ನೆನಪಿರಲಿ ಕಾಲ ಯಾರಿಗೂ ಕಾಯಲ್ಲ
ಈ ಕಷ್ಟದ ಸಮಯಗಳು ನೋವುಗಳು ಈ ಪಾಠಗಳು ಒಂದು ದಿನ ನಮ್ಮ ಬಲ ಹಾಗು ಎಚ್ಚರಿಕೆಯ ಗಂಟೆಗಳು ಮತ್ತು ಆಶೀರ್ವಾದಗಳಾಗುತ್ತವೆ. ತನಗೆ ತಾನೇ ಸುಳ್ಳುಹೇಳುವವನಿಂದ ಯಾವ ಅಪೇಕ್ಷೆ ಇಡಬಹುದು? ಸಲಹೆ ಕೊಡೋರೆಲ್ಲಾ ಸಹಾಯ ಮಾಡಲ್ಲ. ಕನಿಕರ ತೋರ್ಸೋರೆಲ್ಲ ಕಷ್ಟಕ್ಕಾಗಲ್ಲ. ಯಾರಿಗೆ ಯಾರೂ ಇಲ್ಲ. ನೆನಪಿರಲಿ ಕಾಲ ಯಾರಿಗೂ ಕಾಯಲ್ಲ. ಸಮಯ ಇವತು ಅವರದಾಗಿದ್ರೆ ನಾಳೆ ನಮ್ಮದಾಗುತ್ತೆ. ತಾಳ್ಮೆ ಇರ್ಬೇಕು ಅಷ್ಟೇ. ಕ್ರೋದ ಬುದ್ದಿಯನ್ನು ತಿಂತದೆ. ಅಹಂಕಾರ ಜ್ನ್ಯಾನವನ್ನು ತಿಂತದೆ. ಪ್ರಾಯಶ್ಚಿತ್ತ ಪಾಪವನ್ನು ತಿಂತದೆ. ಮೋಹ ಮರ್ಯಾದೆಯನ್ನು ತಿಂತದೆ.