2024ರ ಡೈಮಂಡ್ ಲೀಗ್ ಫೈನಲ್‌ನಲ್ಲಿ ಭಾರತದ ನೀರಜ್ ಚೋಪ್ರಾ ಸ್ವಲ್ಪವೇ ಅಂತರದಿಂದ ಚಿನ್ನದ ಪದಕ ಕೈ ತಪ್ಪಿದೆ . ಬ್ರಸೆಲ್ಸ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ, ಅವರ ಅತ್ಯುತ್ತಮ ಎಸೆತವು 87.86 ಮೀಟರ್‌ಗಳಾಗಿದ್ದು, ಗ್ರೆನಾಡಾದ ಆಂಡರ್ಸನ್ ಪೀಟರ್ಸ್ ಅವರ 87.87 ಮೀಟರ್‌ಗಳ ಎಸೆತಕ್ಕಿಂತ ಕೇವಲ 1 ಸೆಂಟಿಮೀಟರ್ ಕಡಿಮೆಯಿತ್ತು. ಇದು ನೀರಜ್ ಚೋಪ್ರಾ ಗೆ ನಿರಾಸೆ ತಂದುಕೊಟ್ಟಿದ್ದರೂ, ಅವರು ಸಿಲ್ವರ್ ಪದಕ ಗೆದ್ದು, ತಮ್ಮ ಯಶಸ್ವಿ ಹಾದಿಯನ್ನು ಮುಂದುವರೆಸಿದ್ದಾರೆ.
ಈ ಸ್ಪರ್ಧೆಯ ನಂತರ, ನೀರಜ್ ಚೋಪ್ರಾ ಒಂದು ದೊಡ್ಡ ಸುದ್ದಿ ಬಹಿರಂಗಪಡಿಸಿದರು: . ಫೈನಲ್‌ಗೂ ಕೆಲವು ದಿನಗಳ ಹಿಂದೆಯೇ, ಅಭ್ಯಾಸದ ಸಮಯದಲ್ಲಿ ಅವರು ತಮ್ಮ ಎಡಗೈಯಿನ ನಾಲ್ಕನೇ ಮೇಟಾಕಾರ್ಪಲ್‌ನಲ್ಲಿ ಪೆಟ್ಟಾಗಿ, ಫ್ರ್ಯಾಕ್ಚರ್ ಆಗಿತ್ತು ಎಂದು ಹೇಳಿದ್ದಾರೆ.ಎಕ್ಸ್-ರೇ ಪರೀಕ್ಷೆಯಲ್ಲಿ ಈ ಪೆಟ್ಟಿನ ಗಂಭೀರತೆ ದೃಢಪಟ್ಟಿದ್ದರೂ, ತಮ್ಮ ತಂಡದ ಸಹಾಯದಿಂದ ಅವರು ಸ್ಪರ್ಧೆಗೆ ಸಿದ್ಧರಾಗಿದ್ದರು ಎಂದು ಅವರು ಹೇಳಿದ್ದಾರೆ.
ಅವರ ಈ ಸಾಧನೆ ಕೇವಲ ಪದಕವೇ ಅಲ್ಲ; ಕಳೆದ ಮೂರು ವರ್ಷಗಳಿನಿಂದ ಅವರು ಯಾವುದೇ ಸ್ಪರ್ಧೆಯಲ್ಲಿ ಎರಡನೇ ಸ್ಥಾನಕ್ಕಿಂತ ಕೆಳಗೆ ಮುಗಿಸಿಲ್ಲ. ಅವರು 2022ರ ಡೈಮಂಡ್ ಲೀಗ್ ನಲ್ಲಿ ಚಾಂಪಿಯನ್ ಆಗಿದ್ದು, ಈ ಬಾರಿ ಅವರ ಎರಡನೇ ಡೈಮಂಡ್ ಲೀಗ್ ಗೆಲುವು ಕೇವಲ 1 ಸೆಂಟಿಮೀಟರ್ ಅಂತರದಿಂದ ಕೈ ತಪ್ಪಿತು. ಅವರ ಅಭಿಮಾನಿಗಳು ಮತ್ತು ಕ್ರೀಡಾ ವಿಶ್ಲೇಷಕರು ಈ ಅಂತರವನ್ನು ‘ಎಲ್ಲಿಂದಲಾದರೂ ಕಾಣುವಷ್ಟು ಚಿಕ್ಕದು’ ಎಂದು ತಿಳಿಸಿದ್ದಾರೆ, ಆದರೆ ಇದೇ ಅಂತರ ಅವರಿಗೆ ಚಿನ್ನದ ಪದಕ ಕಳೆದುಕೊಳ್ಳಲು ಕಾರಣವಾಗಿದೆ.
ಪ್ರತಿ ಹಂತದಲ್ಲಿ ಅವರು ತಮ್ಮ ಶಕ್ತಿಯನ್ನೂ, ಅಸಮರ್ಥತೆಯನ್ನೂ ಗುರುತಿಸಿದ್ದಾರೆ. 2024ನೇ ಸಾಲಿನಲ್ಲಿ ಅವರು ಹೇಗೆ ಸುಧಾರಿಸಿಕೊಂಡಿದ್ದಾರೋ, ಅದನ್ನು ಮುಂದಿನ ವರ್ಷಕ್ಕೆ ಬಳಸಿಕೊಂಡು, ಮತ್ತೊಂದು ಸಾಧನೆ ಮಾಡಲು ಸಿದ್ಧರಾಗಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ . “2024 ನನಗೆ ತುಂಬಾ ಪಾಠ ಕಲಿಸಿದೆ. ನನ್ನ ತಂಡದ ಬೆಂಬಲದಿಂದ ನಾನುಮುನ್ನಡೆಯುತ್ತೇನೆ . 2025ರಲ್ಲಿ ನಾನು ಇನ್ನೂ ಉತ್ತಮವಾದ ಪ್ರದರ್ಶನವನ್ನು ಕೊಡುತ್ತೇನೆ ಎಂಬ ಭರವಸೆಯನ್ನು ವ್ಯಕ್ತ ಪಡಿಸಿದ್ದಾರೆ.
Leave feedback about this