ಕೃಷ್ಣ ಪೂಜೆಗೆ ತುಳಸಿ -ತುಳಸಿಯನ್ನು ದೇವರಿಗೆ ಪ್ರಿಯವಾದ ಹೂವು ಆಗಿಯೂ ಪತ್ರೆ ಆಗಿಯೂ ಬಳಸಲಾಗುತ್ತದೆ
ಕೃಷ್ಣ ಪೂಜೆಗೆ ತುಳಸಿ. ತುಳಸಿಯನ್ನು ದೇವರಿಗೆ ಪ್ರಿಯವಾದ ಹೂವು ಆಗಿಯೂ ಪತ್ರೆ ಆಗಿಯೂ ಬಳಸಲಾಗುತ್ತದೆ. ಶ್ರೀ ಕೃಷ್ಣನನ್ನು ಪೂಜಿಸಲು ತುಳಸಿ ದಳಗಳನ್ನು ಉಪಯೋಗಿಸಲಾಗುತ್ತದೆ. ತುಳಸಿ ದಳಗಳಿಂದ ಶ್ರೀ ಕೃಷ್ಣ ದೇವರಿಗೆ ಲಕ್ಷ ಅರ್ಚನೆಗಳನ್ನು ಮಾಡಲಾಗುತ್ತದೆ. ದೇವಸ್ಥಾನಗಳಲ್ಲಿ ದೇವರ ಪ್ರಸಾದವಾಗಿಯೂ ತುಳಸಿ ಪತ್ರೆಗಳನ್ನು ನೀಡಲಾಗುತ್ತದೆ. ಶ್ರೀ ಕೃಷ್ಣನಿಗೆ ತುಳಸಿ ದಳಗಳು ಯಾಕೆ ಪ್ರಿಯ ಎಂಬುದರ ಕುರಿತಾಗಿ ಒಂದು ಪೌರಾಣಿಕ ಕಥೆಯೂ ಇದೆ. ಒಮ್ಮೆ ಶ್ರೀ ಕೃಷ್ಣ ಪರಮಾತ್ಮನ ತುಲಾ ಭಾರ ನಡೆಯುತ್ತದೆ. ಆದರೆ ಯಾವ ವಸ್ತುಗಳನ್ನಿಟ್ಟರೂ ತಕ್ಕಡಿ ಶ್ರೀ