KANNADA QUOTES MOTIVATIONAL

100 ಕನ್ನಡ ಕೋಟ್ಸ್ 4 ಡೈಲಿ ಲೈಫ್

1. ಜೀವನ ಅನ್ನೋದು ಸೋಲು ಗೆಲುವಿನ ಆಟ. ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ, ಸೋತವನಿಗೆ ಗೆಲ್ಲಲೇ ಬೇಕೆಂಬ ಛಲವಿರುತ್ತದೆ.

2. ನಿಮ್ಮ ಸಂತೋಷಕ್ಕಾಗಿ ಜೀವಿಸಿ ಇತರರ ಸಂತೋಷಕ್ಕಲ್ಲ.

3. ನಂಬಿ ಬದುಕುವುದು ಬೇರೆ. ನಂಬಿಸುತ್ತಾ ಬದುಕೋದು ಬೇರೆ. ನಂಬಿ ಬದುಕುವುದರಲ್ಲಿ ಪ್ರೀತಿ ಇರುತ್ತೆ. ನಂಬಿಸುತ್ತಾ ಬದುಕುವುದರಲ್ಲಿ ಸ್ವಾರ್ಥ ಮಾತ್ರ ಇರುತ್ತೆ.

4. ಬೇಡವಾದ ವಿಷಯಗಳಿಂದ ದೂರವಿದ್ದರೆ ಬೇಕಾದಷ್ಟು ನೆಮ್ಮದಿ ಸಿಗುತ್ತದೆ.

5. ಯಾರಿಲ್ಲದ ಊರಿನಲ್ಲಿ ಏಕಾಂತ ನನಗಿರಲಿ, ಯಾರೆಷ್ಟೇ ಹುಡುಕಿದರು ಆ ಊರು ಸಿಗದಿರಲಿ.

6. ಸುಳ್ಳಾಗಿ ನಟನೆ ಮಾಡಲು ಗೊತಿಲ್ಲದವರು ಮೊದಲು ವ್ಯಕ್ತಪಡಿಸುವುದು ಕಣ್ಣೀರು ಮತ್ತು ಕೋಪ.

7. ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನ ನಿಲ್ಲಿಸಿ, ಏಕೆಂದರೆ ಅದು ನಿಮ್ಮ ದುಃಖವನ್ನು ಹೆಚ್ಚಿಸುತ್ತದೆ.

8. ಯೋಚಿಸಿದ್ದೆಲ್ಲ ಸತ್ಯ ಅಲ್ಲ. ಸತ್ಯ ಯಾವತ್ತೂ ಯೋಚಿಸಿದಂತೆ ಇರುವುದಿಲ್ಲ. ಅನುಭವ ಮಾತ್ರ ಯಾವಾಗಲು ಸತ್ಯ.

9. ನಿಮ್ಮ ಕೋಪವನ್ನು ನಿಯಂತ್ರಿಸಿ ಏಕೆಂದರೆ ಅದು ನಿಮಗೆ ವಿಷಾದವನ್ನು ಉಂಟು ಮಾಡುತ್ತದೆ.

10. ಇತರರ ನಷ್ಟದಲ್ಲಿ ನೀವು ದುಃಖಿತರಾಗಿದ್ದರೆ, ನೀವು ಎಷ್ಟು ಕಾಳಜಿಯನ್ನು ಹೊಂದಿದ್ದೀರಿ ಎಂಬುದನ್ನು ಇದು ತೋರಿಸುತ್ತದೆ.

11. ಮುಖಕ್ಕೆ ಬಣ್ಣ ಹಚ್ಚಿ ನಾಟಕವಾಡುವವರನ್ನ ಗುರುತಿಸಬಹುದು. ಆದರೆ ಮನಸ್ಸಿಗೆ ಬಣ್ಣ ಹಚ್ಚಿಕೊಂಡು ನಾಟಕವಾಡುವವರನ್ನು ಗುರುತಿಸುವುದಕ್ಕೆ ಆಗುವುದಿಲ್ಲ.

12. ಮುಖ ಪರಿಶುದ್ಧವಾಗಿದ್ದರೆ ಸಾಲದು, ಮನಸ್ಸು ಪರಿಶುದ್ಧವಾಗಿರಬೇಕು.

13. ಕೆಲವೊಂದು ಸಂಬಂಧಗಳು ಬಾಡಿಗೆ ಮನೆಯ ಹಾಗೆ ಎಷ್ಟೇ ಶೃಂಗರಿಸಿದರೂ ನಮ್ಮದಾಗುವುದಿಲ್ಲ.

14. ಒಂದು ಹೂವು ಮತ್ತೊಂದು ಹೂವಿನೊಂದಿಗೆ ಸ್ಪರ್ಧೆಗಿಳಿಯುದಿಲ್ಲ ಸುಂದರವಾಗಿ ಅರಳುವುದಷ್ಟೇ ಅದರ ಕೆಲಸ. ನಮ್ಮ ವ್ಯಕ್ತಿತ್ವವು ಹಾಗೆ ಇರಬೇಕು.

15. ಹೊರಗಿನಿಂದ ಕಾಲವು ನಮ್ಮನ್ನು ಬದಲಾಯಿಸಿದರೆ, ಒಳಗಿನಿಂದ ಜನರೇ ನಮ್ಮನ್ನು ಬದಲಾಯಿಸುತ್ತಾರೆ.

16. ನಮಗೆ ಬೆಲೆ ಇಲ್ಲದ ಮನೆಯಲ್ಲಿ ಕೋಟಿ ಕೋಟಿ ಹಣ ವಿದ್ದರೂ ಹೋಗಬಾರದು. ನಮಗೆ ಬೆಲೆ ಕೊಡುವ ಮನೆ ಗುಡಿಸಲು ಆದರೂ ಸಹ ಹೋಗಬಹುದು.

17. ಅವಕಾಶ ಇದೆ ಅಂತ ಹೇಳಿ ಅವಮಾನ ಮಾಡಬೇಡ. ಏಕೆಂದರೆ ಒಂದಲ್ಲ ಒಂದು ದಿನ ಸಮಯ ಎಲ್ಲರಿಗೂ ಅವಕಾಶ ಮಾಡಿಕೊಡುತ್ತದೆ. ನೆನಪಿರಲಿ.

18. ಮನುಷ್ಯ ಮತ್ತು ಪ್ರಾಣಿಗಳಿಗಿರುವ ವ್ಯತ್ಯಾಸ. ಸಾಸಿವೆಯಷ್ಟು ಪ್ರೀತಿ ಕೊಟ್ಟರೆ ಬೆಟ್ಟದಷ್ಟು ಪ್ರೀತಿ ಕೊಡುವವು ಮೂಕ ಪ್ರಾಣಿಗಳು. ಬೆಟ್ಟದಷ್ಟು ಪ್ರೀತಿ ಕೊಟ್ಟರೆ ಸಮುದ್ರದಷ್ಟು ನೋವನ್ನು ಕೊಡುವವರು ಮನುಷ್ಯರು.

19. ಕರ್ಮ: ನೀನು ಯಾವುದೇ ಸೇಡು ತೀರಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ. ಕೇವಲ ಒಂದು ಹೆಜ್ಜೆ ಹಿಂದಿಟ್ಟು ಕಾದು ನೋಡು ನಿನ್ನನ್ನು ನೋವಿನಿಂದ ನರಳುವಂತೆ ಮಾಡಿದವರು, ಕ್ರಮೇಣ ತಮ್ಮನ್ನ ತಾವು ನೋವಿನಿಂದ ನರಳಿಸಿಕೊಳ್ಳುತ್ತಾರೆ. ನೀನು ಅದೃಷ್ಟಶಾಲಿ ಆದರೆ ಇದನ್ನೆಲ್ಲ ನೀನು ನೋಡುವೆ.

20. ಕ್ಷಮೆ ಮತ್ತು ಧನ್ಯವಾದ ತುಂಬಾ ಚಿಕ್ಕ ಪದಗಳು ಎನಿಸಿದರೂ ನೂರಾರು ಸಂಬಂಧಗಳು ಎಂದಿಗೂ ಒಡೆಯದಂತೆ ಸದಾ ನೋಡಿಕೊಳ್ಳುವಲ್ಲಿ ಅತಿ ದೊಡ್ಡ ಪಾತ್ರ ವಹಿಸುತ್ತವೆ.

21. ಬದುಕನ್ನು ಪ್ರೀತಿಸುವವರು ಬದುಕು ಕಲಿಸುವ ಪ್ರತಿಯೊಂದು ಪಾಠ ಕಲಿಯಲು ತಯಾರಾಗಿರಲೇಬೇಕು.

22. ಗೊಬ್ಬರ ಕೂಡ ಆಗಲಾರದ ನಿನ್ನನ್ನು ಆಳದಲ್ಲಿ ಹುದುಗಿ ಬಿಡುತ್ತಾರೆ. ಎಷ್ಟು ಅಬ್ಬರ ಮಾಡುತ್ತಿಯೋ ಮನುಜ.

23. ಹಣ ಗಳಿಸುವ ಭರದಲ್ಲಿ ಶರೀರವನ್ನು ಆಲಕ್ಷ ಮಾಡುವವರು ಮುಂದಿನ ದಿನಗಳಲ್ಲಿ ಶರೀರವನ್ನು ರಕ್ಷಿಸಿಕೊಳ್ಳಲು ಅದೇ ಹಣವನ್ನು ಕಳೆದುಕೊಳ್ಳುವರು. ಇದು ಇವತ್ತಿನ ಜನರ ಜೀವನ ರೀತಿ.

24. ದೇವರಿದ್ದಾನೆ ಎಂಬ ನಂಬಿಕೆ ಬಲವಾಗಿರಬೇಕೆ ಹೊರತು ದೇವರೇ ಎಲ್ಲವನ್ನು ಮಾಡುತ್ತಾನೆ ಎಂಬ ಭ್ರಮೆಯಲ್ಲಿ ಬದುಕಬಾರದು.

25. ಅಭಿಪ್ರಾಯ ಭೇದಗಳನ್ನು ಗೌರವಿಸಿ, ಅವರವರು ಎಲ್ಲಿದ್ದಾರೆ ಯಾವ ಪರಿಸ್ಥಿತಿಯಲ್ಲಿದ್ದಾರೋ ಹಾಗೆ ಅವರವರ ಬದುಕಿನ ದೃಷ್ಟಿಕೋನ.

26. ದಂಡಿಸುವ ಅವಕಾಶವಿದ್ದರೂ ದಂಡಿಸದೆ ಇರುವುದನ್ನು ಸಹನೆ ಅಂತಾರೆ. ಬಿಟ್ಟು ಹೋಗೋದಿಕ್ಕೆ ಹಲವಾರು ಕಾರಣಗಳಿದ್ದರೂ ಜೊತೆಯಾಗಿರುವುದನ್ನು ಪ್ರೀತಿ ಅಂತಾರೆ. ತಪ್ಪು ಮಾಡೋದಕ್ಕೆ ಬೇಕಾದಷ್ಟು ಮಾರ್ಗವಿದ್ರೂ ಮಾಡದೆ ಇರೋದಕ್ಕೆ ವ್ಯಕ್ತಿತ್ವ ಅಂತಾರೆ.

27. ನಾವು ಎಂತಹ ದುಸ್ಥಿತಿಯಲ್ಲಿದ್ದೇವೆ ಎಂದರೆ ಒಬ್ಬ ಕುಡುಕ ಕುಡಿಯಬೇಕೆಂದರೆ ಆತನಿಗೆ ಗಲ್ಲಿ ಗಲ್ಲಿಗೊಂದು ಸರಾಯಿ ಅಂಗಡಿ ದೊರಕುತ್ತದೆ. ಆದರೆ ಒಂದು ವಿದ್ಯಾರ್ಥಿ ಜ್ಞಾನ ಹೆಚ್ಚಿಸಿಕೊಳ್ಳಬೇಕೆಂದರೆ ಕೊನೆ ಪಕ್ಷ ಗ್ರಾಮಕ್ಕೊಂದು ಸುಸಜ್ಜಿತವಾದ ಗ್ರಂಥಾಲಯ ಸಿಗೋದಿಲ್ಲ.

28. ಜೀವನದ ಅತಿ ದೊಡ್ಡ ಸಾಧನೆ ಎಂದರೆ ಯಾರ ಜೀವನವನ್ನು ಹಾಳು ಮಾಡದೆ ಬದುಕುವುದು.

29. ಧನವಂತನು ಸಮುದ್ರ ಇದ್ದಂತೆ ಒಬ್ಬರ ದಾಹವನ್ನು ಕೂಡ ತೀರಿಸುವುದಿಲ್ಲ. ಗುಣವಂತನು ಬಾವಿ ಇದ್ದಂತೆ ಊರಿನಲ್ಲಿ ಎಲ್ಲರ ದಾಹವನ್ನು ತೀರಿಸುತ್ತಾನೆ.

30. ಅವರು ನಿಮಗೆ ಉಚಿತವಾಗಿ ಏನನ್ನು ಬೇಕಾದರೂ ನೀಡುತ್ತಾರೆ. ಆದರೆ ಶಿಕ್ಷಣವಲ್ಲ. ಯಾಕೆಂದರೆ ಅವರಿಗೆ ಗೊತ್ತು ಶಿಕ್ಷಣವೇ ಎಲ್ಲಾ ಸವಾಲುಗಳಿಗೆ ಜನ್ಮ ನೀಡುತ್ತದೆ ಎಂದು.

31. ಕೆಲವರು ತುಂಬಾ ಸಭ್ಯರಂತೆ ಮುಖವಾಡ ಹಾಕೊಂಡು ಇರ್ತಾರೆ. ಅವರ ನಿಜರೂಪ ಜನರಿಗೆ ಗೊತ್ತಾಗುತ್ತೆ ಅನ್ನೂ ಭಯಕ್ಕೆ ಬೇರೆಯವರನ್ನೆಲ್ಲ ಕೆಟ್ಟವರು ಅಂತ ಸಮಾಜಕ್ಕೆ ತೋರಿಸುತ್ತಾ ಬರುತ್ತಾರೆ. ದುರಂತ ಅಂದ್ರೆ ನಮ್ಮ ಸಮಾಜನು ಅಂತವರ ಮಾತನ್ನು ನಂಬೋದು.

32. ಸಿಗದವರನ್ನು ಹುಡುಕಬೇಡಿ,  ಸಿಕ್ಕವರನ್ನು ಬಿಡಬೇಡಿ. ಬರದವರನ್ನು ಕಾಯಬೇಡಿ. ಬಂದವರನ್ನು ಕಾಯಿಸಬೇಡಿ. ಕೊಡದವರನ್ನು ಕೇಳಬೇಡಿ. ಕೊಟ್ಟವರನ್ನು ಮರೆಯಬೇಡಿ.

33. ಒಳ್ಳೆಯ ಕೆಲಸವನ್ನು ಮೀರಿದ ಪೂಜೆ ಇಲ್ಲ. ಮಾನವೀಯತೆಯನ್ನು ಮೀರಿಸಿದ ಸಂಪತ್ತು ಇಲ್ಲ.

34. ಮನುಷ್ಯನಿಗೆ ಮರಣ ಇರುತ್ತದೆ ಆದರೆ ಒಳ್ಳೆಯತನಕ್ಕೆ ಮರಣ ಇರುವುದಿಲ್ಲ.

35. ಕ್ಷಮೆ ಕೇಳಿದಾಕ್ಷಣ ನಮ್ಮದೇ ತಪ್ಪು ಅಂತ ಅಲ್ಲ. ಅದು ಅಹಂಕಾರವನ್ನು ಮೀರಿ ಸಂಬಂಧಕ್ಕೆ ನೀಡಿದ ಗೌರವ.

36. ಕೆಲವೊಮ್ಮೆ ಮನೆಯ ಒಂದು ಇಟ್ಟಿಗೆಯೂ ಇಡಿ ಮನೆಯನ್ನು ತಾನೇ ಹೊರುತ್ತಿದ್ದೇನೆ ಎಂದು ಭಾವಿಸಿ ಬಿಡುತ್ತದೆ. ನನ್ನಿಂದಲೇ ಎಲ್ಲವೂ ಆಗುತ್ತಿದ್ದೆ ಎಂದುಕೊಳ್ಳುವವನು ಇದರಷ್ಟೇ ಮೂರ್ಖ.

37. ಮನುಷ್ಯನ ಜೀವನ. ಮೊದಲು ಗಳಿಸೋಕೆ ಹೋರಾಟ. ಗಳಿಸಿದ ಮೇಲೆ ಉಳಿಸೋಕೆ ಹೋರಾಟ. ಕೊನೆಗೆ ಯಾರಿಗೋ ಗಳಿಸಿದ್ದೆಲ್ಲ ಬಿಟ್ಟು ಖಾಲಿ ಕೈಯಲ್ಲಿ ಕೊಟ್ಟು ನಾಲ್ಕು ಜನರ ಹೆಗಲ ಮೇಲೆ ಓಟ ಓಟ.

39. ಒಳ್ಳೆಯ ಸಮಯಕ್ಕಾಗಿ ಕಾಯುತ್ತಾ ಕುಳಿತರೆ ಜೀವನಪೂರ್ತಿ ಕಾಯುವುದೇ ಆಗಿಬಿಡುತ್ತದೆ. ಈಗಿನದಕ್ಕಿಂತ ಒಳ್ಳೆಯ ಸಮಯ ಮತ್ಯಾವುದು ಇಲ್ಲ.

40. ಹಿರಿಯರೊಬ್ಬರು ಮನನೊಂದು ಹೇಳಿದ್ದು. ಹಿಂದೆ ಸರಕಾರ ಶಾಲೆ ನಡೆಸ್ತಾ ಇತ್ತು. ಖಾಸಗಿ ಅವರು ಸಾರಾಯಿ ಮಾರುತಿದ್ದರು. ಇಂದು ಸರಕಾರ ಸರಾಯಿ ಮಾರುತಿದೆ. ಖಾಸಗಿ ಅವರು ಶಾಲೆ ನಡೆಸುತ್ತಿದ್ದಾರೆ.

41. 99 ಸಲ ಸಹಾಯ ಮಾಡಿ 100ನೇ ಸಲ ಇಲ್ಲ ಎಂದು ಹೇಳಿ, ನೂರನೇ ಸಲ ಇಲ್ಲ ಎನ್ನುವ ಪದವನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಮನುಷ್ಯರ ಮಧ್ಯೆ ನಾವು ಜೀವನ ಮಾಡುತ್ತಿದ್ದೇವೆ.

42. ಹುಟ್ಟು: ಕಣ್ಣು ಬಿಟ್ಟು ಜಗತ್ತು ನೋಡಿದಾಗ ನಾನು ಅಳುತ್ತಿದ್ದರೆ, ನನ್ನವರು ನಗುತ್ತಿದ್ದರು. ಸಾವು: ಕಣ್ಣು ಮುಚ್ಚಿ ಜಗತ್ತಿನಿಂದ ನಾನು ನಗುನಗುತ್ತಾ ಹೋಗಬೇಕಾದರೆ ನನ್ನವರು ಅಳುತ್ತಿದ್ದರು. ಜೀವನ ಅಂದ್ರೆ ಇಷ್ಟೇ.

43. ಹರಿದ ಚಪ್ಪಲಿಗಾದರೂ ಮನೆಯಲ್ಲಿ ಜಾಗ ಇರುತ್ತೆ. ಆದರೆ ಮನುಷ್ಯ ಸತ್ತರೆ ಮನೆಯಲ್ಲಿ ಜಾಗ ಇರಲ್ಲ ಮನೆಯಿಂದ ಹೊರಗಡೆ ಇಡುತ್ತಾರೆ ಇದು ನಮ್ಮ ಜೀವನ.

44. ಸುಖ-ದುಃಖಗಳಿಗೆ ನಾವೇ ಹೊಣೆ ಇಲ್ಲಿ ಯಾರೂ ಕಾಪಾಡಲು ಬರುವುದಿಲ್ಲ ಅವರವರ ಜೀವನದಲ್ಲಿ ಬಿಸಿ ಇರ್ತಾರೆ. ಉರಿದು ಬೂದಿಯಾಗುವ ಮೊದಲು ಉರಿದು ಬೆಳಕಾಗಿ ಆ ಬೆಳಕು ಇನ್ನೊಬ್ಬರಿಗೆ ಉಪಯೋಗ ಬರುವ ಹಾಗೆ.

43. ಇರುವೆ ಯಾರಿಗೆ ಕಚ್ಚಿದರೂ ಸಾಯುವುದು ಇರುವೆ ಎಂಬುದನ್ನು ಅರಿಯುವ ಮನುಷ ಇನ್ನೊಬ್ಬರಿಗೆ ಕೇಡನ್ನು ಬಯಸಿದರೆ ತನಗೂ ಕೇಡಾಗುವುದು ಎಂಬುದನ್ನು ಅರಿಯೋಲ್ಲ.

44. ಕಠೋರ ಸತ್ಯ: ಮದುವೆ ಮೆರವಣಿಗೆಯಲ್ಲಿ ವರ ಹಿಂದೆ ಇದ್ದರೆ ಲೋಕವೇ ಅವನ ಮುಂದೆ ಸಾಗುತ್ತದೆ. ಅಂತಿಮ ಯಾತ್ರೆಯಲ್ಲಿ ಶವ ಮಂದಿದ್ದರೆ ಲೋಕವೇ ಅವನ ಹಿಂದೆ ಸಾಗುತ್ತದೆ. ಅಂದರೆ ಖುಷಿಯಲ್ಲಿ ಮುಂದೆ ಇರುವ ಜನ ದುಃಖದಲ್ಲಿ ಹಿಂದೆ ಇರುತ್ತಾರೆ.

45. ಮೇಣದಬತ್ತಿ ಹಚ್ಚಿ ತೀರಿಹೋದವರ ನೆನೆಯುತ್ತಾರೆ. ಮೇಣದಬತ್ತಿ ಆರಿಸಿ ಜನ್ಮದಿನ ಆಚರಿಸುತ್ತಾರೆ.

46. ತಲೆಗಳಲ್ಲಿ ನಾಲ್ಕು ವಿಧ: ಅತಂತ್ರ ತಲೆ:  ಈ ತಲೆ ತನಗೂ ತಿಳಿಯುವುದಿಲ್ಲ ಉಳಿದವರು ಹೇಳಿದ್ದನ್ನು ಕೇಳೋದಿಲ್ಲ. ಪರತಂತ್ರ ತಲೆ: ಹೌದಪ್ಪಗಳ ಚಾವಡೀಲಿ ಹೌದಪ್ಪ ಅಲ್ಲಪ್ಪಗಳ ಚಾವಡಿಯಲ್ಲಿ ಅಲ್ಲಪ್ಪ ಅಂತ ಅವರು ಹೇಳಿದ್ದಕ್ಕೂ ಗೋಣ ಆಡಿಸುತ್ತೆ ಇವರು ಹೇಳಿದ್ದಕ್ಕೂ ಗೋಣ ಆಡಿಸುತ್ತೆ. ಕುತಂತ್ರ ತಲೆ: ಬಾಯಲ್ಲಿ ಬೆಣ್ಣೆ. ಬಗಲಲ್ಲಿ ದೊಣ್ಣೆ. ಎನ್ನುವಂತಹ ನಯ ವಂಚಕ ಕುಟಿಲತನದ ಈ ತಲೆಯದು. ಸ್ವತಂತ್ರ ತಲೆ: ಎಲ್ಲರೂ ಹೇಳುವುದನ್ನು ಕೇಳುತ್ತದೆ ಆದರೆ ತನಗೆ ಯಾವುದು ಸರಿ ಅನಿಸುತ್ತದೆಯೋ ಅಂತಹ ನಿರ್ಧಾರ ಕೈಗೊಳ್ಳುತ್ತದೆ.

47. ಮಿತ್ರರನ್ನು ಪ್ರೀತಿಸಿರಿ ಅವರು ಬಲ ತುಂಬುತ್ತಾರೆ ಅದೇ ರೀತಿ ಶತ್ರುಗಳನ್ನು ಗೌರವಿಸಿ ಅವರು ನಿಮಗೆ ಛಲ ತುಂಬುತ್ತಾರೆ.

48. ತೂಕ ಹೆಚ್ಚಾದರೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಗುರುಗಳಿಂದ ಬಂದ ಅತ್ಯುತ್ತಮ ಉತ್ತರ. ತನುವಿನ ತೂಕ ಹೆಚ್ಚಾಗಿದ್ದರೆ ವ್ಯಾಯಾಮ. ಮನದ ತೂಕ ಹೆಚ್ಚಾಗಿದ್ದರೆ ಧ್ಯಾನ. ಧನದ ತೂಕ ಹೆಚ್ಚಾಗಿದ್ದರೆ ಧಾನ.

49. ಜೀವನದಲ್ಲಿ ನೀನು ಗೆದ್ದರೆ ನೀನು ಯಾರು ಅಂತ ಎಲ್ಲರಿಗೂ ಗೊತ್ತಾಗುತ್ತೆ. ಜೀವನದಲ್ಲಿ ನೀರು ಸೋತರೆ ನಿನ್ನವರು ಯಾರು ಅಂತ ನಿನಗೆ ಗೊತ್ತಾಗುತ್ತದೆ. ಇಷ್ಟೇ ಜೀವನ

50. ನಾಲಿಗೆ ಎರಡು ಅಲಗಿನ ಕತ್ತಿ ಇದ್ದಂತೆ ಆಡುವ ಮಾತಿನಲ್ಲಿ ನಿಯಂತ್ರಣವಿರಬೇಕು. ಇಲ್ಲದಿದ್ದರೆ ಅದು ಇತರನ್ನು ಮಾತ್ರವಲ್ಲದೆ ಆಡಿದವರನ್ನು ಗಾತಿಸುತ್ತದೆ.

51. ಜೀವನ ಒಂದು ವರದಾನ ಎಂಬ ರೀತಿಯಲ್ಲಿ ವರ್ತಿಸಲು ಆರಂಭಿಸಿದರೆ ಆ ಕ್ಷಣದಿಂದಲೇ ಅದು ನಿಜವಾಗುತ್ತದೆ.

52. ಪರಿಹಾರ ಇಲ್ಲದ ಸಮಸ್ಯೆ ಇಲ್ಲ. ಆದರೆ ತಕ್ಷಣಕ್ಕೆ ಸಿಗುವುದಿಲ್ಲ ಅಷ್ಟೇ ತಾಳ್ಮೆಯಿಂದ ಹುಡುಕಬೇಕು.

53. ಸ್ವಾರ್ಥವಿಲ್ಲದ ಪ್ರೀತಿ ಸಿಗುವುದು ಕೇವಲ ತಂದೆ ತಾಯಿಗಳಿಂದ ಮಾತ್ರ. ಇನ್ನೆಲ್ಲರ ಪ್ರೀತಿಯಲ್ಲಿ ಒಂದಲ್ಲ ಒಂದು ಸ್ವಾರ್ಥ ಇದ್ದೇ ಇರುತ್ತದೆ.

54. ಸೃಷ್ಟಿಯಲ್ಲಿ ಯಾವುದೇ ತಪ್ಪಿಲ್ಲ ತಪ್ಪಿರುವುದು ಎಲ್ಲಾ ನಮ್ಮ ದೃಷ್ಟಿಯಲ್ಲಿ.

55. ಕಷ್ಟಗಳು ಬರುವುದು ನಿಮ್ಮನ್ನು ನಾಶ ಮಾಡಲು ಅಲ್ಲ ನಿಮ್ಮೊಳಗಿನ ಶಕ್ತಿಯನ್ನು ಅರ್ಥ ಮಾಡಿಸಲು.

56. ಅಪ್ಪನ ಜೀವನ ಮುಗಿದು ಹೋಗುತ್ತೆ ಮಗನ ಬದುಕುನ್ನು ಕಟ್ಟಿ ಕೊಡುವುದರಲ್ಲಿ ಆದರೆ ಮಗ ಬರೆಯುತ್ತಾನೆ “my wife is my life”

57. ಆಸೆ ಮನುಷ್ಯನದು. ಆಯಸ್ಸು ದೇವರದ್ದು.

58. ನಿನ್ನ ಕಾಳಜಿಯನ್ನು ಕಾಟ ಎಂದು ಭಾವಿಸುವವರಿಗೆ, ಏನು ಹೇಳಲು ಹೋಗಬೇಡ ಅಲ್ಲಿ ನಿನ್ನ ಕಾಳಜಿಗೆ ಬೆಲೆ ಸಿಗುವುದಿಲ್ಲ.

59. ಪಾಠವನ್ನು ಕಲಿಸಿ ಪರೀಕ್ಷೆ ಇಡುವುದು ವಿದ್ಯೆ. ಪರೀಕ್ಷೆಯನ್ನು ಇಟ್ಟು ಪಾಠ ಕಲಿಸುವುದು ಜೀವನ.

60. ತೋರಿಕೆಗಾಗಿ ಯಾವತ್ತು ಒಳ್ಳೆಯರಾಗಬೇಡಿ ಏಕೆಂದರೆ ಕರ್ಮ ಅಂತರಾತ್ಮಕ ರೂಪದಲ್ಲಿ ಎಲ್ಲವನ್ನು ನೋಡುತ್ತಿದೆ.

61. ನಿಮ್ಮನ್ನು ಹಿಂದಕ್ಕೆ ತಡೆಹಿಡಿದಿರುವ ಜನರಿಂದ ಸಂಪರ್ಕ ಕಡಿತಗೊಳಿಸಿ.62. ಎಷ್ಟು ತಾಳ್ಮೆಯಿಂದ ಇರುತ್ತೇವೆಯೋ ಅಷ್ಟು ಅಗ್ರಸ್ಥಾನ. ಎಷ್ಟು ದೂರ ಇರುತ್ತೇವೆಯೋ ಅಷ್ಟು ಗೌರವ. ಇಷ್ಟು ಕಡಿಮೆ ಆಸೆ ಪಡುತ್ತಿವೆಯೋ ಅಷ್ಟು ಪ್ರಶಾಂತ. ಎಷ್ಟು ಕಡಿಮೆ ಮಾತಾಡುತ್ತೇವೆ ಅಷ್ಟು ಬೆಲೆ.

62. ನಮ್ಮವರು ಅಂತ ಅಂದುಕೊಂಡವರೆಲ್ಲ ನಮ್ಮ ಜೊತೆ ಯಾವಾಗ್ಲೂ ಒಂದೇ ತರಾ ಇರ್ತಾರೆ ಅನ್ನೋದು ನಮ್ಮ ತಪ್ಪು ಕಲ್ಪನೆ.

63. ಪ್ರೀತಿಗೆ ಪ್ರೀತಿ ಕೊಡುವವರು ಕಡಿಮೆ. ಸಾವಿರ ನೆನಪುಗಳನ್ನು ಕೊಟ್ಟು ಮರೆಯಾಗುವವರೆಗೆ ಹೆಚ್ಚು.

64. ಕಬ್ಬಿಣವನ್ನು ಯಾರೊಬ್ಬರೂ ನಾಶ ಮಾಡಲು ಸಾಧ್ಯವಿಲ್ಲ. ಆದರೆ ಅದರೊಳಗಿನ ತುಕ್ಕು ಅದನ್ನು ನಾಶ ಮಾಡಬಲ್ಲದು. ಹಾಗೆಯೇ ಒಬ್ಬ ವ್ಯಕ್ತಿಯನ್ನು ಬೇರೊಬ್ಬರು ನಾಶ ಮಾಡಲಾರರು. ಅವನ ಮನಸ್ಥಿತಿ ಆತನನ್ನು ನಾಶ ಮಾಡಬಲ್ಲದು .

65. ಬದುಕಿರುವಷ್ಟು ಕಾಲ ನಗುನಗುತ ಎಲ್ಲರೊಂದಿಗೆ ಇದ್ದವರು ದೇಹ ಬಿಟ್ಟ ಮೇಲು ಹೃದಯವನ್ನು ಆವರಿಸಿಕೊಂಡಿರುತ್ತಾರೆ. ನಗುವಿನ ಶಕ್ತಿಯದು.

66. ಅಂದಿನ ನಗುವೇ ಇಂದಿಲ್ಲ ಅಂದ ಮೇಲೆ ಇಂದಿನ ಕಷ್ಟ ಮುಂದೆಯೂ ಇರುವುದಿಲ್ಲ.

67. ಯಾರ ಜೊತೆ ಎಷ್ಟರ ಮೆಟ್ಟಿಗೆ ಇರಬೇಕು ಅಷ್ಟರಮಟ್ಟಿಗೆ ಮಾತ್ರ ಇರಬೇಕು. ಎಲ್ಲರು ನಮ್ಮವರು ಎಂದು ಕೊಂಡು ಒಳ್ಳೆಯತನ ಗೋಸ್ಕರ ಏನಾದರು ಮಾಡಿದರೆ ಕೊನೆಗೆ ನಾವೇ ಕೆಟ್ಟವರು ಆಗುತ್ತೆವೆ.

68. ಮೌನ ಜಗತ್ತಿನ ಅತೀ ಸುಂದರವಾದ ಮಾತು.

69. ಏನಿದ್ದರೇನು ಎಷ್ಟಿದ್ದರೇನು ಆಯುಷ್ಯವೇ ಇಲ್ಲದ್ದಿದ್ದರೆ?

70. ಮುಂದೆ ಇರುವ ಸಂಭಂಧಗಳೇ ಹಿಂದೆ ಮಾತಾಡುವ ಶತ್ರುಗಳು.

71. ಎಲ್ಲವೂ ತಾತ್ಕಾಲಿಕ ಆದರೆ ಒಂದು ಮಾತ್ರ ಶಾಶ್ವತ ಅದು ನಂಬಿಕೆ.

72. ದುಡ್ಡು ಎಲ್ಲರಿಗೂ ಸಿಗುತ್ತೆ ಆದರೆ ಒಳ್ಳೆಯವರು ದುಡ್ಡಿಗೆ ಸಿಗುವುದಿಲ್ಲ.

73. ಸಮಾಧಾನಕ್ಕೆ, ನಮಗಿಂತ ಕೆಳಗಿನವರನ್ನು ನೋಡಬೇಕು. ಸಾಧನೆಗೆ ನಮಗಿಂತ ದೊಡ್ಡವರನ್ನು ನೋಡಬೇಕು.

74. ಕೆಲವರು ಮಾತನಾಡಿ ಮನಸ್ಸು ನೋಯಿಸಿದರೆ ಇನ್ನು ಕೆಲವರು ಮೌನದಲ್ಲೇ ನಮ್ಮನ್ನು ಕೊಂದು ಬಿಡುತ್ತಾರೆ.

75. ಬದುಕಿನಲ್ಲಿ ಭಾಂದವ್ಯ ಬಲವಾಗಿರಬೇಕೇ ಹೊರತು ಬಲವಂತವಾಗಿ ಅಲ್ಲ.

76. ಜೀವನದಲ್ಲಿ ನೋಡಿ ಕಲಿತದ್ದಕ್ಕಿಂತ ನೊಂದು ಕಲಿತದ್ದೇ ಜಾಸ್ತಿ.

77. ಬಹುತೇಕ ಸಂಬಂಧಗಳು ಹಾಳಾಗೋದು ಹೊಡೆದಾಟದಿಂದಲ್ಲ ಬೆನ್ನ ಹಿಂದೆ ಮಾತನಾಡುವುದರಿಂದ.

78. ಸಮಯ ಸಿಕ್ಕಾಗ ಮಾತನಾಡೋರಿಗಿಂತ ಸಮಯವನ್ನು ಕೊಟ್ಟು ಮಾತಾಡೋರನ್ನ ನಂಬು.

79. ನಾವು ಮೌನವಾಗುತ್ತ ಹೋದಷ್ಟು ಜನರು ಹೆಚ್ಚು ಅರ್ಥವಾಗುತ್ತಾ ಹೋಗುತ್ತಾರೆ.

80. ಎಲ್ಲರ ಜೀವನದಲ್ಲೂ ಇಷ್ಟೇ ಬಿಚ್ಚಿಟ್ಟ ಖುಷಿಗಿಂತ ಮುಚ್ಚಿಟ್ಟ ನೋವುಗಳೇ ಜಾಸ್ತಿ.

81. ಕೋಪ ಅರ್ಥವಾದಷ್ಟು ಕಾಳಜಿ ಅರ್ಥವಾದರೆ ಯಾವ ಸಂಭಂಧದಲ್ಲೂ ಬಿರುಕು ಮೂಡುವುದಿಲ್ಲ.

82. ನಗುತಿರು ಏಕೆಂದರೆ ಇಲ್ಲಿ ನಿನ್ನ ನೋವನ್ನು ಯಾರು ಲೆಕ್ಕಿಸುವುದಿಲ್ಲ.

83. ಅವಶ್ಯಕತೆ ಇದ್ದಾಗ ನೆನಪು ಮಾಡ್ಕೊಳೋ ಜನಗಳಿಂದ ದೂರ ಇರೋದೇ ಒಳ್ಳೇದು.

84. ಒಳ್ಳೆತನ: ಇದೊಂದೇ ನಾವು ಉಳಿಸಿಟ್ಟು ಹೋಗುವ ಬೆಲೆಕಟ್ಟಲಾಗದ ಅಸ್ತಿ.

85. ಹುಡುಕುವ ಪ್ರೀತಿಗಿಂತ ಜೊತೆಗಿರುವ ಸ್ನೇಹ ಚಂದ. ಕಾಣುವ ಕನಸಿಗಿಂತ ಕಾಣದಿರುವ ಕಲ್ಪನೆ ಚಂದ. ಬರೆಯುವ ಬರಹಗಿಂತ ಅಳಿಸಲಾಗದ ನೆನಪು ಚಂದ.

86. ಅವಮಾನ ಮಾಡಿದವರನ್ನು ಅವ – ಮಾನವ ಎಂದು ಮುಗುಳ್ನಗೆಯಿಂದ ಮುಂದೆ ಸಾಗಿರಿ.

87. ನಂಬಿಕೆ ಮನಸ್ಸಿನಿಂದ ಹುಟ್ಟಬೇಕೇ ಹೊರತು ಮೂರನೇ ವ್ಯಕ್ತಿ ಯಿಂದ ಅಲ್ಲ.

88. ಜೀವನಪೂರ್ತಿ ನಮ್ಮನ್ನು ನಿರ್ಲಕ್ಷ್ಯ ಮಾಡುವವರ ಸ್ನೇಹ ಬಯಸುವುದೇ ಆಯಿತು. ಅವರಾರಿಗೂ ನಾವು ತೋರಿಸುವ ಕಾಳಜಿ ಪ್ರೀತಿನೂ ಅರ್ಥ ಆಗಲ್ಲ, ನಾವು ಅರ್ಥ ಆಗಲ್ಲ.

89. ನಿನ್ನವರರಿದ್ದಾರೆ ಎಂದು ಬದುಕುವುದಕ್ಕಿಂತ ನಿನ್ನ ದುಡಿಮೆಯನ್ನು ನಂಬಿ ಬದುಕುವುದು ಉತ್ತಮ.

90. ಸ್ನೇಹಕ್ಕಾಗಿ ಪ್ರಾಣ ಕೊಡೋದು ಕಷ್ಟವಲ್ಲ. ಪ್ರಾಣ ಕೊಡೋವಂತ ಸ್ನೇಹ ಸಿಗೋದು ಕಷ್ಟ.

91. ಸೋತವರ ಸಲಹೆ, ಗೆದ್ದವರ ಅನುಭವ ಜೊತೆಗೆ ನಿಮ್ಮ ಶ್ರಮ , ನಿಮ್ಮನ್ನೆಂದು ಸೋಲಲು ಬಿಡದು.

92. ಮನಸ್ಸಿಗೆ ಎಷ್ಟೇ ಹೊಸ ಭಾವನೆಗಳು ಬಂದರೂ ನಮಗೆ ಕಾಡೋದು ಹಳೆ ನೆನಪುಗಳು ಮಾತ್ರ.

93. ಅಮೃತವಚನ: ನಿಮ್ಮ ಬೆಳವಣಿಗೆಯನ್ನು ನೀವು ಹೆಚ್ಚು ಗಂಭೀರವಾಗಿ ತೆಗೆದುಕೊಂಡಷ್ಟು, ನಿಮ್ಮ ಜನರು ನಿಮ್ಮನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಾರೆ.

94. ಬದುಕಿರುವಷ್ಟು ಕಾಲ ನಗುನಗುತ ಎಲ್ಲರೊಂದಿಗೆ ಇದ್ದವರು ದೇಹ ಬಿಟ್ಟ ಮೇಲು ಹೃದಯವನ್ನು ಆವರಿಸಿಕೊಂಡಿರುತ್ತಾರೆ. ನಗುವಿನ ಶಕ್ತಿಯದು.

95. ಜೀವನ ಅನ್ನೋ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನೇ ಇಟ್ಟು ಕಳಿಸಿರುತ್ತಾನೆ. ಆದರೆ ನಾವು ನಮ್ಮ ಜೋಡಿಗೆಯಲ್ಲಿ ಏನಿದೆ ಅಂತ ನೋಡಿ ಆನಂದ ಪಡೋದು ಬಿಟ್ಟು ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

96. ಸಮುದ್ರದಲ್ಲಿ ಸ್ನಾನಕ್ಕೆಂದೆ ಬೇರೆ ತೆರೆಗಳಿರುವುದಿಲ್ಲ ಬಂದ ತೆರೆಗಳಿಗೆ ತಲೆಯೊಡ್ಡಿ ಸ್ನಾನ ಮುಗಿಸಬೇಕು. ಹಾಗೆ ಬದುಕಿನಲ್ಲಿ ಖುಷಿಗೆ ಎಂದೆ ಬೇರೆ ದಿನಗಳು ಇರುವುದಿಲ್ಲ ಎಲ್ಲಾ ದಿನಗಳಲ್ಲೂ ಖುಷಿ ಪಡಲು ಸಾಧ್ಯವಿದೆ ಅದನ್ನು ಅನುಭವಿಸುವ ಮನಸ್ಸು ನಮ್ಮದಾಗಿರಬೇಕು.

97. ಒಳ್ಳೆಯ ಕೆಲಸ ಮಾಡಲಾರದೆ ಯಾರು ದೊಡ್ಡವರು ಎನಿಸಿಕೊಂಡಿಲ್ಲ ಹಾಗೆ ಒಳ್ಳೆಯ ಕೆಲಸ ಮಾಡುವವರನ್ನು ಜಗತ್ತು ಯಾವತ್ತಿಗೂ ಚಿಕ್ಕವನೆಂದು ಗುರುತಿಸಿಲ್ಲ.

98. ಜೀವನದಲ್ಲಿ ನಮಗೆ ಎರಡು ಆಯ್ಕೆಗಳಿವೆ ಒಂದು ಒಪ್ಪಿಗೆ. ಇನ್ನೊಂದು ಬದಲಾವಣೆ. ಯಾವುದನ್ನು ಬದಲಾಯಿಸಲು ಸಾಧ್ಯವಿಲ್ಲವೋ ಅದನ್ನು ಒಪ್ಪಿಕೊಳ್ಳಬೇಕು. ಯಾವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೋ ಅದನ್ನು ಬದಲಾಯಿಸಬೇಕು.

99. ತಿದ್ದದೆ ತೀಡದೆ ಅಂದ ಕಾಣದು ಗೊಂಬೆ. ಬಿತ್ತದೇ ಕೆತ್ತದೇ ಬೆಳೆಯ ಬೆಳೆಯದು ಭೂಮಿ. ನಿಂದನೆಗೆ ನೋವಿಗೆ ಅಳುಕಿದರೆ ರೂಪಗೊಳ್ಳದು ಬದುಕು.

100. ಚಿಂತೆ ಮಾಡುವುದು ನಿಜಕ್ಕೂ ವ್ಯರ್ಥ. ಅದು ನಾಳಿನ ಸಮಸ್ಯೆಯನ್ನು ಪರಿಹರಿಸುವುದರ ಬದಲಿಗೆ ಇಂದಿನ ಶಕ್ತಿಯನ್ನು ಖಾಲಿ ಮಾಡುತ್ತದೆ.

 

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X