ಕಠಿಣ ಪರಿಶ್ರಮದಿಂದ ಏನು ಬೇಕಾದರೂ ಸಾದಿಸಬಹುದು. ಈ ಕತೆ ಓದಿ
ಒಂದು ಊರಿನಲ್ಲಿ ತರುಣನೊಬ್ಬ ಬಲು ಸೋಮಾರಿ.
ಮನೆಯಲ್ಲಿ ಕುಳಿತು ಊಟ ಮಾಡುವುದನ್ನು ಬಿಟ್ಟು ಬೇರೆ ಏನನ್ನು ಮಾಡದೇ ಕಾಲಹರಣ ಮಾಡುತ್ತಿದ್ದ. ತಂದೆ ಹೇಳಿದ ಯಾವ ಕೆಲಸವನ್ನು ಮಾಡದೇ ಉಡಾಫೆಯಿಂದ ಇರುತ್ತಿದ್ದ.
ಇವನಿಗೆ ಪಾಠ ಕಲಿಸಲು ತಂದೆ ಉಪಾಯ ಮಾಡಿದ.
ನಾಳೆ ಬೆಳಿಗ್ಗೆ ನೀನು ಹೊರಗೆ ದುಡಿದು 5೦ ರೂಪಾಯಿ ತಂದರೆ ಮನೆಗೆ ಬಾ ಇಲ್ಲವಾದಲ್ಲಿ ನಿನಗೆ ಪ್ರವೇಶವಿಲವೆಂದು ಖಡಾಖಂಡಿತವಾಗಿ ಮಗನಿಗೆ ಹೇಳಿದರು.
ದಿಕ್ಕು ಕಾಣದ ತರುಣ ಮಿತ್ರನ ಬಳಿ ಗೊಗೊರೆದು 5೦ ರೂಪಾಯಿ ಪಡೆದು ತಂದ ತಂದೆಗೆ ನೀಡಿದ. ಇದನ್ನು ನೋಡಿದ ತಂದೆ ಆ ಹಣವನ್ನು ಮನೆಯಲ್ಲಿದ್ದ ಬಾವಿಗೆ ಹಾಕಿದರು
ನಾಳೆ ಮತ್ತೆ 5೦ ರೂಪಾಯಿ ದುಡಿದು ತರಲು ಸೂಚಿಸಿದರು. ತರುಣ ಯಥಾ ಪ್ರಕಾರ ಬಂದುಗಳ ಬಳಿ ಕಾಡಿ ಬೇಡಿ ಹಣ ಸಂಗ್ರಹಿಸಿ ತಂದು ತಂದೆಗೆ ಕೊಟ್ಟದ್ದಾಯಿತು.
ಮತ್ತೆ ಅದೇ ಪ್ರಕಾರ ತಂದೆ ಆ ಹಣವನ್ನು ಬಾವಿಗೆ ಹಾಕಿದರು. ಮತ್ತೆ 5೦ ರೂಪಾಯಿ ತರಲು ಆಜ್ನ್ಯಾಪಿಸಿದರು. ಆದರೆ ತರುಣನಿಗೆ ೫೦ ರೂಪಾಯಿ ಸಿಗಲಿಲ್ಲ. ಯಾರೂ ಕೊಡಲಿಲ್ಲ.
ಈಗ ತರುಣನಿಗೆ ಪೀಕಲಾಟ. ತರುಣ ದಾರಿ ಕಾಣದೆ ಊರಲ್ಲಿದ್ದ ಅಂಗಡಿಯಲ್ಲಿ ದುಡಿದು ಶ್ರಮಪಟ್ಟು ೫೦ ರೂಪಾಯಿ ತಂದು ತಂದೆಗೆ ನೀಡಿದ. ತಂದೆ ಆ ಹಣವನ್ನು ಮತ್ತೆ ಅದೇ ಬಾವಿಯಲ್ಲಿ ಹಾಕಲು ಮುಂದಾಗುತ್ತಿದ್ದಂತೆ ಮಗ ಅಪ್ಪನ ಕಾಲು ಹಿಡಿದು ಅಂಗಲಾಚಿದ.
“ನಾನು ದುಡಿದು ತಂದ ಹಣವನ್ನು ಹೀಗೇಕೆ ಬಾವಿಗೆ ಹಾಕುತ್ತೀರೀ” ಎಂದು ಕೇಳಿದ. ಮಗನ ಆತ್ಮ ವಿಶ್ವಾಸ ನೋಡಿ ತಂದೆ
“ಮಗನೆ ನೀನು ಬೇರೆಯವರಿಂದ ಪಡೆದು ತಂಡ ಹಣವನ್ನು ಬಾವಿಗೆ ಹಾಕಿದಾಗ ನಿನಗೆ ದುಃಖವಾಗಲಿಲ್ಲ. ಆದರೆ ನೀನು ಶ್ರಮಿಸಿ ತಂದ ಹಣವನ್ನು ಬಾವಿಗೆ ಹಾಕುವಾಗ ನೀನು ವಿರೋಧಿಸಿದೆ. ಹಣದ ಬೆಲೆ ಅಥವಾ ಶ್ರಮದ ಮೌಲ್ಯ ಗೊತ್ತಾಗುವುದು ಪರಿಶ್ರಮದಿಂದ ಮಾತ್ರ”
ಎಂದು ತಿಳಿ ಹೇಳಿದರು. ನಾವು ಜೀವನದಲ್ಲಿ ಬಹಳಷ್ಟು ಅಪೇಕ್ಷಿಸುತ್ತೇವೆ ಆದರೆ ಶ್ರಮದ ಬದಲು ಸರಳ ದಾರಿ ಹುಡುಕುತ್ತೇವೆ.
ಅಡ್ಡ ದಾರಿ ಹಿಡಿಯುತ್ತೇವೆ ಬೇರೆಯವರ ಶ್ರಮದಿಂದ ಗೆಲುವು ಸಾದಿಸಲು ಬಯಸುತ್ತೇವೆ.ಕಠಿಣ ಶ್ರಮದಿಂದ ಏನನ್ನು ಬೇಕಾದರೂ ಸಾದಿಸಬಹುದು ಎಂದು ಎವರೆಸ್ಟ್ ಶಿಖರವನ್ನು ಸತತವಾಗಿ ಏಳು ಬಾರಿ ಶ್ರಮದಿಂದ ಏರಿದ ತೇನ್ಸಿಂಗನನ್ನು ನೋಡಿ ಅರಿಯಬೇಕು.
ಬದುಕಲು ಕಲಿಯಿರಿ
Leave feedback about this