DID U KNOW

ಬದಲಿ ಹೃದಯ -1968ರ ಜನವರಿಯಲ್ಲಿ ಬದಲಿ ಹೃದಯವನ್ನು ಅಳವಡಿಸಲು ಎರಡನೇ ಶಸ್ತ್ರ ಸಿಕ್ಕಿತೆ ನಡೆಯಿತು. ಬದಲಿ ಹೃದಯವನ್ನು ಪಡೆದ ವ್ಯಕ್ತಿ ಫಿಲಿಪ್ ಬರ್ಗ್ ಎಂಬ 58 ವರ್ಷ ವಯಸ್ಸಿನ ದಂತ ವೈದ್ಯ

ಬದಲಿ ಹೃದಯವನ್ನು ಅಳವಡಿಸಲು ಈ ಶಸ್ತ್ರಕ್ರಿಯೆ ನಡೆಸಲು 5 ತಾಸು ಬೇಕಾಯಿತು. ಹೊಸ ಹೃದಯ ವಾಷ್ ಕನಾಸ್ಕಿಯವರ ಅವರ ಹೃದಯದ ಗಾತ್ರದ ಅರ್ಧದಷ್ಟಿತ್ತು.

ಮೊದಲು ಈ ಹೃದಯವನ್ನು ಆಮ್ಲಜನಕಯುಕ್ತವಾಗಿ ಮಾಡಲಾಗಿದ್ದ ತಣ್ಣನೆಯ ರಕ್ತದೊಳಗೆ ಇಡಲಾಗಿತ್ತು. ಈ ಶಸ್ತ್ರಕ್ರಿಯೆ ಯಶಸ್ವಿಯಾಯಿತು. ಕೆಲವೇ ದಿನಗಳಲ್ಲಿ ವಾಷ್ ಕನಾಸ್ಕಿ ಎದ್ದು ಕುಳಿತರು. ಆಹಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಬದಲಿ ಹೃದಯ ಅಳವಡಿಸಿಕೊಂಡ ಒಂದು ತಿಂಗಳಿನೊಳಗೆ ವಾಷ್ ಕನಸ್ಕಿ ನಿಧನರಾದರು.

1968ರ ಜನವರಿಯಲ್ಲಿ ಬದಲಿ ಹೃದಯವನ್ನು ಅಳವಡಿಸಲು ಎರಡನೇ ಶಸ್ತ್ರ ಸಿಕ್ಕಿತೆ ನಡೆಯಿತು. ಬದಲಿ ಹೃದಯವನ್ನು ಪಡೆದ ವ್ಯಕ್ತಿ ಫಿಲಿಪ್ ಬರ್ಗ್ ಎಂಬ 58 ವರ್ಷ ವಯಸ್ಸಿನ ದಂತ ವೈದ್ಯ.

ಈ ಹೃದಯವನ್ನು ಅಳವಡಿಸಿದ ನಂತರ ಅವರ ಪಿತ್ತಕೋಶಕ್ಕೆ ತೀವ್ರವಾದ ಸೋಂಕು ತಗಲಿತು, ಮತ್ತು ಶ್ವಾಸಕೋಶಕ್ಕೂ ಘಾಸಿ ಉಂಟಾಯಿತು. ಇದರಿಂದ ಅವರ ದೇಹ ಬದಲಿ ಹೃದಯವನ್ನು ತಿರಸ್ಕರಿಸಬಹುದೆಂದು ಭಾವಿಸಲಾಗಿತ್ತು. ಆದರೆ ಹಾಗಾಗದೆ ಸೋಂಕು ನಿವಾರಣೆಯಾಯಿತು. ಅನಂತರ ಬದಲಿ ಹೃದಯವನ್ನು ಅಳವಡಿಸುವ ಶಸ್ತ್ರಕ್ರಿಯೆ ಇನ್ನು ಹೆಚ್ಚು ಜನಪ್ರಿಯವಾಯಿತು.

1968ರ ಕೊನೆಯ ವೇಳೆಗೆ ಅಮೆರಿಕ, ಬ್ರಿಟನ್, ಫ್ರಾನ್ಸ್ ಭಾರತ, ದಕ್ಷಿಣ ಅಮೆರಿಕ, ಕೆನಡಾ ಇಸ್ರಾಯೇಲ್ ಮುಂತಾದ ದೇಶಗಳಲ್ಲಿ ನೂರಕ್ಕೂ ಹೆಚ್ಚು ಇಂಥ ಬದಲಿ ಹೃದಯಗಳನ್ನು ಅಳವಡಿಸಲಾಯಿತು.

ಇವರ ಪೈಕಿ 40ಕ್ಕು ಹೆಚ್ಚು ರೋಗಿಗಳು ಬದುಕಿಕೊಂಡರು. ಬ್ಲೈಬರ್ಗ್ 1969ರ ಆಗಸ್ಟ್ 17ರ ವರೆಗೆ ಜೀವಿಸಿದ್ದರು. ಇತರ ರೋಗಿಗಳು ಬದಲಿ ಹೃದಯವನ್ನು ಪಡೆದ ಬಳಿಕ ಎರಡುವರೆ ವರ್ಷಗಳವರೆಗೆ ಜೀವಂತವಾಗಿದ್ದರು. ಪೂರ್ಣ ಯಶಸ್ಸು ದೊರೆಯಲಿಲ್ಲವಾದ್ದರಿಂದ ಇಂಥ ಶಸ್ತ್ರ ಚಿಕಿತ್ಸೆಯ ಪ್ರಮಾಣ ಇಳಿಮುಖವಾಯಿತು. ಆದರೆ ಈ ಚಿಕಿತ್ಸೆ ಮಾನವನ ಅಚ್ಚರಿಯ ಸಾಧನೆಗಳಲ್ಲೊಂದು ಎಂಬುದನ್ನು ಮರೆಯುವಂತೆ ಇಲ್ಲ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X