TOP 10 – ಫ್ಯಾನ್ಸಿ ಕಸ್ಟಮೈಸ್ಡ್ ಫೋನ್ ಕೆಸಸ್ (Fancy Phone Case)
ಟೀನೇಜರ್ ಅಂದ ಕೂಡಲೇ ಮೊದಲು ಮನಸ್ಸಿಗೆ ಬರೋದೇ ಡ್ರೆಸ್ಸಿಂಗ್ ಸೆನ್ಸ್. ಡ್ರೆಸ್ಸಿಂಗ್ ಸೆನ್ಸ್ ಅಂದ ಕೂಡಲೇ ಬರೀ ಹಾಕಿರೋ ಬಟ್ಟೆಯಷ್ಟೇ ಲುಕ್ ಕೊಡೋದಿಲ್ಲ. ಬದಲಾಗಿ ಸ್ವಸ್ಥವಾಗಿ ಬೆಳೆಸಿರುವ ತಲೆ ಗೂದಲು, ಆರೋಗ್ಯವಾಗಿ ಕಾಣುವ ಉಗುರುಗಳು, ಪೆಡಿಕ್ಯೂರ್ ಹಾಗೂ ಮ್ಯಾನಿಕ್ಯೂರ್ ಮಾಡಿ ಶುಭ್ರವಾಗಿ ಮೈನ್ಟೈನ್ ಮಾಡಿರೋ ನಮ್ಮ ದೇಹ ಸೌಂದರ್ಯಕ್ಕೆ ಇನ್ನೊಂದು ಹೆಜ್ಜೆ.
ಇದೆಲ್ಲದರ ಜೊತೆಗೆ ಇತ್ತೀಚಿಗೆ ನಮ್ಮ ಜೊತೇನೆ ಬರುವ ನಮ್ಮ ಸಂಗಾತಿ. ಅದೇ ನಮ್ಮ ಫೋನ್. ಹೆಣ್ಣು ಮಕ್ಕಳಿಗೆ ಅದರಲ್ಲೂ ಈ ಟೀನೇಜ್ ನಲ್ಲಿರೋ ಹೆಣ್ಣು ಮಕ್ಕಳಿಗೆ ಯಾವ ಫೋನ್ ಕೇಸ್ ಹಾಕಿದರೂ ಅದರ ಸೌಂದರ್ಯ ಕಡಿಮೇನೆ.
ಹಾಗಿದ್ದರೆ ನಮ್ಮಲ್ಲಿರೋ ಫೋನ್ ಗಳಿಗೆ ಸೆಟ್ಟಾಗುವಂತ ಕೆಲವು ಫೋನ್ ಕೇಸ್ ಗಳನ್ನೂ ನಾವೇ ಕಸ್ಟಾಮೈಸ್ ಮಾಡಿಕೊಂಡರೆ ಎಷ್ಟು ಚೆಂದ ?
ಇಲ್ಲಿವೆ ಕೆಲವು ಕಸ್ಟಾಮೈಸ್ ಮಾಡುವ ಐಡಿಯಾಗಳು, ಈ ಕಸ್ಟಾಮೈಸ್ ಕೇಸ್ ಗಳನ್ನೂ ತಯಾರು ಮಾಡಲು ಕೇವಲ ಮಾರುಕಟ್ಟೆಯಲ್ಲಿ ಸಿಗುವ ಪ್ಲೈನ್ ಕೇಸ್ ಹಾಗೂ ನಮ್ಮಲ್ಲೇ ಬಳಕೆ ಮಾಡದೇ ಉಳಿದಿರೋ ಕೆಲವೊಂದು ಕಿವಿ ಓಲೆ ಹಾಗೂ ನೆಕ್ ಪೀಸ್ ಗಳೇ ಸಾಕು. ಇದು ಸಾಕಾಗದಿದ್ದ ಪಕ್ಷದಲ್ಲಿ ನಮ್ಮಲ್ಲಿರೋ ಹಳೆಯ ಡ್ರೇಸ್ಸ್ಗಳಲ್ಲಿ ಇರೋ ಮಿರರ್ ವರ್ಕ್ ಪೀಸ್ ಗಳು. ಇಷ್ಟರಲ್ಲೇ ಒಂದು ಸುಂದರವಾದ ಫೋನ್ ಕೇಸ್ ನ್ನು ತಯಾರು ಮಾಡಬಹುದು.