HEALTH 4 U HOME REMEDY

ಔಷದಿಯ ಆಗರ ತುಂಬೆ ಗಿಡ -ಕಫ ಶೀತ ಕೆಮ್ಮು

ತುಂಬೆ ಗಿಡ.ದ್ರೋಣಪುಷ್ಪ ಸಣ್ಣ ಗಿಡಗಳು ಬಿಳಿ ಬಣ್ಣದ ಹೂಗಳು, ದೊಡ್ಡ ಗಿಡಗಳು ಹಾಗೂ ಬಿಳಿ ಬಣ್ಣದ ಹೂಗಳು ಕಾಣುವ ಈ ಗಿಡಗಳು ಹೆಚ್ಚಾಗಿ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಗಿಡ ಹಲವಾರು ಔಷಧಿಯ ಗುಣಗಳನ್ನು ತನ್ನ ಒಡಲಲ್ಲಿ ತುಂಬಿ ಕೊಂಡಿದೆ. ಬಹಳ ಪ್ರಾಚೀನ ಕಾಲದಿಂದಲೂ ತುಂಬೆ ಗಿಡ ಉತ್ತಮ ಔಷದಿಯ ಗುಣ ಹೊಂದಿರುವುದರಿಂದ ಇದರ ಅಗತ್ಯ ತುಂಬಾನೇ.

ಮನೆಯ ಹಿತ್ತಲು, ರಸ್ತೆಗಳ ಬದಿಯಲ್ಲಿ, ಆಸು ಪಾಸು ಕಾಡುಗಳಲ್ಲಿ ತನ್ನ ಪಾಡಿಗೆ ಬೆಳೆದು ಹೂ ಬಿಟ್ಟು ಬೀಜವಾಗಿ ಮತ್ತೆ ಗಿಡವಾಗುವ ಈ ತುಂಬೆ ಗಿಡ ಬಹಳಷ್ಟು ವಿಚಾರಗಳಲ್ಲಿ ಅಂದರೆ ಕೆಮ್ಮು, ಕಫ, ನೆಗಡಿ, ಅಜೀರ್ಣ, ಕಣ್ಣಿನ ಕಾಯಿಲೆಗಳು, ತಲೆನೋವು, ರಕ್ತ ಹೀನತೆ, ಲಿವರ್ಜ್ವ, ಹಾಗೂ ಚರ್ಮದ ತುರಿಕೆ ಹೀಗೆ ನಾನಾ ಕಾಯಿಲೆಗಳಿಗೆ ಮನೆಮದ್ದಾಗಿ ಬಳಕೆ ಮಾಡಲಾಗುತ್ತದೆ. ಆಯುರ್ವೇದದಲ್ಲಿ ದ್ರೋಣ ಪುಷ್ಪದ ಗುಣಲಕ್ಷಣಗಳ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ.

ದ್ರೋಣಪುಷ್ಪ ಎಂಬ ಹೆಸರು ಹೇಗೆ ಬಂತು ?
ತುಂಬೆ ಗಿಡದ ಹೂವುಗಳು ಆಗಸಕ್ಕೆ ತಿರುಗಿ ನಿಂತ ಗಂಟೆಯ ಆಕಾರದಲ್ಲಿ ಇರುವುದರಿಂದ ಇದನ್ನು ದ್ರೋಣ ಪುಷ್ಪ ಎಂದು ಕರೆಯಲಾಗುತ್ತದೆ. ದ್ರೋಣಪುಷ್ಪದ ಸಸ್ಯ 50-80 ಸೆಂ.ಮೀ ಎತ್ತರದಲ್ಲಿ ಬೆಳೆಯುತ್ತದೆ. ಅಂದರೆ ತುಂಬೆಯಲ್ಲಿ ದೊಡ್ಡ ತುಂಬೆ ಹಾಗೂ ಸಣ್ಣ ತುಂಬೆ ಎಂಬ ಎರಡು ವರ್ಗಗಳಿವೆ.

ಸಣ್ಣ ತುಂಬೆ ಹರಡಿಕೊಂಡು ಬೆಳೆಯುತ್ತದೆ ಹಾಗೂ ದೊಡ್ಡ ತುಂಬೆ ನೇರವಾಗಿ ಬೆಳೆಯುತ್ತದೆ. ಹೆಚ್ಚಿನ ಕೊಂಬೆಗಳಿಲ್ಲದೆ ಬೆಳೆಯುವ ಗಿಡವೇ ದೊಡ್ಡ ತುಂಬೆ. ಇದರ ಕಾಂಡ ಮತ್ತು ಅದರ ಕೊಂಬೆಗಳು ಚತುರ್ಭುಜವನ್ನು ಹೊಂದಿರುತ್ತವೆ. ಇದರ ಎಲೆಗಳು ನೇರವಾಗಿರುತ್ತವೆ. 3.9-8.9 ಸೆಂ.ಮೀ ಉದ್ದ ಬೆಳೆಯುತ್ತವೆ. ಇದರ ಎಲೆಗಳು ಅತ್ಯಂತ ಒಳ್ಳೆಯ ಸುವಾಸನೆಯನ್ನು ಹೊಂದಿವೆ ಮತ್ತು ರುಚಿಯಲ್ಲಿ ಕಹಿ ಹಾಗೂ ಒಗರು ಒಗರಾಗಿರುತ್ತವೆ. ಇದರ ಹೂವುಗಳು ಚಿಕ್ಕದಾಗಿದ್ದು ಬಿಳಿ ಬಣ್ಣದಲ್ಲಿರುತ್ತವೆ. ಇದರ ಹಣ್ಣುಗಳು 3 ಮಿಮೀ ಉದ್ದ, ಕಂದು ಬಣ್ಣದಿಂದ ಮೃದುವಾಗಿರುತ್ತದೆ. ಇದರ ಹೂವುಗಳು ಮತ್ತು ಹಣ್ಣುಗಳು ಆಗಸ್ಟ್ ನಿಂದ ಡಿಸೆಂಬರ್ ವರೆಗೆ ಬಿಡುತ್ತವೆ.

ತುಂಬೆ ಗಿಡ (ದ್ರೋಣ ಪುಷ್ಪ) ಆರೋಗ್ಯಕರ ಉಪಯೋಗಗಳು:-

1. ಹಸುಗೂಸಿನ ಕಫ ತಡೆಯಲು :-

ತುಂಬೆ ಗಿಡದ ಬಿಳಿ ಹೂಗಳನ್ನು ೬ ತಿಂಗಳ ಹಸುಗೂಸಿಗೆ ಕೊಡುವ ದನದ ಹಾಲಿನಲ್ಲಿ ಹಾಕಿ ಬಿಸಿ ಮಾಡುವುದರಿಂದ ಹಸುಗೂಸಿಗೆ ಕಟ್ಟುವ ಕಫವನ್ನು ತಡೆಯಬಹುದು.

2. ಕಣ್ಣಿನ ದೃಷ್ಟಿ ದೋಷಗಳಿಗೆ ತುಂಬೆ ರಾಮಬಾಣ :-

ತುಂಬೆ ಗಿಡದ ಪ್ರಯೋಜನಗಳು ಸಾಮಾನ್ಯವಾಗಿ ಹೆಚ್ಚು ಟಿವಿ, ಮೊಬೈಲ್ ನೋಡುವುದರಿಂದ ಕಣ್ಣುಗಳು ದೃಷ್ಟಿ ಕಳೆದುಕೊಳ್ಳುತ್ತವೆ. ಜೊತೆಗೆ ಕಣ್ಣಿಗೆ ಸಂಬಂಧಿಸಿ ನಾನಾ ಕಾಯಿಲೆಗಳು ಬರುತ್ತವೆ. ಇಂತಹ ಕಣ್ಣಿನ ಸಮಸ್ಯೆಗಳಿಗೆ ತುಂಬೆ ಗಿಡ ರಾಮಬಾಣದಂತೆ ಕೆಲಸ ಮಾಡುತ್ತದೆ. ವೈದ್ಯರ ಸಲಹೆ ಮೇರೆಗೆ ಮನೆಮದ್ದಾಗಿ ಇದನ್ನು ಬಳಸಬಹುದು.

ದ್ರೋಣಪುಷ್ಪವನ್ನು ಚೆನ್ನಾಗಿ ತೊಳೆದು ಒಣಗಿಸಿ ಪುಡಿಮಾಡಿ ಶೇಖರಿಸಿ ಇಡಬಹುದು. ಹಾಗೆಯೇ ಎಲೆಗಳನ್ನು ಅಂಗೈ ಯಲ್ಲಿ ಉಜ್ಜಿ ಉಂಟಾಗುವ ರಸವನ್ನು ಮೂಗಿನ ಮೂಲಕ 1-2 ಹನಿಗಳ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಕಣ್ಣಿನ ಕಾಯಿಲೆಗಳಿಗೆ ಇದು ಪ್ರಯೋಜನಕಾರಿಯಾಗಿದೆ. ಇದರೊಂದಿಗೆ ಕಾಜಲ್‌ನಂತೆ ಇದನ್ನು ಹಚ್ಚುವುದರಿಂದ ಕಣ್ಣಿನ ಯಾವುದೇ ಸಮಸ್ಯೆಯನ್ನು ದೂರ ಮಾಡುವ ಶಕ್ತಿ ಇದಕ್ಕಿದೆ.

3. ಕೆಮ್ಮು ಹಾಗೂ ಕಫ ದಿಂದ ಮುಕ್ತಿ ನೀಡುವ ತುಂಬೆ ಗಿಡ: –

ಕೆಮ್ಮಿಗೆ ತುಂಬೆ ಗಿಡ ಉತ್ತಮ ಮನೆಮದ್ದಾಗಿ ಕೆಲಸ ಮಾಡುತ್ತದೆ. ಔಷಧಿಯ ಗುಣಗಳನ್ನು ಹೊಂದಿರುವ ಗಿಡದ ಎಲೆಗಳಿಂದ 5 ಮಿಲಿ ರಸದಲ್ಲಿ ಸಮಾನ ಪ್ರಮಾಣದ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಿದರೆ ಕ್ರಮೇಣ ಕೆಮ್ಮುಮತ್ತು ಕಫ ಕಡಿಮೆಯಾಗುತ್ತದೆ. ಜೊತೆಗೆ ಜ್ವರ, ನೆಗಡಿಯಿಂದ ನಿಮ್ಮನ್ನು ಪಾರು ಮಾಡುತ್ತದೆ.

4. ಜೀರ್ಣ ಕ್ರಿಯೆಯನ್ನು ಹೆಚ್ಚಿಸುವ ತುಂಬೆ ಗಿಡ:-

ಅಜೀರ್ಣಕ್ಕೆ ಚಿಕಿತ್ಸೆಯಾಗಿ ನೀವು ದ್ರೋಣಪುಷ್ಪವನ್ನು ಸೇವಿಸಬಹುದು. ದ್ರೋಣಪುಷ್ಪಿ ಎಲೆಗಳ ಸೊಪ್ಪಿನಂತೆ ತಯಾರಿಸಿ ತಿನ್ನಿ. ಇದು ಅಜೀರ್ಣದಲ್ಲಿ ಪ್ರಯೋಜನಕಾರಿಯಾಗಿದೆ ಮತ್ತು ಹಸಿವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲದೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ದೂರ ಮಾಡುತ್ತದೆ.

5. ರಕ್ತಹೀನತೆ – ಕಾಮಾಲೆಗೆ ಚಿಕಿತ್ಸೆ ನೀಡುವ ತುಂಬೆ:-

ವಯಸ್ಸಾದಂತೆ ಬಹಳಷ್ಟು ಕಾಯಿಲೆಗಳು ನಮ್ಮನ್ನು ಆವರಿಸಿಬಿಡುತ್ತದೆ. ಇತಂಹ ಕಾಯಿಲೆಗಳಲ್ಲಿ ರಕ್ತಹೀನತೆ ಮತ್ತು ಕಾಮಲೆ ಕೂಡ ಸೇರಿವೆ. ಈ ಕಾಯಿಲೆಗಳಿಗೆ ತುಂಬೆ ಗಿಡ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಒಂದೇ ಸಲ ಸೇವಿಸುವ ಬದಲು ತಿಂಗಳಿಗೊಮ್ಮೆ ಕೆಲವಷ್ಟು ಹನಿಗಳ ರೂಪದಲ್ಲಿ ತೆಗೆದುಕೊಳ್ಳುವುದು ಉತ್ತಮ. ಮಿಲಿ ರಸದಲ್ಲಿ ಸಮಾನ ಪ್ರಮಾಣದ ಜೇನುತುಪ್ಪವನ್ನು ಬೆರೆಸಿ ಅದನ್ನು ಬಳಸಬೇಕು. ದ್ರೋಣಪುಷ್ಪದ 5-10 ಮಿಲಿ ರಸದಲ್ಲಿ 500 ಮಿಗ್ರಾಂ ಕರಿಮೆಣಸಿನ ಪುಡಿ ಮತ್ತು ಕಲ್ಲು ಉಪ್ಪನ್ನು ಮಿಶ್ರಣ ಮಾಡಿ. ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ರಕ್ತಹೀನತೆ ಮತ್ತು ಕಾಮಾಲೆಗೆ ಪ್ರಯೋಜನಕಾರಿಯಾಗಿದೆ.

6. ಲಿವರ್‌ಗೆ ತುಂಬಾ ಒಳ್ಳೆಯದು:-

ಮನುಷ್ಯನ ಅನೇಕ ಆರೋಗ್ಯ ಸಮಸ್ಯೆಗಳಲ್ಲಿ ಲಿವರ್ ಅಂದರೆ ಯಕೃತ್ತು ಸಮಸ್ಯೆಗಳು ಕೂಡ ಒಂದಾಗಿವೆ. ಈ ಸಮಸ್ಯೆಗಳು ಮಾನವ ಜೀವವನ್ನೇ ಬಲಿ ಪಡೆಯಬಹುದು. ಆದರೆ ವೈದ್ಯರ ಸಲಹೆ ಮೇರೆಗೆ ತುಂಬೆ ಗಿಡವನ್ನು ನಿತ್ಯ ಸೇವನೆಯಿಂದಾಗ ನಿಮ್ಮ ಲಿವರ್ ಕಾಪಾಡಿಕೊಳ್ಳಬಹುದು. ದ್ರೋಣ ಪುಷ್ಪ ಬೇರಿನ ಪುಡಿ ಯಕೃತ್ತು ಅಸ್ವಸ್ಥತೆಯನ್ನು ದೂರ ಮಾಡುತ್ತದೆ. ತುಂಬೆ ಗಿಡದ ಬೇರಿನ ಪುಡಿಯನ್ನು 1-2 ಗ್ರಾಂ ಪ್ರಮಾಣದಲ್ಲಿ ಸೇವಿಸುವುದು ಯಕೃತ್ತು ಅಸ್ವಸ್ಥತೆಗಳನ್ನು ದೂರ ಮಾಡಬಹುದು.

7. ತುಂಬೆ ಗಿಡದೊಂದಿಗೆ ಸಂಧಿವಾತದ ಚಿಕಿತ್ಸೆ:-

ತುಂಬೆ ಗಿಡದ ಕಷಾಯವನ್ನು ಕುಡಿದರೆ ಸಂಧಿವಾತ ವಾಸಿಯಾಗುತ್ತದೆ. ತುಂಬೆ ಗಿಡದ ಬೇರಿನ ಪುಡಿಯೊಂದಿಗೆ 1-2 ಗ್ರಾಂ ಕಾಳುಮೆಣಸಿನ ಪುಡಿಯನ್ನು 10-30 ಮಿ.ಲೀ ಕಷಾಯದಲ್ಲಿ ಬೆರೆಸಿ ಕುಡಿದರೆ ಸಂಧಿವಾತ ದೂರವಾಗುತ್ತದೆ.

8. ತುಂಬೆ ಗಿಡ ಚರ್ಮದ ತುರಿಕೆಗೆ ಆಯುರ್ವೇದ ಔಷಧ:-

ತುಂಬೆ ಗಿಡ ಚರ್ಮದ ತುರಿಕೆಗೆ ಆಯುರ್ವೇದ ಔಷಧಿಯಾಗಿದೆ. ಎಲೆಗಳ ರಸ ಅಥವಾ ಪೇಸ್ಟ್ ಅನ್ನು ಚರ್ಮಕ್ಕೆ ಅನ್ವಯಿಸಿದರೆ ತಕ್ಷಣ ತುರಿಕೆ ಮಾತ್ರವಲ್ಲದೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಇದು ಗಾಯಗಳನ್ನೂ ಗುಣಪಡಿಸುವ ಶಕ್ತಿಯನ್ನು ಹೊಂದಿದೆ.

9.ನಿದ್ರಾಹೀನತೆಗೆ ತುಂಬೆ ಗಿಡದ ಪ್ರಯೋಜನಗಳು:-

ನಿದ್ರಾಹೀನತೆಯ ಸಮಸ್ಯೆ ಇರುವವರಿಗೆ ತುಂಬೆ ಗಿಡಿ ಉತ್ತಮ ಔಷಧಿಯಾಘಿದೆ. ಅನೇಕ ಆಯುರ್ವೇದಾಚಾರ್ಯರು ಇದನ್ನು ಬಳಸುತ್ತಾರೆ. ದ್ರೋಣಪುಷ್ಪಿ ಬೀಜಗಳ 10-20 ಮಿಲಿ ಕಷಾಯವನ್ನು ತೆಗೆದುಕೊಂಡರೆ ಇದರಿಂದ ಒಳ್ಳೆಯ ನಿದ್ದೆ ಬರುತ್ತದೆ.

10. ನರಗಳಿಗೆ ಸಂಬಂಧಿಸಿದ ಕಾಯಿಲೆಗಳಲ್ಲಿ ತುಂಬೆ ಗಿಡ ಪ್ರಯೋಜನಕಾರಿ

ನರಗಳಿಗೆ ಸಂಬಂಧಿಸಿದ ಕಾಯಿಲೆಗಳಲ್ಲಿ ತುಂಬೆ ಗಿಡ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದಕ್ಕೆ ತುಂಬೆ ಗಿಡದ ಎಲೆಗಳ ಕಷಾಯ ಮಾಡಿ ಕುಡಿದರೆ ನರಗಳ ಸೆಳೆತ, ಗಂಟು ಕಟ್ಟುವುದು, ನೋವು ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

11.ಮಲೇರಿಯಾ ಜ್ವರದ ವಿರುದ್ಧ ಹೋರಾಡಲು:-

ತುಂಬೆ ಮಳೆಗಾಲದಲ್ಲಿ ಅನೇಕ ಕಾಯಿಲೆಗಳು ನಮ್ಮನ್ನು ಆವರಿಸುತ್ತವೆ. ಈ ಸಂದರ್ಭದಲ್ಲಿ ತುಂಬೆ ಗಿಡ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಎಲೆಗಳ 5 ಮಿಲಿ ರಸದಲ್ಲಿ 1 ಗ್ರಾಂ ಕರಿಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ. ಇದನ್ನು ಸೇವಿಸುವುದು ಮಲೇರಿಯಾ ಜ್ವರಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ತುಂಬೆ ಗಿಡದಿಂದಾಗುವ ಅಡ್ಡ ಪರಿಣಾಮಗಳು: 2022 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ತುಂಬೆ ಗಿಡ CNS (ಕೇಂದ್ರ ನರಮಂಡಲ ) ಖಿನ್ನತೆಗೆ ಕಾರಣವಾಗಬಹುದು ಅಥವಾ ಮೆದುಳಿನ ಚಟುವಟಿಕೆಯನ್ನು ನಿಧಾನಗೊಳಿಸಬಹುದು ಎಂದು ಕಂಡುಹಿಡಿದಿದೆ. ಇದು ವಾಕರಿಕೆ, ವಾಂತಿ, ಕಡಿಮೆ ಹೃದಯ ಬಡಿತ ಮತ್ತು ಉಸಿರಾಟ, ಗೊಂದಲ ಮತ್ತು ಮೆಮೊರಿ ನಷ್ಟಕ್ಕೆ ಕಾರಣವಾಗಬಹುದು. ನಾನಾ ಔಷಧಿಯ ಗುಣಗಳನ್ನು ಹೋಮದಿರುವ ತುಂಬೆ ಗಿಡದ ಸೇವನೆಯಿಂದ ಯಾವುದೇ ಪ್ರತಿಕೂಲ ಪ್ರತಿಕ್ರಿಯೆಗಳನ್ನು ಅನುಭವಿಸಿದರೆ, ಅದರ ಸೇವನೆಯನ್ನು ನಿಲ್ಲಿಸಲು ಸಲಹೆ ನೀಡಲಾಗುತ್ತದೆ. ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಅಲ್ಲದೆ ಇದನ್ನು ಆಯುರ್ವೇದ ವೈದ್ಯರ ಸಮಹೆಯ ಮೇರೆಗೆ ತೆಗೆದುಕೊಳ್ಳುವುದು ಸರಿಯಾದ ಮಾರ್ಗವಾಗಿದೆ.

 

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X