ದುಡಿಮೆಯ ಮಹತ್ವ
ಕಠಿಣ ಪರಿಶ್ರಮದಿಂದ ಏನು ಬೇಕಾದರೂ ಸಾದಿಸಬಹುದು. ಈ ಕತೆ ಓದಿ ಒಂದು ಊರಿನಲ್ಲಿ ತರುಣನೊಬ್ಬ ಬಲು ಸೋಮಾರಿ. ಮನೆಯಲ್ಲಿ ಕುಳಿತು ಊಟ ಮಾಡುವುದನ್ನು ಬಿಟ್ಟು ಬೇರೆ ಏನನ್ನು ಮಾಡದೇ ಕಾಲಹರಣ ಮಾಡುತ್ತಿದ್ದ. ತಂದೆ ಹೇಳಿದ ಯಾವ ಕೆಲಸವನ್ನು ಮಾಡದೇ ಉಡಾಫೆಯಿಂದ ಇರುತ್ತಿದ್ದ. ಇವನಿಗೆ ಪಾಠ ಕಲಿಸಲು ತಂದೆ ಉಪಾಯ ಮಾಡಿದ. ನಾಳೆ ಬೆಳಿಗ್ಗೆ ನೀನು ಹೊರಗೆ ದುಡಿದು 5೦ ರೂಪಾಯಿ ತಂದರೆ ಮನೆಗೆ ಬಾ ಇಲ್ಲವಾದಲ್ಲಿ ನಿನಗೆ ಪ್ರವೇಶವಿಲವೆಂದು ಖಡಾಖಂಡಿತವಾಗಿ ಮಗನಿಗೆ ಹೇಳಿದರು. ದಿಕ್ಕು ಕಾಣದ ತರುಣ