ಬೆಂಗಳೂರಿನಲ್ಲಿ ಮಹಾಲಕ್ಷ್ಮೀಯನ್ನು ಕೊಲೆ ಮಾಡಿದ್ದ ಹಂತಕ ಒಡಿಸ್ಸಾದಲ್ಲಿ ಆತ್ಮಹತ್ಯೆ
ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಮಹಾಲಕ್ಷ್ಮೀ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾಲಕ್ಷ್ಮಿಯನ್ನು ಕೊಲೆ ಮಾಡಿ ಅವಳ ದೇಹವನ್ನು 50 ಪೀಸ್ ಮಾಡಿ ಅವಳದೇ ಬಾಡಿಗೆ ಮನೆಯ ಫ್ರಿಡ್ಜ್ ನಲ್ಲಿ ತುಂಬಿ ತಲೆಮರೆಸಿಕೊಂಡಿದ್ದ ಆರೋಪಿ ಕೂಡ ಒಡಿಸ್ಸಾ ದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈಗಾಗಲೇ ಒಡಿಸ್ಸಾಗೆ ಬೆಂಗಳೂರು ಪೊಲೀಸರ ತಂಡ ತೆರಳಿದೆ.
ಮುಕ್ತಿ ರಂಜನ್ ಆತ್ಮಹತ್ಯೆ ಮಾಡಿಕೊಂಡ ಹಂತಕ.
ಮಹಾಲಕ್ಷ್ಮೀ ಕೊಲೆ ಬಳಿಕ ಮೃತ ಮುಕ್ತಿ ರಂಜನ್ ಒಡಿಸ್ಸಾ ಗೆ ಹೋಗಿ ತಲೆಮರೆಸಿಕೊಂಡಿದ್ದ. ಈಗಾಗಲೇ ಬೆಂಗಳೂರು ಪೊಲೀಸರು ಈ ವಿಚಾರವನ್ನು ಪತ್ತೆ ಹಚ್ಚಿ ವಿಚಾರಣೆಗೆ ಒಡಿಶಾಗೆ ತೆರಳಿದ್ದಾರೆ.
ಮಹಾಲಕ್ಷ್ಮೀ ಕೊಲೆ ಕೇಸ್ನಲ್ಲಿ ಸಾಕಷ್ಟು ಜನರ ಹೆಸರು ಕೇಳಿ ಬಂದಿತ್ತು. ಎಲ್ಲರನ್ನು ಕರೆದು ವಿಚಾರಣೆ ನಡೆಸಿದರೂ ಹಂತಕ ಯಾರೆಂದು ಪತ್ತೆ ಹಚ್ಚುವುದೇ ಕಷ್ಟದ ಸವಾಲಾಗಿತ್ತು. ನಿರಂತರ ತನಿಖೆ ಬಳಿಕ ಹಂತಕನ ಸುಳಿವು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾಲಕ್ಷ್ಮೀ ಮಲ್ಲೇಶ್ವರಂನಲ್ಲಿರುವ ಫ್ಯಾಷನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಒಡಿಶಾ ಮೂಲದ ಮುಕ್ತಿ ರಂಜನ್ ರಾಯ್ ಅಲ್ಲಿ ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದ. ನೋಡಲು ಸುಂದರವಾಗಿದ್ದ ಮಹಾಲಕ್ಷ್ಮಿಗೆ ಮನ ಸೋತಿದ್ದ. ಹೀಗೆ ಇಬ್ಬರ ನಡುವೆ ತುಂಬಾ ಸಲುಗೆ ಬೆಳೆದಿತ್ತು . ಸೆಪ್ಟೆಂಬರ್ 1 ರಂದು ಕೆಲಸಕ್ಕೆ ಬಂದಿದು, ಮಾರನೇ ದಿನ ಇಬ್ಬರು ರಜೆ ತಗೊಂಡಿದ್ದರು. ತನ್ನ ತಾಯಿಗೆ ಫೋನ್ ಮಾಡಿದ್ದ ಮಹಾಲಕ್ಷ್ಮೀ, ಮನೆಗೆ ಬರುವ ವಿಷಯ ತಿಳಿಸಿದ್ದಳು.ನಂತರ ಅವರಿಬ್ಬರ ನಡುವೆ ಏನಾಯಿತೋ ಏನೋ ಹಂತಕ ಮುಕ್ತಿ ರಂಜನ್ ರಾಯ್ ತನ್ನ ಗೆಳತಿ ಮಹಾಲಕ್ಷ್ಮೀಯನ್ನ ಬರ್ಬರವಾಗಿ ಕೊಲೆ ಮಾಡಿ ಮೃತದೇಹವನ್ನ 50ಕ್ಕೂ ಹೆಚ್ಚು ಪೀಸ್ ಮಾಡಿ, ಫ್ರೀಡ್ಜ್ನಲ್ಲಿ ತುಂಬಿಸಿ ಒಡಿಸ್ಸಾಗೆ ಎಸ್ಕೇಪ್ ಆಗಿದ್ದ.ಪೊಲೀಸರು ತನ್ನ ಜನ್ಮ ಜಾಲಾಡುತ್ತಿದ್ದಾರೆ ಎಂಬ ವಿಷಯ ತಿಳಿದು ಹೆದರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿಯ ಬೆನ್ನು ಬಿದ್ದಿದ್ದ ವೈಯಾಲಿಕಾವಲ್ ಪೊಲೀಸರಿಗೆ ಒಡಿಶಾದಲ್ಲಿಈ ವಿಷಯ ತಿಳಿದಿದೆ.
ಸದ್ಯ ಇಲ್ಲಿ ಕೊಲೆಗೆ ಕಾರಣ ತಿಳಿಸಬೇಕಿದ್ದ ಕೊಲೆಗಾರನೂ ಸಾವಿನ ಬಾಗಿಲು ತಟ್ಟಿದ್ದಾನೆ. ಇಡೀ ಬೆಂಗಳೂರನ್ನೇಬೆಚ್ಚಿ ಬೀಳಿಸಿದ್ದ ಈ ಕೊಲೆ ಯಾವ ಕಾರಣಕ್ಕೆ ಆಗಿದೆ ಎಂಬ ವಿಷಯ ಇನ್ನೂ ನಿಗೂಢವಾಗಿಯೇ ಇದೆ.
Leave feedback about this