ಮೊದಲು ನಾವು ಭಯ ಗೆಲ್ಲಬೇಕು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಹೊರಡುವ ಮುನ್ನ ಮೊದಲು ನಮ್ಮಲ್ಲೇನಿರಬೇಕು ಗೊತ್ತ ? ಧೈರ್ಯ. ಇದುವರೆಗೆ ಧೈರ್ಯ ಇಲ್ಲದೆ ಯಾರೂ ಸಹ ತಮ್ಮ ಜೀವನದಲ್ಲಿ ಅಥವಾ ಬಿಸಿನೆಸ್ ನಲ್ಲಿ ಏನು ಸಹ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಏನೇ ದೊಡ್ಡದು ಮಾಡಲು ಹೊರಟಾಗಲೂ ಭಯ ಆಗುವುದು ಸಹಜ. ನಮ್ಮಿಂದ ಇದು ಸಾದ್ಯವಾಗುತ್ತಾ ? ಇಂಥ ಕೆಲಸದಲ್ಲಿ ನಾನು ಗೆಲ್ಲುತ್ತೀನಾ ? ಎಂಬಂಥ ಪ್ರಶ್ನೆಗಳು ಎದುರಾಗುವುದು ಸಹಜ.
ಆದರೆ ನಾನು ನಮ್ಮಲ್ಲಿರುವ ಪ್ರತಿಭೆಯ ಅನಾವರಣವಾಗಬೇಕಾದರೆ ಮೊದಲು ನಾವು ಭಯವನ್ನು ಗೆಲ್ಲಬೇಕು. ಗೆಲ್ಲಬೇಕೆಂದರೆ ನಮ್ಮಲ್ಲಿ ಕೇವಲ ಧೈರ್ಯವಿದ್ದರೆ ಸಾಲದು. ನಂಬಿಕೆ ಮತ್ತು ಗೆಲ್ಲುತ್ತೇನೆ ಎಂಬ ಛಲ ಇರಬೇಕು. ಇನ್ನು ಧೈರ್ಯದ ಜೊತೆಗೆ ನಮ್ಮನ್ನು ನಾವೇ ಆ ಕೆಲಸಕ್ಕೆ ಅರ್ಪಿಸಿ ಕೊಳ್ಳಬೇಕು. ಇಲ್ಲಿ ರಾತ್ರೋ ರಾತ್ರಿ ಯಶಸ್ಸು ಸಿಗದು. ಯಶಸ್ಸು ಸಿಗಲು ಅದೆಷ್ಟು ಸಮಯ ಬೇಕು ಎಂದು ಹೇಳುವುದು ಅಸಾಧ್ಯ. ಹೀಗಾಗಿ ಕಷ್ಟ ಪಟ್ಟು ಕೆಲಸ ಮಾಡುವುದರ ಜೊತೆಗೆ ತನ್ಮಯತೆಯಿಂದಲೂ ಕರ್ತ್ಯವ್ಯ ನಿರ್ವಹಿಸಿದರೆ ಗೆಲುವು ಖಚಿತ. ಇನ್ನು ಯಾವ ಕೆಲಸದಲ್ಲಾದರೂ ಸೋಲು ಕೂಡ ಅಷ್ಟೇ ಖಚಿತ. ಸೋತಾಗ ಕಂಗೆಡದೆ, ನಮ್ಮಿಂದ ಇದು ಸಾಧ್ಯವಿಲ್ಲ ಎಂದು ಹಿಂಜರಿಯದೆ ಮುಂದಕ್ಕೆ ಸಾಗುತ್ತಿದ್ದರೆ ಒಂದು ದಿನ ನಿಮ್ಮ ಕನಸು ನನಸಾಗುವುದು ಖಚಿತ.