HEALTH 4 U HOME REMEDY

ನೀವು ಕೇಳಿದ್ದೀರಾ ? ಕೂದಲಿನ ಬೆಳವಣಿಗೆಯ ರಹಸ್ಯ

ನಮ್ಮ ಮುಖ ಸೌಂದರ್ಯಕ್ಕೆ ಎಷ್ಟು ಗಮನ ಕೊಡುತ್ತೇವೆಯೋ ಅಷ್ಟೇ ಗಮನ ನಮ್ಮ ಕೂದಲಿಗೂ ಬಹಳ ಅಗತ್ಯ. ಮುಖದ ಸೌಂದರ್ಯವನ್ನು ಬದಲಾಯಿಸುವುದು ಅಷ್ಟು ಸುಲಭವಲ್ಲ ಆದರೆ ನಮ್ಮ ಕೂದಲಿನ ಬೆಳವಣಿಗೆ ಹಾಗೂ ಸೌಂದರ್ಯವನ್ನು ಹೆಚ್ಚಿಸಲು ನಮ್ಮಿಂದ ಖಂಡಿತ ಸಾಧ್ಯ. ಕೂದಲನ್ನು ದಪ್ಪವಾಗಿ ಉದ್ದನಾಗಿ ಬೆಳೆಸುವುದರಿಂದ ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು.

ಉದ್ದ ಅಥವಾ ದಪ್ಪ ಕೂದಲು ಹೊಂದಿರುವ ಮಹಿಳೆಯರು ನೋಡಲು ಬಲು ಆಕರ್ಷಕ. ಆದರೆ ಇತ್ತೀಚಿನ ಒತ್ತಡದ ಜೀವನ, ಬಿಡುವಿಲ್ಲದ ಕೆಲಸದಿಂದ ನಮ್ಮ ಕೂದಲಿಗೆ ಸಮಯ ಕೊಡಲು ಕಷ್ಟ ಕಷ್ಟ. ಹಳೆಯ ಕಾಲದಲ್ಲಿ ನಮ್ಮ ಹಿರಿಯರು ಕೂದಲಿನ ಆರೈಕೆಗೆ ಬಹಳಷ್ಟು ಮನೆ ಮದ್ದುಗಳನ್ನು ಹೇಳುವುದು ನೆನಪಿರಬಹುದು. ಆಗಿನ ಕಾಲದಲ್ಲಿ ಉದ್ದನಾದ ಅಥವಾ ದಪ್ಪನಾದ ಕೂದಲು ನೋಡಲು ಸಿಗುವುದು ಹೆಚ್ಚು.

ಈ ಲೇಖನದಲ್ಲಿ ನಿಮ್ಮ ಕೂದಲಿಗೆ ಬೇಕಾದ ಅತ್ಯಂತ ಪ್ರಭಾವಶಾಲಿ ಮತ್ತು ಲಾಭಕಾರಿ ಉಪಾಯಗಳನ್ನು ತಿಳಿಸುತ್ತೇವೆ.

ಇವುಗಳನ್ನು ಪಾಲಿಸಿದ್ದಲ್ಲಿ ಕೇವಲ ಎರಡರಿಂದ ಮೂರು ತಿಂಗಳಲ್ಲಿ ದಟ್ಟವಾದ ಕೂದಲು ನಿಮ್ಮದಾಗುತ್ತದೆ. ಒಂದು ವೇಳೆ ನೀವು ನಾಳೆ ನಾಡಿದ್ದೆ ಕೂದಲು ಬರಬೇಕು ಎಂದು ಯೋಚಿಸುವುದಾದರೆ ಅದು ಅಸಾಧ್ಯ. ಕೂದಲನ್ನು ಬೆಳೆಸಲು ಸಮಯ ಹಿಡಿಯುವುದು ಗ್ಯಾರಂಟಿ ಹಾಗು ಕೆಲವು ನಿಯಮಗಳನ್ನು ಪಾಲಿಸುವುದರಿಂದ ಕೂದಲು ಬೆಳೆಯುವುದು ಗ್ಯಾರಂಟಿ.

ಕೂದಲನ್ನು ಬೆಳೆಸಲು ಉಪಾಯಗಳು

ಮೊತ್ತಮೊದಲಿಗೆ ತಪ್ಪಾದ ಆಹಾರ ವಿಹಾರ ಕ್ರಮಗಳನ್ನು ಖಂಡಿತವಾಗಿ ನಿಲ್ಲಿಸಿ. ರಾತ್ರಿ ಲೇಟಾಗಿ ಮಲಗುವುದು, ಬೆಳಗ್ಗೆ ಲೇಟಾಗಿ ಹೇಳುವುದನ್ನು ನಿಲ್ಲಿಸಿ. ಚಿಂತೆ, ಕೋಪ ಮತ್ತು ಮಾನಸಿಕ ಒತ್ತಡದಿಂದ ಆದಷ್ಟು ದೂರವಿರಿ.  ಬಹಳ ಹೊತ್ತು ಹೊಟ್ಟೆಯನ್ನು ಖಾಲಿ ಇಡುವುದು ಮತ್ತು ರಾತ್ರಿ ಲೇಟಾಗಿ ಹೊಟ್ಟೆ ತುಂಬಾ ಊಟ ಮಾಡುವುದು ಮತ್ತು ಹೆಚ್ಚು ಹುಳಿ ಕಾರವಿರುವ ಪದಾರ್ಥಗಳನ್ನು ಸೇವಿಸುವುದು. ತುಂಬಾ ಸಲ ಬಿಸಿ ಮಾಡಿದ ಕುದಿಸಿದ ಅಥವಾ ಹಳಸಿದ ಎಣ್ಣೆಯಿಂದ ತಯಾರಿಸಿದ ಪದಾರ್ಥಗಳನ್ನು ತಿನ್ನುವುದು ದೇಹದ ಅಜೀರ್ಣಕ್ರಿಯೆಗೆ ಕಾರಣವಾಗಬಹುದು. ಆಯುರ್ವೇದದಲ್ಲಿ ಹೇಳಿರುವ ಪ್ರಕಾರ “ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬ ಮಾತಿನಂತೆ ಕೋಪ, ಕ್ರೋಧ ಮತ್ತು ಮಾನಸಿಕ ಒತ್ತಡ ಇತ್ಯಾದಿಗಳು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವುದಲ್ಲದೆ ಕೂದಲನ್ನು ಅತಿ ಸಣ್ಣ ವಯಸ್ಸಿನಲ್ಲಿಯೇ ಹಣ್ಣಾಗಿಸುತ್ತದೆ.

ತಪ್ಪಾದ ಆಹಾರ ಕ್ರಮದಿಂದ ನಿಮ್ಮ ವಾತ ಮತ್ತು ಪಿತ್ತದಲ್ಲಿ ವ್ಯತ್ಯಾಸ ಉಂಟಾಗಿ ಇದು ನಿಧಾನವಾಗಿ ನಿಮ್ಮ ಕೂದಲಿನ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸಬಹುದು. ಇವುಗಳನ್ನು ಸರಿದೂಗಿಸುವವರೆಗೂ ಕೂದಲಿನ ಸಮಸ್ಯೆಯಿಂದ ಹೊರಬರುವುದು ಅಸಾಧ್ಯ. ಇದಲ್ಲದೆ ನಿಮ್ಮ ಕೂದಲಿಗೆ ಎಣ್ಣೆಯ ಗಂಧಗಾಳಿ ಅಥವಾ ಪರಿಚಯವೇ ಇಲ್ಲದಿದ್ದರೆ ಕೂದಲು ಒಣಗಿ, ಸುಕ್ಕಾಗಿ ಕೂದಲಿನ ತುದಿಗಳು ಒಡೆದು ಹೋಗುವುದು ನಿಶ್ಚಿತ. ಈಗಿನ ಕಾಲದ ಫ್ಯಾಷನ್ ನಿಂದ ಹೆಣ್ಣು ಮಕ್ಕಳು ತಲೆಗೆ ಎಣ್ಣೆ ಹಚ್ಚುವುದು ಹಾಗೂ ಎಣ್ಣೆ ಸ್ನಾನ ಮಾಡುವುದು ಎಂದರೆ ಮೈಲು ದೂರ ಓಡುತ್ತಾರೆ.

ಕೂದಲಿಗೆ ನಿಯಮದವಾಗಿ ಎಣ್ಣೆಯನ್ನು ಹಚ್ಚುವುದರಿಂದ ತಲೆನೋವು, ತಲೆಬೋಳಾಗುವುದು, ಕೂದಲು ಬೆಳ್ಳಗಾಗುವುದನ್ನು, ಮತ್ತು ಕೂದಲು ಉದುರುವುದನ್ನು ತಡೆಯಬಹುದು. ನಿಮಗೆ ಮನೆಯಿಂದ ಹೊರಹೋಗುವ ಅವಶ್ಯಕತೆ ಇಲ್ಲದಿದ್ದಾಗ ಎಣ್ಣೆಯ ಬಳಕೆ ನಿಮ್ಮ ಕೂದಲಿಗೆ ಬಲು ಉಪಕಾರಿ. ಸ್ವಲ್ಪ ಉಗುರು ಬೆಚ್ಚಗೆ ಮಾಡಿದ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ ಒಂದು ಸಣ್ಣ ಹತ್ತಿಯ ತುಣುಕನ್ನು ತೆಗೆದುಕೊಂಡು ಎಣ್ಣೆಯಲ್ಲಿ ಅದ್ದಿ ನಿಮ್ಮ ಕೂದಲಿನ ಬುಡಗಳಿಗೆ ಉಜ್ಜುವುದರಿಂದ ಹಾಗೂ ತದನಂತರ ಕೂದಲನ್ನು ಮಾಲೀಶ್ ಮಾಡುವುದರಿಂದ ನಿಮ್ಮ ತಲೆಯಲ್ಲಿ ರಕ್ತ ಸಂಚಾರ ಸುಗಮವಾಗಿ ಸಾಗಿ ನಿಮ್ಮ ಕೂದಲನ್ನು ಬೆಳೆಯಲು ಸಹಾಯಮಾಡುತ್ತದೆ.

ಹಾಗಿದ್ದರೆ ನಮ್ಮ ಹಿರಿಯರು ಹೇಳಿದ ಮನೆಮದ್ದುಗಳು ಯಾವುವು ತಿಳಿಯೋಣ ಬನ್ನಿ.

ಮಜ್ಜಿಗೆ

ಮಜ್ಜಿಗೆಯಿಂದ ಕೂದಲನ್ನು ಹೇಗೆ ಬೆಳೆಸಬಹುದು. ಹೌದು ಸ್ವಲ್ಪ ವಿಚಿತ್ರವೆನಿಸಿದರು ಮಜ್ಜಿಗೆಯು ಕೂದಲಿನ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಕೂದಲಿನ ಬೆಳವಣಿಗೆಗೆ ಬಳಸುವ ಮನೆಮದ್ದುಗಳಲ್ಲಿ ಮಜ್ಜಿಗೆಯು ಒಂದು. ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಮ್ಲ ನೆತ್ತಿಯನ್ನು ಎಪ್ಲೊಲಿಯಟ್ ಮಾಡಲು ಸಹಾಯ ಮಾಡುತ್ತದೆ.ಮನೆಯಲ್ಲೇ ತಯಾರಿಸಿದ ಶುದ್ಧವಾದ ಮಜ್ಜಿಗೆಯಲ್ಲಿ ಇನ್ನಷ್ಟು ನೀರನ್ನು ಬಳಸಿ. ಒಂದು ಸಣ್ಣ ಹತ್ತಿಯ ತುಣುಕನ್ನು ಉಪಯೋಗಿಸಿ ಹತ್ತಿಯಿಂದ ಮಜ್ಜಿಗೆಯನ್ನು ನಿಮ್ಮ ನೆತ್ತಿ, ತಲೆ, ಕೂದಲ ಬುಡಕ್ಕೆ ಹಚ್ಚುವುದರಿಂದ ಹಾಗೂ ಸ್ವಲ್ಪ ಮಸಾಜ್ ಮಾಡುವುದರಿಂದ ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಮ್ಲ ನಿಮ್ಮ ಕೂದಲನ್ನು ಉದ್ದವಾಗಿ ಹಾಗೂ ದಪ್ಪವಾಗಿ ಬೆಳೆಯಲು ಸಹಾಯ ಮಾಡುತ್ತದೆ. ನಿಮ್ಮ ತಲೆ ಕೂದಲಿಗಳಿಗೆ ಹಚ್ಚಿದ 10- 15 ನಿಮಿಷಗಳ ನಂತರ ನಿಮ್ಮ ಕೂದಲನ್ನು ತೊಳೆದುಕೊಳ್ಳುವುದು ಉತ್ತಮ. ಅದರಂತೆ ನಿಮ್ಮ ದೇಹಕ್ಕೆ ಬೇಕಾದ ಒಳ್ಳೆಯ ಕೊಬ್ಬನ್ನು ಪೂರೈಸಲು ಮಜ್ಜಿಗೆಯನ್ನು ಕುಡಿಯುವುದರಿಂದ ನಿಮಗೆ ಬೇಕಾದ ಪ್ರೋಟಿನ್ ಹಾಗೂ ಕೊಬ್ಬು ಲಭ್ಯವಾಗುವುದು.

ಕರಿ ಜೀರಿಗೆ

ಹೌದು. ಕರಿ ಜೀರಿಗೆ ಅಥವಾ ಕಾಳು ಜೀರಿಗೆ. ಹೆಚ್ಚಾಗಿ ಹಳ್ಳಿಗಳಲ್ಲಿ ಕಾಣಸಿಗುವ ಕರಿ ಜೀರಿಗೆ ಗಿಡ ಅದಾಗೆ ಹುಟ್ಟಿಕೊಂಡಿರುತ್ತದೆ. ಕಪ್ಪು ಬಣ್ಣದಲ್ಲಿ ಕಾಣಸಿಗುವ ಈ ಕರೀ ಜೀರಿಗೆ ಅತ್ಯಂತ ಕಹಿಯಾಗಿದ್ದು ದೇಹದಲ್ಲಿರುವ ನಂಜಿನ ಅಂಶವನ್ನು ಹೊರಹಾಕಲು ಕಷಾಯದ ರೂಪದಲ್ಲಿ ಬಳಸಲಾಗುತ್ತದೆ. ಅದಲ್ಲದೆ ಹೊಟ್ಟೆ ನೋವಿಗೆ ಹಾಗೂ ಬಾಣಂತನಕ್ಕೆ ಇದು ಮುಖ್ಯ ಮನೆ ಮನೆ ಮದ್ದುಗಳಲ್ಲಿ ಒಂದು. ಇದರಲ್ಲಿ ಕಬ್ಬಿನಾಂಶ ವಿಟಮಿನ್ ಇ, ವಿಟಮಿನ್ ಎ, ಮತ್ತು ಸತು ಹೆಚ್ಚಾಗಿ ಇರುವುದರಿಂದ ಇದನ್ನು ಕೂದಲಿನ ಆರೈಕೆಯಲ್ಲಿ ಬಳಸುವುದು ಉಪಯೋಗಕಾರಿ. ಇದು ಕೂದಲಿನಲ್ಲಿ ಉಂಟಾಗುವ ಫಂಗಲ್ ಸಮಸ್ಯೆಯನ್ನು ಕಡಿತಗೊಳಿಸಿ ಕೂದಲಿನ ಬುಡವನ್ನು ಗಟ್ಟಿ ಮಾಡುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.  ಇದನ್ನು ಕೆಲವು ತಿಂಗಳುಗಳ ಕಾಲ ಬಳಸುವುದರಿಂದ ಕೂದಲು ಅತ್ಯಂತ ಉದ್ದ ಹಾಗೂ ದಪ್ಪನಾಗಿ ಬೆಳೆದು ಕೂದಲಿನ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಅರ್ಧ ಲೀಟರ್ ತೆಂಗಿನ ಎಣ್ಣೆಯಲ್ಲಿ ಫ್ರೈ ಮಾಡಿದ ಕಪ್ಪು ಜೀರಿಗೆ ಸ್ವಲ್ಪ ಮೆಂತೆ ಒಂದು ಸಣ್ಣ ಈರುಳ್ಳಿ ಇವೆಲ್ಲವನ್ನು ತೆಂಗಿನ ಎಣ್ಣೆಯಲ್ಲಿ ಬಿಸಿ ಮಾಡಿ, ನಂತರ ಈ ಎಣ್ಣೆಯನ್ನು ತಣ್ಣಗಾಗಲು ಬಿಟ್ಟು, ಒಂದು ಗಾಜಿನ ಬಾಟಲಿಯಲ್ಲಿ ಶೇಖರಿಸಿ, ನಂತರ ವಾರದಲ್ಲಿ ಎರಡು ಅಥವಾ ಮೂರು ಬಾರಿ ನಿಮ್ಮ ಕೂದಲಿನ ಬುಡಗಳಿಗೆ ಹಚ್ಚಿ ಸುಮಾರು 30 ನಿಮಿಷ ಗಳ ನಂತರ ಸ್ನಾನ ಮಾಡುವುದರಿಂದ ನಿಮ್ಮ ಕೂದಲು ಗಾಢವಾಗಿ ಮತ್ತು ಗಟ್ಟಿಯಾಗಿ ಬೆಳೆಯಲು ಸಹಾಯ ಮಾಡುತ್ತದೆ. ಕೂದಲನ್ನು ಬೆಳೆಸಲು ಸಿಕ್ಕಿದ ಹಲವಾರು ಮನೆಮದ್ದುಗಳನ್ನು ಪ್ರಯತ್ನಿಸುವ ಬದಲಾಗಿ ಈ ಎರಡು ವಿಧಾನಗಳನ್ನು ಬಳಸಿ ಕೂದಲನ್ನು ಬೆಳೆಸುವುದು ಉತ್ತಮ ಇದರ ಜೊತೆಗೆ ನಮ್ಮ ದೇಹಕ್ಕೆ ಬೇಕಾದ ಕೆಲವು ಸಪ್ಲಿಮೆಂಟ್ ಗಳು ತುಂಬಾ ಅಗತ್ಯ.

ಸಪ್ಲಿಮೆಂಟ್ಗಳಲ್ಲಿ ಬಯೋಟಿನ್ ಅಂಶವು ತುಂಬಾ ಅಗತ್ಯವಾಗಿದ್ದು, ಅದರೊಂದಿಗೆ ಈ ಕೆಳಕಂಡ ನಿಮಗೆ ಅನುಕೂಲವಾದ ಸಪ್ಲಿಮೆಂಟ್ ಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಇನ್ನಷ್ಟು ಲಾಭಕಾರಿ

ಸಪ್ಲಿಮೆಂಟುಗಳು ಮತ್ತು ಅದನ್ನು ಒದಗಿಸುವ ಆಹಾರಗಳು

ಬಯೋಟಿನ್ (ಬಯೋ-ವಿಟಾಮಿನ್)

ಆಹಾರಗಳು: ಬದನೆಕಾಯಿ, ಬೀನ್ಸ್. ಅಲೋವೆರಾ, ಮೂಲೆಂಗಿ, ಹೂರಣ (ಕದಳೆಕಾಯಿ), ಮೊಟ್ಟೆ ಕಬ್ಬು ರಸಸ್ಟ್ರಾಬೆರಿ, ರಾಸ್ಬೆರೀ ಬ್ರೆಡ್‌ಗಳು ಮತ್ತು ಗೋಧಿ ಉತ್ಪನ್ನಗಳು. ಈ ಆಹಾರಗಳು ಬಯೋಟಿನ್ ಸಮೃದ್ಧವಾಗಿವೆ ಮತ್ತು ಕೂದಲಿನ ಆರೋಗ್ಯವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತವೆ.

ಕೋಲಾಜನ್

ಆಹಾರಗಳು: ಎಲೆಕೋಸು, ಮೆಂತ್ಯ ಸೊಪ್ಪು, ಕೆತ್ತಳೆ ಹಣ್ಣು, ಈರುಳ್ಳಿ.

ಮಲ್ಟಿ ವಿಟಾಮಿನ್‌ಗಳು

ಆಹಾರಗಳು: ಹಣ್ಣುಗಳು- ಸೇಬು, ಕಿತ್ತಳೆ, ತರಕಾರಿಗಳು -ಮೂಲಂಗಿ, ಕಡಲೆಕಾಯಿ.

ಐರನ್ ಪೂರಕಗಳು

ಆಹಾರಗಳು: ಸೊಪ್ಪುಗಳು (ಸಪ್ಪೆ ಸೊಪ್ಪು, ಮೆಂತ್ಯ ಸೊಪ್ಪು), ಕಡಲೆಕಾಯಿ, ಮಾಂಸ.

ಝಿಂಕ್

ಆಹಾರಗಳು: ಕಡಲೆಕಾಯಿ, ಬೇಯಿಸಿದ ಶೇಂಗ, ಮೊಟ್ಟೆ, ಕುಂಬಳಕಾಯೀ ಬೀಜಗಳು.

ಒಮೇಗಾ-3 ಫ್ಯಾಟಿ ಆಮ್ಲಗಳು

ಆಹಾರಗಳು: ಮೀನು (ಮೀನು, ಸ್ಮಾಲ್ಟ್), ಅಕ್ರೋಟ್, ಸೊಪ್ಪುಗಳು (ಸಪ್ಪೆ ಸೊಪ್ಪು), ಅಗಸೆ ಬೀಜಗಳು ಇತ್ಯಾದಿ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X