ರಾಜಧಾನಿಯಲ್ಲಿ ಚಾಕು ಇರಿದು ಯುವಕನ ಕೊಲೆ
ಬೆಂಗಳೂರು : ಯುವಕನೊಬ್ಬನನ್ನು ಅಮಾನುಷವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಬನ ಶಂಕರಿಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿಯನ್ನು , ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಬನಶಂಕರಿಯ ಕಾವೇರಿ ನಗರದಲ್ಲಿ ಈ ಕೊಲೆ ನಡೆದಿದ್ದು 21 ವರ್ಷದ ವಿಕ್ರಂ ಎಂಬ ಯುವಕ ಮೃತ ದುರ್ದೈವಿ. ರೌಡಿಶೀಟರ್ ವಸೀಮ್ (28) ಎನ್ನುವವನು ವಿಕ್ರಂನನ್ನ ಕೊಲೆ ಮಾಡಿದ್ದಾನೆ. ಕೆಲವು ವರ್ಷಗಳ ಹಿಂದೆ ವಿಕ್ರಂ ಹಾಗೂ ವಸೀಮ್ ನ ನಡುವೆ ಜಗಳ ನಡೆದಿತ್ತು