MOVIES

ಬಿಗ್ ಬಾಸ್ ಕನ್ನಡ 10 ವಿನ್ನರ್ ಕಾರ್ತಿಕ್ ಮಹೇಶ್ ಮತ್ತು ಅವರ ಹೊಸ ರಿಯಾಲಿಟಿ-ಕಾರ್ತಿಕ್ ಮಹೇಶ್ ಗೆ ಉಡುಗೊರೆಯ ಕಾರು:

ಬಿಗ್ ಬಾಸ್ ಕನ್ನಡ 10 ವಿನ್ನರ್ ಕಾರ್ತಿಕ್ ಮಹೇಶ್ ಮತ್ತು ಅವರ ಹೊಸ ರಿಯಾಲಿಟಿ ಶೋ

“ಬಿಗ್ ಬಾಸ್ ಕನ್ನಡ” ಸೀಸನ್ 10 ಇತ್ತೀಚೆಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಈ ಸೀಸನ್‌ನಲ್ಲಿ ಕಾರ್ತಿಕ್ ಮಹೇಶ್ ವಿಜೇತರಾಗಿದ್ದರು. ಈ ಸೀಸನ್‌ನಲ್ಲಿ, ಕಾರ್ತಿಕ್ ಮಹೇಶ್ ತಮ್ಮ ಆಟದ ಮತ್ತು ಶ್ರೇಷ್ಠ ವ್ಯಕ್ತಿತ್ವದಿಂದ ಎಲ್ಲಾ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದರು.

ಹೌದು ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ನೋಡಗರನ್ನು ಮೋಡಿ ಮಾಡಿ ವಿನ್ನ ಆಗಿದ್ದ ಕಾರ್ತಿಕ್‌ ಮಹೇಶ್‌ ಇದೀಗ ರಿಯಾಲಿಟಿ ಶೋಗೆ ನಿರೂಪಕರಾಗಿ ಆಯ್ಕೆಯಾಗಿದ್ದಾರೆ. ಇಷ್ಟು ದಿನ ಕಿರುತೆರೆ, ಸಿನಿಮಾ ಮೂಲಕ ರಂಜಿಸಿದ್ದ ಕಾರ್ತಿಕ್‌ ಸ್ಟಾರ್‌ ಸುವರ್ಣದಲ್ಲಿ ಪ್ರಸಾರ ವಾಗುತ್ತಿರುವ ಸುವರ್ಣ ಸೆಲೆಬ್ರಿಟಿ ಲೀಗ್‌ನಲ್ಲಿ ನಿರೂಪಣೆ ಮಾಡಲಿದ್ದಾರೆ.

ಕಾರ್ತಿಕ್ ಮಹೇಶ್ ಗೆ ಉಡುಗೊರೆಯ ಕಾರು:

ಬಿಗ್ ಬಾಸ್ ಕನ್ನಡ ಗೆಲ್ಲುವವರು ಐಶಾರಾಮಿ ಕಾರು ಮತ್ತು 50 ಲಕ್ಷ ರೂಪಾಯಿ ಹಣವನ್ನು ಬಹುಮಾನವಾಗಿ ಪಡೆಯುತ್ತಾರೆ. ಆದರೆ, ಕಾರ್ತಿಕ್ ಮಹೇಶ್ ಅವರಿಗೆ 50 ಲಕ್ಷ ರೂಪಾಯಿ ಮಾತ್ರ ತಲುಪಿಸಲಾಗಿತ್ತು. 7 ತಿಂಗಳುಗಳ ಬಳಿಕ ಕಾರ್ತಿಕ್ ಅವರು ತಮ್ಮ ಬಹುವಾಗಿ ಸಿಗಬೇಕಿದ್ದ ಕಾರನ್ನು ಪಡೆದಿದ್ದಾರೆ. ಕಾರು ಸ್ವೀಕೃತಿಯ ವಿಡಿಯೋವನ್ನು ಕಾರ್ತಿಕ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕಾರ್ತಿಕ್ ಮಹೇಶ್ ಅವರ ಹಿನ್ನಲೆ:

ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ತಮ್ಮ ಪಾತ್ರಗಳಿಂದ ಪ್ರೇಕ್ಷಕರನ್ನು ಮೋಹಿಸುವ ಕಾರ್ತಿಕ್ ಮಹೇಶ್, ಕೊನೆಯದಾಗಿ “ಕಲರ್ಸ್ ಕನ್ನಡ” ವಾಹಿನಿಯ “ಅಂತರಪಟ” ಧಾರಾವಾಹಿಯಲ್ಲಿ ನಾಯಕಿಯ ಗೆಳಯ ಪಾತ್ರದಲ್ಲಿ ನಟಿಸಿದ್ದರು.

ನಾಟಕ ಮತ್ತು ಚಿತ್ರ ಪ್ರಾಜೆಕ್ಟ್‌ಗಳು:

ವಿವಿಧ ಧಾರಾವಾಹಿಗಳಲ್ಲಿ ಅಭಿನಯ ಮಾಡಿರುವ ಕಾರ್ತಿಕ್, “ಪುಟ್ಟಕ್ಕನ ಮಕ್ಕಳು”, “ಅಕ್ಕ”, “ಮಹಾಕಾಳಿ”, “ದೇವಯಾನಿ”, “ರಾಜಿ” ಇತ್ಯಾದಿ ಧಾರಾವಾಹಿಗಳಲ್ಲಿಯೂ ತಮ್ಮ ಶ್ರೇಷ್ಠ ನಟನೆಯ ಮೂಲಕ ಮೆಚ್ಚುಗೆ ಪಡೆದಿದ್ದಾರೆ. ಬಿಗ್ ಬಾಸ್‌ನಲ್ಲಿ ವಿಜಯದ ನಂತರ, ಅವರು ಹಲವಾರು ಚಿತ್ರ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿದ್ದಾರೆ.

ಹೊಸ ರಿಯಾಲಿಟಿ ಶೋ:

ಈಗ, ಕಾರ್ತಿಕ್ ಮಹೇಶ್ “ಸುವರ್ಣ ಸೆಲೆಬ್ರಿಟಿ ಲೀಗ್” ಎಂಬ ಹೊಸ ರಿಯಾಲಿಟಿ ಶೋನಲ್ಲಿ ಆ್ಯಂಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶೋ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದ್ದು  ಸೆಪ್ಟೆಂಬರ್ 15 ರಂದು ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ. ಕಾರ್ತಿಕ್ ಅವರ ಹೊಸ ನಿರೂಪಣೆಯ ಮೂಲಕ ಜನರ ಮನಸ್ಸನ್ನು ಗೆಲ್ತಾರಾ ಕಾದು ನೋಡಬೇಕಿದೆ.

ಸ್ಪರ್ಧಿಗಳು:

“ಸುವರ್ಣ ಸೆಲೆಬ್ರಿಟಿ ಲೀಗ್” ನ ಪ್ರೋಮೊದಲ್ಲಿ, ಸೀಸನ್ 10 ರ ಸ್ಪರ್ಧಿಗಳು ಕಾಣಿಸಿಕೊಳ್ಳುತ್ತಿದ್ದಾರೆ ತಾನಿಷಾ ಕುಪ್ಪಂಡ, ರಕ್ಷಕ್ ಬುಲೆಟ್, ವಿನಯ್ ಗೌಡ, ನಮ್ರತಾ ಗೌಡ, ಮತ್ತು ನಟ ನಿನಾದ್ ಅವರಂತಹ ಸ್ಪರ್ಧಿಗಳು ಈ ಶೋದಲ್ಲಿ ಭಾಗವಹಿಸುತ್ತಿದ್ದಾರೆ.

ಮುಂದಿನ ನಿರೀಕ್ಷೆಗಳು:

ಈ ಶೋ ಹೇಗರಲಿದೆ? ಏನು ಎಂಬುದು ವಾಹಿನಿ ಇನ್ನೂ ಹಂಚಿಕೊಂಡಿಲ್ಲ. ಸದ್ಯ ಬಿಡುಗಡೆಯಾದ ಪ್ರೋಮೊದಲ್ಲಿ ಕೇವಲ ಸ್ಪರ್ಧಗಳು ಮಾತ್ರ ಅನಾವರಣವಾಗಿದೆ.

 

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X