LATEST WITH HUB LOCAL NEWS

ರಾಜಧಾನಿಯಲ್ಲಿ ಚಾಕು ಇರಿದು ಯುವಕನ ಕೊಲೆ

ಬೆಂಗಳೂರು : ಯುವಕನೊಬ್ಬನನ್ನು ಅಮಾನುಷವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಬನ ಶಂಕರಿಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿಯನ್ನು , ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಬನಶಂಕರಿಯ ಕಾವೇರಿ ನಗರದಲ್ಲಿ ಈ ಕೊಲೆ ನಡೆದಿದ್ದು 21 ವರ್ಷದ ವಿಕ್ರಂ ಎಂಬ ಯುವಕ ಮೃತ ದುರ್ದೈವಿ. ರೌಡಿಶೀಟರ್ ವಸೀಮ್ (28) ಎನ್ನುವವನು ವಿಕ್ರಂನನ್ನ ಕೊಲೆ ಮಾಡಿದ್ದಾನೆ.

ಕೆಲವು ವರ್ಷಗಳ ಹಿಂದೆ ವಿಕ್ರಂ ಹಾಗೂ ವಸೀಮ್ ನ ನಡುವೆ ಜಗಳ ನಡೆದಿತ್ತು ಎಂದು ಹೇಳಲಾಗಿತ್ತಿದೆ.  ಈ ವೇಳೆ ಆರೋಪಿಗೆ ವಿಕ್ರಂ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಈ ಹಳೇದ್ವೇಷವನ್ನು ಮನಸಲ್ಲಿ ಇಟ್ಟುಕೊಂಡು ಇದೀಗ ಕೊಲೆ ನಡೆದಿದೆ.

ಬನಶಂಕರಿಯ ಕಾವೇರಿ ನಗರದ 8ನೇ ಕ್ರಾಸ್‌ನಲ್ಲಿ ಸ್ನೇಹಿತನೊಂದಿಗೆ ವಿಕ್ರಂ ನಿಂತಿದ್ದ ಸಂದರ್ಭದಲ್ಲಿ ಚಾಕುವಿನಿಂದ ಎದೆಗೆ ಇರಿದು ವಸೀಮ್ ಕೊಲೆ ಮಾಡಿದ್ದಾನೆ. ಗಾಯಾಳುವನ್ನು  ಕೂಡಲೇ ಆಸ್ಪತ್ರೆಗೆ ಸಾಗಿಸಲಾಗುತ್ತಿದಾದರೂ, ಮಾರ್ಗ ಮಧ್ಯೆಯೇ ವಿಕ್ರಂ ಕೊನೆಉಸಿರೆಳಿದಿದ್ದಾನೆ.

ಇನ್ನು ಕೊಲೆ ಮಾಡಿದ ಕೂಡಲೇ ವಸೀಮ್ ಅಲ್ಲಿಂದ ಎಸ್ಕೇಪ್ ಆಗಿದ್ದ. ಆತನನ್ನು ಸಂಜೆಯ ವೇಳೆಗೆ ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X