ನಮ್ಮಿಂದ ಸಾಧ್ಯವಿಲ್ಲ ಎನ್ನದಿರಿ. ಇದಾಗಲ್ಲ. ಅದು ಸಾಧ್ಯವಿಲ್ಲ ಬೇರೆ ಏನಾದರೂ ಮಾಡೋಣ ಅಂತ ಜನ ಹೇಳುವುದನ್ನು ಕೇಳುತ್ತಲೇ ಇರುತ್ತೇವೆ. ಯಾವುದೇ ಕೆಲಸವಾಗಲಿ ಶುರುವಾಗುವುದಕ್ಕಿಂತ ಮುನ್ನ ಅದು ನಮ್ಮಿಂದ ಸಾಧ್ಯವಿಲ್ಲ ಎಂಬ ಯೋಚನೆಯಿಂದ ಪ್ರಾರಂಭ ಮಾಡಬೇಡಿ. ನೀವು ನಿಮ್ಮ ಸುತ್ತಲಿನ ಜಗತ್ತನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಐಡಿಯಾಗಳು ಹುಟ್ಟಿದ್ದು ಸಣ್ಣ ಶೆಡ್ಡುಗಳಲ್ಲಿ, ಗ್ಯಾರೇಜುಗಳಲ್ಲಿ ಹೊರತು ದೊಡ್ಡ ದೊಡ್ಡ ಕಂಪನಿಗಳಲ್ಲಿ ಅಲ್ಲ. ಆಪಲ್, ಗೂಗಲ್, ಮೈಕ್ರೋಸಾಫ್ಟ್, ಹ್ಯಾರ್ಲೆ, ಡಿಸ್ನಿ, ಅಮೆಜಾನ್, ಫೇಸ್ಬುಕ್ ಗಳೆಲ್ಲ ಹುಟ್ಟಿದ್ದೆ ಸಣ್ಣ ಸಣ್ಣ ಕೋಣೆಗಳಲ್ಲಿ.
ಈ ಐಡಿಯಾಗಳು ಬಂದಿದ್ದು ಏನೋ ಹೊಸದೊಂದು ಮಾಡಬಹುದು ಎಂಬ ಐಡಿಯಾಗಳಿಂದ. ಈ ಐಡಿಯಾಗಳಿಗೆ ದೊಡ್ಡ ದೊಡ್ಡ ತಂತ್ರಜ್ಞಾನದ ಅವಶ್ಯಕತೆ ಇರಲಿಲ್ಲ. ಎಕರೆಗಟ್ಟಲೆ ಜಾಗ ಬೇಕಿರಲಿಲ್ಲ. ಇವೆಲ್ಲ ಹುಟ್ಟಿದ್ದು ಬೆಳೆದಿದ್ದು ಮತ್ತು ದೊಡ್ಡದಾಗಿದ್ದು ಮನಸ್ಸಿನಲ್ಲಿ. ಬಹುಶಃ ಈ ಐಡಿಯಾಗಳನ್ನು ಪೋಷಿಸದಿದ್ದರೆ ಇದು ಸಾಧ್ಯವಾ ಎಂಬ ಲೆಕ್ಕಾಚಾರದಲ್ಲಿ ಕಳೆದಿದ್ದರೆ ಈ ಐಡಿಯಾಗಳು ದೊಡ್ಡದಾಗುತ್ತಿರಲಿಲ್ಲ.
ಹೊಸ ತಂತ್ರಜ್ಞಾನ, ಹೊಸ ಸಂಸ್ಥೆಗಳು, ಹೊಸ ಯೋಚನೆಗಳು ಯಾವುದು ಹುಟ್ಟುತ್ತಿರಲಿಲ್ಲ. ಹೀಗಾಗಿ ಯಾವುದೇ ಐಡಿಯಾ ಇರಲಿ ಅದು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಬೇಡಿ. ಅದಾಗುತ್ತದೆ ಇಲ್ಲವೋ ಬೇರೆ ಮಾತು. ಕನಿಷ್ಠ ಪ್ರಯತ್ನವನ್ನಾದರೂ ಮಾಡಿ ಅದು ಸಾಧ್ಯವಾಗದಿದ್ದರೂ ಇನ್ನೇನಾದರೂ ಖಂಡಿತ ಆಗುತ್ತದೆ. ಹೀಗಾಗಿ ಮೊಗ್ಗನ್ನು ಬೆಳೆಯುವುದಕ್ಕಿಂತ ಮುಂಚೆ ಚಿಟಿ ಬಿಡಬೇಡಿ.
Leave feedback about this