INTERNATIONAL LATEST WITH HUB

ವಾಷಿಂಗ್ಟನ್ ಲೋಕಸಭೆ – ರಾಹುಲ್ ಗಾಂಧಿ ಅಮೆರಿಕದ ಪ್ರವಾಸ 

ವಾಷಿಂಗ್ಟನ್ ಲೋಕಸಭೆ – ರಾಹುಲ್ ಗಾಂಧಿ ಅಮೆರಿಕದ ಪ್ರವಾಸ

ವಾಷಿಂಗ್ಟನ್ : ಲೋಕಸಭೆ ರಾಹುಲ್ ಗಾಂಧಿ ಅಮೆರಿಕದ ಪ್ರವಾಸ,  ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯವರನ್ನು ಬರಮಾಡಿಕೊಂಡ ಸ್ಯಾಮ್ ಪಿತ್ರೋಡ. ರಾಹುಲ್ ಗಾಂಧಿಯವರು  ಇಂದಿನಿಂದ ಮೂರು ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದು ಇದರ ಅಂಗವಾಗಿ ಇಂದು ಭಾನುವಾರ ಟೆಕ್ಸಾಸ್ ನ ದಲ್ಲಾಸ್ಗೆ ಆಗಮಿಸಿದ್ದಾ.ರೆ ವಿಮಾನ ನಿಲ್ದಾಣದಲ್ಲಿ ರಾಹುಲ್ರವರನ್ನು ಕಾಂಗ್ರೆಸ್ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡ ಸೇರಿದಂತೆ ಇನ್ನಿತರ ಅನಿವಾಸಿ ಭಾರತೀಯರ  ಸದಸ್ಯರು ಆತ್ಮೀಯವಾಗಿ ಬರಮಾಡಿ ಕೊಂಡರು.

ರಾಹುಲ್ ಗಾಂಧಿಯವರ ಅಮೆರಿಕಾ ಭೇಟಿ:

ಉಭಯ ರಾಷ್ಟ್ರಗಳ ಬಾಂಧವ್ಯ ಬಲಪಡಿಸಲು ಅರ್ಥಪೂರ್ಣ ಚರ್ಚೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಮೆರಿಕಾದ ಪ್ರಮುಖ ನಗರಗಳಿಗೆ ಭೇಟಿ ನೀಡುತ್ತಿದ್ದಾರೆ. ತಮ್ಮ ಭೇಟಿ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಚರ್ಚೆ ಮತ್ತು ಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ನಮಗೆ ದೊರೆತ ಆತ್ಮೀಯ ಸ್ವಾಗತದಿಂದ ನಾನು ಸಂತೋಷಗೊಂಡಿದ್ದೇನೆ. ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸಲು ಮತ್ತು ಭಾರತ-ಅಮೆರಿಕ ನಡುವಿನ ಹೊಸ ಅವಕಾಶಗಳನ್ನು ಚರ್ಚಿಸಲು ಈ ಭೇಟಿ ಒಂದು ಉತ್ತಮ ಅವಕಾಶವಾಗಿದೆ” ಎಂದು ಹೇಳಿದರು.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ನಮ್ಮ ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸಲು ಅರ್ಥಪೂರ್ಣ ಚರ್ಚೆಗಳು ಮತ್ತು  ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳಲು ಕುತೂಹಲದಿಂದ ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.

ಈ ಭೇಟಿಯ ಸಮಯದಲ್ಲಿ, ರಾಹುಲ್ ಗಾಂಧಿ ಅವರು ಜಾರ್ಜ್‌ಟೌನ್‌ ಮತ್ತು ಟೆಕ್ಸಾಸ್‌ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದು 2024ರ ಲೋಕಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ಅವರ ಅಮೆರಿಕಾ ಭೇಟಿ ಆಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಭಾರತ-ಅಮೆರಿಕಾ ಸಹಭಾಗಿತ್ವದ ಮಹತ್ವವನ್ನು ಹೀಗೂ ಮಂಡಿಸುತ್ತಾರೆ.

ಅಲ್ಲದೆ, ಸೆಪ್ಟೆಂಬರ್ 8 ರಂದು ಡಲ್ಲಾಸ್ ನಗರದಲ್ಲಿ ನಡೆಯುವ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಬಳಿಕ ಸೆಪ್ಟೆಂಬರ್ 9 ಮತ್ತು 10ರಂದು ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಅವರು ವಿವಿಧ ಉನ್ನತ ಮಟ್ಟದ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X