MOVIES

ಏಳು ರೋಮಾಂಚನಕಾರಿ ನೈಜ ಘಟನೆಗಳ ವೆಬ್ ಸೀರೀಸ್ – Top 7 interesting web series

ನಿಜ ಜೀವನದ ಮೇಲೆ ಆಧಾರಿತ ಈ 7 ವೆಬ್ ಸೀರೀಸ್ (ಸಿನಿಮಾಗಳು) ನೀವು ನೋಡಲೇಬೇಕು. ಯಾಕೆಂದರೆ ರೋಮಾಂಚನಕಾರಿ ಮತ್ತು ಸತ್ಯ ಘಟನೆಗಳ ಮೇಲೆ ಆಧಾರಿತ ಹಾಗೂ ನೈಜವಾಗಿ ನಟನೆ ಮಾಡಿದ ಸಿನಿಮಾಗಳಾಗಿವೆ.

ಹಾಗಿದ್ದರೆ ಯಾವ ಸಿನಿಮಾಗಳು ಮೊದಲ ಏಳು ಸ್ಥಾನದಲ್ಲಿವೆ ಬನ್ನಿ ನೋಡೋಣ

ಸೆಕ್ಟರ್ ಛತ್ತೀಸ್ (36 )(Sector 36)

ಇದು ಒಂದು ಸೀರಿಯಲ್ ಕಿಲ್ಲರ್ ವ್ಯಕ್ತಿಯ ಮೇಲೇ ಬರೆಯಲಾಗಿದೆ 2005 ಮತ್ತು 2006 ರಲ್ಲಿ ತೆಗೆದ ಈ ಸಿನಿಮಾದಲ್ಲಿ ಪ್ರೇಮ್ ಎಂಬ ಮುಖ್ಯ ಪಾತ್ರವನ್ನು ವಿಕ್ರಾಂತ್ ಮೆಸ್ಸಿ ಅದ್ಭುತವಾಗಿ ನಟಿಸಿದ್ದಾರೆ.

ಈ ಸಿನಿಮಾದಲ್ಲಿ ನೊಯಿಡಾದ ಸೆಕ್ಟರ್ 36 ನ ಮಕ್ಕಳನ್ನು ಅಪಹರಿಸಿ ಅವರನ್ನು ಕೊಲೆ ಮಾಡುತ್ತಾನೆ. ಇಲ್ಲಿ ಕೆಲಸ ಮಾಡುವ ಯಾವ ಪೊಲೀಸ್ ಸಿಬ್ಬಂದಿಗಳು ಮೊದಲಿಗೆ ಈ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಯಾವಾಗ ಅಲ್ಲಿಯ ಒಬ್ಬ ಪೊಲೀಸ್ ಸಿಬ್ಬಂದಿಯಾದ ರಾಮ್ ಚರಣ್ ಅವರ ಮಗಳನ್ನೇ ಎತ್ತಿಕೊಂಡು ಹೋಗುವ ಪ್ರಯತ್ನ ನಡೆಸುತ್ತಾನೆ ಆಗ ಈ ಪೊಲೀಸ್ ಕೊಲೆಗಾರನನ್ನು ಹಿಡಿಯುವ ಶಪಥ ಮಾಡುತ್ತಾನೆ. ಈಗ ಪೊಲೀಸ್ ಅವನನ್ನು ಹೆಡೆ ಮುರಿ ಕಟ್ಟುವಲ್ಲಿ ಯಶಸ್ವಿಯಾಗುತ್ತಾನೆಯೇ ಇಲ್ಲವೇ ಎಂಬುದು ಕುತೂಹಲಕಾರಿ.

ಇದರ ನಂತರ ಬರುವ ಸೀರೀಸ್ ಖಾಖಿ (Khakhi)

ಇದು ಒಂದು ಕ್ರೈಂ ಥ್ರಿಲ್ಲರ್ ಸೀರೀಸ್ ಆಗಿದ್ದು ಇದನ್ನು ಅಶೋಕ್ ಮಾತೋ ಎಂಬ ವ್ಯಕ್ತಿಯ ಕ್ರಿಮಿನಲ್ ಕೆಲಸಗಳ ಮೇಲೇ ಬರೆಯಲಾಗಿದೆ. ಆ ಟ್ರೂ ಸ್ಟೋರಿ ಆ ಹೌ ಬಿಹಾರ್ಸ್ ಮೋಸ್ಟ್ ಕ್ರಿಮಿನಲ್ ವಾಸ್ ಕಾಟ್ ( A true story of how Bihar’s criminal was caught) ಎಂದು ಬರೆದಿರುವ ಪುಸ್ತಕದಿಂದ  ಆರಿಸಿ  ಚಿತ್ರಿಸಲಾಗಿದೆ. ಈ ಪುಸ್ತಕವನ್ನು ಅಮಿತ್ ಲೋಧಾ ಎಂಬ ಪೊಲೀಸ್ ಅಧಿಕಾರಿಯೊಬ್ಬರು ಬರೆದಿರುವ ಪುಸ್ತಕವಾಗಿದೆ.  ನೆಟ್ ಫ್ಲಿಕ್ಸ್ನಲ್ಲಿ ಕಾಣ ಸಿಗುವ ಈ ಸಿನಿಮಾ ನಳಂದ ಷೇಖ್ಪುರ್ ಮತ್ತು ಪಾಟ್ನಾ ಜಿಲ್ಲೆಯ ಅತ್ಯಂತ ನಟೋರಿಯಸ್ ಗ್ಯಾಂಗ್ ಒಂದನ್ನು ಹೇಗೆ ಹಿಡಿದು ಹೆಡೆ ಮುರಿ ಕಟ್ಟತ್ತಾರೆ ಎಂಬುದನ್ನು ನೋಡಬಹುದು.

ಮೂರನೇ ಸಿರೀಸ್ ‘ಜಾಮ್ತಾರಾ’ (ಸಬಿಕ ನಂಬರ್ ಆಯೇಗಾ)

ಇದೊಂದು ಕ್ರೈಂ ಮತ್ತು ಡ್ರಾಮಾ ಸೀರೀಸ್. ಇದು ಝಾರ್ಖಂಡ್ ನ ಅತ್ಯಂತ ಸಣ್ಣದಾದ ಸ್ಥಳದಲ್ಲಿ ನಡೆಯುವ ಸ್ಕ್ಯಾಮ್ ಮತ್ತು ಫಿಶಿಂಗ್ ಎಂದು ಇತೀಚಿಗೆ ಎಲ್ಲಾ ಕಡೆ ನಡೆಯುವ ಆನ್ಲೈನ್ ಫ್ರಾಡ್ ಗಳ ಮೇಲೇ ಆದರಿಸಿ ಚಿತ್ರಿಸಲಾಗಿದೆ. ಇದರಲ್ಲಿ ರಾಕಿ ಮತ್ತು ಸನ್ನಿ ಎಂಬ ಇಬ್ಬರು ಅಣ್ಣ ತಮ್ಮಂದಿರು ಸೇರಿ ಅತ್ಯಂತ ಚಾಣಾಕ್ಷತೆಯಿಂದ ಜನರನ್ನು ಏಮಾರಿಸಿ ಬಲೆಗೆ ಹಾಕಿ ಕೊಳ್ಳುತ್ತಾರೆ. ಈ ಮದ್ಯದಲ್ಲಿ ಕೆಟ್ಟ ರಾಜಕಾರಣಿಯೊಬ್ಬ ಇವರ ಕುಕೃತ್ಯಗಳ ಭಾಗವಾಗಲು ಬಯಸುತ್ತಾನೆ. ಈಗ ಎಲ್ಲವು ಮೇಲೇ ಕೆಳಗೆ ಆಗಲು ಶುರುವಾಗಿ ಒಬ್ಬ ಪೊಲೀಸ್ ಅಧಿಕಾರಿ ಇವರ ಮೇಲೇ ತನಿಖೆ ಶುರು ಮಾಡಲು ಶುರು ಮಾಡುತ್ತಾನೆ. ಈ ಸಿನಿಮಾದಲ್ಲಿ ಅತ್ಯಂತ ನೈಜವಾದ ನಟನೆಗಳನ್ನೇ ನೋಡಬಹುದಾಗಿದೆ.

ನಾಲ್ಕನೇ ಸಿರೀಸ್ ‘ರಾಕೆಟ್ ಬಾಯ್ಸ್’

ಈ ಸೀರೀಸ್ ಇಬ್ಬರು ವಿಜ್ಞಾನಿಗಳಾದ ಡಾಕ್ಟರ್ ಹೋಮಿ ಜೆ ಬಾಬಾ ಮತ್ತು ಡಾಕ್ಟರ್ ವಿಕ್ರಂ ಸಾರ ಬಾಯಿ ಇವರ ಮೇಲೆ ಆಧಾರಿತವಾಗಿದೆ , ಅವರು ನ್ಯೂಕ್ಲಿಯರ್ ಪ್ರೋಗ್ರಾಮ್ ಮತ್ತು ಸ್ಪೇಸ್ ಪ್ರೋಗ್ರಾಮ್ ಮಾಡಿದ್ದಾರೆ. ಈ ಸಿರೀಸ್ ನಲ್ಲಿ ವಿಜ್ಞಾನಿಗಳು ಯಾವ ರೀತಿಯಾಗಿ ಜಾಗತಿಕ ಬೆದರಿಕೆಯಿಂದ ದೇಶವನ್ನು ಕಾಪಾಡಲು ಮೊದಲ ನ್ಯೂಕ್ಲಿಯರ್ ಪರೀಕ್ಷೆಯನ್ನು ಮಾಡಲಾಯಿತು ಎಂಬುದರ ಬಗ್ಗೆ ವಿವರಿಸಲಾಗಿದೆ. ಈ ಸೀರೀಸ್ನಲ್ಲಿ ಎರಡು ಭಾಗಗಳಿವೆ ಮೊದಲನೇ ಭಾಗದಲ್ಲಿ ಯಾವ ರೀತಿಯಾಗಿ ಮೊದಲ ರಾಕೆಟ್ ಉಡಾವಣೆ ಮಾಡಲಾಯಿತು ಮತ್ತು ಎರಡನೇ ಭಾಗದಲ್ಲಿ ಭಾರತವನ್ನು ಹೇಗೆ ನ್ಯೂಕ್ಲಿಯರ್ ದೇಶವನ್ನಾಗಿ ಮಾಡಲಾಯಿತು ಎಂಬುದರ ಬಗ್ಗೆ ಹೇಳಲಾಗಿದೆ.

ಐದನೆಯ ಸೀರೀಸ್ ‘ದಿ ರೈಲ್ವೆ ಮೆನ್’ (The Railway Men)

ಭೋಪಾಲ್ ಫ್ಯಾಕ್ಟರಿ ಯಲ್ಲಿ ಆದ ಗ್ಯಾಸ್ ಲೀಕ್ ನ ಸತ್ಯ ಘಟನೆಗೆ ಆಧರಿಸಿ ಇದನ್ನು ಚಿತ್ರೀಕರಿಸಲಾಗಿದೆ. ಈ ಸೀರೀಸ್ ನ್ನು ನಾಲ್ಕು ಭಾಗಗಳಾಗಿ ಮಾಡಲಾಗಿದ್ದು ಇದರಲ್ಲಿ ದುಃಖದ ಸಂಗತಿಯ ಆ ಭಾಗವನ್ನು ತೋರಿಸಲಾಗಿದೆ. ಭಾರತೀಯ ರೈಲ್ವೆ ಭೋಪಾಲ್ ಕಾರ್ಮಿಕರು ತಮ್ಮ ಜೀವವನ್ನು ಪಣಕ್ಕಿಟ್ಟು ಹೇಗೆ ಗ್ಯಾಸ್ ಲೀಕ್ ನಲ್ಲಿ ಸಿಲುಕಿರುವವರ ಸಹಾಯವನ್ನು ಮಾಡುತ್ತಾರೆ. ಸ್ಟೇಷನ್ ಮಾಸ್ಟರ್ ನಿಂದ ಜಿ ಎಂ ವರೆಗೂ ಗ್ಯಾಸ್ ಲೀಕ್ ನಲ್ಲಿ ಸಿಲುಕಿರುವವರ ಜೀವವನ್ನು ರಕ್ಷಿಸಿದರು. ನಟ ರಾದ ಕೆ ಕೆ ಮೆನನ್ , ಆರ್ ಮಾಧವನ್, ಬ್ಯಾಬಿಲ್ ಖಾನ್, ಡಿಬೆಂದು ಶರ್ಮ ಅವರ ಜೊತೆಗೆ ಜೂಹಿ ಚಾವ್ಲಾ ಅವರು ಕೂಡ ರಿಯಲ್ ಆಗಿ ನಟನೆ ಮಾಡಿದ್ದಾರೆ.

ಆರನೆಯ ಸೀರೀಸ್  ‘ಸ್ಕ್ಯಾಮ್ 1992’  (Scam 1992)

ಈ ಸೀರೀಸ್ ನಲ್ಲಿ 1992 ರಲ್ಲಿ ನಡೆದ ಸ್ಟಾಕ್ ಮಾರ್ಕೆಟ್ ಸ್ಕ್ಯಾಮ್ ನಲ್ಲಿ ಇದ್ದ ಹರ್ಷದ್ ಮೆಹ್ತಾ ಮೇಲೆ ಆಧಾರಿತವಾಗಿದೆ. ಇದರಲ್ಲಿ ಹರ್ಷದ್ ಮೆಹ್ತಾ ಜೀವನದ ಯಶಸ್ಸು ಮತ್ತು ಅವನತಿ ಬಗ್ಗೆ ವಿವರವಾಗಿ ಉಲ್ಲೇಖಿಸಲಾಗಿದೆ. ಈ ಸೀರೀಸ್ ನ ಕೆಲವು ಸಂಭಾಷಣೆಗಳು ತುಂಬಾ ಜನಪ್ರಿಯವಾಗಿದೆ ಮತ್ತು ಎಲ್ಲಾ ನಟರು ಉತ್ತಮವಾದ ಪ್ರದರ್ಶನ ವನ್ನು ನೀಡಿದ್ದಾರೆ. ನಟ ಪ್ರತೀಕ್ ಗಾಂಧಿ ಅರ್ಷದ್ ಮೆಹ್ತಾ ಅವರ ಪಾತ್ರವನ್ನು ಮಾಡಿದ್ದಾರೆ.

ಏಳನೇ ಸೀರೀಸ್ ‘ಮುಂಬೈ ಡೈರೀಸ್ 26 / 11’ (Mumbai Diaries 26/11)

ಈ ಸೀರೀಸ್ ಒಂದು ಮೆಡಿಕಲ್ ಥ್ರಿಲ್ಲರ್ ಆಗಿದೆ ಮತ್ತು ಅದನ್ನು ಸರ್ಕಾರಿ ಆಸ್ಪತ್ರೆಯ ಮೆಡಿಕಲ್ ರೂಮಿ ನಲ್ಲಿ ಚಿತ್ರಿಸಲಾಗಿದೆ. ಇದು ಮುಖ್ಯವಾಗಿ ಮೆಡಿಕಲ್ ಡಾಕ್ಟರ್ ಗಳು ಹಾಗು ಸಹಾಯಕ ಸ್ಟಾಫ್ ಗಳು ಯಾವ ರೀತಿ ಮೆಡಿಕಲ್ಎಮರ್ಜೆನ್ಸಿ ಗಳನ್ನು ನಿಭಾಯಿಸುತ್ತಾರೆ ಎಂಬುದರ ಬಗ್ಗೆ ಹೇಳಲಾಗಿದೆ.

ಈ ಸೀರೀಸ್ ನಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ 2008 ರಲ್ಲಿ ನಡೆದ ಮುಂಬೈ ದಾಳಿಯ ಮೇಲೆ ಆಧಾರಿತವಾಗಿದೆ ಮತ್ತು ಎರಡನೇ ಭಾಗದಲ್ಲಿ ಮುಂಬೈ ನಲ್ಲಿ ನಡೆದ ಪ್ರವಾಹದಲ್ಲಿ ಮೆಡಿಕಲ್ ಸಿಬ್ಬಂದಿಗಳ ಹೋರಾಟವನ್ನು ವಿವರಿಸಲಾಗಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X