DID U KNOW

ಕೃಷ್ಣರಂದ್ರಗಳು (ಬ್ಲಾಕ್ ಹೋಲ್ಸ್) ಎಂದರೇನು ? ಬಾಹ್ಯಾಕಾಶದಲ್ಲಿ ಕೆಲವು ಕಪ್ಪು ಪ್ರದೇಶಗಳಿವೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ.

ಕೃಷ್ಣರಂದ್ರಗಳು (ಬ್ಲಾಕ್ ಹೋಲ್ಸ್) ಎಂದರೇನು ? ಬಾಹ್ಯಾಕಾಶದಲ್ಲಿ ಕೆಲವು ಕಪ್ಪು ಪ್ರದೇಶಗಳಿವೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಇವು ಅವಸಾನ ಗೊಳ್ಳುತ್ತಿರುವ ದೊಡ್ಡ ತಾರೆಗಳ ಅವಶೇಷಗಳಾಗಿರಬಹುದು ಎಂದು ನಂಬಲಾಗಿದೆ.

ಈ ಕಪ್ಪು ಪ್ರದೇಶಗಳನ್ನು ಕೃಷ್ಣರಂದ್ರಗಳು (ಬ್ಲಾಕ್ ಹೋಲ್ಸ್) ಎಂದು ಕರೆಯುತ್ತಾರೆ. ಈ ಕಪ್ಪು ಪ್ರದೇಶದೊಳಗೆ ಗುರುತ್ವಾಕರ್ಷಣ ಶಕ್ತಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಈ ಶಕ್ತಿಯಿಂದಾಗಿ ಗುರುತ್ವಾಕರ್ಷಣ ಶಕ್ತಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಈ ಶಕ್ತಿಯಿಂದಾಗಿ ಅದರೊಳಗೆ ಹೋದ ಯಾವ ವಸ್ತು ಹೊರಬರಲು ಸಾಧ್ಯವಿಲ್ಲ. ಜರ್ಮನಿಯ ಕಾರ್ಲ್ ಚಾರ್ಜ್ ಚೈಲ್ಡ್ ಎಂಬ ಖಗೋಳಶಾಸ್ತ್ರಜ್ಞ

1907 ರಲ್ಲಿ ಇಂತಹ ಕೃಷ್ಣ ರಂದ್ರಗಳ ಅಸ್ತಿತ್ವವನ್ನು ಪತ್ತೆ ಹಚ್ಚಿದ್ದರು. ಎಲ್ಲಾ ತಾರೆಗಳ ಅಂತಿಮ ಪರಿಣಾಮವೇ ಈ ಕೃಷ್ಣರಂದ್ರ ಎಂಬುವುದನ್ನು ಅವರು ಸೈದಾಂತಿಕವಾಗಿ ರುಜುವಾತು ಪಡಿಸಿದ್ದರು. ಒಂದು ತಾರೆಯ ಅಸ್ತಿತ್ವದ ಅವಧಿಯಲ್ಲಿ ಯಾವುದೋ ಹಂತದಲ್ಲಿರುವ ಪರಮಾಣು ಇಂಧನದ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ.

ಇದರಿಂದ ಆ ತಾರೆಯ ಮಧ್ಯಭಾಗದ ಉಷ್ಣಾಂಶ ಇಳಿಮುಖವಾಗುತ್ತದೆ ಇದರ ಪರಿಣಾಮವಾಗಿ ಗುರುತಾಕರ್ಷಣ ಶಕ್ತಿ ಆ ತಾರೆಯನ್ನು ಸೆಳೆಯಲು ಆರಂಭಿಸುತ್ತದೆ. ಕ್ರಮೇಣ ತಾರೆ ಕುಸಿಯ ತೊಡಗುತ್ತದೆ. ಇಂತಹ ಪ್ರಕ್ರಿಯೆ ಆರಂಭವಾದಾಗ ತಾರೆಯೊಳಗಿರುವ ಅಣುಗಳು ವಿಭಜನೆಗೊಳ್ಳುತ್ತವೆ. ಈ ಹಂತದಲ್ಲಿ ಆ ದಾರಿಯನ್ನು ಶ್ವೇತ ಕುಂಚ (ವೈಟ್ ಡ್ರಾಫ್ಟ್ ) ಎಂದು ಕರೆಯಲಾಗುತ್ತದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X