ಲಿವರ್ ದಾನದ ಬಳಿಕ ಉಪನ್ಯಾಸಕಿ ಸಾವು.
ಇನ್ನೂ ಸ್ಪಷ್ಟವಾಗದ ಸಾವಿನ ಕಾರಣ ಕಸಿ ಮಾಡಿಸಿಕೊಂಡ ಮಹಿಳೆ ಚೇತರಿಕೆ.
ತನ್ನ ಪತಿಯ ಸಂಬಂಧಿಯೊಬ್ಬರಿಗೆ ಲಿವರ್ ನ್ನು ದಾನ ಮಾಡಿದ್ದ ಮಂಗಳೂರು ನಗರದ ಉಪನ್ಯಾಸಕಿ ಅರ್ಚನಾ ಕಾಮತ್ (33) ಅವರು ದಿಢೀರನೆ ಅಸ್ವಸ್ಥಗೊಂಡು ನಿಧನರಾಗಿದ್ದಾರೆ. ತನ್ನ ಪತಿಯ ಸಂಬಂಧಿಯೋರ್ವರಿಗೆ ಲಿವರ್ ಕಸಿ ಮಾಡಲಾಗಿತ್ತು. ಹಲವರನ್ನು ತಪಾಸಣೆಗೆ ಒಳಪಡಿಸಿದ್ದರೂ ಹೊಂದಾಣಿಕೆಯಾಗಿರಲಿಲ್ಲ. ಆದರೆ ಅರ್ಚನಾ ಅವರ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು. ಹಾಗೂ ಅವರು ಲಿವರ್ ದಾನಕ್ಕೆ ಒಪ್ಪಿದ್ದರು. ಅದರಂತೆ 12 ದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಅರ್ಚನಾ ಅವರ ಲಿವರ್ ನ ಸ್ವಲ್ಪ ಭಾಗವನ್ನು ಮಹಿಳೆಗೆ ಕಸಿ ಮಾಡಲಾಗಿತ್ತು. ಆರೋಗ್ಯದಿಂದಲೇ ಇದ್ದ ಅರ್ಚನಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.
ಆದರೆ ಕಳೆದ ನಾಲ್ಕು ದಿನಗಳ ಹಿಂದೆ ಅರ್ಚನಾ ದಿಢೀರ್ ಅಸ್ವಸ್ಥಗೊಂಡು ಸೆ ೧೫ ರಂದು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಹಾಗೂ ಲಿವರ್ ಕಸಿ ಮಾಡಿಸಿಕೊಂಡ ಮಹಿಳೆ ಆರೋಗ್ಯವಾಗಿದ್ದರೆ ಎಂದು ತಿಳಿದು ಬಂದಿದೆ. ಅರ್ಚನಾ ಅವರ ಸಾವಿಗೆ ನಿಜವಾದ ಕಾರಣ ಏನು ಎಂಬುದು ಇನ್ನೂ ಸರಿಯಾಗಿ ತಿಳಿದು ಬಂದಿಲ್ಲ.