ಹೆಚ್ಚಿನದಾಗಿ ತೆಂಗಿನಕಾಯಿಯಿಂದಲೇ ಯಾಕೆ ದ್ರಷ್ಟಿ ತೆಗೆಯುತ್ತಾರೆ ?
ಇದಕ್ಕೆ ಆಧ್ಯಾತ್ಮಿಕ ಕಾರಣವಿದೆ. ತೆಂಗಿನಕಾಯಿಯಲ್ಲಿ ಒಳ್ಳೆಯ ಹಾಗು ಕೆಟ್ಟ ಎರಡು ಬಗೆಯ ಸ್ಪಂದನಗಳನ್ನು ಸೆಳೆಯುವ ಕ್ಷಮತೆ ಇದೆ. ಇದು ಸಾತ್ವಿಕವಾಗಿ ಇರುವುದರಿಂದ ರಜ- ತಮ ಲಹರಿಗಳು ತೆಂಗಿನ ಕಾಯಿ ಒಳಗೆ ವಿಘಟನೆಯಾಗುತ್ತದೆ. ಅನ್ಯ ವಸ್ತುಗಳಿಗೆ ಹೋಲಿಸಿದರೆ ತೆಂಗಿನಕಾಯಿಗೆ ದ್ರಷ್ಟಿ ತೆಗೆಯುವ ಕ್ಷಮತೆ ಹೆಚ್ಚಿದೆ. ತೆಂಗಿನಕಾಯಿ ಸರ್ವ ಸಮಾವೇಶಕ ಗುಣ ಹೊಂದಿದೆ. ಅದು ಎಲ್ಲ ರೀತಿಯ ದ್ರಷ್ಟಿಯನ್ನು ಸೆಳೆದುಕೊಳ್ಳಬಹುದು. ಹಾಗಾಗಿ ದ್ರಷ್ಟಿ ತೆಗೆಯುವಾಗ ಪ್ರಮುಖವಾಗಿ ತೆಂಗಿನಕಾಯಿಯನ್ನು ಬಳಸುತ್ತಾರೆ.