ಗುರಿ ತಲುಪುವ ರಹಸ್ಯ -ನೀವು ಅಂದುಕೊಂಡಂತೆ ಗುರಿಯನ್ನು ತಲುಪಲು ಈ ರಹಸ್ಯ ವಿಚಾರಗಳನ್ನು ಗಾಢವಾಗಿ ಓದಿ. ಪುನಃ ಪುನಃ ಮನನ ಮಾಡಿ ಅನುಷ್ಠಾನಕ್ಕೆ ತಂದುಕೊಂಡರೆ ಯಶಸ್ಸು ಕೈಯಲ್ಲಿರುವ ನೆಲ್ಲಿಕಾಯಿಯಂತೆ ನಿಮ್ಮ ಅಧೀನವಾಗುತ್ತದೆ.
ಗುರಿ ತಲುಪುವ ರಹಸ್ಯ ನೀವು ಅಂದುಕೊಂಡಂತೆ ಗುರಿಯನ್ನು ತಲುಪಲು ಈ ರಹಸ್ಯ ವಿಚಾರಗಳನ್ನು ಗಾಢವಾಗಿ ಓದಿ. ಪುನಃ ಪುನಃ ಮನನ ಮಾಡಿ ಅನುಷ್ಠಾನಕ್ಕೆ ತಂದುಕೊಂಡರೆ ಯಶಸ್ಸು ಕೈಯಲ್ಲಿರುವ ನೆಲ್ಲಿಕಾಯಿಯಂತೆ ನಿಮ್ಮ ಅಧೀನವಾಗುತ್ತದೆ. ಕಾಲವೆಂಬ ಕುದುರೆಯಲ್ಲಿ ಧಾವಿಸುತ್ತಾ ವಿವೇಕವೆಂಬ ಖಡ್ಗ ಹಿಡಿದು ಏಕಾಗ್ರ ಮನಸ್ಸಿನಿಂದ ಗುರಿ ತಲುಪಲು ಧಾವಿಸಿರಿ. ಗುರಿ ತಲುಪಲು ಹೊರಟಿರುವ ನಿಮಗೆ ಪ್ರಾರಂಭದಲ್ಲಿ ಎದುರಾಗುವ ಸಣ್ಣ ಪುಟ್ಟ ಸಮಸ್ಯೆಗಳೇ ಮುಂದೆ ಪರ್ವತದಂತೆ ಬೆಳೆದುಕೊಳ್ಳುತ್ತವೆ. ಆ ಸಮಸ್ಯೆಗಳನ್ನು ಪ್ರಾರಂಭದಲ್ಲಿಯೇ ಹೊಸಕಿ ಹಾಕಿರಿ. ನಿಮ್ಮ ಯಶಸ್ಸು ಅಡಗಿರುವುದು ಸಾವಿರ