MOTIVATIONAL SHORT STORIES

ಭಗವಾನ್ ಕೃಷ್ಣ ನೋಡುತ್ತಾರೆ ಆ ಪಕ್ಷಿಯ ಸಣ್ಣ ಮರಿಗಳು ನೆಲದಮೇಲೆ ಬಿದ್ದಿವೆ. ಕೃಷ್ಣನು ಇಲ್ಲ ಇದು ಯುದ್ಧದ ಸಮಯ.. ಸಮಯ ತಿರುಗುತ್ತಿದೆ ನಾನೇನು ಮಾಡಲು ಸಾಧ್ಯವಿಲ್ಲ ಎಂದ…..

ನಿಮ್ಮ ಜೀವನವನ್ನು ದೇವರ ಕೈಯಲ್ಲಿ ಸಮರ್ಪಿಸಿ ದೇವರಿಗೆ ಬಿಟ್ಟು ಬಿಡಿ.,,,

ಯಾಕೆಂದರೆ ನೀವು ಜೀವನ ಪೂರ್ತಿ ಮಾಡಬಹುದಾದ ಸಾಧನೆ ದೇವರು ಒಂದೇ ಕ್ಷಣದಲ್ಲಿ ಮಾಡಿ ಮುಗಿಸುತ್ತಾನೆ……

ಇದು ಮಹಾಭಾರತ ಯುದ್ಧದ ಸಮಯ. ಯುದ್ದಕ್ಕೊಸ್ಕರ ಮರ ಗಿಡಗಳನ್ನು ಕಡಿದು ಭೂಮಿಯನ್ನು ಸಮತಟ್ಟು ಮಾಡಲಾಗುತ್ತಿತ್ತು….

ಈ ಕೆಲಸವನ್ನು ನಿರ್ವಹಣೆ ಮಾಡಲು ಶ್ರೀ ಕೃಷ್ಣ ಹಾಗು ಅರ್ಜುನನು ಅಲ್ಲಿದ್ದರು..

ಈ ಸಮಯದಲ್ಲಿ ಅತೀ ಚಿಕ್ಕದಾದ ಪಕ್ಷಿಯೊಂದು ಹಾರಿಬಂದು ಭಗವಾನ್ ಕೃಷ್ಣರೇ ನನ್ನನ್ನು ಕಾಪಾಡಿ ನನ್ನ ಮಕ್ಕಳನ್ನು ಕಾಪಾಡಿ ಎಂದು ಅಳತೊಡಗಿತು.

ಏನಾಯಿತು ಎಂದು ಕೇಳಿದ ಕೃಷ್ಣನಿಗೆ…

ಆ ಪಕ್ಷಿ “ಯಾರೋ ಬಂದು ನನ್ನ ಕೂಡು ಇರುವ ಮರವನ್ನು ಕಡಿದು ಹಾಕಿದ್ದಾರೆ. ನೋಡಲ್ಲಿ ಎಂದಾಗ”….

ಭಗವಾನ್ ಕೃಷ್ಣ ನೋಡುತ್ತಾರೆ ಆ ಪಕ್ಷಿಯ ಸಣ್ಣ ಮರಿಗಳು ನೆಲದಮೇಲೆ ಬಿದ್ದಿವೆ.

ಕೃಷ್ಣನು “ಇಲ್ಲ ಇದು ಯುದ್ಧದ ಸಮಯ ಸಮಯ ತಿರುಗುತ್ತಿದೆ ನಾನೇನು ಮಾಡಲು ಸಾಧ್ಯವಿಲ್ಲ ಎಂದ”…..

ಆದರೆ ಪಕ್ಷಿ ಪಟ್ಟು ಬಿಡದೆ “ನನಗೆ ನಿಮ್ಮ ಮೇಲೇ ಭರವಸೆ ಇಡುವ ಒಂದು ಸಣ್ಣ ಅದಿಕಾರವನ್ನಾದರೂ ಕೊಡಿ” ಎಂದು ಗೋಗೆರೆಯಿತು…..

ಭಗವಾನ್ ಕೃಷ್ಣ” ಸರಿ” ಎಂದ.

ಮರುದಿನ ಯುದ್ಧ ಘೋಷಣೆಯಾಯಿತು.

ಕೃಷ್ಣ ನು ಅರ್ಜುನನಲ್ಲಿ “ನಿನ್ನ ಬಿಲ್ಲು ಬಾಣವನ್ನು ಕೊಡು” ಎಂದು ಕೇಳಿದ.

ಅವಕ್ಕಾದ ಅರ್ಜುನ, “ಭಗವಂತ ನೀವೇನು ಮಾಡುವಿರಿ ಬಿಲ್ಲು ಬಾಣದಿಂದ” ಎಂದು ಕೇಳಿದಾಗ. “ನೋಡಲ್ಲಿ ಅದೇ ಆನೆ ಆ ಪಕ್ಷಿಯ ಮರವನ್ನು ಬೀಳಿಸಿದ್ದು” ಎಂದು ……………ಬಿಲ್ಲು ಬಾಣ ತೆಗೆದು ಆನೆಯ ಕಡೆಗೆ ಬಿಟ್ಟ. ಆ ಬಾಣ ಆನೆಗೆ ತಾಗುವ ಬದಲು ಆನೆಯ ಗಂಟೆಗೆ ತಗುಲಿ ಗಂಟೆ ನೆಲದ ಮೇಲೆ ಬಿತ್ತು. ಇದನ್ನು ನೋಡಿ ಅರ್ಜುನ ನಗುತ್ತ “ಏನಿದು ನಿಮ್ಮ ಗುರಿಯು ಸರಿಯಿಲ್ಲವಲ್ಲ ಕೊಡಿ ನಾನು ಆ ಆನೆಯನ್ನು ಛೇದಿಸುತ್ತೇನೆ ಎಂದ”…….

ಅದಕ್ಕೆ ಕೃಷ್ಣ “ಇಲ್ಲ ಇಷ್ಟು ಸಾಕು” ಎಂದು ಸುಮ್ಮನಾದ.

ಅರ್ಜುನನಿಗೆ ಏನು ಅರ್ಥವಾಗಲಿಲ್ಲ.

ಸುಮಾರೂ 18 ದಿನಗಳ ಕಾಲ ಯುದ್ಧ ನಡೆಯಿತು.

ಆ ಯುದ್ಧ ಸಂಪೂರ್ಣವಾದಾಗ ಮತ್ತೆ ಅರ್ಜುನ ಹಾಗು ಕೃಷ್ಣ ಯುದ್ಧ ಭೂಮಿಯನ್ನು ವೀಕ್ಷಿಸಲು ಬಂದ್ರು.

ಆಗ ಬಹಳಷ್ಟು ಯುದ್ಧ ವಸ್ತುಗಳು ಅಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಶ್ರೀ ಕೃಷ್ಣ ಅರ್ಜುನನಿಗೆ ಹೀಗೆ ಹೇಳಿದ ” ರಥದಿಂದ ಇಳಿದು ಆ ಗಂಟೆಯನ್ನು ಎತ್ತು” ಎಂದ.

ಅರ್ಜುನನಿಗೆ “ಇದೇನು ಯುದ್ಧ ಮಾಡಿದ ನನಗೆ ಇಷ್ಟು ಅಲ್ಪ ಕೆಲಸ ಹೇಳುದೇ” ಎಂದುಕೊಂಡ. ಆದರೂ ಪರ್ವಾಗಿಲ್ಲ ಭಗವಾನ್ ಶ್ರೀ ಕೃಷ್ಣ ಏನಾದರೂ ಹೇಳಬಹುದು ಎಂದು ರಥದಿಂದ ಕೆಳಗೆ ಇಳಿದು ಗಂಟೆಯನ್ನು ಎತ್ತಿದ. ತಕ್ಷಣವೇ ಅದರೊಳಗಿಂದ ಆ ಪಕ್ಷಿಯ ಮರಿಗಳು ರೆಕ್ಕೆ ಪುಕ್ಕ ಬಡಿದು ಕೊಂಡು ಹಾರಲಾರಂಭಿಸಿದವು.

ಅರ್ಜುನನ ಕಣ್ಣಾಲಿಗಳು ತೇಲಿ ಬಂದವು. ಅವನು ಭಾವುಕನಾದ. ಅರ್ಜುನ ಶ್ರೀ ಕೃಷ್ಣ ನಿಗೆ ನಮಸ್ಕರಿಸಿ ಮಂಡಿಯೂರಿದ.

ಯಾವಾಗ ನಮ್ಮ ಜೀವನದಲ್ಲಿ ಇನ್ನು ನಡೀತ್ತಿಲ್ಲ ಎಂದಾಗ ನಿಮ್ಮ ಜೀವನವನ್ನು ದೇವರಿಗೆ ಸಮರ್ಪಿಸಿ. ಅವನು ಎಲ್ಲವನ್ನು ಒಂದೇ ಕ್ಷಣದಲ್ಲಿ ಬದಲಾಯಿಸುತ್ತಾನೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X