ಈ ಕಷ್ಟದ ಸಮಯಗಳು ನೋವುಗಳು ಈ ಪಾಠಗಳು ಒಂದು ದಿನ ನಮ್ಮ ಬಲ ಹಾಗು ಎಚ್ಚರಿಕೆಯ ಗಂಟೆಗಳು ಮತ್ತು ಆಶೀರ್ವಾದಗಳಾಗುತ್ತವೆ.
ತನಗೆ ತಾನೇ ಸುಳ್ಳುಹೇಳುವವನಿಂದ ಯಾವ ಅಪೇಕ್ಷೆ ಇಡಬಹುದು?
ಸಲಹೆ ಕೊಡೋರೆಲ್ಲಾ ಸಹಾಯ ಮಾಡಲ್ಲ. ಕನಿಕರ ತೋರ್ಸೋರೆಲ್ಲ ಕಷ್ಟಕ್ಕಾಗಲ್ಲ. ಯಾರಿಗೆ ಯಾರೂ ಇಲ್ಲ.
ನೆನಪಿರಲಿ ಕಾಲ ಯಾರಿಗೂ ಕಾಯಲ್ಲ. ಸಮಯ ಇವತು ಅವರದಾಗಿದ್ರೆ ನಾಳೆ ನಮ್ಮದಾಗುತ್ತೆ. ತಾಳ್ಮೆ ಇರ್ಬೇಕು ಅಷ್ಟೇ. ಕ್ರೋದ ಬುದ್ದಿಯನ್ನು ತಿಂತದೆ. ಅಹಂಕಾರ ಜ್ನ್ಯಾನವನ್ನು ತಿಂತದೆ. ಪ್ರಾಯಶ್ಚಿತ್ತ ಪಾಪವನ್ನು ತಿಂತದೆ. ಮೋಹ ಮರ್ಯಾದೆಯನ್ನು ತಿಂತದೆ. ಲಂಚ ಗೌರವವನ್ನು ತಿಂತದೆ. ಚಿಂತೆ ಆಯುಷವನ್ನೇ ತಿಂತದೆ.
ಬೇರೆಯವರನ್ನ ಕೆಟ್ಟವರು ಅನ್ನೋ ಬಿಂಬಿಸುವ ಪ್ರಯತ್ನ ನೀ ಮಾಡಿದರೆ ಮೊದಲು ಕೆಟ್ಟದಾಗಿ ಕಾಣೋದು ನೀನೆ…..
ಕೆನ್ನೆಗೆ ಹೊಡೆದರೆ ಕ್ಷಮೆ ಇದೆ, ಬೆನ್ನಿಗೆ ಹೊಡೆದರೆ ಕ್ಷಮೆ ಇದೆ, ಆದರೆ ಇನ್ನೊಬ್ಬರ ಹೊಟ್ಟೆಗೆ ಹೊಡೆದರೆ ಯಾವ ದೇವರು ಕೂಡ ಕ್ಷಮಿಸಲ್ಲ.
ಭಾವನೆಯನ್ನು ಅರ್ಥಮಾಡಿಕೊಂಡು ಬದುಕಿದರೆ ಜೀವನ ಸುಂದರ…..
ಕಳೆದುಕೊಳ್ಳಲು ಇಷ್ಟವಿಲ್ಲವೆಂದರೆ ಸಹಿಸಿ ಕೊಳ್ಳೋ ಮನಸು ಇರ್ಬೇಕು. ಆಗ ಯಾವ ಸಂಬಂಧವು ದೂರ ಆಗಲ್ಲ. ಅಪ್ಪನ ಫೋಟೋ ಸ್ಟೇಟಸ್ ಹಾಕೋದು ದೊಡ್ಡತನವಲ್ಲ. ಅಪ್ಪನ ಸ್ಟೇಟಸ್ ಗೆ ಯಾವುದೇ ದಕ್ಕೆ ಆಗದಂತೆ ನೋಡಿಕೊಳ್ಳೋದು ಬಹಳ ಮುಖ್ಯ.
ಅತಿಯಾಗಿ ಯಾರನ್ನು ತಿದ್ದಲು ಹೋಗ್ಬಾರ್ದು ಹಾಳೆಯ ಮೇಲೆ ಅಕ್ಷರ ತಿದ್ದಿದಷ್ಟು ಹಾಳೆ ಹರಿಯುತ್ತದೆ. ಜೀವನದಲ್ಲಿ ಕೆಲವೊಂದು ನೆನಪುಗಳು ಹೇಗಿರುತ್ತವೆ ಅಂದ್ರೆ ಮರೆತು ಬದುಕೋಗಲ್ಲ ನೆನಪಾದ್ರೆ ತಡೆದುಕೊಳ್ಳೋಕು ಆಗೋಲ್ಲ.
ಮನಃಸಾಕ್ಷಿಗೆ ನಾವು ಸರಿ ಇದ್ರೆ ಸಾಕು ಬೇರೆ ಯಾರಿಗೂ ಪ್ರೋವ್ ಮಾಡೋ ಅಗತ್ಯ ಇಲ್ಲ…ಹಾವನ್ನಾದರೂ ನಂಬಬಹುದು. ಆದರೆ, ಮನಸ್ಸು ಮತ್ತು ಮನುಷತ್ವ ಇಲ್ಲದ ಮನುಷ್ಯನನ್ನ ನಂಬಬಾರದು.
ನಿನ್ನ ಮಾತುಗಳನ್ನು ನಿನ್ನನ್ನು ನಂಬುವವರಿಗಾಗಿ ಮೀಸಲಿಡು ನಿನ್ನ ಮೌವನವನ್ನು ನಿನ್ನನ್ನು ತಪ್ಪಾಗಿ ಅರ್ಥೈಸುವವರಿಗಾಗಿ ತೋರಿಸು. ಎಷ್ಟು ಜನರ ಮಧ್ಯೆ ಇರುತ್ತೇವೆ ಅನ್ನೋದು ಮುಖ್ಯವಲ್ಲ. ಎಷ್ಟು ಜನರ ಮನಸ್ಸಲ್ಲಿ ಇರ್ತೀವಿ ಅನ್ನೋದು ಬಹಳ ಮುಖ್ಯ. ಒಳ್ಳೆಯವರ ಜೊತೆ ಒಳ್ಳೆಯವರಾಗಿರಿ ಆದರೆ ಕೆಟ್ಟವರ ಜೊತೆ ಕೆಟ್ಟವರಾಗಿರಬೇಡಿ…..ವಜ್ರವನ್ನು ವಜ್ರದಿಂದ ಕತ್ತರಿಸಬಹುದು. ಆದರೆ, ಕೆಸರನ್ನು ಕೆಸರಿನಿಂದ ತೊಳೆಯಲಾಗುವುದಿಲ್ಲ.
ನಗುತಿರು ಮನವೇ ನೋವು ಹೊಸದಲ್ಲ…ಬದುಕು ಶಾಶ್ವತವಲ್ಲ.. ಯಾವ ಸಂಬಂಧ ನಿಮ್ಮ ಕಣ್ಣಿನಿಂದ ನೀರು ತರಿಸುತ್ತೋ ಅದಕ್ಕಿಂತ ಆಳವಾದ ಸಂಬಂಧ ಮತ್ತೊಂದಿಲ್ಲ……
ಯಾವ ಸಂಬಂಧ ನೀವು ಅಳುತ್ತಿದ್ದರು ಸುಮ್ಮನಿದ್ದು ಬಿಡುತ್ತೋ ಅದಕ್ಕಿಂತ ದುರ್ಬಲವಾದ ಸಂಬಂಧ ಮತ್ತೊಂದಿಲ್ಲ ಎಲ್ಲವನ್ನು ಗಮನಿಸಿ ಆದರೆ ನಿಮ್ಮ ತಾಳ್ಮೆಯನ್ನು ಯಾವತ್ತು ಕಳೆದುಕೊಳ್ಳಬೇಡಿ. ನಿಮ್ಮನ್ನು ನೋಯಿಸಿದ ವ್ಯಕ್ತಿಗಳಿಗೆ ಕಾಲವೇ ಉತ್ತರ ನೀಡುತ್ತದೆ .. ಅದೃಷ್ಟ ನಮ್ಮ ಕೈಯಲ್ಲಿ ಇರುತ್ತೋ ಇಲ್ವೋ ಗೊತ್ತಿಲ್ಲ.. ಆದರೆ ನಿರ್ಧಾರ ಮಾತ್ರ ಯಾವತ್ತು ನಮ್ಮ ಕೈಯಲ್ಲಿ ಇರುತ್ತೆ…
ಯಾರಂದಿಗೂ ಆಳವಾದ ಭಾವನೆಯನ್ನು ಬೆಳೆಸಿಕೊಳ್ಳಬೇಡಿ….. ಇದು ನಿಮ್ಮ ಭವಿಷ್ಯದಲ್ಲಿ ದೊಡ್ಡ ನಿರಾಶೆ ಮತ್ತು ದುಃಖಕ್ಕೆ ಕಾರಣವಾಗುತ್ತದೆ…. ಅಮ್ಮ ರೊಟ್ಟಿ ಸುಡುವ ಮೊದಲೇ ತಟ್ಟೆಯಲ್ಲಿ ಪಲ್ಯ ಹಾಕ್ಕೊಂಡು ಕಾಯುದ್ರಲ್ಲಿ ಮಜವಿತ್ತು…..ಆ ಕಾಲದಲ್ಲಿ.
ಇರುವ ಮೂರು ದಿನಕ್ಕೆ ನಾಟಕಗಳು ಯಾಕೆ ನಿನ್ನೊಂದಿಗೆ ಕಳೆದ ಸಮಯ್ಕ್ಕಿಂತ ನಿನಗಾಗಿ ಕಾದು ಕುಳಿತ ಕ್ಷಣಗಳೇ ಹೆಚ್ಚು……. ನೀವು ಎಷ್ಟೇ ಸ್ಥಿತಿವಂತರಾಗಿರಬಹುದು ಮೊದಲು ನಿಮ್ಮ ಮಕ್ಕಳಿಗೆ ಬಡತನದ ಪಾಠ ಹೇಳಿ ಕೊಡಿ………… ಬಡತನದಿಂದ ಕಲಿತ ಪಾಠವೇ ನಿಮ್ಮ ಮಕ್ಕಳ ಭವಿಷ್ಯಕ್ಕೆ ಬುನಾದಿಯಾಗುತ್ತೆ…..
ಯಾರ ಮನಸು ಪವಿತ್ರ ಮತ್ತು ಸ್ವಚ್ಛ ವಾಗಿರುತ್ತೋ ಅವರಿಗೆ ಕಷ್ಟ ಬಂದಾಗ ಯಾರು ಜೊತೆಗಿರದಿದ್ರೂ ಆ ಪರಮಾತ್ಮ ಒಂದಲ್ಲ ಒಂದು ರೀತಿಲಿ ಅವರ ಜೊತೆ ಇರತಾನೆ….
ನಿನ್ನ ಸಾಧನೆ ಹಿಂದೆ ಎಲ್ಲರು ನಿಲ್ತಾರೆ ಆದರೆ ನಿನ್ನ ಸೋಲಿನ ಹಿಂದೆಯೂ ನಿಲ್ಲುವವರು ನಿನ್ನ ಹೆತ್ತವುರು ಮಾತ್ರ.
ಜೀವನದಲ್ಲಿ ಒಂದು ಸಲ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡಬೇಡಿ ಯಾಕಂದ್ರೆ ಗೊತಿಲ್ಲದೆ ಮಾಡಿದ ತಪ್ಪಿಗೆ ಮಾತ್ರ ಕ್ಷಮೆ ಇರುತದೆ. ಆದರೆ ಗೊತ್ತಿದ್ದೂ ಗೊತ್ತಿದ್ದೂ ಮಾಡುವ ತಪ್ಪಿಗೆ ದೇವರು ಕೂಡಾ ಕ್ಷಮಿಸಲ್ಲ. ಯಾರಾದರೂ ನಿಮ್ಮನ್ನು ಅವಶ್ಯಕತೆ ಇದ್ದಾಗ ಮಾತ್ರ ನಿನಪಿಸಿಕೊಳ್ತಾರೆ ಅಂತ ಬೇಜಾರಾಗಬೇಡಿ,,, ಸಂತೋಷ ಪಡಿ,,,, ಯಾಕಂದ್ರೆ ಕತ್ತಲಾದಾಗಲೇ ಮೇಣದ ಬತ್ತಿ ನೆನಪಾಗೋದು.
ನೀರಿನಲ್ಲಿ ತೇಲಬೇಕಾದ ಮೀನು ಎಣ್ಣೆಯಲ್ಲಿ ತೇಲಿದರೆ ಅದು ಮನುಷನ ಆಹಾರ ಅದೇ ರೀತಿ ಭೂಮಿ ಮೇಲೆ ನಡೆದಾಡುವ ಮನುಷ್ಯ ನೀರ ಮೇಲೇ ತೇಲಾಡಿದರೆ ಅದು ಮೀನುಗಳ ಆಹಾರ ಇಷ್ಟೇ ಜೀವನ…. ಇಲ್ಲಿ ಯಾರೂ ಮೇಲಲ್ಲ- ಯಾರೂ ಕೀಳಲ್ಲ ಅಂದುಕೊಂಡಂತೆ ಬದುಕಲು ತುಂಬಾ ಹಣ ಬೇಕು,,,, ಹೊಂದಿಕೊಂಡು ಬದುಕಲು ಒಳ್ಳೆಯ ಗುಣಗಳೇ ಸಾಕು,,,, ಪ್ರಾಮಾಣಿಕರಿಗೆ ಕೋಪ ಜಾಸ್ತಿ,,,,, ಕುತಂತ್ರಿಗಳಿಗೆ ಕೋಪನೇ ಬರೋದಿಲ್ಲ ಯಾಕಂದ್ರೆ ಅವುರು ಕೋಪವನ್ನು ಪ್ರತಿತಂತ್ರ ಗಳಿಂದ ಶಮನ ಮಾಡುತ್ತಾರೆ….
ವಟವಟನೇ ಮಾತಾಡುವವರ ಮನಸ್ಸು ತೆರೆದಿಟ್ಟ ಪುಸ್ತಕವಿದ್ದಂತೆ ಅಲ್ಲಿ ಏನನ್ನು ಮುಚ್ಚಿಡಲು ಸಾಧ್ಯವಿಲ್ಲ. ಅರ್ಥವಾಗದೇ ಹೋದರೆ ಮೌನವಾಗಿ… ನೀವು ಏನೆಂದು ಅರ್ಥೈಸುವ ಅಗತ್ಯ ನಿನಗಿಲ್ಲ…….. ನಿನ್ನನ್ನು ಅರ್ಥೈಸಿಕೊಂಡು ಬಂದ್ರೆ ಗೌವರವಿಸು ಬರದಿದ್ರೆ ತಿರಸ್ಕರಿಸು,,,
ಆದರೆ ನಿನ್ನ ಕೈ ಬಿಡದ ತಂದೆ ತಾಯಿಗೆ ಮರೆಯದೆ ನಮಸ್ಕರಿಸು,,,,,
ಶ್ರೀಮಂತಿಕೆ ಎಷ್ಟೇ ಇರಲಿ ಬೇಡುವ ಸ್ಥಿತಿ ಎಲ್ಲರಿಗು ಬರುತ್ತೆ….. ಯಾಕಂದ್ರೆ ಭಗವಂತ ಕಳಿಸುವಾಗ ಏನಾದ್ರು ಬ್ಯಾಲೆನ್ಸ್ ಇಟ್ಟೇ ಕಳಿಸ್ತಾನೆ……… ಈ ಮಾತು ನೂರಕ್ಕೆ ನೂರು ಸತ್ಯ
ಜೇನು ತುಪ್ಪದಂತ ಸಿಹಿಯನ್ನು ಪಡೆಯಬೇಕಾದ್ರೆ ಜೇನು ನೊಣಗಳಂತೆ ಒಟ್ಟಿಗೆ ಇರೋದನ್ನ ಕಲೀರಿ.
ಆಸೆ ನಮ್ಮದಾದರೆ ಆಯಸು ದೇವರದು,,,,,, ಕೊಟ್ಟಾಗ ಸ್ವೀಕರಿಸಬೇಕು ಕಿತ್ತುಕೊಂಡಾಗ ಯಾರಿಗೂ ಹೇಳದೆ ಹೋಗಬೇಕು ಇಷ್ಟೇ ಜೀವನ…….. ಸುಮ್ಮನೆ ನಗಬಹುದು ಸುಮ್ಮನೆ ಅಳೋಕ್ಕಾಗಲ್ಲ………. ನಮ್ಮ ಭಾವನೆಗಳಿಗೆ ಬಲವಾದ ಪೆಟ್ಟು ಬಿದ್ದಾಗ ಮಾತ್ರ ಅಳೋದು…….
ಬದುಕು ಬದಲಾಗ್ಬೇಕಾದ್ರೆ ಬದುಕುವ ದಾರಿ ಬದಲಾಗ್ಬೇಕು ಎಲ್ಲಾ ಇದ್ದಾಗ ನಮ್ಮವ್ರು ಅಂತಾರೆ ಏನು ಇಲ್ಲದಾಗ ಯಾರು ನೀ ಅಂತಾರೆ,,,,,,,,
ಇದೆ ಜೀವನ …………….
ಸಮಸ್ಯೆ ಇರುವ ಪ್ರತಿಯೊಬ್ಬ ವ್ಯಕ್ತಿ ಸೋಲೊದಿಲ್ಲ ಆದರೆ ಯಾರು ಸಮಸ್ಯೆಗೆ ಪರಿಹಾರ ಹುಡುಕೋದಿಲ್ಲವೋ ಅವನು ಮಾತ್ರ ಸೋಲ್ತಾನೆ.
ನಮಗೆ ಬೇಕಾದುದು ಯಾವುದು ಸಿಗಲಿಲ್ಲ ಎಂದು ದೇವರ ಮೇಲೆ ಕೋಪಗೊಳ್ಬೇಡಿ ಸ್ವಲ್ಪ ಕಾದಿರೋಣ
ಉತ್ತಮವಾದುದನ್ನು ದೇವರು ನಿಮಗೆ ಎತ್ತಿಟ್ಟಿದ್ದಾರೆ ಜೀವನದಲ್ಲಿ ನಾವು ಮತ್ತೊಬ್ಬರ ಮೆಚ್ಚುಗೆಗಾಗಿ ಬದುಕೋದಕ್ಕಿಂತ ನಮ್ಮನ್ನು ಸೃಷ್ಟಿಸಿದ ಆ ಭಗವಂತನಿಗೆ ಮೆಚ್ಚುವ ಹಾಗೆ ಬದುಕುವ.
Leave feedback about this