MOTIVATIONAL SHORT STORIES

ಪ್ರಾರ್ಥನೆಯ ಮಹತ್ವ

ಒಬ್ಬ ವ್ಯಾಪಾರಿಯು ತಿಂಡಿ ಮಾಡಲು ಒಂದು ಹೋಟೆಲಿಗೆ ಹೋಗುತ್ತಾನೆ.  ಅಲ್ಲಿಯ ತಿಂಡಿ ಅವನಿಗೆ ತುಂಬಾ ಇಷ್ಟ ಆಗಿ ದಿನಾಲೂ ಆ ಹೋಟೆಲಿಗೆ ಹೋಗಿ ತಿಂಡಿ ತಿನ್ನಲು ಪ್ರಾರಂಭಿಸುತ್ತಾನೆ.

ಆ ಹೋಟೆಲ್ ಜನ ಜಂಗುಳಿನಿಂದ ತುಂಬಿರುವಾಗ ಒಬ್ಬವ್ಯಕ್ತಿ ಬಂದು ಅಲ್ಲಿ ತಿಂಡಿ ತಿಂದು ದುಡ್ಡು ಕೊಡದೆ ಹೋಗುವುದನ್ನು ಈ ವ್ಯಾಪಾರಿ ನೋಡುತ್ತಾನೆ.

ಹೀಗೆ ದಿನಾಲೂ ನಡೆಯುದನ್ನ ನೋಡಿ ಅವನು ಅದನ್ನು ಹೋಟೆಲ್ ಮಾಲಿಕನಿಗೆ ಹೇಳಬೇಕೆಂದು ನಿರ್ಧಾರ ಮಾಡುತ್ತಾನೆ. ಒಂದು ದಿನ ಆ ವ್ಯಾಪಾರಿಯು ತಿಂಡಿ ತಿಂದು ಆ ಹೋಟೆಲ್ ಮಾಲಿಕನಿಗೆ ಕಾದು ಅವನಿಗೆ ಈವಿಷಯ ತಿಳಿಸುತ್ತಾನೆ.  ಅವನಿಂದ ನಿಮ್ಮ ಹೋಟೆಲಿಗೆ ನಷ್ಟ ಆಗುತಿದೆ ಎಂದು ಹೇಳಿದಾಗ ಆ ಹೋಟೆಲ್ ಮಾಲಿಕನು ನಕ್ಕು ಆ ವ್ಯಾಪಾರಿಗೆ “ಈ ವಿಷಯವನ್ನು ನಿಮಗಿಂತ ಮೊದಲು ಬಹಳ ಜನ ಹೇಳಿದ್ದಾರೆ” ಆದರೆ ಈ ಹೋಟೆಲಿಗೆ ಬರುವ ಜನ ಅವರಿಂದಲೇ ಎಂದು ಹೇಳುವಾಗ ಆ ವ್ಯಾಪಾರಿಗೆ ಆಶ್ಚರ್ಯವಾಗುತ್ತದೆ.

“ಅದು ಹೇಗೆ” ?ಎಂದು ಕೇಳಿದಾಗ ……..

ಆ ಹೋಟೆಲ್ ಮಾಲಿಕನು “ನಾನು ಒಂದು ದಿನ ಅವನನ್ನ ಹಿಂಬಾಲಿಸಿ ಹೋದಾಗ ಅವನು ಹೋಟೆಲ್ ಮುಂದುಗಡೆ ಇರುವ ಬಸ್ ಸ್ಟ್ಯಾಂಡಿನ ಹತ್ತಿರ ಕುಳಿತು ದೇವರಲ್ಲಿ ನಮ್ಮ ಹೋಟೆಲಿಗೆ ಜನಗಳು ಬರಲು ಬೇಡುತ್ತಿದನು. ಜನಗಳು ಬಂದರೆ ನಾನು ಹೋಗಿ ತಿಂಡಿ ತಿಂದು ಬರಬಹುದು ಎಂದು ಯೋಚಿಸುತಿದ್ದನು. ಆದ್ದರಿಂದ ಇಲ್ಲಿ ಬರುವ ಜನಗಳು ಅವರ ಪ್ರಾರ್ಥನೆಯಿಂದ. ಆದುದರಿಂದ  ಅವನು ಬಂದು ತಿಂದು ಹೋದರೂ  ನಾನು ಎನೂ ಹೇಳುವುದ್ದಿಲ್ಲಎಂದನು.

ಇದನ್ನು ಕೇಳಿದ ಆ ವ್ಯಾಪಾರಿಯ ಕಣ್ಣು ತೆರೆಯಿತು.

ಪ್ರಾರ್ಥನೆಯಿಂದ ಏನೆಲ್ಲಾ ಸಾಧ್ಯ ಎಂಬುವುದು ಅವನಿಗೆ ಅರಿವಾಯಿತು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X