ನಿಜವಾದ ಅಪಮಾನ ಯಾವುದು ? ನೀವು ಹಂಪಿ ಕಡೆ ಪ್ರವಾಸಕ್ಕೆ ಹೋಗಬೇಕು. ಕಲ್ಲಿನ ಮೇಲೆ ಇಷ್ಟೇ ಇಷ್ಟು ಮರಳು ಇರುತ್ತದೆ. ಅದರ ಮೇಲೆ ಹುಲ್ಲು ಬೆಳೆದಿರುತ್ತದೆ. ಸ್ವಲ್ಪ ಜೋರಾಗಿ ಗಾಳಿ ಬೀಸಿದರೆ ಹುಲ್ಲು ಮರಳಿನ ಸಮೇತ ಹಾರಿ ಹೋಗುತ್ತದೆ. ಆದರೂ ಇರುವಷ್ಟು ದಿನ ಅದು ನಗು ನಗುತ್ತಾ ಇರುತ್ತದೆ. ಅದು ಬಿಡಿ ಮಲ್ಲಿಗೆ ಹೂವು ಬದುಕುವುದು ಕೇವಲ 12. ತಾಸು ಆದರೂ ಅದು ನಗು ನಗುತ್ತಾ ಬದುಕಿ ತಾನು ಬದುಕಿರುವರೆಗೂ ತನ್ನ ಪರಿಮಳವನ್ನು ಇತರರಿಗೆ ಸೂಸುತ್ತಾ ಬದುಕುತ್ತೆ. ಆ ಹುಲ್ಲು ಕಡ್ಡಿಗೆ ಆ ಮಲ್ಲಿಗೆಗೆ ಇರುವ ಜೀವನ ಉತ್ಸಾಹ ನಮಗಿಲ್ಲವಲ್ಲ ? ಸಣ್ಣ ಸಣ್ಣ ಸೊಲಿಗೆಲ್ಲಾ ಕುಸಿಯುತ್ತೇವೆ. ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂತು ಎಂದು ಆತ್ಮಹತ್ಯೆ ಕೂಡ. ಈ ಸೋಲು ಸೋಲಲ್ಲ. ಅದೊಂದು ಘಟನೆ ಅಷ್ಟೇ. ಸೋತಾಗ ಎದ್ದು ನಿಲ್ಲುವುದು ಜಯ. ಸೋತಾಗ ಎದ್ದು ನಿಲ್ಲದೆ ಹೋಗುವುದು ಸೋಲು. ದೊಡ್ಡ ದೊಡ್ಡವರ ಜೀವನ ನೋಡಿ. ಅದೆಷ್ಟು ಸಲ ಸೋತರೂ ಮತ್ತೆ ಎದ್ದು ನಿಲ್ಲುತ್ತಾರೆ. ಸೋತಾಗ ಹುಲ್ಲು ಕಡ್ಡಿ ಮತ್ತು ಮಲ್ಲಿಗೆಯನ್ನು ನೆನೆಸಿಕೊಳ್ಳಿ ಅದಕ್ಕಿಂತ ನಾವು ಎಷ್ಟೋ ಮೇಲು.
MOTIVATIONAL
TIPS 4 LIFE
ನಿಜವಾದ ಅಪಮಾನ ಯಾವುದು ?
- by NIMMA KANNADATI
- September 20, 2024
- 0 Comments
- Less than a minute
- 242 Views
- 1 year ago

Leave feedback about this