KANNADA QUOTES MOTIVATIONAL

50 – ಕನ್ನಡ ಕೋಟ್ಸ್

ಪ್ರಪಂಚದಲ್ಲಿ ಏನಾದರೂ ಸಾಧಿಸಬೇಕೆಂದರೆ ಪ್ರೇರಣೆ ಮುಖ್ಯ.  ಈ ಬ್ಲಾಗ್ ನಲ್ಲಿ ನಿಮಗೆ ಪ್ರೇರಣೆ ನೀಡುವ  ಉಲ್ಲೇಖಗಳನ್ನು ಬರೆಯಲಾಗಿದೆ. ಇದರಲ್ಲಿ ನಿಮಗೆ ಬೇಕಾದ motivational QUOTES  in ಕನ್ನಡ   ದೊರೆಯುತ್ತವೆ.  ಪ್ರತೀ ವ್ಯಕ್ತಿಗೂ ಉತ್ಸಾಹ ಇದ್ದರೆ ಏನಾದ್ರೂ ಮಾಡಬಹುದು,  ಎಂದು ತಿಳಿಸುವ  ಈ ಬ್ಲಾಗ್ ನಲ್ಲಿ inspiring, positive ಹಾಗೆ motivational quotes ಇವೆ.

  1. “ಕಾಲ ಹೀಗೆ ಇರಲ್ಲ ಇವತ್ತು ನಿಂದು ನಾಳೆ ನಂದು”.

2. “ಎಚ್ಚರ ನಮ್ಮಿಂದಲೇ ಈಜು ಕಲಿತ ಕೆಲವರು ನಮ್ಮನ್ನೇ ಮುಳುಗಿಸಲು ಕಾಯುತ್ತಿರುತ್ತಾರೆ”.

3.”ಜೀವನದಲ್ಲಿ ಯಾವುದಕ್ಕೂ ಅಸೆ ಪಡಬಾರದು ನಮ್ಮ ಹಣೆ ಬರಹ ಏನಿದೆಯೋ ಅದೇ ನಡೆಯೋದು”.

4. “ನಂಬಿಕೆ ಮನಸ್ಸಿನಿಂದ ಹುಟ್ಟಬೇಕು ಹೊರತು ಮೂರನೇ ವ್ಯಕ್ತಿಯಿಂದ ಅಲ್ಲ”.

5. “ನಾವು ಸರಿಯಾಗಿ ಇರೋಣ ಮಿಕ್ಕಿದ್ದೆಲ್ಲ ಕರ್ಮಕ್ಕೆ ಬಿಡೋಣ”.

6. “ಎಲ್ಲರೂ ನಮ್ಮವರೇ ಆದರೆ ಎಲ್ಲಾ ಸಮಯದ್ಲಲೂ ಅಲ್ಲ”.

7. “ಕಥೆಯಾಗಬೇಡ ದಂತ ಕಥೆಯಾಗು”.

8. “ಸಂಬಂಧಗಳ ಸಂತೆಯಲ್ಲಿ ಸತ್ಯ ಹೇಳುವವನೇ ಏಕಾಂಗಿ”.

9. “ಕಾಲ ಯಾವಾಗಲೂ ಒಂದೇ ತರ ಇರಲ್ಲ ನಿನ್ನನ್ನು ಅಳಿಸಿದವರು ಅಳುವ ಸಮಯ ಖಂಡಿತ ಬಂದೆ ಬರುತ್ತದೆ. ಕಾಯುವ ತಾಳ್ಮೆ ನಮ್ಮಲ್ಲಿರಬೇಕು “.

10. “ನೀ ಲೆಕ್ಕ ಇಲ್ಲ ಎಂದವರ ಎದುರು ಲೆಕ್ಕಕ್ಕೆ ಸಿಗದ ಹಾಗೆ ಗೆದ್ದು ಬದುಕು “.

12. “ತಲೆಬಾಗಬೇಕು ತಿಳಿದವರ ಮುಂದೆ. ತುಳಿಯುವವರ ಮುಂದೆ ಅಲ್ಲ”.

13. “ಕೈಲಾಗದ ಶತ್ರುವಿನ ಕೊನೆಯ ಆಯುಧವೇ ಅಪಪ್ರಚಾರ”.

14. “ಪ್ರತಿಯೊಂದರ ಬೆಲೆ ಅದರ ಸಮಯ ಬಂದಾಗಲೇ ಗೊತ್ತಾಗುವುದು”.

 

15. “ಎಷ್ಟೇ ಸಂಬಂಧಿಕರು, ಸ್ನೇಹಿತರು ಇದ್ದರೂ ಕೂಡ ಕೆಲವೊಂದು ಪರಿಸ್ಥಿತಿಯಲ್ಲಿ ನಾವು ಒಂಟಿ ಅನಿಸಿಬಿಡುತ್ತದೆ”

16.  “ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನು ನನ್ನಿಂದ ಸಾಧ್ಯ ಎಂದು ಬದಲಾಯಿಸುವುದು ಯಶಸ್ಸಿನ ಮೊದಲ ಹೆಜ್ಜೆ”

17. “ಮಾತು ವೈರಿಗಳ ಮುಂದೆ ಗತ್ತಿನಂತಿರಬೇಕು, ಹೆದರಿಸುವವರು ಮುಂದೆ ಕತ್ತಿಯಂತಿರಬೇಕು, ಆತ್ಮೀಯರ ಮುಂದೆ ಮುತ್ತಿನಂತೆ ಇರಬೇಕು, ಹಿರಿಯರ ಮುಂದೆ ಹತ್ತಿಯಂತೆ ಇರಬೇಕು.”

18.  “ಶ್ರೀಮಂತಿಕೆ ಇರೋದು ಹಣ ಇರೋ ತನಕ, ದೀಪ ಉರಿಯುವುದು ಎಣ್ಣೆ ಇರೋತನಕ, ಪ್ರೀತಿ ಇರೋದು ಇಬ್ಬರಲ್ಲಿ ಒಬ್ಬರು ಕೈಕೊಡುವ ತನಕ, ಸ್ನೇಹ ಇರೋದು ಕೊನೆ ಉಸಿರಿರೋ ತನಕ.”

19.  “ಯಾರನ್ನೇ ಆದರೂ ಪರೀಕ್ಷಿಸದೆ ನಂಬಬಾರದು ನಂಬಿದ ಮೇಲೆ ಪರೀಕ್ಷಿಸಬಾರದು.”

20.   “ನಿಮ್ಮ ಕನಸು ಎಷ್ಟು ದೊಡ್ಡದಿರುತ್ತದೆಯೋ ಅದಕ್ಕಿಂತ ಪ್ರಯತ್ನ ಬಹುಪಾಲು ದೊಡ್ಡದಾಗಿರಬೇಕು”

21.  “ಪರರಿಗಿಂತ ತಾನೆ ಬುದ್ಧಿವಂತ ಎಂದು ಗರ್ವ ಪಡುವುದು ಮೋಸಹೋಗುವ ನೇರದಾರಿ..”

 
22.  “ನಿಮ್ಮಲ್ಲಿರುವ ಕನಸುಗಳನ್ನು ಇತರರಿಗೆ ಹೇಳಲು ಹೋಗಬೇಡಿ ಬದಲಿಗೆ ಅದನ್ನು ಮಾಡಿ ತೋರಿಸಿ”
 
23.  “ಜೀವನದಲ್ಲಿ ಏನೂ ಇಲ್ಲದೆ ಇರುವಾಗ ತಾಳ್ಮೆ ಮುಖ್ಯ ಆದರೆ ಎಲ್ಲವೂ ಸಿಕ್ಕಿದ ಮೇಲೆ ವಿನಯ ಬಹಳ ಮುಖ್ಯ”
24.  “ಕೊಳೆಯೆ ಕಾಣದ ಲೋಕವಿಲ್ಲ ಕೊಳೆಯಿಲ್ಲದ ದೇಹವಿಲ್ಲ ಬಂದ ಕೊಳೆಯನ್ನು ಆಗಾಗ ತೆಗೆದುಕೊಳ್ಳುವುದೇ ಚೋಕ್ಕತನದ ಲಕ್ಷಣ.”
 
25.  “ಬಡತನ ಸಿರಿತನ ಕಡೇತನಕ ಉಳಿಯುವುದಿಲ್ಲ ಆದರೆ ಗೆಳೆತನ ಮಾತ್ರ ಕೊನೆತನಕ ಉಳಿಯುತ್ತದೆ”
 
26.   “ದುಡ್ಡಿರಬೇಕು ದುಡಿತ ಇರಬೇಕು ಇಲ್ಲವಾದಲ್ಲಿ ಸಂಬಂಧಿಕರ ನಮ್ಮವರೆಂಬ ಲಿಸ್ಟಿನಲ್ಲಿ ನಾವಿರೋದೇ ಇಲ್ಲ.”

27.  “ನಮ್ಮ ಹಣೆಬರಹ ನಿರ್ಧರಿಸುವ ಜವಾಬ್ದಾರಿ ನಕ್ಷತ್ರಗಳ ಮೇಲಿಲ್ಲ ನಮ್ಮ ಮೇಲಿದೆ”

 
28.  “ನಾನು ಬದುಕಿರುವುದು ಒಂದು ದಿನ ಸಾಯೋದಕ್ಕಲ್ಲ ಸಾಧಿಸುವುದಕ್ಕೆ…”
 
29.  “ಸೋಲದೆ ಗೆದ್ದರೆ ಮಂದಹಾಸ ಸೋತು ಗೆದ್ದರೆ ಇತಿಹಾಸ”
 
30.  “ಕೊಟ್ಟು ಮರೆಯುವನು ಭಗವಂತ ಪಡೆದು ಮರೆಯುವವನು ಮನುಷ್ಯ”
 
31.  “ತಪ್ಪುಗಳು ಅನುಭವಗಳನ್ನು ಹೆಚ್ಚಿಸುತ್ತದೆ ಆದರೆ ಅನುಭವಗಳು ತಪ್ಪುಗಳನ್ನು ಕಡಿಮೆ ಮಾಡುತ್ತದೆ”
 
32.  “ನನ್ನ ಮರೆತ ನಿನಗೆ ನನ್ನ ನೆನಪಾಗಲಿಲ್ಲ ಜಗವನ್ನೇ ಮರೆತ ನನಗೆ ನಿನ್ನ ಮರೆಯಲಾಗಲಿಲ್ಲ.”
 
33.  “ಅರ್ಥ ಮಾಡಿಕೊಳ್ಳುವ ಮನಸ್ಸು ನಿನಗಿಲ್ಲ ಎಂದರೆ ಪದೇಪದೇ ಹೇಳುವ ಆಸೆ ಕೂಡ ನನಗಿಲ್ಲ”
 
 
34.   “ಕೆಲವೊಮ್ಮೆ ಪಡೆದುಕೊಂಡ ಫಲಿತಾಂಶಕ್ಕಿಂತ ನಡೆದುಬಂದ ದಾರಿಯೆ ಮುಖ್ಯವಾಗಿರುತ್ತದೆ.”
 
35.   “ಮಾತು ಬಿಟ್ಟಿಲ್ಲ ಜಗಳ ಆಡಿಲ್ಲ ದ್ವೇಷ ಇಲ್ಲವೇ ಇಲ್ಲ ಆದರೂ ಮನಸ್ಸು ದೂರ ಮಾತು-ಮೌನ”
 
36.  “ಬರಿದಾದ ಭೂಮಿ ಬಯಸುವುದು ಒಂದು ಹನಿ ನೀರನ್ನು ಮಾತ್ರ ನೋವು ತುಂಬಿದ ಹೃದಯ ಬಯಸುವುದು ಒಂದು ಹನಿ ಪ್ರೀತಿಯನ್ನು ಮಾತ್ರ”
 
37.  “ಜನರು ಬದಲಾಗಬಹುದು ಮನಸು ಬದಲಾಗಬಹುದು ಸ್ಥಳಗಳು ಸಹ ಬದಲಾಗಬಹುದು ಆದರೆ ನೆನಪುಗಳು ಎಂದು ಬದಲಾಗದು”
38.  “ಬದುಕೆಂದರೆ ಬಿರುಗಾಳಿಯಲ್ಲಿ ದೀಪವನ್ನು ನಿರಂತರ ಬೆಳಗಲು ಪ್ರಯತ್ನಿಸುವುದು.”
 
39.  “ಇನ್ನೊಬ್ಬರನ್ನು ಸರಿಯಿಲ್ಲ ಎಂದು ಹೇಳಬೇಕಾದರೆ ಮೊದಲು ಅದನ್ನು ಹೇಳುವವರು ಸರಿಯಿರಬೇಕು.ಅವರು ಸರಿಯಿದ್ದರೆ ಮಾತ್ರ ಬೇರೆಯವರ ಅರ್ಹತೆಯ ಬಗ್ಗೆ ಮಾತನಾಡುವ ಯೋಗ್ಯತೆ ಇರುತ್ತದೆ.”

40.   “ಯಾವಾಗಲೂ ಸಂತೋಷವಾಗಿರುವುದು ವಿಷಯ. ಒಬ್ಬರ ಕಷ್ಟಕರವಾದ ಜೀವನದಲ್ಲಿ ಸುಖ ಮತ್ತು ದುಃಖಗಳು ಪರ್ಯಾಯವಾಗಿರುತ್ತವೆ. ಜೀವನದಲ್ಲಿ ನಿರಂತರವಾಗಿ ಸಂತೋಷದಿಂದಿರಲು ಎಂದಿಗೂ ಸಾಧ್ಯವಿಲ್ಲ”

 

41.   “ಆಕಾಶದೆಡೆಗೆ ನೋಡಿ, ಯಾರು ಒಂಟಿಯಾಗಿಲ್ಲ. ಇಡೀ ವಿಶ್ವವು ನಮಗೆ ಸ್ನೇಹಪರವಾಗಿದೆ. ಕನಸು ಕಂಡು ಕೆಲಸ ಮಾಡುವವರಿಗೆ ಬಯಸಿದ್ದೆಲ್ಲವೂ ಸಿಕ್ಕೇ ಸಿಗುತ್ತದೆ” ಡಾ.ಎ.ಪಿ.ಜೆ.ಅಬ್ದುಲ್ ಕಲಾಂ

42.  “ಯಾರಿಗೆ ಅನ್ನದ ಋಣ ಎಲ್ಲಿ ಇರುತ್ತದೆಯೋ ಅಲ್ಲಿಗೆ ಸಮಯವೇ ಅವರನ್ನು ಕರೆದುಕೊಂಡು ಹೋಗುತ್ತದೆ.”

43.  “ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ ? ಜಾತಿ – ವಿಜಾತಿ ಏನಬೇಡ ದೇವನೊಲಿ ದಾತದೆ ಜಾತಾ ಸರ್ವಜ್ಞ”

44.   “ವಿಶ್ವಭೂಪಟದಲ್ಲಿ ನಿನ್ನ ಹೆಸರು ಕಾಣಲಿ ಅದನ್ನು ಸಾಧಿಸುವ ಹಟ ನಿನ್ನದಾಗಲಿ…”

45.  “ನೀವು ಬೇರೆಯವರ ತಪ್ಪುಗಳಿಂದ ಕಲಿಯಬೇಕು. ಏಕೆಂದರೆ ಎಲ್ಲ ತಪ್ಪುಗಳನ್ನು ನೀವೇ ಮಾಡಿ ಕಲಿಯುವಷ್ಟು ದೊಡ್ಡ ಜೀವನ ನಿಮ್ಮ ಬಳಿಯಿಲ್ಲ”.

46.  “ಧರ್ಮದಿಂದ ಸಂಪತ್ತು ಚಿಗುರುತ್ತದೆ, ಧರ್ಮದಿಂದ ಸಂತೋಷ ಉಕ್ಕುತ್ತದೆ ಮತ್ತು ಧರ್ಮದಿಂದ ಎಲ್ಲವನ್ನೂ ಪಡೆಯುತ್ತೇವೆ. ಧರ್ಮವು ಈ ಪ್ರಪಂಚದ ಸಾರವಾಗಿದೆ.”

 

47.  ನೀ ಕಂಡ ಸೋಲುಗಳೇ ನಿನಗೆ ಪಾಠವಾಗಲಿ ನಿನ್ನ ನಾಳೆಯ ಗೆಲುವಿಗೆ ಸ್ಪೂರ್ತಿ ತುಂಬಲಿ…

48.  “ಮನುಷ್ಯನು ಮುಹೂರ್ತ ಇಲ್ಲದೆ ಹುಟ್ಟುತ್ತಾನೆ ಮತ್ತು ಮುಹೂರ್ತ ಇಲ್ಲದೆ ಸಾಯುತ್ತಾನೆ. ಆದರೂ ಕೂಡ ಜೀವನ ಪರ್ಯತ ಶುಭ ಮುಹೂರ್ತದ ಹಿಂದೆ ಓಡುತ್ತಾ ಇರುತ್ತಾನೆ”

49.   “ಕೆಲ ಸ್ನೇಹಿತರು ತಮ್ಮ ಒಂದೆರಡು ದಿನಗಳ ಸಂತೋಷಕ್ಕಾಗಿ, ಇತರ ಇಡೀ ಜೀವನದ ಸಂತೋಷವನ್ನು ಹಾಳು ಮಾಡಿಬಿಡುತ್ತಾರೆ, ಇಂತಹವರು ಸ್ನೇಹಿತರಲ್ಲ”.

50.  “ನೀನು ನನ್ನನ್ನು ಪ್ರೀತಿಸು ಅಥವಾ ದ್ವೇಷಿಸು, ಆದರೆ ಆ ದೇವರಿಗೆ ಮಾತ್ರ ನಾನು ಏನು ಎಂಬುದು ತಿಳಿದಿದೆ, ಅವನು ಮಾತ್ರ ನನ್ನನ್ನು ತೀರ್ಮಾನಿಸಲು ಸಾಧ್ಯ.”

Thank you for reading.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X