Bigg Boss: ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಜಗಳ, ಕಾಲೆಳೆತ ಸಾಮಾನ್ಯ ವಿಷಯ, ಆದರೆ ಯಾರಿಗೂ ಹಲ್ಲೆ ಮಾಡುವ ಹಾಗಿಲ್ಲ ಎಂದು ಬಿಗ್ ಬಾಸ್ ನಿಯಮಗಳಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಈ ನಿಯಮವನ್ನು ಆಗಾಗ್ಗೆ ಸ್ಪರ್ದಿಗಳು ಉಲ್ಲಂಘಿಸುತ್ತಾರೆ. ಇದೀಗ ಬಿಗ್ ಬಾಸ್ ಮರಾಠಿ ಯಲ್ಲಿ ಇಬ್ಬರು ಸ್ಪರ್ದಿಗಳು ಕೈ ಕೈ ಮಿಲಾಯಿಸಿ ಕಪಾಳ ಮೋಕ್ಷ ಮಡಿದ ಘಟನೆ ನಡೆದಿದೆ.
ಬಿಗ್ಬಾಸ್ ಮನೆಯಲ್ಲಿ ಸಣ್ಣ ಸಣ್ಣ ಜಗಳಗಳು ನಡೀತಾ ಇರುತ್ತವೆ, ಇಂತಹ ಜಗಳ ಗಳಿಂದಲೇ ಈ ಶೋ ಜನಪ್ರಿಯವಾಗಲು ಕಾರಣ. ಆದರೆ ಬಿಗ್ಬಾಸ್ ಮನೆಯ ನಿಯಮದ ಪ್ರಕಾರ ಯಾರು ಸಹ ಮನೆಯಲ್ಲಿ ಒಂದು ಪ್ರಮುಖವಾದ ನಿಯಮವಿದೆ. ಮನೆಯಲ್ಲಿ ಯಾರೂ ಸಹ ಮತ್ತೊಬ್ಬ ಸ್ಪರ್ಧಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡುವ ಹಾಗಿಲ್ಲ.ಆದರೂ ಅನೇಕ ಸಲ ಈನಿಯಮಗಳ ಉಲ್ಲಂಘನೆ ಯಾಗುತ್ತದೆ.ಇದೇ ಕಾರಣಕ್ಕೆ ಕೆಲ ಸದಸ್ಯರನ್ನು ಮನೆಯಿಂದ ಹೊರ ಹಾಕಲಾಗಿದೆ.ಇದೀಗ ಮತ್ತೆ ಬಿಗ್ಬಾಸ್ ಮರಾಠಿ ಸೀಸನ್ ನಲ್ಲಿ ಇಂತಹದೇ ಘಟನೆ ಮರುಕಳಿಸಿದೆ ,ಜನಪ್ರಿಯ ನಟಿಯ ಮೇಲೆ ಸಹ ಸ್ಪರ್ಧಿ ಕಪಾಳಮೋಕ್ಷ ಮಾಡಿದ್ದಾರೆ.
ಬಿಗ್ಬಾಸ್ ಮರಾಠಿ ಐದನೇ ಸೀಸನ್ ತಿಂಗಳ ಹಿಂದೆ ಪ್ರಾರಂಭವಾಗಿದೆ. ಶೋ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತಿದೆ. ಖ್ಯಾತ ಬಾಲಿವುಡ್ ನಟ, ಮರಾಠಿ ಸಿನಿಮಾಗಳಲ್ಲಿಯೂ ನಟಿಸಿರುವ ರಿತೇಶ್ ದೇಶ್ಮುಖ್ ಈ ಬಾರಿಯ ಸೀಸನ್ ಅನ್ನು ನಿರೂಪಣೆ ಮಾಡುತ್ತಿದ್ದಾರೆ. ಶೋನಲ್ಲಿ ಮರಾಠಿ ಚಿತ್ರರಂಗ, ಧಾರಾವಾಹಿ ಮಾತ್ರವಲ್ಲದೆ ಕೆಲ ಬಾಲಿವುಡ್ ನಟಿಯರನ್ನೂ ಸೇರಿಸಲಾಗಿದೆ. ಅವರಲ್ಲಿ ಒಬ್ಬರು ಗ್ಲಾಮರಸ್ ನಟಿ ನಿಕ್ಕಿ ತಾಂಬೋಲಿ.
ನಿಕ್ಕಿ ತಾಂಬೋಲಿ ಬಿಗ್ಬಾಸ್ ಮನೆಗೆ ಬಂದಾಗಿನಿಂದಲೂ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗಿತ್ತಲೇ ಇದ್ದಾರೆ . ಮಾತ್ರವಲ್ಲದೆ ಬಿಗ್ಬಾಸ್ನ ಸಹ ಸ್ಪರ್ದಿಗಳೊಂದಿಗೆ ಆಗಾಗ್ಗೆ ಗಲಾಟೆ ಮಾಡಿಕೊಂಡೆ ಇರುತ್ತಾರೆ. ಇತ್ತೀಚೆಗೆ ನಡೆದ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಮ್ಯಾಜಿಕ್ ಡೈಮಂಡ್ ಅನ್ನು ಉಳಿಸಿಕೊಳ್ಳುವ ಸಂದರ್ಭದಲ್ಲಿಆರ್ಯಾ, ಕೋಣೆಯ ಬಾಗಿಲು ಭದ್ರ ಮಾಡಿಕೊಂಡಿದ್ದರು, ನಿಕ್ಕಿ ಅದನ್ನು ತೆರೆಯುವ ಪ್ರಯತ್ನ ಮಾಡುವಾಗ . ನಿಕ್ಕಿಯ ಗೆಳೆಯ ಅರ್ಬಾಜ್ ಬಂದು ನಿಕ್ಕಿಗೆ ಸಹಾಯ ಮಾಡಿ ಆರ್ಯಾ ಹಿಡಿದಿದ್ದ ಡೋರ್ ತೆರೆದಿದ್ದಾನೆ , ನಿಕ್ಕಿ ಕೋಣೆಯ ಒಳಗೆ ಹೋಗಿ ಇನ್ನೇನು ನಿಕ್ಕಿ ಗೆದ್ದಳು ಎಂದುಕೊಳ್ಳುವಾಗ ಕೋಪಗೊಂಡ ಆರ್ಯ ನಿಕ್ಕಿಗೆ ಕಪಾಳ ಮೋಕ್ಷ ಮಾಡಿದ್ದಾಳೆ.
ಆರ್ಯಾಳಿಂದ ಏಟು ತಿಂದ ನಿಕ್ಕಿ ತಾಂಬೋಲಿ ಕೂಡಲೇ ಕ್ಯಾಮರಾ ಗಳ ಮುಂದೆ ಬಂದು ಆರ್ಯ ಬಿಗ್ ಬಾಸ್ ನಿಯಮಗಳ ಉಲ್ಲಾಘನೆ ಮಾಡಿದ್ದಾಳೆ ಕೂಡಲೇ ಅವಳ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಬಿಗ್ ಬಾಸ್ ನಲ್ಲಿ ಮನವಿ ಮಾಡಿಕೊಂಡಿದ್ದಾಳೆ.
ಈ ನಿಯಮ ಉಲ್ಲಂಘನೆಯನ್ನು ಗಂಭೀರ ವಾಗಿ ಪರಿಗಣಿಸದ ಬಿಗ್ ಬಾಸ್ ಅವರ ನಿಯಮದಂತೆ ಆರ್ಯ ಇವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಿದ್ದಾರೆ.
Leave feedback about this