ಹೊಳೆಯುವ ಮುಖಕ್ಕಾಗಿ ಕೇಸರಿ ಬಳಸಿ
ಮುಖವನ್ನು ಚೆನ್ನಾಗಿ ತೊಳೆದು ಒರೆಸಿ. ಒಂದು ಚಮಚದಷ್ಟು ಜೇನುತುಪ್ಪಕ್ಕೆ ಕೆಲವು ಎಸಳು ಕೇಸರಿಯನ್ನು ಹಾಕಿ ಮಿಕ್ಸ್ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಕೇಸರಿ, ಚಂದನ ಮತ್ತು ಹಾಲು ಇವುಗಳನ್ನು ತೇದಿ ಮುಖಕ್ಕೆ ಹಚ್ಚಿಕೊಳ್ಳಿ. ದಿನ ರಾತ್ರಿ ಮುಖಕ್ಕೆ ಕೇಸರಿಯ ಪೇಸ್ಟ್ ಹಚ್ಚಿಕೊಳ್ಳಿ ಇದರಿಂದ ಮುಖದ ಮೇಲಿರುವ ಕಲೆಗಳು ಮಾಯವಾಗುತ್ತವೆ. ಮೊಡವೆಯ ಸಮಸ್ಯೆ ಇರುವವರು ಕೇಸರಿ ಮತ್ತು ಹಾಲಿನ ಕೆನೆ ಮಿಶ್ರಣವನ್ನು ಮುಖಕ್ಕೆ ಹಚ್ಚಿ ನಿವಾರಿಸಿಕೊಳ್ಳಿ.