ಒಂದು ಊರಿನಲ್ಲಿ ಒಬ್ಬ ರಾಜನಿದ್ದನು. ಅವರು ಯಾವುದೇ ಕೆಲಸವನ್ನು ಶುರು ಮಾಡುವ ಮೊದಲು ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡುತಿದ್ದರು. ತಮ್ಮ ಆಸ್ತಾನಕ್ಕೆ ವಾಪಾಸ್ ಬರುವ ಮೊದಲು ದೇವಸ್ಥಾನದ ಮೆಟ್ಟಲಿನಲ್ಲಿ ಸ್ವಲ್ಪ ಕುಳಿತು ಬರುತ್ತಿದ್ದರು.
ಆ ಮೆಟ್ಟಲಿನ ಬಲ ಹಾಗು ಎಡ ಭಾಗದಲ್ಲಿ ಇಬ್ಬರು ಭಿಕ್ಷುಕರು ಕುಳಿತುಕೊಳ್ಳುತ್ತಿದ್ದರು. ಎಡ ಭಾಗದಲ್ಲಿ ಕುಳಿತ ಭಿಕ್ಷುಕ ಆಕಾಶದ ಕಡೆ ಮುಖ ಮಾಡಿ ದೇವರೇ ಈ ರಾಜನಿಗೆ ತುಂಬಾ ಸಿರಿವವಂತಿಕೆಯನ್ನು ಕೊಟ್ಟಿದ್ದೀಯ ನನಗೂ ಸ್ವಲ್ಪ ಕೊಡು ಎಂದು ಬೇಡಿ ಕೊಳ್ಳುತಿದ್ದ.
ಆದರೆ ಬಲ ಭಾಗದ ಭಿಕ್ಷುಕ ಆ ರಾಜನ ಹತ್ತಿರ ನಿಮ್ಮ ಬಳಿ ತುಂಬಾ ಸಿರಿವಂತಿಕೆ ಇದೆ. ನನಗೆ ಏನಾದರು ಭಿಕ್ಷೆ ಕೊಡಿ ಎಂದು ಕೇಳಿತಿದ್ದನು. ದಿನಾಲೂ ಇದೆ ರೀತಿ ನಡೀತಾ ಇತ್ತು.
ರಾಜನಿಗೆ ಇವರಿಗೆ ಏನಾದರು ಸಹಾಯ ಮಾಡಬೇಕು ಎಂದು ಯೋಚಿಸಿ ಮಂತ್ರಿಯನ್ನು ಕರೆದು. ನಡೆದ ವಿಷಯವನ್ನು ತಿಳಿಸಿ ಯಾರಿಗೆ ಸಹಾಯ ಮಾಡಬೇಕು ಎಂದು ಕೇಳಿದಾಗ ಎಡ ಭಾಗದ ಬಿಕ್ಷುಕನಿಗೆ ದೇವರು ಕೊಡುತ್ತಾನೆ. ನೀವು ಬಲ ಭಾಗದ ಬಿಕ್ಷುಕನಿಗೆ ಕೊಡಿ ಎಂದು ಸಲಹೆ ನೀಡುತ್ತಾನೆ. ಅದಕ್ಕೆ ರಾಜನು ಒಪ್ಪಿ ಒಂದು ದೊಡ್ಡ ಪಾತ್ರೆಯಲ್ಲಿ ಪಾಯಸ ಮಾಡಿ ಅದರ ಕೆಳಗೆ ಬಂಗಾರದ ನಾಣ್ಯಗಳನ್ನು ಇಟ್ಟು ಅವನಿಗೆ ಕೊಡುವಂತೆ ಆದೇಶಿಸುತ್ತಾರೆ.
ಹೀಗೆ ಮಂತ್ರಿ ರಾಜನು ಹೇಳಿದ ಹಾಗೆ ಪಾಯಸದಲ್ಲಿ ಬಂಗಾರದ ನಾಣ್ಯಗಳನ್ನು ಇಟ್ಟು ಆ ಬಲ ಭಾಗದ ಬಿಕ್ಷುಕನಿಗೆ ಕೊಟ್ಟು ರಾಜರು ನಿನಗೆ ಕಳಿಸಿ ಕೊಟ್ಟಿದ್ದಾರೆ ಎಂದು ಹೇಳುತ್ತಾನೆ. ಬಲ ಭಾಗದ ಬಿಕ್ಷುಕನು ಎಡ ಭಾಗದ ಭಿಕ್ಷುಕನನ್ನು ನೋಡಿ ನನಗೆ ರಾಜರು ಕಳಿಸಿ ಕೊಟ್ಟಿದ್ದಾರೆ ನಿನಗೆ ದೇವರು ಯಾವಾಗ ಕೊಡುತ್ತಾರೆ ಎಂದು ಮೂದಲಿಸಿ ಪಾಯಸವನ್ನು ಕುಡಿಯಲು ಶುರು ಮಾಡಿದನು.
ಅರ್ಧ ಕುಡಿಯುವಾಗ ಅವನ ಹೊಟ್ಟೆ ತುಂಬುತ್ತದೆ. ಆಗ ಅವನು ಉಳಿದ ಪಾಯಸವನ್ನು ಎಡ ಭಾಗದ ಬಿಕ್ಷುಕನಿಗೆ ಕೊಟ್ಟು ನಿನ್ನ ದೇವರು ಅಂತೂ ಕೊಟ್ಟಿಲ್ಲ ತೊಗೊ ಅಂತ ಹೇಳಿ ಅವನಿಗೆ ಕೊಟ್ಟು ಅಲ್ಲಿಂದ ಹೊರಟು ಹೋಗುತ್ತಾನೆ.
ಆ ಪಾಯಸವನ್ನು ತೆಗೆದುಕೊಂಡು ದೇವರಿಗೆ ಧನ್ಯವಾದವನ್ನು ಅರ್ಪಿಸಿ ಆ ಪಾಯಸವನ್ನು ಕುಡಿಯುವಾಗ ಅವನಿಗೆ ಬಂಗಾರದ ನಾಣ್ಯಗಳು ಸಿಗುತ್ತವೆ. ಮರುದಿನ ರಾಜನು ದೇವಸ್ಥಾನದ ಮೆಟ್ಟಲಿನಲ್ಲಿ ಕುಳಿತಿರುವಾಗ ಎಡ ಭಾಗದ ಭಿಕ್ಷುಕ ಅಲ್ಲಿಇರದೆ ಬಲ ಭಾಗದ ಭಿಕ್ಷುಕನನ್ನು ನೋಡಿ ರಾಜನಿಗೆ ಆಶ್ಚರ್ಯವಾಗುತ್ತದೆ.
ಅವರು ಭಿಕ್ಷುಕನನ್ನು ಕರೆದು ನಿನಗೆ ನಾನು ಕಳಿಸಿಕೊಟ್ಟ ಪಾಯಸ ಸಿಗಲಿಲ್ಲವೇ ಎಂದು ಕೇಳಿದಾಗ ” ಸಿಕ್ಕಿತು ಸ್ವಾಮಿ ತುಂಬಾ ಚೆನ್ನಾಗಿತ್ತು. ನನಗೆ ಬೇಕಾದಷ್ಟು ಕುಡಿದು ಉಳಿದಿದ್ದನ್ನು ಇನ್ನೊಬ್ಬ ಬಿಕ್ಷುಕನಿಗೆ ಕೊಟ್ಟೆ” ಎಂದು ಹೇಳಿದಾಗ ಅದರಲ್ಲಿ ಕೆಳಗೆ ಬಂಗಾರದ ನಾಣ್ಯಗಳು ಇದ್ದವು ಅದನ್ನ ದೇವರೇ ಆ ಬಿಕ್ಷುಕನಿಗೆ ಕೊಟ್ಟಿದ್ದಾರೆ ಎಂದು ಹೇಳಿದರು.
ಯಾವುದು ಯಾರಿಗೆ ಸೇರಬೇಕು ಅದು ಅವರಿಗೆ ಸೇರುತ್ತದೆ ಎಂಬುವುದು ರಾಜನಿಗೆ ಮನವರಿಕೆಯಾಯಿತು.
Leave feedback about this