ಅತೀ ಹೆಚ್ಚು ಸಂಬಳವನ್ನು ನೀಡುವ ದೇಶಗಳು – ಟಾಪ್ 10 ದೇಶಗಳು ಒಳ್ಳೆಯ ಸಂಬಳ ಒಳ್ಳೆಯ ಜೀವನಶೈಲಿ
ಅಧಿಕ ಸಂಬಳ ಅಧಿಕ ಭತ್ಯೆ ಅಧಿಕ ಹಣ ಅಧಿಕ ಸಂಪತ್ತು ಯಾರಿಗೆ ಇಷ್ಟವಿಲ್ಲ ಹೇಳಿ. ಇದನ್ನೆಲ್ಲಾ ಸಂಪಾದಿಸಲು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣ ಬೆಳೆಸಿ ತನ್ನ ಪ್ರೀತಿ ಪಾತ್ರರನ್ನು ಬಿಟ್ಟು ಹಲವು ವರ್ಷಗಳ ಕಾಲ ದೂರವಿದ್ದು ತ್ಯಾಗ ಮಾಡುವವರು ಬಹಳ ಮಂದಿ. ಹೀಗೆ ಬೇರೆ ದೇಶಗಳಿಗೆ ಕೆಲಸಕ್ಕೆ ಹೊರಟಾಗ ಆ ದೇಶದ ಸಂಬಳ ಎಲ್ಲಾ ಖರ್ಚು ವೆಚ್ಚಗಳ್ಳನ್ನು ಹೋಗಲಾಡಿಸಿ ಏನಾದರೂ ಉಳಿದರೆ ಅದೇ ಸಂತೋಷ. ಹೀಗಿರುವಾಗ ಅಧಿಕ ಸಂಬಳ ಸಿಗುವ ವಿದೇಶಗಳಿಗೆ ಹೋಗುವುದು ಎಲ್ಲರಿಗೂ ಇಷ್ಟ.