ಕೃಷ್ಣ ಪೂಜೆಗೆ ತುಳಸಿ.
ತುಳಸಿಯನ್ನು ದೇವರಿಗೆ ಪ್ರಿಯವಾದ ಹೂವು ಆಗಿಯೂ ಪತ್ರೆ ಆಗಿಯೂ ಬಳಸಲಾಗುತ್ತದೆ. ಶ್ರೀ ಕೃಷ್ಣನನ್ನು ಪೂಜಿಸಲು ತುಳಸಿ ದಳಗಳನ್ನು ಉಪಯೋಗಿಸಲಾಗುತ್ತದೆ. ತುಳಸಿ ದಳಗಳಿಂದ ಶ್ರೀ ಕೃಷ್ಣ ದೇವರಿಗೆ ಲಕ್ಷ ಅರ್ಚನೆಗಳನ್ನು ಮಾಡಲಾಗುತ್ತದೆ. ದೇವಸ್ಥಾನಗಳಲ್ಲಿ ದೇವರ ಪ್ರಸಾದವಾಗಿಯೂ ತುಳಸಿ ಪತ್ರೆಗಳನ್ನು ನೀಡಲಾಗುತ್ತದೆ. ಶ್ರೀ ಕೃಷ್ಣನಿಗೆ ತುಳಸಿ ದಳಗಳು ಯಾಕೆ ಪ್ರಿಯ ಎಂಬುದರ ಕುರಿತಾಗಿ ಒಂದು ಪೌರಾಣಿಕ ಕಥೆಯೂ ಇದೆ. ಒಮ್ಮೆ ಶ್ರೀ ಕೃಷ್ಣ ಪರಮಾತ್ಮನ ತುಲಾ ಭಾರ ನಡೆಯುತ್ತದೆ. ಆದರೆ ಯಾವ ವಸ್ತುಗಳನ್ನಿಟ್ಟರೂ ತಕ್ಕಡಿ ಶ್ರೀ ಕೃಷ್ಣ ನನ್ನು ತೂಗುವುದಿಲ್ಲ. ಕೊನೆಗೆ ಒಂದು ತುಳಸಿ ದಳ ಇಟ್ಟಾಗ ತಕ್ಕಡಿ ಸರಿದೂಗುತ್ತದೆ. ಎಲ್ಲಾ ಧನ , ಧಾನ್ಯಗಳಿಗಿಂತಲೂ ತುಳಸೀದಳ ಇಟ್ಟಾಗ ತಕ್ಕಡಿ ಸರಿ ದೂಗುತ್ತದೆ. ಎಲ್ಲಾ ಧನ, ಧಾನ್ಯಗಳಿಗಿಂತಲೂ ತುಳಸೀದಳ ಶ್ರೇಷ್ಠ ಎಂಬುದನ್ನು ಇದು ಸಾರುತ್ತದೆ. ತುಳಸಿ ದಳ ನೀಡಿದಾಗ ಭಗವಾನ್ ಶ್ರೀ ಕೃಷ್ಣ ಆಶೀರ್ವಾದವು ಸಿಗುತ್ತದೆ. ನಾವು ಇತರರಿಗೆ ನೀಡುವ ದಾನ ಧರ್ಮಕ್ಕೆ ಹೆಚ್ಚು ಮೌಲ್ಯ ಬರುತ್ತದೆ ಎನ್ನುವ ನಂಬಿಕೆ. ಅದಕ್ಕೆ ಧಾನ ನೀಡುವಾಗ ತುಳಸಿ ಸಹಿತವಾಗಿ ದಾನ ನೀಡಬೇಕು ಎನ್ನುತ್ತಾರೆ. ಪುರೋಹಿತರಿಗೆ ದಕ್ಷಿಣೆ ಕೊಡುವಾಗ ವೀಳ್ಯದೆಲೆ ಅಡಿಕೆ ಜತೆ ಒಂದು ತುಳಸಿ ದಳವನ್ನು ಸ್ವಲ್ಪ ನೀರೆರೆದು ನೀಡುತ್ತಾರೆ. ಮನೆಗಳಲ್ಲಿ ತುಳಸಿ ಕಟ್ಟೆಗೆ ವಿಶೇಷ ಪಾತ್ರವನ್ನು ನೀಡಿ ತುಳಸಿ ಗಿಡವನ್ನು ಪೂಜಿಸಲಾಗುತ್ತದೆ.