LATEST WITH HUB LOCAL NEWS

ಜಾಲಿ ರೈಡ್ ಅವಾಂತರ-ಭೀಕರ ರಸ್ತೆ ಅಪಘಾತ : ಮೂವರು ವಿದ್ಯಾರ್ಥಿಗಳ ದುರ್ಮರಣ

Photo of helmet and motorcycle on road, the concept of road accidents

ಬೆಂಗಳೂರು : ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ಸೆಪ್ಟೆಂಬರ್ 12 ರ ರಾತ್ರಿ ಸುಮಾರು 1.30 ರ ಸುಮಾರಿಗೆ ನಡೆದ ಕಾರು ಮತ್ತು ಬೈಕು ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಮೃತ ಪಟ್ಟಿದ್ದಾರೆ.

ವಿದ್ಯಾರ್ಥಿಗಳು ಬೆಂಗಳೂರಿನ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಬಿ ಎಸ್ಸಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಮೃತರನ್ನು ರೋಹಿತ್ (22 ) ಸುಜಿತ್ (22 )ಮತ್ತು ಹರ್ಷ (22 ) ಎಂದು ಗುರುತಿಸಲಾಗಿದೆ.

ಈ ಮೂವರು ವಿದ್ಯಾರ್ಥಿಗಳು ಲಾಂಗ್ ಡ್ರೈವ್ ಗೆ ಹೋಗಿದ್ದರು ಎನ್ನಲಾಗಿದೆ. ಈ ಸಮಯದಲ್ಲಿ ವೇಗವಾಗಿ ಬಂದ ಕಾರು ಅವರನ್ನ ಗುದ್ದಿಕೊಂಡು ಹೋದ ಪರಿಣಾಮ ಮೂವರ ದೇಹಗಳು ರಸ್ತೆಯಲ್ಲಿ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ಅಪಘಾತದ ನಂತರ ಕಾರು ನಾಪತ್ತೆಯಾಗಿದೆ ಹಾಗಾಗಿ ಪೊಲೀಸರು ಇದನ್ನ ಹಿಟ್ ಅಂಡ್ ರನ್ ಕೇಸೆಂದು ಪರಿಗಣಿಸಿ ಕೇಸನ್ನು ದಾಖಲಿಸಿದ್ದಾರೆ. ಈ ಮೂರೂ ವಿದ್ಯಾರ್ಥಿಗಳ ಶವಗಳನ್ನು ಅಂಬೇಡ್ಕರ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಇನ್ನೊಂದು ಮಾಹಿತಿಯ ಪ್ರಕಾರ ಸುಜಿತ್ ಅವರ ಹುಟ್ಟುಹಬ್ಬವನ್ನು ಊರಿನ ಹೊರಗಡೆ ಆಚರಿಸಲು ನಿರ್ಧರಿಸಿ ಎರಡು ಬೈಕುಗಳಲ್ಲಿ ಸುಮಾರು ಐದು ವಿದ್ಯಾರ್ಥಿಗಳು ಹೋಗಿದ್ದರು. ಹುಟ್ಟು ಹಬ್ಬವನ್ನು ಆಚರಿಸಿ ಹಿದಿರುಗುವಾಗ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X