HEALTH 4 U LIFE STYLE

ಜೀವನದಲ್ಲಿ ಬದಲಾವಣೆ ಬೇಕೇ ಹಾಗಿದ್ದರೆ ಇವುಗಳನ್ನು ತಪ್ಪದೆ ಪಾಲಿಸಿ

3D business team in action making gears move – teamwork concepts

ಜೀವನದಲ್ಲಿ ಕೆಲವು ನಿಯಮಗಳನ್ನು ಪಾಲಿಸಿದರೆ ನಮ್ಮ ಜೀವನವನ್ನೇ ಸಂತೋಷವಾಗಿಡಲು ಸಹಾಯ ಮಾಡುತ್ತದೆ.

ಇವತ್ತು ನಾನು ಇಂತಹದೇ 16 ನಿಯಮಗಳ ಬಗ್ಗೆ ಹೇಳಬಯಸುತ್ತೇನೆ ಇದನ್ನು ಪಾಲಿಸಿದರೆ ಖಂಡಿತವಾಗಿಯೂ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು. ಈ ನಿಯಮಗಳನ್ನು ಬರೆದಿಟ್ಟು ನಿಮ್ಮ ಕಣ್ಣ ಮುಂದೆ ಇಟ್ಟರೆ ಅದನ್ನ ಪಾಲಿಸಲು ನಿಮಗೆ ಸಹಾಯವಾಗುತ್ತದೆ.

ಮೊದಲ ನಿಯಮ :  “ಅಡಿಗೆಯಲ್ಲಿ Pink ಉಪ್ಪನ್ನೇ ಬಳಸಿ” ಇದು ಬಿಳಿ ಉಪ್ಪಿನ ಹಾಗೆ ನೀರಿನ ಧಾರಣ ಹಾಗು ಬಿಪಿ ಹೆಚ್ಚಿಸುವ ಕೆಲಸ ಮಾಡುವುದಿಲ್ಲ .ಇದನ್ನು ಸೇವಿಸುವುದರಿಂದ ದೇಹಕ್ಕೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ.

ಎರಡನೆಯ ನಿಯಮ : “ರಾತ್ರಿ ಊಟದ ನಂತರ 500 ಸ್ಟೆಪ್ಸ್ ನಡಿಯಬೇಕು” ಅಧ್ಯಯನದ ಪ್ರಕಾರ ರಾತ್ರಿ ಊಟದ ನಂತರ ದಿನಾಲೂ ನಡೆದರೆ ತೂಕ ಕಡಿಮೆಯಾಗುತ್ತದೆ, ಗ್ಯಾಸ್ ಮತ್ತು ಅಸಿಡಿಟಿ ಆಗುವುದಿಲ್ಲ ಹಾಗು ಚೆನ್ನಾಗಿ ನಿದ್ರೆ ಬರುತ್ತದೆ.

ಮೂರನೆಯ ನಿಯಮ : “ಊಟದ ಅರ್ಧ ಗಂಟೆಯ ನಂತರ ನೀರನ್ನು ಕುಡಿಯಬೇಕು “ತಕ್ಷಣ ನೀರನ್ನು ಕುಡಿದರೆ ಪಚನ ಕ್ರಿಯೆಗೆ ತೊಂದರೆಯಾಗುತ್ತದೆ ಇದರಿಂದ ತೂಕ ಹೆಚ್ಚಾಗುತ್ತದೆ ಮತ್ತು ಹೊಟ್ಟೆ ಹೊರಗೆ ಬರುತ್ತದೆ.

ನಾಲ್ಕನೆಯ ನಿಯಮ : “ದಿನಕ್ಕೆ 3 ರಿಂದ 4 ಲೀಟರ್ ನೀರು ಕುಡಿಯಬೇಕು” ನೀರು ಕುಡಿಯುದರಿಂದ ಹೊಟ್ಟೆಯ ಎಲ್ಲ ರೋಗಗಳಿಂದ ದೂರವಿರಬಹುದು, ಕಿಡ್ನಿ ಸ್ಟೋನ್ ಬರುವುದಿಲ್ಲ ಮತ್ತು ದೇಹದಲ್ಲಿರುವ ಎಲ್ಲ ಟಾಕ್ಸಿನ್ಸ್ ಗಳನ್ನ ತೆಗೆದು ಹಾಕಲು ಸಹಾಯ ಮಾಡುತ್ತದೆ.

ಐದನೆಯ ನಿಯಮ : “ಬೆಳಿಗ್ಗೆ ಎದ್ದತಕ್ಷಣ ಬಿಸಿ ನೀರನ್ನು ಕುಡಿಯಬೇಕು ಮತ್ತು ತಣ್ಣೇರಿನಿಂದ ಕಣ್ಣಿಗೆ ನೀರನ್ನು ಹೊಡಿಯಬೇಕು” ಹೀಗೆ ಮಾಡಿದರೆ ದೇಹ ಡೆಟೋಕ್ಸ್ ಹಾಗುತ್ತದೆ ಕಣ್ಣಿನ ದೃಷ್ಟಿ ಚೆನ್ನಾಗಿರಿಸಲು ಸಹಾಯಕವಾಗಿದೆ.

ಆರನೆಯ ನಿಯಮ: ” ಅಡುಗೆಗೆ ರಿಫೈನ್ಡ್ ಎಣ್ಣೆಯ ಬಳಕೆ ಮಾಡಬೇಡಿ ” ಏಕೆಂದರೆ ಇದು ಅನೇಕ ಕೆಮಿಕಲ್ ಪ್ರೋಸೆಸ್ ನಿಂದ ತಯಾರಾಗುತ್ತದೆ .ಇದರಿಂದ ದೇಹಕ್ಕೆ ಅನೇಕ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚು.ಇದರ ಬದಲು ನೀವು ಶುದ್ಧ ತುಪ್ಪ ವನ್ನು ಬಳಸಬಹುದು.  ಇದು ಆಗದಿದ್ದರೆ ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ ಹಾಗು ಎಳ್ಳೆಣ್ಣೆ ಯನ್ನು ಉಪಯೋಗಿಸಬಹುದು.

ಏಳನೆಯ ನಿಯಮ : ” ಊಟದಲ್ಲಿ ಅನೇಕ ರೀತಿಯ ಬಣ್ಣದ ಪದಾರ್ಥಗಳನ್ನ ಉಪಯೋಗಿಸಬೇಕು” ಅಂದರೆ ನಿಮ್ಮ ಊಟವನ್ನು ಬಣ್ಣಕಾರವಾಗಿ ಮಾಡಬೇಕು ಅದರಲ್ಲಿ ಎಲ್ಲ ಬಣ್ಣದ ತರಕಾರಿ, ಸೊಪ್ಪು ಮತ್ತು ಹಣ್ಣು ಹಣ್ಣು ಹಂಪಲುಗಳನ್ನು ಬಳಸಬೇಕು ಇದರಿಂದ ದೇಹಕ್ಕೆ ಬೇಕಾದ ವಿಟಮಿನ್, ಮಿನರಲ್ಸ್ ಮತ್ತು ಪ್ರೊಟೀನ್ ಗಳು ದೊರೆಯುತ್ತವೆ.

ಎಂಟನೆಯ ನಿಯಮ : ” ಊಟದಲ್ಲಿ ಬಿಳಿ ಬಣ್ಣವನ್ನು ದೂರವಿಡಬೇಕು ” ಬಿಳಿ ಬಣ್ಣಗಳೆಂದರೆ ಸಕ್ಕರೆ, ಉಪ್ಪು, ಅಕ್ಕಿ ಮತ್ತು ಹಿಟ್ಟು ಏಕೆಂದರೆ ಇದು ಕ್ಯಾಲರಿಸ್ ನಿಂದ ತುಂಬಿರುತ್ತದೆ .ಫೈಬರ್ ತುಂಬಾ ಕಡಿಮೆ ಇರುತ್ತದೆ. ಇದರಿಂದ ದೇಹ ದಪ್ಪವಾಗುತ್ತದೆ, ಹೊಟ್ಟೆನೋವಿನ ತೊಂದರೆಗಳು ಮತ್ತು ದೇಹಕ್ಕೆ ಬೇಕಾದ ನ್ಯೂಟ್ರಿಯೆಂಟ್ಸ್ ಗಳು ದೊರೆಯುದಿಲ್ಲ.

ಒಂಭತ್ತನೆಯ ನಿಯಮ : “ರಾತ್ರಿ ಊಟಕ್ಕೆ ಮೊಸರು, ರಾಜ್ಮಾಹಾಗು ಅಕ್ಕಿಯನ್ನು ಬಳಸಬಾರದು.” ಆಯುರ್ವೇದದ ಪ್ರಕಾರ ಇದನ್ನು ಬಳಸಿದರೆ ಹೊಟ್ಟೆಯಲ್ಲಿ ಗ್ಯಾಸ್ಅ, ಸಿಡಿಟಿ ಮುಂತಾದ ತೊಂದರೆಗಳು ಶುರುವಾಗುತ್ತದೆ. ಇದನ್ನು ತಿನ್ನುವುದಾದರೆ ದಿನದಲ್ಲಿ ತಿನ್ನುವುದು ಉತ್ತಮ.

ಹತ್ತನೆಯ ನಿಯಮ : “ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ,ಕಾಫಿ ಕುಡಿಯಬಾರದು” ಇದರಿಂದ ಹೊಟ್ಟೆಯಲ್ಲಿ ಆಸಿಡ್ ಉತ್ಪತ್ತಿಯಾಗುತ್ತದೆ ಮತ್ತು ಹಸಿವು ಕಡಿಮೆಯಾಗುತ್ತದೆ. ಒಂದು ವೇಳೆ ನಿಮಗೆ ಕುಡಿಯಲೇ ಬೇಕಾದರೆ ಹೊಟ್ಟೆಗೆ ಏನಾದರು ಸ್ವಲ್ಪ ತಿಂದು ಕುಡಿಯಬಹುದು.

ಹನ್ನೊಂದನೆಯ ನಿಯಮ: ” ರಾತ್ರಿ ಹೊತ್ತು ಜಾಸ್ತಿ ಊಟ ಮಾಡಬೇಡಿ” ಇದರಿಂದ ದೇಹದ ತೂಕ ಬೇಗನೆ ಹೆಚ್ಚಾಗುತ್ತದೆ. ದೇಹದ ಮೆಟೊಪೊಲಿಸಮ್ ಸುಸ್ತಾಗುತ್ತದೆ ಹಾಗು ಡಯಾಬಿಟಿಸ್ , ಕೊಲೆಸ್ಟಾಲ್ ಮತ್ತು ಹಾರ್ಟ್ ಅಟ್ಯಾಕ್ ನ ಲಕ್ಷಣಗಳು ಜಾಸ್ತಿಯಾಗುತ್ತದೆ.

ಹನ್ನೆರಡನೆಯ ನಿಯಮ : ” ದಿನಾಲೂ ಒಂದು ಸೇಬನ್ನು ತಿನ್ನಿ” ನೀವೆಲ್ಲರೂ ದಿನಕ್ಕೆ ಒಂದು ಸೇಬನ್ನು ತಿಂದರೆ ವ್ಯದ್ಯ ರಿಂದ ದೂರವಿರಬಹುದೆಂಬ ಮಾತನ್ನು ಕೇಳಿರಬಹುದು. ಆದ್ದರಿಂದ ದೇಹದ ಆರೋಗ್ಯಕ್ಕಾಗಿ ಒಂದು ಸೇಬನ್ನು ತಿನ್ನಿರಿ.

ಹದಿಮೂರನೆಯ ನಿಯಮ: “ದಿನಕ್ಕೆ 10,000 ಸ್ಟೆಪ್ಸ್ ನಡಿಯಬೇಕು” ಈಗಿನ ತಂತ್ರಜ್ಞಾನದಿಂದ ನಾನು ನಡೆಯುವ ಎಲ್ಲ ಸ್ಟೆಪ್ಸ್ ನ ಲೆಕ್ಕ ಹಾಕಬಹುದು. ಒಂದು ವೇಳೆ 10,000 ಸ್ಟೆಪ್ಸ್ ಗಳು ಆಗದಿದ್ದರೂ 7000 ನಡೆದು ಕ್ರಮೇಣ 10,000 ಕ್ಕೆ ಹೋಗಬಹುದು. ನಡೆಯುದರಿಂದ ದೇಹಕ್ಕೆ ತುಂಬಾ ಒಳ್ಳೆಯದು ಅದರಿಂದ ಡೈಯಾಬಿಟೀಸ್,  ಕೊಲೆಸ್ಟ್ರಾಲ್ ಹಾಗು ಹಾರ್ಟ್ ಅಟ್ಯಾಕ್ ಮುಂತಾದ ರೋಗಗಳಿಂದ ದೂರವಿಡಲು ಸಹಾಯ ಮಾಡುತ್ತದೆ.

ಹದಿನಾಲ್ಕನೆಯ ನಿಯಮ: ” ದಿನಾಲೂ ಒಂದು ಗ್ಲಾಸ್ ನಿಂಬೆ ಹಣ್ಣಿನ ಜ್ಯೂಸು ಕುಡಿಯುವುದು” ಇದರಿಂದ ದೇಹ ದಪ್ಪವಾಗುವುದಿಲ್ಲ. ದೇಹ ಡೆಟೋಕ್ಸ್ ಆಗುತ್ತದೆ. ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಇಮ್ಯೂನಿಟಿ ಜಾಸ್ತಿಯಾಗಿ ಸಣ್ಣ ಸಣ್ಣ ರೋಗಗಳಿಂದ ನಮ್ಮ ದೇಹವನ್ನು ಕಾಪಾಡುತ್ತದೆ.

ಹದಿನೈದನೆಯ ನಿಯಮ: ” ಮಧ್ಯಾಹ್ನ ಊಟ ಮಾಡುವ ಅರ್ಧ ಗಂಟೆಯ ಮುಂಚೆ ಒಂದು ಬೌಲ್ ಸಾಲಡ್ ಸೇವಿಸಬೇಕು”. ಇದನ್ನ ಸೇವಿಸುವುದು ದೇಹಕ್ಕೆ ತುಂಬಾ ಒಳ್ಳೆಯದು. ರಾತ್ರಿ ಬಿಟ್ಟು ಉಳಿದ ಎಲ್ಲ ಸಮಯದಲ್ಲಿ ತೆಗೆದುಕೊಳ್ಳಬಹುದು. ಆದರೆ ಊಟಕ್ಕಿಂತ ಅರ್ಧ ಗಂಟೆ ಮುಂಚೆ ಸೇವಿಸುವುದರಿಂದ ಡೈಯಾಬಿಟೀಸ್ ಮತ್ತು ದಪ್ಪವಾಗುವುದನ್ನು ತಡೆಯಲು ಸಹಾಯವಾಗುತ್ತದೆ. ದೇಹದಲ್ಲಿ ಶಕ್ತಿ ಬರುತ್ತದೆ ಮತ್ತು ಪಚನ ಕ್ರಿಯೆಗೆ ಸಹಾಯಕವಾಗುತ್ತದೆ.

ಹದಿನಾರನೆಯ ನಿಯಮ: ” ನೀರನ್ನು ಕುಡಿಯುವಾಗ ಕುಳಿತುಕೊಂಡು ಸ್ವಲ್ಪ ಸ್ವಲ್ಪ ವಾಗಿ ಕುಡಿಯಬೇಕು” ನೀರನ್ನು ನಿಂತುಕೊಂಡು ಒಂದೇ ಸರಿ ಕುಡಿಯೋದನ್ನು ನಿಲ್ಲಿಸಬೇಕು. ತುಂಬಾ ತಣ್ಣಗೆ ನೀರನ್ನು ಕುಡಿಯಬಾರದು. ಸ್ವಲ್ಪ ಬಿಸಿ ಮಾಡಿದ ನೀರನ್ನು ಕುಡಿದರೆ ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹ ಡೆಟೋಕ್ಸ್ ಆಗುತ್ತದೆ. ದೇಹವನ್ನು ಸಮತೋಲಿಸಲು ಸಹಾಯ ಮಾಡುತ್ತದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X