ಮಹಾಲಕ್ಷ್ಮಿ ಕೇಸ್ನಲ್ಲಿ ಹೊಸ ಟ್ವಿಸ್ಟ್ ಏನದು ?
ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ನಡೆದಿರುವ ಮಹಾಲಕ್ಷ್ಮಿ ಎಂಬುವವರ ಕೊಲೆ ಪ್ರಕರಣ ನಿಮಗೆಲ್ಲ ತಿಳಿದಿದೆ. ಮಹಿಳೆಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟ ಸುದ್ದಿಯ ಬಗ್ಗೆ ದೇಶದೆಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಈ ಕೊಲೆಯ ಹಿಂದೆ ಯಾರಿದ್ದಾರೆ ಮತ್ತು ಎಲ್ಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ದೊರೆತ್ತಿದ್ದು ಆರೋಪಿಯನ್ನ ಬಂಧಿಸಿ ಕರೆತರಲು ಹೊರರಾಜ್ಯಗಳಿಗೆ ತೆರಳಿದ್ದಾರೆ. ಮೊದಲಿಗೆ ಮಹಾಲಕ್ಷ್ಮಿ ಜೊತೆಗೆ ಸಲುಗೆಯಿಂದ ಇದ್ದ ಅಶ್ರಫ್ ಎಂಬಾತನ ಮೇಲೆ ಎಲ್ಲರೂ ಅನುಮಾನ ಪಟ್ಟು ವಿಚಾರಣೆಯನ್ನು ನಡೆಸಿದಾಗ ಇವರಿಬ್ಬರ ನಡುವೆ ಇರುವ