್ತವನ್ನು ಒದಗಿಸಲು ಕೋರಲಾಗುತ್ತೆ. ಕೆಲವು ಬ್ಯಾಂಕ್ಗಳಲ್ಲಿ ಒಂದಿಷ್ಟು ಮೊತ್ತವನ್ನು ಎಮೆರ್ಗೆನ್ಸಿಗೆಂದು ಇರಿಸಲಾಗಿರುತ್ತೆ. ಆ ಮೊತ್ತವನ್ನೇ ಇಲ್ಲಿ ತಕ್ಷಣವೇ ಒದಗಿಸಲಾಗುತ್ತದೆ.   ಡೊನಾಲ್ಡ್ ನಿರೋಪ್ ತನ್ನ ಏರ್ಲೈನ್ ನ ಹೆಸರು ಹಾಳಾಗದಂತೆ ಕಾಪಾಡಲು ಇಂತಹ ತಕ್ಷಣದ ನಿರ್ಧಾರಕ್ಕೆ ಬರುತ್ತಾರೆ. ಈ ವಿಚಾರ ಮಾಧ್ಯಮ ಗಳಲ್ಲಿ ಹರಡಿ ತನ್ನ ಕಂಪನಿ ಗೆ ಹೆಚ್ಚು ನಷ್ಟವಾಗದಿರಲು ಇಂತಹ ಪ್ರಯತ್ನ ನಡೆಸಲಾಗುತ್ತೆ.

ಆದರೆ ಇಲ್ಲಿ ಅಷ್ಟೊಂದು ಮೊತ್ತವನ್ನು ಶಿಫ್ಟ್ ಮಾಡಿ ವಿಮಾನಕ್ಕೆ ತಲುಪಿಸಲು ಹೆಚ್ಚು ಸಮಯ ಇರುವುದಿಲ್ಲ. ಈಗ ಆ ವಿಮಾನದ ಪೈಲಟ್ ಗೆ ವಿಮಾನವನ್ನು ಕೆಲ ಹೊತ್ತಿನವರೆಗೆ ಅಲ್ಲೇ ಸುತ್ತಾಡಿಸಲು ಸೂಚನೆ ನೀಡಲಾಗುತ್ತದೆ . ಹೀಗೆ ಬರೋಬ್ಬರಿ 3 ಗಂಟೆಗಳ ಕಾಲ ವಿಮಾನವನ್ನು ಅಲ್ಲೇ ಸುತ್ತು ಹೊಡೆಸಲಾಗುತ್ತದೆ.

ಇಷ್ಟೆಲ್ಲಾ ನಡೆಯುತ್ತಿದ್ದರೂ ಯಾವುದೇ ಪ್ರಯಾಣಿಕರಿಗೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಯಾವುದೇ ಸಂಶಯವು ಇರುವುದಿಲ್ಲ. ಪೈಲಟ್ ತನ್ನ ಅನೌನ್ಸಮೆಂಟ್ ನಲ್ಲಿ ವಿಮಾನದಲ್ಲಿ ಸಣ್ಣದಾದ ಟೆಕ್ನಿಕಲ್ ದೋಷ ಇರುವುದರಿಂದ ಲ್ಯಾಂಡ್ ಮಾಡಲು ಕೆಲವು ಸಮಯ ಹಿಡಿಯುತ್ತೆ ಎಂದಷ್ಟೇ ತಿಳಿಸಲಾಗುತ್ತೆ. ಕೊನೆಗೆ ಸಂಜೆಯ ಸುಮಾರು 5.40 ಗಂಟೆಗೆ  ವಿಮಾನ ಲ್ಯಾಂಡ್ ಆಗುತ್ತೆ.

ಸಿಯಾಟಲ್ ನ ಮೇನ್ ಟರ್ಮಿನಲ್ ನಿಂದ ಕೆಲವಷ್ಟು ಕಿಲೋ ಮೀಟರ್ಗಳಷ್ಟು ದೂರದಲ್ಲಿ ವಿಮಾನವನ್ನು ನಿಲ್ಲಿಸಲಾಗುತ್ತೆ. ಕೇವಲ ಒಬ್ಬನೇ ಒಬ್ಬ ಏರ್ಲೈನ್ ನ ಸಿಬ್ಬಂದಿ ಹಣದ ಬ್ಯಾಗ್ ನ್ನು ಎತ್ತಿಕೊಂಡು ವಿಮಾನದ ಹತ್ತಿರ ಬರುತ್ತಾನೆ. 2  ಲಕ್ಷ  ಡಾಲರ್ ನಗದು ಹಾಗೂ 4 ಪ್ಯಾರಾಚೂಟ್ ಗಳನ್ನೂ ತೆಗೆದುಕೊಂಡ ಕೂಪರ್ ಈಗ ಎಲ್ಲಾ ಪ್ರಯಾಣಿಕರೂ ಇಳಿದು ಹೋಗಬಹುದು ಎಂಬ ಸಂದೇಶವನ್ನು ರವಾನಿಸುತ್ತಾನೆ.

ಈಗ 2 ಪೈಲಟ್ ಹಾಗೂ ಟೀನಾ ಮ್ಯಾಕ್ಲೌ ಮತ್ತು  ಕೂಪರ್ ಮಾತ್ರ ವಿಮಾನದಲ್ಲಿ ಉಳಿಯುತ್ತಾರೆ. ಈಗ ಕೂಪರ್ ಮತ್ತೆ ಪೈಲಟ್ ಗೆ ವಿಮಾನವನ್ನು ಮಿಕ್ಸಿಕೊ ಕಡೆಗೆ ಹಾರಿಸಲು ಸಲಹೆ ನೀಡುತ್ತಾನೆ. ವಿಮಾನವನ್ನು ಸರಿ ಸುಮಾರು 10000 ಅಡಿಗಳಷ್ಟು ಎತ್ತರದಲ್ಲಿ ಹಾರಿಸಲಾಗುತ್ತದೆ.

ಈಗ ಹೈಜಾಕರ್ ಟೀನಾ ಮ್ಯಾಕ್ಲೌ ಗೆ ಕಾಕ್ ಪಿಟ್  ಹೋಗಿ ಕಾಕ್ ಪಿಟ್ ನ ಬಾಗಿಲನ್ನು ಮುಚ್ಚಿಕೊಳ್ಳಲು ಹೇಳುತ್ತಾನೆ. ಇಡೀ ವಿಮಾನದಲ್ಲಿ ಪ್ರಯಾಣಿಕರ ವಿಭಾಗದಲ್ಲಿ ಕೇವಲ ಕೂಪರ್ ಒಬ್ಬನೇ ಉಳಿಯುತ್ತಾನೆ. ತನ್ನಲ್ಲಿರುವ ಪ್ಯಾರಾಚೂಟ್ಗಳನ್ನು ಬಳಸಿ ವಿಮಾನದಿಂದ ಹೊರಗೆ ಹಾರಲು ಕೂಪರ್ ನ ಎಲ್ಲಾ ವ್ಯವಸ್ಥೆಗಳು ನಡೆಸುತ್ತಾನೆ.

ಸ್ವಲ್ಪ ಹೊತ್ತಿನಲ್ಲಿ ವಿಮಾನದ ಎಮರ್ಜೆನ್ಸಿ ಡೇಂಜರ್ ಲೈಟೊಂದು ಬೆಳಗಲು ಶುರುವಾಗುತ್ತೆ. ಇದು ವಿಮಾನದ ಹಿಂದಿನ ಭಾಗದ ಮೆಟ್ಟಿಲಿನ ಭಾಗದ ತೆರೆಯುವಿಕೆಯನ್ನು ತಿಳಿಸುತ್ತದೆ. ಈಗ ಕೂಪರ್  ಹಿಂದಿನ ಮೆಟ್ಟಿಲಿನ ಭಾಗವನ್ನು ತೆರೆದು ಕೂಪರ್ ಹಣದ ಬ್ಯಾಗ್ ನ ಜೊತೆ ಗೆ ಪ್ಯಾರಾಚೂಟ್ನ ಸಹಾಯದ ಜೊತೆಗೆ ಹಾರುತ್ತಾನೆ.

ಈಗ ಪೈಲಟ್ ಆಗಲಿ ಏರ್ ಹೋಸ್ಟೆಸ್ ಆಗಲಿ ಇದನ್ನು ನೋಡುವ ಅವಕಾಶ ಹೊಂದಿರುವುದಿಲ್ಲ. ಆದರೆ ರಾತ್ರಿಯ 8.13 ನಿಮಿಷಕ್ಕೆ ವಿಮಾನದ ಹಿಂದಿನ ಬಾಗ ಮೇಲಿನ ದಿಕ್ಕಿಗೆ ಬಾಗಿರುವುದರಿಂದ, ವಿಮಾನವನ್ನು ಮತ್ತೆRe calibrate ಮಾಡಬೇಕಾಗುತ್ತೆ. ಇದರ ನಂತರ ಪೈಲಟ್ ವಿಮಾನವನ್ನು ನೆವಾಡೋ ಎಂಬ ಜಾಗದಲ್ಲಿ ಲ್ಯಾಂಡ್ ಮಾಡುತ್ತಾನೆ.

ನಂತರ  ಪೊಲೀಸ್ ಆಫೀಸರ್ಸ್ ಗೆ ತಿಳಿಸಲಾಗುತ್ತೆ ಮತ್ತು ಪೊಲೀಸರು ವಿಮಾನದ ಶೋಧ ಕಾರ್ಯ ಶುರು ಮಾಡುತ್ತಾರೆ. ಆದರೆ ಪೊಲೀಸ್ ಗೆ ಕೂಪರ್ ನ ಯಾವುದೇ ಸಾಕ್ಸ್ಯಗಳು ಸಿಗುವುದಿಲ್ಲ. ಆದರೆ ಕೂಪರ್ ದರಿಸಿದ್ದ ಒಂದು ಟೈ ಹಾಗೂ ಪ್ಯಾರಾಚೂಟ್ನ ಕೆಲವು ಹರಿದು ಬಿದ್ದ ಭಾಗಗಳಷ್ಟೇ ಪೊಲೀಸ್ ರಿಗೆ ದೊರೆಯುತ್ತವೆ. ಒಂದು ಪ್ಯಾರಾಚೂಟ್ ನ್ನು ಹರಿದು ಹಣದ ಬ್ಯಾಗ್ ನ ಕವರ್ ಮಾಡಿರುತ್ತಾನೆ.

ಅದಲ್ಲದೆ ಕೂಪರ್ ಸೇವಿಸಿದ್ದ ಕೆಲವು ಸಿಗರೇಟ್ ತುಂಡುಗಳು ಅಲ್ಲಿರುತ್ತವೆ. ಆಗಿನ ಕಾಲದಲ್ಲಿ ವಿಮಾನದಲ್ಲಿ ಸಿಗರೇಟ್ ಎಳೆಯುವ ಅವಕಾಶವಿತ್ತು, ಹಾಗೂ ಅವನ ಹೆಸರಿನಲ್ಲಿ ಹರಿಯಲಾಗಿದ್ದ ಒಂದು ಟಿಕೆಟ್ ಡ್ಯಾನ್ ಕೂಪರ್ ಅನ್ನೋ ಹೆಸರಿನಲ್ಲಿರುತ್ತದೆ. ಇನ್ನು ಹೆಚ್ಚಿನ ತನಿಖೆ ಮಾಡಿದಾಗ ಬರೋಬ್ಬರಿ 66 ಅನಾಮಿಕ ಬೆರಳಚ್ಚುಗಳು ಪೋಲಿಸರಿಗೆ ದೊರೆಯುತ್ತವೆ. ಬಾಂಬ್ ಇಟ್ಟಿರುವ ಬ್ಯಾಗ್, ಹಣದ ಬ್ಯಾಗ್ ಹಾಗೂ ಕೂಪರ್ ಮಾತ್ರ ಅಲ್ಲಿಂದ ಮಾಯವಾಗಿರುತ್ತಾನೆ.

ಈ ಕಡೆ  FBI ತನ್ನ ಕೆಲಸವನ್ನು ಶುರು ಮಾಡುತ್ತ.  ಕೂಪರ್ ಅನ್ನು ಹುಡುಕುವ ಕೆಲಸ. ಬರೋಬ್ಬರಿ 45 ವರ್ಷಗಳವರೆಗೆ ನಡೆಯುತ್ತೆ. ಸುಮಾರು 2016 ರಲ್ಲಿ ಯಾವುದೇ ಬೆಳವಣಿಗೆ ಕಾಣದ ಕಾರಣ ಈ ತನಿಖೆಯನ್ನು ನಿಲ್ಲಿಸಲಾಗುತ್ತೆ. ಇದು ಇತಿಹಾಸದ ಮೊದಲ ಹಾಗೂ ಕೊನೆಯ ರಹಸ್ಯ ರಹಸ್ಯವಾಗಿಯೇ ಉಳಿದು ಹೋಗುತ್ತದೆ.

ಕೂಪರ್ ಯಾರು? ಅವನು ಎಲ್ಲಿಗೆ ಹೋದ? ಬದುಕಿದನ ? ಅಥವಾ ಸತ್ತು ಹೋದನ?

ಕೂಪರ್ ಯಾರು? ಅವನು ಎಲ್ಲಿಗೆ ಹೋದ? ಬದುಕಿದನ ? ಅಥವಾ ಸತ್ತು ಹೋದನ? ಬಹಳಷ್ಟು ಸವಾಲುಗಳಿಗೆ ಉತ್ತರ ದೊರೆಯಬೇಕಿತ್ತು. ಈ ಇಡೀ ಹೈಜಾಕ್ನಲ್ಲಿ ನಡೆದ ವಿಶೇಶಗಳೆಂದರೆ., ವಿಮಾನ ಹೈಜಾಕ್ ಆಗಿದ್ದರೂ ಇಬ್ಬರು ಹೋಸ್ಟೆಸ್ ಹಾಗೂ ಇಬ್ಬರು ಪೈಲಟ್ ಗಳಿಗೆ ಬಿಟ್ಟರೆ ಬೇರೆ ಯಾರಿಗೂ ಇದರ ಮಾಹಿತಿಯೇ ಇರಲಿಲ್ಲ, ಹಾಗೂ ಯಾವುದೇ ಪ್ರಾಣ ಹಾನಿಯಾಗಿಲ್ಲ. ಇದರ ಪ್ರಶಂಸೆ ಟೀನಾ ಮ್ಯಾಕ್ಲೌ ಗೆ ಸಲ್ಲುತ್ತದೆ. ಇದಾದ ನಂತರ ಅವಳನ್ನು ಹೀರೋ ಎಂದು ಪುರಸ್ಕಾರ ಮಾಡಲಾಗುತ್ತದೆ. ವಿಮಾನದ ಕೋ ಪೈಲಟ್ ರಾಟಾ ಸ್ಕಾಗ್ ನ ಮಾತಿನಂತೆ ಟೀನಾ ತುಂಬಾನೇ ಸಂಯಮ ಹಾಗೂ ಸಹನೆಯಿಂದ ಕೆಲಸ ನಿರ್ವಹಿಸಿದ್ದಾಳೆ ಎಂಬ ಪ್ರಶಂಸೆ.

ಇನ್ನೊಂದು ವಿಚಾರವೇನೆಂದರೆ D B ಕೂಪರ್ ನ ಹೆಸರು.

ಇನ್ನೊಂದು ವಿಚಾರವೇನೆಂದರೆ D B ಕೂಪರ್ ನ ಹೆಸರು. ಅವನ ನಿಜವಾದ ಹೆಸರು ಡ್ಯಾನ್ ಕೂಪರ್. ಈ ಡ್ಯಾನ್ ಕೂಪರ್ ಅನ್ನೋ ಹೆಸರು ಎಲ್ಲಿಂದ ಬಂತು ? ಈ ಹೆಸರು ಬಂದದ್ದು ಇದೇ ಮೀಡಿಯಾ ಗಳಿಂದ

ಪೊಲೀಸ್ ಆಫೀಸರ್ ಒಬ್ಬರು ತನ್ನ ವಿಡಿಯೋ ಕಾನ್ಫರೆನ್ಸ್ ನ ಸಂದರ್ಭದಲ್ಲಿ ಡ್ಯಾನ್ ಕೂಪೆರ್ ಅನ್ನೋ ಹೆಸರನ್ನು ಹೇಳಿದಾಕ್ಷಣ ತಾನೇ ಈ ಸುದ್ದಿಯನ್ನು ಮೊದಲು ಹರಿ ಬಿಡಬೇಕು ಎಂಬ ಆತುರದಿಂದ ಆ ಹೆಸರನ್ನುD B ಕೂಪೆರ್ ಎಂದು ಪ್ರಿಂಟ್ ಮಾಡುತ್ತಾನೆ. ಹೀಗೆ ಮೀಡಿಯಾಗಳಿಂದ ಮೊತ್ತ ಮೊದಲಿಗೆ ಆಗುವ ಈ ಸಣ್ಣ ತಪ್ಪುಗಳನ್ನು ಸರಿ ಪಡಿಸಲು ತುಂಬಾನೇ ಹರ ಸಾಹಸ ಮಾಡಬೇಕಾಗುತ್ತದೆ. ಹೀಗೆ ಒಬ್ಬ ಆಂಕರ್ ಮಾಡಿದ ತಪ್ಪನ್ನೇ ಇತರ ಮಾದ್ಯಮದವರು ಮುಂದುವರೆಸಿಕೊಂಡು ಹೋಗಿ ಡ್ಯಾನ್ ಕೂಪೆರ್ ಅನ್ನೋ ಹೆಸರು D B ಕೂಪೆರ್ ಆಗಿ ಬದಲಾಗುತ್ತದೆ.

ಈಗ ಕೂಪೆರ್ ಬರೋಬ್ಬರಿ 10 ಕೆಜಿ ಹಣದ ಬ್ಯಾಗ್ ನ್ನು ತನ್ನ ದೇಹದ ಸುತ್ತ ಕಟ್ಟಿಕೊಂಡು ಹಾರಿದ ಕೆಳಬಾಗದಲ್ಲಿ ಪಯ್ನ್ ಮರಗಳು, ನದಿ, ಕೆರೆಗಳು ಹಾಗೂ ಪ್ರಾಣ ಹಾನಿ ಮಾಡಬಹುದಾದ ಕರಡಿಗಳು ವಾಸಿಸುತ್ತಿದ್ದವು ಎನ್ನಲಾಗುತ್ತದೆ. ಅದಲ್ಲದೆ ಕೂಪರ್ ವಿಮಾನದಿಂದ ಹೊರಗೆ ಹಾರಿದ ಸಮಯ ಬರೋಬ್ಬರಿ ರಾತ್ರಿ 8 ಗಂಟೆ. ದಟ್ಟವಾದ ಮೋಡಗಳಿದ್ದ ಕತ್ತಲೆಯ ಸಮಯ ಅದು. ಈ ಎಲ್ಲಾ ಪ್ರತಿಕೂಲ ವಾತಾವರಣದಲ್ಲಿ ಅವನು ಬದುಕಿರುವ ಸಾಧ್ಯತೆಗಳಿವೆಯೇ ಎನ್ನುವುದು ಒಂದು ದೊಡ್ಡ ಸವಾಲಾಗಿತ್ತು.

ಇದಲ್ಲದೆ ಕೂಪರ್ ದರಿಸಿದ್ದ ಬಟ್ಟೆ ಪ್ಯಾಂಟ್ ಹಾಗೂ ಬ್ಲೇಜ್

ಇದಲ್ಲದೆ ಕೂಪರ್ ದರಿಸಿದ್ದ ಬಟ್ಟೆ ಪ್ಯಾಂಟ್ ಹಾಗೂ ಬ್ಲೇಜ್ ದರಿಸಿದ್ದ ಕಾರಣ. ಪ್ಯಾರಾ ಛೂಟ್ ನ ಸಹಾಯವಿದ್ದರೂ ಮಳೆ ಮೋಡ ಹಾಗೂ 320 kmph ವೇಗದ ಗಾಳಿಯ ಮದ್ಯೆ ಹಾರಾಡುವುದು ತಮಾಷೆಯ ಮಾತಾಗಿರಲಿಲ್ಲ. ಇದಲ್ಲದೆ ಆ ಸಮಯದ ಅಂದರೆ ನವೆಂಬರ್ ತಿಂಗಳಿನ ನೀರಿನ ತಾಪಮಾನ ಅತ್ಯಂತ ತಣ್ಣಗಿದ್ದು ಮಂಜುಗಡ್ಡೆಯ ರೂಪದಲ್ಲಿರಬಹುದೆಂದು ಊಹಿಸಲಾಗಿತ್ತು. ಅದಲ್ಲದೆ ಅವನು ನೀರಿನಲ್ಲಿ ಬಿದ್ದಿದ್ದರೆ ಅವನಿಗೆ ಹೈಪೋ ಥರ್ಮಿಯ ಅಂದರೆ ಮಾನವನ ದೇಹದ ಉಷ್ಣತೆಗಿಂತ ಅತೀ ಕಡಿಮೆ ಮಟ್ಟಕ್ಕೆ ಇಳಿದು ಸಾಯುವ ಎಲ್ಲಾ ಕಾರಣಗಳಿದ್ದವು.

ಇದೇ ಮಾದರಿಯ ಹೈಜಾಕನ್ನು ಬರೋಬ್ಬರಿ 5 ವ್ಯಕ್ತಿಗಳು ಪ್ರಯತಿನಿಸಿದ್ದು  5 ವ್ಯಕ್ತಿಗಳು ಬದುಕುಳಿದಿದ್ದರು

ಆದರೆ ಕೂಪರ್ ನ ಈ ಘಟನೆಯ ಬಳಿಕ ಇದೇ ಮಾದರಿಯ ಹೈಜಾಕನ್ನು ಬರೋಬ್ಬರಿ 5 ವ್ಯಕ್ತಿಗಳು ಪ್ರಯತಿನಿಸಿದ್ದು 5 ವ್ಯಕ್ತಿಗಳು ಬದುಕುಳಿದಿದ್ದರು. ಇದರಲ್ಲಿ ಒಬ್ಬ ವ್ಯಕ್ತಿ ಮಾರ್ಟಿನ್ ಮ್ಯಾಕ್ನಾಲಿ 24 ಜೂನ್ 1979 ರಲ್ಲಿ ವಿಮಾನವೊಂದನ್ನು ಹೈಜಾಕ್ ಮಾಡಿ ಕೂಪೆರ್ ನ ಮಾದರಿಯಲ್ಲೇ ಕೆಲಸ ಮಾಡಿ, ಬರೋಬ್ಬರಿ 5 ಲಕ್ಷ ಡಾಲರ್ ಮೊತ್ತಕ್ಕೆ ಡಿಮ್ಯಾಂಡ್ ಮಾಡಿರುತ್ತಾನೆ. ಈ ವಿಮಾನದ ವೇಗ ಬರೋಬ್ಬರಿ 400 ರಿಂದ 500 kmph ಇದ್ದು ಕೂಪೆರ್ ನ ವೇಗದ ಎರಡರಷ್ಟು ಪಟ್ಟು ಹೆಚ್ಚು ಇದ್ದರೂ ಮ್ಯಾಕ್ನಲ್ಲಿ ಬದುಕುಳಿದಿದ್ದ.

ಈಗ ಮತ್ತೆ ಕೂಪೆರ್ ವಿಚಾರಕ್ಕೆ ಬರೋದಾದರೆ. ಕೂಪೆರ್ ಗೆ 20 ಡಾಲರ್ ನ ಬಿಲ್ಲುಗಳು ಹಾಗೂ 10,000 ನೋಟುಗಳು ಹೀಗೆ ಬರೋಬ್ಬರಿ 2 ಲಕ್ಷ ಮೊತ್ತವನ್ನು ಬ್ಯಾಂಕ್ ಒದಗಿಸಿದ್ದು ಎಲ್ಲಾ ನೋಟುಗಳ ಸೀರಿಯಲ್ ನಂಬರ್ ಗಳನ್ನೂ ಬರೆದಿಡಲಾಗಿತ್ತು. ನಂತರ FBI ಈ ನೋಟ್ ನ ಸೀರಿಯಲ್ ನಂಬರ್ ಗಳನ್ನು ಎಲ್ಲಾ ಕಡೆ ಹರಿಬಿಡಲಾಗಿ ಯಾರಿಗಾದರೂ ಆ ಸೀರಿಯಲ್ ನಂಬರ್ ನ ನೋಟುಗಳು ದೊರೆತಲ್ಲಿ 1000 ಡಾಲರ್ ಬಹುಮಾನವನ್ನು ಘೋಷಿಸಲಾಗಿತ್ತು.

ಕೂಪರ್ ಹೆಚ್ಚಿನಾಂಶ ಮಾರ್ವಿನ್ ಸರೋವರದ ಬಳಿ ಲ್ಯಾಂಡ್ ಮಾಡಿರಬಹುದೆಂದು ಊಹಿಸಿ ಅಲ್ಲೇ ಅಕ್ಕ ಪಕ್ಕದಲ್ಲಿ FBI ಒಂದು ಅದೇ ಮಾದರಿಯಲ್ಲಿ ವಿಮಾನವನ್ನು ಹಾರಿಸಿ ಹಿಂಬದಿಯ ಮೆಟ್ಟಿಲುಗಳಿಂದ ಒಂದು ಸ್ಲೆಡ್(ಬಾಕ್ಸ್) ಒಂದನ್ನು ಜಾರಿಸಲಾಗುತ್ತದೆ. ಈ ಸ್ಲೆಡ್ ಬಿದ್ದ ಸ್ಥಳಗಳಲ್ಲಿ ಪ್ರತೀ ಮನೆಗೂ ಹೋಗಿ ಕೂಪೆರ್ ನ ವಿಚಾರವಾಗಿ ತನಿಖೆ ಮಾಡಲಾಗಿತ್ತು.

ಈ ಘಟನೆ ನಡೆದು ಬರೋಬ್ಬರಿ 8 ವರ್ಷ ಅಂದರೆ 1979 ಒಬ್ಬ ಪೈಲಟ್ FBI ಗೆ ಸಂಪರ್ಕಿಸಿ ತನ್ನ ಹೆಸರು ಟಾಮ್ ಬೋಹನ್ ಎಂದು ಪರಿಚಯಿಸಿ ತಾನು ಕಾಂಟಿನೆಂಟಲ್ ಏರ್ಲೈನ್ಸ್ ಗೆ ಕೆಲಸ ಮಾಡುತ್ತಿದ್ದಾಗಿಯೂ ಕೂಪೆರ್ ಹೈಜಾಕ ನ ಘಟನೆಯ ದಿನ ಆ ವಿಮಾನದ ಕೆಲವೇ ನಿಮಿಷಗಳು ಅಂದರೆ 4 ನಿಮಿಷಗಳ ದೂರದಲ್ಲಿ ತಾನು ತನ್ನ ಕಾಂಟಿನೆಂಟಲ್ ವಿಮಾನದಲ್ಲಿದ್ದೆ ಎಂದೂ ಅಂದು ಬೀಳುತ್ತಿರುವ ಮಳೆ ಹಾಗೂ ಗಾಳಿ ತನ್ನ ಜೀವಮಾನದಲ್ಲೇ ನೋಡಿರದಂತಹುದು ಎಂದು ತಿಳಿಸಿ, ಅಂದು ಕೂಪೆರ್ ಹಾರಿದ ಜಾಗ ವಾಶುಗಲ್ ಸರೋವರದ ಅಕ್ಕಪಕ್ಕ ಇರಬಹುದು ಎಂದು ತಿಳಿಸುತ್ತಾನೆ.

ಕೆಲವೇ ತಿಂಗಳುಗಳಲ್ಲಿ ಸುಮಾರು 8 ವರ್ಷದ ಬಾಲಕನಿಗೆ ಕೊಲಂಬಿಯಾ ನದಿಯ ಪಕ್ಕದಲ್ಲಿ 20 ಡಾಲರ್ ನ ನೋಟಗಳು ಬಿದ್ದಿರುವ ರೂಪದಲ್ಲಿ ಸಿಗುತ್ತವೆ. ಇದರಲ್ಲಿ ಕೆಲವು ನೋಟುಗಳು ರಬ್ಬರ್ ಬ್ಯಾಂಡ್ನಿಂದ ಸುತ್ತಲಾಗಿತ್ತು, ಇನ್ನು ಕೆಲವು ಹಾಗೇ ಬಿಡಿ ಬಿಡಿಯಾಗಿ ಬಿದ್ದಿದ್ದವು.  ಈ ಜಾಗದಲ್ಲಿ ಮತ್ತಷ್ಟು ಹುಡುಕಾಟ ನಡೆಸಿದಾಗ ಒಟ್ಟಾರೆ 5800 ಡಾಲರ್ಗಳಷ್ಟು ಹಣದ ಕಂತೆ ಮಾತ್ರವೇ ಸಿಗುತ್ತವೆ.

ನಂತರ ಇಲ್ಲಿ ಸಿಕ್ಕಿದ ಕೆಲವು ನೋಟುಗಳ ತುಂಡುಗಳನ್ನು ಆ ಬಾಲಕನಿಗೆ ಕೊಡಲಾಗುತ್ತದೆ. 2008 ರಲ್ಲಿ ಇದರಲ್ಲಿ ಬರೋಬ್ಬರಿ 15 ನೋಟುಗಳನ್ನು ಹರಾಜು ಹಾಕಿ ಆ ಹುಡುಗನಿಗೆ ಬರೋಬ್ಬರಿ 37 000 ಡಾಲರ್ ಗಳಷ್ಟು ಮೊತ್ತವನ್ನು ಪಡೆಯುತ್ತಾನೆ.

ಹೀಗೆ ವಿಮಾನವನ್ನು ಹೈಜಾಕ್ ಮಾಡಿದ ವ್ಯಕ್ತಿ ಒಬ್ಬ ಸಾವು ಕಾಣದ ಲೆಜೆಂಡ್ ಎಂದು ಪ್ರಸಿದ್ಧಿಯಾಗುತ್ತಾನೆ.

 

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X