wowstava Blog HEALTH 4 U HOME REMEDY ಚರ್ಮ ಹೊಳೆಯಲು ವಾಟರ್ ತೆರಪಿ – ಜಲ ಚಿಕಿತ್ಸೆ
HEALTH 4 U HOME REMEDY

ಚರ್ಮ ಹೊಳೆಯಲು ವಾಟರ್ ತೆರಪಿ – ಜಲ ಚಿಕಿತ್ಸೆ

ವಾಟರ್ ತೆರಪಿ ಅಥವಾ ಜಲ ಚಿಕಿತ್ಸೆ ಎಂದರೇನು ? ಮತ್ತು ಇದರಿಂದ ಲಾಭಗಳಿದೆಯಾ ? ಹಾಗಿದ್ದರೆ ಆಗುವ ಲಾಭಗಳು.

ಜಪಾನಿಗರ ಸೌಂದರ್ಯ ಹೆಚ್ಚಿಸು ಮೂಲ ಇದೆ ಜಲ ಚಿಕಿತ್ಸೆ. ನೈಸರ್ಗಿಕವಾಗಿ ನಮ್ಮ ಮುಖ ಹಾಗೂ ದೇಹದ ಇತರ ಭಾಗಗಳ ಸೌಂದರ್ಯ ಮತ್ತು ತ್ವಚೆಯ ಅಂದ ಹೆಚ್ಚಿಸುವ ವಾಟರ್‌ ಥೆರಪಿ; ಹೌದು. ಜಪಾನಿಗರ ಸೌಂದರ್ಯ ರಹಸ್ಯದ ಮೂಲವಿದು.

ಯಾವಾಗಲು ಹೊಳೆಯುತ್ತ ತಮ್ಮ ತ್ವಚೆಯ ಬಗ್ಗೆ ಜಾಸ್ತಿ ಆಸಕ್ತಿ ತೋರುವವರು ಜಪಾನಿಗರ ಈ ವಾಟರ್‌ ಥೆರಪಿ ಫಾಲೊ ಮಾಡಿ. ಇದು ಸೌಂದರ್ಯಕ್ಕಷ್ಟೇ ಅಲ್ಲದೆ ನಿಮ್ಮ ಆರೋಗ್ಯಕ್ಕೂ ಸಹ ಉತ್ತಮ. ಸದಾ ಕನ್ನಡಿಯಂತೆ ಹೊಳೆಯುವ, ಎಲ್ಲರು ಒಮ್ಮೆ ಯೋಚಿಸುವಂತಹ ಮಿಂಚುವ ತ್ವಚೆ ನಮ್ಮದಾಗಬೇಕು ಎಂಬ ಆಸೆ ಯಾರಿಗಿಲ್ಲ ಹೇಳಿ.

ಸೌಂದರ್ಯದ ವಿಚಾರದಲ್ಲಿ ಎಲ್ಲರಿಗೂ ಆಸಕ್ತಿ ಇರುವುದು ಸಹಜ. ಸಾಮಾನ್ಯವಾಗಿ ಈ ಸಿನಿಮಾ ತಾರೆಯರ ಚರ್ಮ ಹೊಳೆಯುತ್ತ ಇರುವುದು ನಾವು ಕಾಣುತ್ತೇವೆ. ಹಾಗಂತ ಅವರೆಲ್ಲ ವಾಟರ್ ತೆರಪಿಯನ್ನೇ ಹೊಂದಿಕೊಳ್ಳುತ್ತಾರೆ ಎನ್ನಲಾಗುವುದಿಲ್ಲ. ಹಣ ಅಸ್ತಿ ಇರುವವರು ವೈದ್ಯಕೀಯ ಲೋಕದಲ್ಲಿ ಇರುವ ಬಹಳಷ್ಟು ವಿಚಾರಗಳನ್ನು ತಿಳಿದುಕೊಂಡು ಬಳಸುತ್ತಾರೆ. ಆದರೆ ಸಾಮಾನ್ಯ ಜನರಿಗೆ ಇದು ಕೈಗೆಟಕದ ವಸ್ತು.

ಹಾಗಂತ ಸಾಮಾನ್ಯ ಜನರಿಗೆ ಕೈಗೆಟಕುವ ಉಪಾಯಗಳು ಇಲ್ಲವೆಂದೇನಿಲ್ಲ. ಸಾಮಾನ್ಯ ಜನರೂ ಸಹ ತಮ್ಮ ದೇಹದ ಕಾಳಜಿ ಮಾಡುವುದು ಅತ್ಯಗತ್ಯ. ನಮ್ಮ ದೇಹವು 75% ರಷ್ಟು ನೀರಿನಿಂದ ಮಾಡಲ್ಪಟ್ಟಿದೆ. ಚರ್ಮಕ್ಕೆ ನೀರು ಅತ್ಯಗತ್ಯ ದೇಹದಲ್ಲಿ ನೀರಿನ ಮಟ್ಟ ಇಳಿಕೆಯಾದರೆ ತ್ವಚೆಯು ಒಣಗಿದಂತೆ ಕಾಣುತ್ತದೆ.  ಶುಷ್ಕ ಚರ್ಮದ ಮೇಲೆ ಸುಕ್ಕುಗಳು, ವಯಸ್ಸಾದಂತೆ ಕಾಣಿಸಿಕೊಳ್ಳುವುದು ಸಹಜ. ನಿಮ್ಮ ತ್ವಚೆಯನ್ನು ಹೈಡ್ರೇಟು ಮಾಡಲು ಪ್ರತಿದಿನ ಚರ್ಮವನ್ನು ಬೆವರು ಮುಕ್ತಗೊಳಿಸುವುದು ಮುಖ್ಯವಾಗುತ್ತದೆ. ಆದ್ದರಿಂದ ಚರ್ಮವನ್ನು ಆರೋಗ್ಯಕರವಾಗಿ ಇರಿಸಲು ಸಾಕಷ್ಟು ನೀರು ಸೇವಿಸುವುದು ಮುಖ್ಯವಾಗುತ್ತದೆ. ತ್ವಚೆಯ ಅಂದ ಸದಾ ಅಂದವಾಗಿರಲು ಜಪಾನೀಸ್‌ ವಾಟರ್‌ ಥೆರಪಿ ಪ್ರಯತ್ನಿಸಬಹುದು. ಇದು ಪ್ರತಿದಿನ ಬಹಳಷ್ಟು ಲೋಟ ನೀರನ್ನು ಕೋಣೆಯ ಉಷ್ಣಾಂಶದ ಪ್ರಕಾರ ಕುಡಿಯುವುದು ಮುಖ್ಯವಾಗುತ್ತದೆ.

ಏನಿದು ಜಪಾನೀಸ್‌ ವಾಟರ್‌ ಥೆರಪಿ?

ಜಪಾನಿಸ್‌ ವಾಟರ್‌ ಥೆರಪಿಯು ಒಂದು ಒಳ್ಳೆಯ ಅಭ್ಯಾಸವಾಗಿದ್ದು, ಕೆಲವು ಬಹು ಮುಖ್ಯ ಪ್ರಯೋಜನಗಳಿಗಾಗಿ ಪ್ರತಿದಿನ ಬೆಳಿಗ್ಗೆ ಎದ್ದಾಗ ಉಗುರು ಬೆಚ್ಚಗಿನ ಹಲವು ಲೋಟಗಳಷ್ಟು ನೀರು ಕುಡಿಯುವುದನ್ನು ಒಳಗೊಂಡಿರುತ್ತದೆ.

ಬೆಳಿಗ್ಗೆ ಎದ್ದಾಕ್ಷಣ ಹಲ್ಲುಜ್ಜುವ ಮೊದಲು ಹಾಗೂ ಬೆಳಗಿನ ಉಪಾಹಾರಕ್ಕೆ 45 ನಿಮಿಷಕ್ಕೂ ಮೊದಲು ನಾಲ್ಕರಿಂದ 5 ಗ್ಲಾಸ್‌ ಕೋಣೆಯ ಉಷ್ಣಾಂಶದ ನೀರನ್ನು ಕುಡಿಯಬೇಕು. ಊಟವನ್ನು 15 ನಿಮಿಷಗಳ ಒಳಗೆ ಮುಗಿಸಬೇಕು. ಊಟದ ನಂತರ ಬೇರೆ ಆಹಾರ ಸೇವಿಸಲು ಕನಿಷ್ಠ 2 ಗಂಟೆಗಳ ಕಾಲ ಕಾಯಬೇಕು.

ಬೆಳಗಿನ ಉಪಾಹಾರಕ್ಕೂ ಮುನ್ನ ನೀರು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ ಎಂಬುದು ಸಾಬೀತಾದ ವಿಚಾರವಾಗಿದೆ. ಇದು ಬೆಳಿಗ್ಗೆ ಜಲಸಂಚಯನಕ್ಕೆ ಸಹಾಯ ಮಾಡುತ್ತದೆ. ದೈಹಿಕ ಕಾರ್ಯಗಳನ್ನು ಸಕ್ರಿಯಗೊಳಿಸುತ್ತದೆ. ಊಟ ಹಾಗೂ ನೀರು ಕುಡಿಯುವ ಸಮಯವನ್ನು ಸಿಂಕ್‌ ಮಾಡುವುದರಿಂದ ಕರುಳಿನ ಶುದ್ಧೀಕರಣವನ್ನು ಸುಗಮಗೊಳಿಸುತ್ತದೆ.

ಜಲ ಚಿಕಿತ್ಸೆ ಅಥವಾ ವಾಟರ್‌ ಥೆರಪಿಯಿಂದಾಗುವ ಉಪಯೋಗಗಳು.

ವಾಟರ್‌ ಥೆರಪಿ ಅನುಸರಿಸುವುದರಿಂದ ಪಚನ ಕ್ರಿಯೆಯನ್ನು ಹೆಚ್ಚಿಸಬಹುದು. ಇದು ತೂಕ ನಿರ್ವಹಣೆಗೂ ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹದಲ್ಲಿನ ವಿಷಾಂಶವನ್ನು ಹೊರಹಾಕಬಹುದು. ಆ ಮೂಲಕ ನೈಸರ್ಗಿಕ ನಿರ್ವಿಶೀಕರಣ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.

ಇದು ಆಹಾರ ಸೇವನೆಗೆ ಹೊಟ್ಟೆಯನ್ನು ಸಿದ್ಧಗೊಳಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜಲಸಂಚಯನ ಮತ್ತು ದೈಹಿಕ ಕಾರ್ಯಗಳನ್ನು ಪ್ರಾರಂಭಿಸುವ ಮೂಲಕ ಶಕ್ತಿಯ ಮಟ್ಟವನ್ನು ಸಮರ್ಥವಾಗಿ ಹೆಚ್ಚಿಸುತ್ತದೆ.

ಜಪಾನೀಸ್‌ ವಾಟರ್‌ ಥೆರಪಿಯು ಚರ್ಮದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಇದು ಮೈ ಕಾಂತಿ ಹೆಚ್ಚಲು ನೆರವಾಗುತ್ತದೆ. ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. ಮಲಬದ್ಧತೆಯನ್ನು ತಡೆಯುತ್ತದೆ ಹಾಗೂ ದೇಹದಲ್ಲಿ pH ಮಟ್ಟವನ್ನು ಸಮರ್ಥವಾಗಿ ಸಮತೋಲನಗೊಳಿಸುತ್ತದೆ.

ಮಹಿಳೆಯರಲ್ಲಿ ಅದರಲ್ಲೂ ಮುಟ್ಟಾಗುವ ಒಂದೆರಡು ದಿನಗಳ ಮೊದಲು ಅತಿಯಾದ ನೀರನ್ನು ಸೇವಿಸುವುದರಿಂದ ಹೆಣ್ಣು ಮಕ್ಕಳಿಗೆ ಮುಟ್ಟಾಗುವ ಸಂದರ್ಭದಲ್ಲಿ ಉದರ ನೋವು, ಹೊಟ್ಟೆ ಕಚ್ಚುವುದು, ಸೊಂಟ ನೋವು ಮುಂತಾದ ತೊಂದರೆಗಳಿಂದ 100 ಕ್ಕೆ 90 ರಷ್ಟು ಮುಕ್ತಿ ಪಡೆಯಬಹುದು.

ನಮ್ಮ ದೈನಂದಿನ ದಿನಚರಿಯಲ್ಲಿ ಸಾಕಷ್ಟು ನೀರು ಕುಡಿಯುವುದನ್ನು ರೂಢಿಸಿಕೊಳ್ಳುವುದರಿಂದ ಮೆದುಳಿನ ಕಾರ್ಯ, ಶಕ್ತಿ ಮಟ್ಟ ಹಾಗೂ ರಕ್ತದೊತ್ತಡಕ್ಕೆ ಪ್ರಯೋಜನ ಸಿಗುತ್ತದೆ. ತಲೆನೋವು, ಮಲಬದ್ಧತೆ ಹಾಗೂ ಮೂತ್ರಪಿಂಡದ ಕಲ್ಲುಗಳು ಉಂಟಾಗದಂತೆ ತಡೆಯುತ್ತದೆ.

ಹಾಗಿದ್ದರೆ ಜಪಾನೀಸ್‌ ವಾಟರ್‌ ಥೆರಪಿ ಶುರು ಮಾಡುವುದು ಹೇಗೆ?

ಬೆಳಿಗ್ಗೆ ಎದ್ದ ತಕ್ಷಣ ಕನಿಷ್ಠ ನಾಲ್ಕರಿಂದ ಎಂಟು ಲೋಟ ಉಗುರು ಬೆಚ್ಚಗಿನ ನೀರು ಕುಡಿಯಬೇಕು.

ಪ್ರತಿ ಗ್ಲಾಸ್‌ ನೀರು 160 ರಿಂದ 200 ಮಿಲಿಯಷ್ಟಿರಬೇಕು. ಖಾಲಿ ಹೊಟ್ಟೆಯಲ್ಲಿ ಇಷ್ಟೂ ನೀರು ಸೇವಿಸಬೇಕು.
ನೀವು ದಿನದಲ್ಲಿ ಸೇವಿಸುವ ಪ್ರತಿ ಊಟದ ನಡುವೆ ಎರಡು ಗಂಟೆ ಅಂತರವಿರಲಿ. ಇದರ ನಡುವೆ ಏನನ್ನೂ ಕುಡಿಯುವುದು, ತಿನ್ನುವುದು ಮಾಡಬೇಡಿ.

ಒಂದೇ ಸಲ ನಾಲ್ಕು ಅಥವಾ ಎಂಟು ಗ್ಲಾಸ್‌ ನೀರು ಕುಡಿಯಲು ಸಾಧ್ಯವಾಗದೇ ಇದ್ದರೆ, ಒಂದೊಂದೇ ಗ್ಲಾಸ್‌ನಿಂದ ಅಭ್ಯಾಸ ಮಾಡಿಕೊಳ್ಳಿ.
ನೀರು ಕೋಣೆಯ ಉಷ್ಣಾಂಶ ಅಥವಾ ಬೆಚ್ಚಗಿರಬೇಕು. ನೀರು ಕುಡಿದ ನಂತರ ಹಲ್ಲುಜ್ಜುವ ಕ್ರಿಯೆ.

ನೀರು ಕುಡಿದ 45 ನಿಮಿಷಗಳ ಕಾಲ ಏನನ್ನೂ ತಿನ್ನವ ಹಾಗಿಲ್ಲ.

ಹೆಚ್ಚು ನೀರು ಕುಡಿದಾಗ ಆಗಾಗ ಮುತ್ರ ವಿಸರ್ಜನೆ ತುಂಬಾ ಅಗತ್ಯ ಹಾಗಾಗಿ ಈ ತೆರಪಿಯನ್ನು ಮನೆಯಲ್ಲಿದಾಗಲೇ ಮಾಡುವುದು ಉತ್ತಮ.

Exit mobile version