HEALTH 4 U HOME REMEDY

ತೆಂಗಿನ ಎಣ್ಣೆಯ ಈ ಅದ್ಭುತ ಉಪಯೋಗಗಳು ಮತ್ತು ಪ್ರಯೋಜನಗಳು ನೀವು ತಿಳಿದು ಕೊಳ್ಳಲೇಬೇಕು.

ತೆಂಗಿನ ಎಣ್ಣೆಯ ಈ ಅದ್ಭುತ ಉಪಯೋಗಗಳು ಮತ್ತು ಪ್ರಯೋಜನಗಳು ನೀವು ತಿಳಿದು ಕೊಳ್ಳಲೇಬೇಕು.

ತಾಜಾ ತೆಂಗಿನ ಎಣ್ಣೆಯು ನಾವು ದಿನ ನಿತ್ಯ ಬಳಸುವ ಇತರ ಎಣ್ಣೆಗಳಿಗೆ ಹೋಲಿ ಕೆ ಮಾಡಿದರೆ ತೆಂಗಿನ ಎಣ್ಣೆ ತುಂಬಾ ಆರೋಗ್ಯಕರವಾದ ಮತ್ತು ನಮ್ಮ ದೇಹಕ್ಕೆ ಯಾವುದೇ ಅಪಾಯ ಉಂಟು ಮಾಡದ ನೈಸರ್ಗಿಕ ಎಣ್ಣೆ ಗಳಲ್ಲಿ ಒಂದು.

ತೆಂಗಿನ ಎಣ್ಣೆ ಎಂದ ತಕ್ಷಣ ನಮ್ಮ ಗಮನಕ್ಕೆ ಬರುವುದು ಕೇರಳ ಹಾಗೂ ಕರಾವಳಿ ಭಾಗ. ಏಕೆಂದರೆ ಅಲ್ಲಿನವರು ಯಾವುದೇ ರೀತಿಯ ಪದಾರ್ಥಗಳಿಗೆ ತೆಂಗಿನ ಎಣ್ಣೆ ಯನ್ನು ಬಿಟ್ಟು ಬೇರೆ ಯಾವುದೇ ಎಣ್ಣೆಯನ್ನು ಬಳಸುವುದಿಲ್ಲ. ನಮ್ಮ ಪೂರ್ವಜರಿಂದ ಹಿಡಿದು ಇಂದಿನ ದಿನದವರೆಗೂ ರೂಢಿಯಲ್ಲಿದೆ. ಇದು ದೇಹದ ಆರೋಗ್ಯಕ್ಕೆ ಅಷ್ಟೇ ಅಲ್ಲದೆ ನಮ್ಮ ದೇಹದ ಚರ್ಮ ಮತ್ತು ಕೂದಲಿಗೂ ಸಹ ಇದರ ಉತ್ತಮ ಪ್ರಯೋಜನಗ ಳನ್ನು ನೀಡುತ್ತದೆ. ಈ ನೈಸರ್ಗಿಕ ಎಣ್ಣೆಯಲ್ಲಿ ಹಲವಾರು ಬಗೆಯ ಜೀವ – ಸತ್ವಗ ಳು ಹುದುಗಿವೆ ಹಾಗೂ ಮನುಷ್ಯನಿಗೆ ವಿವಿಧ ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತಾ ಬಂದಿದೆ. ತೆಂಗಿನ ಗುಣವೇ ಕಾಮದೇನು.

” ಇಂಗು ತೆಂಗು ಇವೆರಡಿದ್ದರೆ ಮಂಗವೂ ಕೂಡ ಅಡುಗೆ ಮಾಡಬಲ್ಲದು ” ಎಂಬ ಗಾದೆಯಂತೆ ಕಲ್ಪ ವೃಕ್ಷದ ಪ್ರತಿಯೊಂದು ಭಾಗವು ಮನುಷ್ಯನಿಗೆ ಒಂದಿಲ್ಲ ಒಂದು ರೀತಿಯಲ್ಲಿ ಸಹಾಯಕ್ಕೆ ಬರುತ್ತದೆ. ಇನ್ನು ತೆಂಗಿನಕಾಯಿ ವಿಷಯಕ್ಕೆ ಬಂದರೆ ಅದು ಎಳನೀರಿನ ವಿಚಾರದಿಂದ ಹಿಡಿದು ಕೊಬ್ಬರಿಯ ತನಕ ತೆಂಗಿನ ನಾರು ಮತ್ತು ತೆಂಗಿನ ಚಿಪ್ಪಿನ ಸಹಿತ ಎಲ್ಲರ ಮನೆಯಲ್ಲೂ ಉಪಯೋಗಿಸಲ್ಪಡುತ್ತದೆ. ಹಸಿ ತೆಂಗಿನ ಕಾಯಿಯಿಂದ ತಯಾರು ಮಾಡಲಾಗುವ ತೆಂಗಿನ ಎಣ್ಣೆಯಲ್ಲಿ ಆಂಟಿ – ಬ್ಯಾಕ್ಟೀರಿಯಲ್ ಮತ್ತು ಆಂಟಿ – ಫಂಗಲ್ ಗುಣ ಲಕ್ಷಣಗಳು ತುಂಬಿವೆ.

ಇತ್ತೀಚಿನ ದಿನಗಳ ಲ್ಲಿ ಮಾರುಕಟ್ಟೆಯಲ್ಲಿ ತೆಂಗಿನ ಎಣ್ಣೆ ಸುಲಭವಾಗಿ ದೊರೆಯುತ್ತದೆ. ಹಾಗಾಗಿ ನಿಮ್ಮ ನಿತ್ಯದ ಉಪಯೋಗಕ್ಕೆ ಯಾವುದೇ ರೀತಿಯ ಅಡಚಣೆ ಆಗಲಾರದು. ಒಂದು ವೇಳೆ ತುಂಬಾ ದಪ್ಪವಾಗಿದ್ದರೆ ನಿಮ್ಮ ದೇಹದ ತೂಕ ಇಳಿಸುವುದರಿಂದ ಹಿಡಿದು ನಿಮಗೆ ಉತ್ತಮ ಆರೋಗ್ಯವನ್ನು ದಯಪಾಲಿಸಿ, ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುವವರೆಗೂ ತೆಂಗಿನ ಎಣ್ಣೆಯ ಪ್ರಭಾವ ಹಬ್ಬಿದೆ.

ಒಣ ಕೊಬ್ಬರಿಯ ಈ ಅದ್ಬುತ ಗುಣಗಳು – ಓದಲು ಇಲ್ಲಿ ಕ್ಲಿಕ್ ಮಾಡಿ 

ತೆಂಗಿನ ಎಣ್ಣೆಯಿಂದ ಆಗುವ ಅದ್ಬುತ ಲಾಭಗಳು

ದೇಹದ ತೂಕ ಇಳಿಸಲು ತೆಂಗಿನ ಎಣ್ಣೆ ಸಹಾಯಕ

ಪ್ರತೀ ವ್ಯಕ್ತಿಯ ದೇಹದ ತೂಕ ಹೆಚ್ಚಾಗುವುದೇ ತಾನು ರೂಡಿಸಿಕೊಂಡು ಬಂದಿರುವ ಜೀವನ ಶೈಲಿಯಿಂದ. ಅಂದರೆ ತಾನು ಹೆಚ್ಚಾಗಿ ದೇಹಕ್ಕೆ ವ್ಯಾಯಾಮವಾಗುವಂತಹ ಯಾವುದೇ ಕೆಲಸಗಳನ್ನು ಮಾಡದೇ ಇರುವುದು, ಆಹಾರ ಪದ್ಧತಿಯಲ್ಲಿ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಆಹಾರಗಳನ್ನೇ ಹೆಚ್ಚಾಗಿ ಬಳಸುವುದು, ಒಂದು ದಿನಕ್ಕೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿಗಳನ್ನು ಸೇವಿಸುವುದು, ಅತಿಯಾದ ಕೊಬ್ಬಿನ ಅಂಶ ಹೊಂದಿರುವ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನುವುದ. ಹೀಗೆ ಬಹಳಷ್ಟು ಪದಾರ್ಥಗಳು ಇವೆ. ಈ ರೀತಿಯ ಆವೈಜ್ಞಾನಿಕ ಜೀವನ ಶೈಲಿಯಿಂದ ಒಮ್ಮೆ ದೇಹದ ತೂಕ ಹೆಚ್ಚಾಯಿತೆಂದರೆ, ಮತ್ತೆ ಅದನ್ನು ಹತೋಟಿಗೆ ತರಲು ತುಂಬಾನೇ ಕಸರತ್ತು ಮಾಡ ಬೇಕಾಗುತ್ತದೆ. ಆದರೆ ಈ ವಿಷಯದಲ್ಲಿ ತೆಂಗಿನ ಎಣ್ಣೆ ನಿಮಗೆ ಸಹಾಯ ಮಾಡುತ್ತದೆ. ನೀವು ನಿಮ್ಮ ನಿತ್ಯದ ಆಹಾರದಲ್ಲಿ ತೆಂಗಿನ ಎಣ್ಣೆಯನ್ನು ಸೇರಿಸಿಕೊಂಡರೆ, ನಿಮ್ಮ ದೇಹದಲ್ಲಿ ಹಲವಾರು ಅಂಗಾಂಗಗಳಲ್ಲಿ ಮತ್ತು ದೇಹದ ಇನ್ನಿತರ ಭಾಗಗಳಲ್ಲಿ ಸೇರಿಕೊಂಡು ಅವುಗಳ ಕಾರ್ಯ ದಕ್ಷತೆಗೆ ಅಡ್ಡಿ ಪಡಿಸುವ ಕೊಬ್ಬಿನ ಅಂಶವನ್ನು ಕರಗಿಸುವ ಪ್ರಕ್ರಿಯೆಗೆ ಚಾಲನೆ ನೀಡಿ, ನಿಮ್ಮ ದೇಹದ ತೂಕವನ್ನು ನಿಯಮಿತವಾಗಿ ಕಡಿತ ಗೊಳಿಸುತ್ತದೆ.

ದೇಹಕ್ಕೆ ಅಪಾಯಕಾರಿ ಸೂಕ್ಷ್ಮ ಅಣುಗಳನ್ನು ಹೋರಾಡುತ್ತದೆ.

ನಾವು ಯಾವುದೇ ಆಹಾರವನ್ನು ಸೇವಿಸುವಾಗ ಅಥವಾ ಉಸಿರಾಡುವ ಸಮಯದಲ್ಲಿ ಗಾಳಿಯನ್ನು ಸೇವಿಸಿದಾಗ ಅದರ ಜೊತೆ ನಮ್ಮ ಕಣ್ಣಿಗೆ ಕಾಣದೆ ಅನೇಕ ರೀತಿಯ ವಿಷಕಾರಿ ಸೂಕ್ಷ್ಮ ಜೀವಿಗಳು ನಮ್ಮ ದೇಹ ಸೇರುತ್ತವೆ. ಇವುಗಳು ನಮ್ಮ ದೇಹದಲ್ಲಿ ಹಲವು ಕಾಯಿಲೆಗಳನ್ನು ಉಂಟು ಮಾಡುತ್ತವೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿ ಸ್ವಲ್ಪ ಕಡಿತಗೊಂಡರೂ ಹಲವಾರು ಕಾಯಿಲೆಗೆ ನಾವು ಬಲಿಯಾಗಬೇಕಾಗುತ್ತದೆ. ಆದರೆ ಇದಕ್ಕೆಲ್ಲ ಪರಿಹಾರ ಎಂಬಂತೆ ತೆಂಗಿನ ಎಣ್ಣೆ ತನ್ನಲ್ಲಿರುವ ಆಂಟಿ – ಬ್ಯಾಕ್ಟೀರಿಯಲ್ ಮತ್ತು ಆಂಟಿ – ಫಂಗಲ್ ಗುಣ ಲಕ್ಷಣಗಳಿಂದ ಈ ರೀತಿಯ ಸೂಕ್ಷ್ಮ ಜೀವಾಣುಗಳ ಜೊತೆ ಹೋರಾಡುತ್ತದೆ. ತೆಂಗಿನ ಎಣ್ಣೆಯಲ್ಲಿ ಲಾರಿಕ್ (medicine that reduces the amount of acid produced in your stomach ) ಆಮ್ಲದ ಅಂಶ ಇದ್ದು, ದೇಹದಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್ ಸೋಂಕಿನಿಂದ ಎದುರಾಗುವ ಅನೇಕ ರೀತಿಯ ತೊಂದರೆಗಳನ್ನು ತಡೆ ಹಿಡಿಯುತ್ತದೆ. ಈ ಎಲ್ಲಾ ಫಲಿತಾಂಶಗಳನ್ನು ಪಡೆಯಲು, ತೆಂಗಿನ ಎಣ್ಣೆಯನ್ನು ನೇರವಾಗಿ ಚರ್ಮದ ಮೇಲೆ ಅಥವಾ ಕೂದಲಿಗೆ ಹಚ್ಚಬಹುದು ಅಥವಾ ನಮ್ಮ ಅಡುಗೆಗಳಲ್ಲಿ ಸಹ ಉಪಯೋಗಿಸಬಹುದು.

ದೇಹದಲ್ಲಿ ಕೊಲೆಸ್ಟ್ರಾಲ್ ಗುಣ ಮಟ್ಟವನ್ನು ಉತ್ತಮಗೊಳಿಸುತ್ತದೆ
ಮನುಷ್ಯನ ಸಂಪೂರ್ಣ ದೇಹದ ಆರೋಗ್ಯಕ್ಕೆ ಕೊಲೆಸ್ಟ್ರಾಲ್ ನ ಮಟ್ಟ ಸಹ ಬಹು ಮುಖ್ಯವಾಗಿ ಪಾತ್ರ ವಹಿಸುತ್ತದೆ. ಕೊಲೆಸ್ಟರಾಲ್ ನ ಮಟ್ಟ ಹೆಚ್ಚಾದರೆ ಹೃದಯದ ಅಪಾಯಕಾರಿ ಎಂಬ ತಪ್ಪು ಯೋಚನೆ ಹಲವರಲ್ಲಿ ಇದೆ. ಆದರೆ ಅದು ಕೆಟ್ಟ ಕೊಲೆಸ್ಟ್ರಾಲ್ ನ ಮಟ್ಟ ಎಂಬುದು ಎಷ್ಟೋ ಜನರಿಗೆ ತಿಳಿದಿಲ್ಲ.

ಕೊಲೆಸ್ಟ್ರಾಲ್ ನಲ್ಲಿ ಎರಡುಭಾಗಗಳಿವೆ. ಕೆಟ್ಟ ಕೊಲೆಸ್ಟ್ರಾಲ್ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ – ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತೀರ ಕಡಿಮೆ ಇದ್ದು, ಮನುಷ್ಯನ ದೇಹಕ್ಕೆ ಒಳ್ಳೆಯ ಕೊಲೆಸ್ಟ್ರಾಲ್ ಅಂಶದ ಮಟ್ಟ ಹೆಚ್ಚಿದ್ದರೆ ಅವನ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಂತಹ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ನಮ್ಮ ದೇಹದಲ್ಲಿ ತೆಂಗಿನ ಎಣ್ಣೆಯಲ್ಲಿರುವ ಸ್ಯಾಚುರೇಟೆಡ್ ಫ್ಯಾಟ್ ಗಳು ಹೆಚ್ಚು ಮಾಡುತ್ತವೆ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ನಿಂದ ನಮ್ಮ ದೇಹಕ್ಕೆ ಆಗುವ ನಷ್ಟವನ್ನು ಗಣನೀಯವಾಗಿ ತಗ್ಗಿಸಿದಂತಾಗುತ್ತದೆ.

ಈಗಿನ ಒತ್ತಡದ ಜೀವನ ಶೈಲಿಯಲ್ಲಿ ಎಲ್ಲರೂ ಸಹ ಬಹಳ ಕಡಿಮೆ ಊಟ ಮಾಡುತ್ತಾರೆ. ಇದರಿಂದಲೂ ಸಹ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ದೇಹದಲ್ಲಿ ಕಡಿಮೆಯಾಗುತ್ತಾ ಹೋಗುತ್ತದೆ. ಇದನ್ನು ದೂರ ಮಾಡಲು ಸಾಧ್ಯವಾದಷ್ಟು ದಿನ ನಿತ್ಯದ ಅಡುಗೆಯಲ್ಲಿ ತೆಂಗಿನ ಎಣ್ಣೆಯನ್ನು ಉಪಯೋಗಿಸುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು ಜೊತೆಗೆ ದೇಹಕ್ಕೆ ನಿಯಮಿತವಾದ ವ್ಯಾಯಾಮ ಒದಗಿಸಿದರೆ ಕೊಲೆಸ್ಟ್ರಾಲ್ ಅಂಶದ ಮಟ್ಟದಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು.

ಚರ್ಮಕ್ಕೆ ಕಾಂತಿಗೆ ಕೂದಲಿನ ಆರೋಗ್ಯಕ್ಕೆ ಹಾಗೂ ಬಾಯಿಯ ಆರೋಗ್ಯಕ್ಕೆ ತೆಂಗಿನ ಎಣ್ಣೆ ಉತ್ತಮ.


ಈ ಮೊದಲೇ ಹೇಳಿದಂತೆ ತಾಜಾ ತೆಂಗಿನ ಎಣ್ಣೆಯಿಂದ ಮನುಷ್ಯನ ದೇಹದ ಸಂಪೂರ್ಣ ಆರೋಗ್ಯ ವೃದ್ಧಿಯಾಗುತ್ತದೆ. ಕೇವಲ ದೇಹದ ಒಳಗೆ ಕೆಲಸ ಮಾಡುವುದಲ್ಲದೆ ದೇಹದ ಹೊರಗೂ ಕೂಡ ತೆಂಗಿನ ಎಣ್ಣೆ ತನ್ನದೇ ಆದ ರೀತಿಯಲ್ಲಿ ಮನುಷ್ಯನಿಗೆ ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯನ್ನು ತಲೆ ಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುವುದಲ್ಲದೆ ಹೊಳಪನ್ನು ಹೊಂದುತ್ತದೆ. ಚರ್ಮದ ವಿಷಯದಲ್ಲಿ ಕೂಡ ತೆಂಗಿನ ಎಣ್ಣೆ ನಮ್ಮ ದೇಹದ ಚರ್ಮ ಯಾವುದೇ ರೀತಿಯ ಚರ್ಮ ವ್ಯಾದಿಗಳಿಗೆ ಒಳಗಾಗದಂತೆ ನೋಡಿಕೊಳ್ಳುತ್ತದೆ. ಇನ್ನು ಬಾಯಿಯ ಆರೋಗ್ಯಕ್ಕೆ ಸಂಬಂಧಪಟ್ಟಂತೆ ತೆಂಗಿನ ಎಣ್ಣೆಯನ್ನು ಬಳಸಿಕೊಂಡು ಆಯಿಲ್ ಪುಲ್ಲಿಂಗ್ ಮಾಡಿದರೆ ಹಲ್ಲುಗಳ ಆರೋಗ್ಯ ಮತ್ತು ವಸಡಿನ ರಕ್ಷಣೆ ಕೂಡ ಚೆನ್ನಾಗಿ ಆಗಿ ಬಾಯಿಯ ದುರ್ವಾಸನೆ ದೂರವಾಗುತ್ತದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X