ಒಬ್ಬ ಯುವಕನಿಗೆ ನೇಣುಗಂಬದ ಶಿಕ್ಷೆ ಆಗಿತ್ತು. ಇನ್ನೇನು ಮೂರೇ ಮೂರು ದಿನಗಳಲ್ಲಿ ಅವನನ್ನು ನೇಣಿಗೆ ಹಾಕಬೇಕು. ಜೈಲ್ನಲ್ಲಿ ಇದ್ದ ಜೈಲರ್ ನಿಯಮದ ಪ್ರಕಾರ ಯುವಕನ ಕೊನೆಯ ಆಸೆಯನ್ನ ಕೇಳ್ತಾರೆ.
ಯುವಕ ಕೇಳ್ತಾನೆ “ನಿಜವಾಗ್ಲೂ ನೀವು ನನ್ನ ಆಸೆಯನ್ನ ಪೂರೈಸ್ತಿರಾ?”.
“ಹಾಂ ಹಾಂ ಯಾಕಿಲ್ಲ? ಎಲ್ಲರ ಕೊನೆಯ ಇಚ್ಛೆ ನಾವು ಖಂಡಿತ ಪೂರೆಯಿಸುತ್ತೇವೆ. ನಿಂದು ಅಸೆ ಕೂಡ. ಹೇಳು ನಿನ್ನ ಕೊನೆಯ ಆಸೆ ಏನು ?” ಜೈಲರ್ ತನ್ನ ಪ್ರಶ್ನೆ ಮುಗಿಸುತ್ತಿದ್ದಂತೆ ಆ ಕೈದಿ ಯುವಕ ಕೇಳಿದ ಕೊನೆಯ ಅಸೆ ಕೇಳಿ ಜೈಲರ್ ಗೆ ತಲೆ ಸುತ್ತು ಬಂದು ಬಿಡುತ್ತೆ.
ಜೈಲರ್ ಗೆ ಈ ತರ ಒಂದು ಆಸೆಯ ಬೇಡಿಕೆ ಬರಬಹುದು ಎಂಬ ಕಿಂಚಿತ್ತೂ ಅಂದಾಜು ಇರಲಿಲ್ಲ. ಆ ಯುವಕ ತನ್ನ ಹೆಂಡತಿಯ ಜೊತೆ ಒಂದು ರಾತ್ರಿ ಕಳೆಯಬೇಕೆಂದು ಆಸೆಯನ್ನು ಮುಂದಿಡುತ್ತಾನೆ.
ಇದು ತುಂಬಾನೇ ಅಸಾಧ್ಯ ಅನಿಸಿತು ಜೈಲರ್ ಗೆ.
“ಆದರೆ ಸಾಯುವ ವ್ಯಕ್ತಿಯ ಕೊನೆಯ ಆಸೆಗೆ ಮರ್ಯಾದೆ ಕೊಟ್ಟು ಅವನ ಹೆಂಡತಿಗೆ ಒಂದು ಸಂದೇಶ ಕಳಿಹಿಸಲಾಗುತ್ತೆ. “ನಿನ್ನ ಗಂಡನಿಗೆ ನೇಣು ಶಿಕ್ಷೆಯಾಗಿದೆ. ನಿನ್ನ ಗಂಡ ಸಾಯುವ ಮೊದಲು ಒಂದು ರಾತ್ರಿ ನಿನ್ನೊಡನೆ ಕಳೆಯಬೇಕೆನ್ನುತ್ತಿದ್ದಾನೆ.”…………………..
ಹೌದು ……………ಈ ಘಟನೆ ನಡೆದದ್ದು ಉತ್ತರ ಪ್ರದೇಶದ ಅಲಿಘರ್ ಜಿಲ್ಲೆಯಲ್ಲಿ. ಇಬ್ಬರು ಒಳ್ಳೆಯ ಗೆಳೆಯರು. ಒಬ್ಬನು ಪ್ರಮೋದ್ ಇನ್ನೊಬ್ಬ ಸುಬೋದ್. ಇಬ್ಬರು ಒಟ್ಟೊಟ್ಟಿಗೆ ಒಂದೇ ಊರಲ್ಲಿ ಬೆಳೆದು ಓದಿ ಬೇರೊಂದು ಪಟ್ಟಣಕ್ಕೆ ಕೆಲಸ ಮಾಡಲೂ ಒಟ್ಟಿಗೆ ಹೋಗುತ್ತಾರೆ.
ಕೆಲಸ ಮಾಡುವಾಗಲೂ ಒಟ್ಟಿಗೆ ಒಂದೇ ಕಡೆ ವಾಸಿಸುವುದು ತಿನ್ನುವುದು ಕುಡಿಯುವುದು ಎಲ್ಲಾ ಒಟ್ಟಿಗೆ ನಡೆಯುತ್ತಿತ್ತು. ಸ್ವಲ್ಪ ಸಮಯ ಕಳೆದ ನಂತರ ಅವರ ಕಂಪನಿಯಲ್ಲಿ ಕೆಲಸ ಮಾಡುವ ಯುವತಿ ಸುಬೋದ್ನೊಂದಿಗೆ ಅತೀವ ಸಲುಗೆಯಿಂದ ವರ್ತಿಸಲು ಶುರುವಿಡುತ್ತಾಳೆ.
ಈ ಕಡೆ ಇದನ್ನು ಗಮನಿಸಿದ ಪ್ರಮೋದ್ ಆ ಯುವತಿಯನ್ನು ತನಗೆ ಪರಿಚಯ ಮಾಡಿ ಕೊಡಲು ಒತ್ತಾಯಿಸುತ್ತಾನೆ. ಇದ್ಯಾವುದಕ್ಕೂ ಸೊಪ್ಪು ಹಾಕದ ಸುಬೋದ್ ತಮ್ಮ ಮದ್ಯೆ ಅಂತ ವಿಚಾರ ಏನು ಇಲ್ಲ ಅವಳು ಒಳ್ಳೆಯ ಹುಡುಗಿ ಅವಳ ಬಗ್ಗೆ ತಪ್ಪು ತಿಳಿಯಬೇಡ ಎಂದು ಹೇಳಿ ಮಾತು ಮುಗಿಸುತ್ತಾನೆ.
ಹೀಗೆ ದಿನಗಳು ಕಳೆದು ಒಂದು ದಿನ ಆ ಯುವತಿ ಸುಬೋದ್ ನ ಕೋಣೆಗೆ ಬರುತ್ತಾಳೆ. ಆದರೆ ಕೋಣೆಯಲ್ಲಿ ಸುಬೋದ್ ಬದಲು ಪ್ರಮೋದ್ ಕಾಣಿಸುತ್ತಾನೆ. ಮೊದಲೇ ಕಾಯುತ್ತಿದ್ದ ಪ್ರಮೋದ್ ಅವಳನ್ನು ಎಳೆದಾಡಿ ಅತ್ಯಾಚಾರ ಮಾಡಿ ತಾನು ಸಿಲುಕಿ ಕೊಳ್ಳಬಾರದೆಂದು ಅವಳನ್ನು ಅಲ್ಲೇ ಕೊಲೆ ಮಾಡಿ ಎಸ್ಕೇಪ್ ಆಗುತ್ತಾನೆ.
ಇದಾದ ಕೆಲ ಸಮಯದ ಬಳಿಕ ಸುಬೋದ್ ತನ್ನ ಕೋಣೆಗೆ ಬಂದು ನೋಡಿದಾಗ ಆ ಯುವತಿ ಸತ್ತು ಹೋಗಿರುವುದು ನೋಡಿ ಸುಬೋದ್ ಗಾಬರಿ ಗೊಳ್ಳುತ್ತಾನೆ. ಏನಾಯಿತು? ಹೇಗಾಯಿತು? ಅನ್ನುವಷ್ಟರಲ್ಲಿ ಪೊಲೀಸ್ ಟೀಮ್ ಒಂದು ಅವನ ಬಾಗಿಲಲ್ಲಿ ಬಂದು ನಿಲ್ಲುತ್ತೆ.
ಸುಬೋದ್ “ಹೌದು ತಾನು ಈ ಯುವತಿಯೊಂದಿಗೆ ಸ್ನೇಹದಿಂದ ಇದ್ದಿದಾಗಿಯೂ ಇವತ್ತು ಇಲ್ಲಿ ನನ್ನನ್ನೇ ಭೇಟಿಯಾಗಲು ಬಂದಿದ್ದಳು” ಎಂದು ತಿಳಿಸುತ್ತಾನೆ. ಅಲ್ಲಿಗೆ ಪೊಲೀಸ್ ಕೇಸ್ ತೀರ್ಪು ಎಲ್ಲ ಆಗಿ, ಸುಬೋದ್ ಗೆ ಹಲವು ವರ್ಷಗಳ ಕಾಲ ಜೈಲ್ ಹಾಗು ನೇಣು ಶಿಕ್ಷೆಯ ದಿನಾಂಕವು ನಿಗದಿಯಾಗುತ್ತೆ.
ಹಲವು ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ ಸುಬೋದ್ ಗೆ ಕೇವಲ ಮೂರು ದಿನಗಳ ಜೀವನ ಉಳಿದಿರುತ್ತೆ. ಈಗ ಜೈಲರ್ ಕೇಳಿದ ಅವನ ಕೊನೆಯ ಆಸೆಯಂತೆ, ತಾನು ತನ್ನ ಹೆಂಡತಿಯೊಂದಿಗೆ ಈ ಜೈಲ್ನಲ್ಲಿ ಒಂದು ರಾತ್ರಿ ಕಳೆಯಲು ಅವಕಾಶವನ್ನು ಸಿದ್ಧಪಡಿಸಲಾಗುತ್ತದೆ.
ಅಂದು ಸುಬೋದ್ ಹೆಂಡತಿ ಭಯ ಹಾಗು ಆತಂಕದೊಂದಿಗೆ ಜೈಲಿಗೆ ಬರುತ್ತಾಳೆ. ಸುಬೋದ್ ಇರೋ ಅಕ್ಕ ಪಕ್ಕದ ಸೆಲ್ ಗಳನ್ನೂ ಖಾಲಿ ಮಾಡಿ ಇವರಿಬ್ಬರಿಗೆ ಹೆಚ್ಚಿನ ಸುರಕ್ಷತೆ ಒದಗಿಸಲಾಗುತ್ತದೆ. ಇವರಿಬ್ಬರೂ ಕೋಣೆಗೆ ಹೋಗುವ ಮೊದಲು ಇವರ ಕೋಣೆಯಲ್ಲಿ ಮೈಕ್ರೋ ಫೋನ್ ಒಂದನ್ನು ಜೈಲರ್ ಇರಿಸಿರುತ್ತಾರೆ.
ತನ್ನ ಜೀವಮಾನದಲ್ಲೇ ಕೇಳದ ಒಂದು ಜೈಲರ್ ನ ಆ ಒಂದು ಅಸೆ ಏನಿರಬಹುದು ಎಂಬ ಕುತೂಹಲ ದಿಂದ ಜೈಲರ್ ಕೂಡ ಕಾದು ಕೂರುತ್ತಾರೆ.
ಸುಬೋದ್ ನ ಹೆಂಡತಿ ಕೋಣೆಯೊಳಗೆ ಬರುತ್ತಿದ್ದಂತೆ ಇಬ್ಬರೂ ಬಿಕ್ಕಿ ಬಿಕ್ಕಿ ಅಳಲು ಶುರುವಿಡುತ್ತಾರೆ. ಸುಮಾರು ಹೊತ್ತಿನ ಬಳಿಕ ಸುಬೋದ್ ತನ್ನ ಹೆಂಡತಿಯೊಂದಿಗೆ ತಾನು ಮಾಡಿದ ತಪ್ಪಿಗೆ ನಿಮಗೂ ಶಿಕ್ಷೆ. “ಮಕ್ಕಳನ್ನು ಚೆನ್ನಾಗಿ ನೋಡಿಕೋ ನಾನು ಇಲ್ಲದ ಕೊರಗು ಅವರಿಗೆ ಬಾರದಂತೆ ನೋಡಿಕೋ” ಎಂದು ಹೇಳಿ ಮತ್ತೆ ಬಿಕ್ಕಿ ಬಿಕ್ಕಿ ಅಳುತ್ತಾನೆ.
ಹೆಂಡತಿ ತನ್ನ ಗಂಡನಿಗೆ ಸ್ವಲ್ಪ ಸಮಾಧಾನ ಮಾಡಿ ಕಷ್ಟ ಪಟ್ಟು ಒಂದು ಪ್ರಶೆಯನ್ನು ಕೇಳಲೇ ಎನ್ನುತ್ತಾಳೆ. ಸರಿ ಎಂದು ತಲೆಯಾಡಿಸಿದ ಸುಬೋದ್ ಗೆ ಹೆಂಡತಿ ” ನೀವು ಆ ಹುಡುಗಿಯನ್ನ ಯಾಕೆ ಕೊಂದು ಹಾಕಿದಿರಿ ಎಂಬ ಸವಾಲನ್ನು ಹಾಕುತ್ತಾಳೆ”. ಈ ಸವಾಲಿಗೆ ದುಃಖ ಪಟ್ಟ ಸುಬೋದ್ “ಇಲ್ಲ ತಾನು ಅವಳನ್ನು ಕೊಂದಿಲ್ಲ ತಾನು ಪರಿಚಯ ಮಾಡಿ ಕೊಡದ ಸೇಡಿನಿಂದ ಪ್ರಮೋದ್ ಈ ಕೆಲಸವನ್ನು ಮಾಡಿ ಪೊಲೀಸರಿಗೆ ಮಾಹಿತಿ ನೀಡಿ ಅಂದಿನಿಂದ ಎಸ್ಕೇಪ್ ಆಗಿರುವುದಾಗಿಯೂ ತನ್ನ ಪರ ಯಾರೂ ಸಾಕ್ಷಿ ಇಲ್ಲದೆ ತಾನು ಸಿಲುಕಿಕೊಂಡೆನೆಂದು” ಹೇಳಿ ಮತ್ತೆ ಅಳಲು ಶುರು ಮಾಡುತ್ತಾನೆ.
ಇದರಿಂದ ಮತ್ತಷ್ಟು ದುಃಖಗೊಂಡು ಇಬ್ಬರು ಅಳುತ್ತಾ ರಾತ್ರಿ ಪೂರ್ತಿಕಳೆಯುತ್ತಾರೆ. ಇದೆಲ್ಲವನ್ನು ಕೇಳಿಸಿಕೊಂಡ ಜೈಲರ್ ಹಾಗೂ ಇತರ ಸಿಬ್ಬಂದಿಗಳ ಕಣ್ಣಾಲಿಗಳು ತುಂಬಿ ಬರುತ್ತವೆ. ಏನೂ ತಪ್ಪು ಮಾಡದ ಒಬ್ಬ ಅಮಾಯಕ ಇಷ್ಟು ವರ್ಷಗಳ ಕಾಲ ಜೈಲ್ ಅನುಭವಿಸಿದ್ದೆ ಮಹಾ ತಪ್ಪು ಎಂದು ಯೋಚಿಸಿ ಹೇಗಾದರೂ ಮಾಡಿ ಇವನನ್ನು ಇದರಿಂದ ಪಾರು ಮಾಡಬೇಕೆಂದು ನಿರ್ಧರಿಸಿ ಅವರಿಬ್ಬರೂ ಮಾತನಾಡಿದ ಆಡಿಯೋವನ್ನು ವೈರಲ್ ಮಾಡುತ್ತಾರೆ.
ಹೀಗೆ ವೈರಲ್ ಆದ ಆಡಿಯೋ ಕೇಳಿ ಜನರೆಲ್ಲಾ ಹ್ಯಾಶ್ಟ್ಯಾಗ್ ಜಸ್ಟಿಸ್ ಫಾರ್ ಸುಬೋದ್ ಟ್ಯಾಗ್ ಮಾಡಲು ಶುರು ಮಾಡುತ್ತಾರೆ. ಅವನಿಗೆ ನ್ಯಾಯ ಕೊಡಿಸಬೇಕೆಂದು ಎಲ್ಲೆಲ್ಲೂ ಅವನ ಪರ ವಾದ ಶುರುವಾಗುತ್ತೆ. ಇದರ ನಂತರ ನಾಪತ್ತೆಯಾದ ಪ್ರಮೋದ್ನನ್ನ ಪೊಲೀಸರು ಹಿಡಿದು ತಂದು ಅವರ ಭಾಷೆಯಲ್ಲಿ ವಿಚಾರಿಸಿದಾಗ ಅವನು ಸತ್ಯ ಒಪ್ಪಿಕೊಂಡು ಸುಬೋದ್ನನ್ನ ಬಿಡುಗಡೆಮಾಡಲಾಗುತ್ತದೆ.
ಹೀಗೆ ಸುಬೋದ್ ಬಿಡುಗಡೆಯಾಗಿ ಪ್ರಮೋದ್ ಗೆ ಮಾಡಿದ ತಪ್ಪಿಗೆ ತಕ್ಕ ಶಿಕ್ಷೆಯಾಗುತ್ತೆ. ಹೀಗೆ ಈ ನೈಜ ಘಟನೆಯಲ್ಲಿ ಒಬ್ಬ ಅಮಾಯಕನು ಬದುಕಿ ಮನುಷತ್ವ ಎಂಬ ಮಾತಿಗೆ ನ್ಯಾಯ ಕೊಡಿಸುತ್ತಾರೆ ಜೈಲರ್.
Leave feedback about this