ಭಾರತದ ಪುರುಷರ ಹಾಕಿ ತಂಡವು 2024ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು 4-1 ಅಂತರದಲ್ಲಿ ಸೋಲಿಸಿ ಫೈನಲ್ ಗೆ ಪ್ರವೇಶಿಸಿದೆ.
ಪಂದ್ಯದ ಪ್ರಾರಂಭದಿಂದಲೇ ಭಾರತ ತಂಡದ ಶ್ರೇಷ್ಠ ಪ್ರದರ್ಶನವನ್ನು ನೀಡಿತು. ಭಾರತದ ಪ್ರತಿಷ್ಠಿತ ಆಟಗಾರರಾದ, ಉತ್ತಮ್ ಸಿಂಗ್ (13ನೇ ನಿಮಿಷ), ನಾಯಕ ಹರ್ಮನ್ ಪ್ರೀತ್ ಸಿಂಗ್ (19 ಮತ್ತು 45ನೇ ನಿಮಿಷ) ಮತ್ತು ಜರ್ಮನ್ ಪ್ರೀತ್ ಸಿಂಗ್ (32ನೇ ನಿಮಿಷ) ಗೋಲುಗಳ ಮೂಲಕ ಟೀಮ್ ಗೆಲ್ಲಲು ಸಹಾಯ ಮಾಡಿದರು. ಕೊರಿಯಾ ಪರ, ಯಾಂಗ್ ಜಿಹುನ್ 33ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಿಸಿದರು.
ಇನ್ನೊಂದು ಸೆಮಿ ಫೈನಲ್ ನಲ್ಲಿ ಚೀನಾ ತಂಡವು ಪಾಕಿಸ್ತಾನ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 0-2 ಗೆಲುವು ಸಾಧಿಸಿ, ಫೈನಲ್ ಗೆ ತಲುಪಿದೆ. ಸೆಪ್ಟೆಂಬರ್ 17ರಂದು, ಭಾರತ ಮತ್ತು ಚೀನಾ ನಡುವಿನ ಫೈನಲ್ ಪಂದ್ಯ ನಡೆಯಲಿದೆ. ಲೀಗ್ ಹಂತದ ಪಂದ್ಯದಲ್ಲಿ ಭಾರತ ಚೀನಾ ವಿರುದ್ಧದ 3-0 ಅಂತರದಿಂದ ಗೆಲುವು ಸಾಧಿಸಿತ್ತು.
2011 ರಿಂದ ಆರಂಭವಾದ ಈ ಟೂರ್ನಿಯಲ್ಲಿ, ಭಾರತ 4 ಸಲ ಚಾಂಪಿಯನ್ ಆಗಿದ್ದು, ಪಾಕಿಸ್ತಾನ ಎರಡು ಬಾರಿ ಮತ್ತು ದಕ್ಷಿಣ ಕೊರಿಯಾ ಒಮ್ಮೆ ಪ್ರಶಸ್ತಿ ಗೆದ್ದಿದೆ.
ಇದೀಗ ಐದನೇ ಬಾರಿಗೆ ಚಾಂಪಿಯನ್ ಆಗಲು ಭಾರತ ಸಜ್ಜಾಗಿದೆ. ಮತ್ತೊಂದು ಕಡೆ ಚೀನಾ ಚೊಚ್ಚಲ ಚಾಂಪಿಯನ್ ಪಟ್ಟಕ್ಕೇರಲು ಭರ್ಜರಿ ಕಸರತ್ತು ನಡೆಸುತ್ತಿದೆ.
Leave feedback about this