ಯಾರಾದರೂ ಉದ್ದವಾಗಿ ಸಣ್ಣಕ್ಕಿರುವ ಹುಡುಗಿ ಆಕರ್ಷಣೆಯೇ ಸರಿ. ಆದರೆ ಸಣ್ಣಕ್ಕಿರುವುದು ಎಂದರೆ ಸಣಕಲು ಹಾಗೂ ಒಣಗಿದ ದೇಹವೆಂದಲ್ಲ. ಇದು ಹೆಣ್ಣು ಹಾಗು ಗಂಡು ಮಕ್ಕಳಿಗೂ ಅನ್ವಯ. ಅದರಲ್ಲೂ ಗಂಡು ಮಕ್ಕಳಿಗಂತೂ ಸಣಕಲು ದೇಹ ಹೊಂದುವುದೆಂದರೆ ಬಲು ಮುಜುಗರ.
ಸಾಕಷ್ಟು ಕಸರತ್ತು ಕಷ್ಟ ಬಿದ್ದರೂ ಯಾವುದೇ ಬದಲಾವಣೆ ಕಾಣದೆ ಇರುವ ದೇಹ ಕೆಲವರಿಗೆ ನಿರಾಶೆ ಹಾಗು ಕಿರಿಕಿರಿ ಎನಿಸಬಹುದು. ದೇಹ ದಪ್ಪವಿರಬೇಕು ಎಂಬುದಲ್ಲ ಬದಲಾಗಿ ದೇಹ ಗಟ್ಟಿಯಾಗಿರಬೇಕು. ಕೆಲವರು ಅನುವಂಶೀಯವಾಗಿ ದಪ್ಪವಿದ್ದರೆ ಇನ್ನು ಕೆಲವರು ಸಣಕಲಾಗಿರುತ್ತಾರೆ. ಹೆಣ್ಣು ಹಾಗು ಗಂಡು ಮಕ್ಕಳು ನೋಡಲು ಸಾದಾರಣ ಮೈಕಟ್ಟು ಹೊಂದಿದ್ದರೆ ಎಲ್ಲರನ್ನು ತಮ್ಮತ್ತ ಆಕರ್ಷಿಸುತ ಎಲ್ಲರ ಗಮನ ಸೆಳೆಯುತ್ತಾರೆ.
ಹೆಣ್ಣು ಮಕ್ಕಳಂತೂ ಪ್ರಬುದ್ಧರಾಗುತ್ತಿದ್ದಂತೆ ತಮ್ಮ ಆಹಾರ, ದೇಹ ಸೌಂದರ್ಯ ಇನ್ನು ಇತರ ವಿಚಾರಗಳಿಗೆ ಹೆಚ್ಚಿನ ಆಧ್ಯತೆ ನೀಡಲು ಶುರು ಮಾಡುತ್ತಾರೆ. ಕೆಲವರು ಮೊದಲಿನಿಂದಲೂ ಸಣಕಲು ದೇಹವನ್ನು ಹೊಂದಿದ್ದು ಎಷ್ಟೇ ಪ್ರಯತ್ನ ಪಟ್ಟರೂ ಸಣಕಲಾಗಿಯೇ ಉಳಿಯುತ್ತಾರೆ. ಅವರು ಎಷ್ಟೇ ತಿಂದು ಕುಡಿದರೂ ಅವರ ದೇಹ ದಾಢ್ಯತೆ ಯಲ್ಲಿ ಯಾವುದೇ ಬದ್ಲಾವಣೆ ಕಾಣುವುದಿಲ್ಲ. ಇದರ ಅರ್ಥ ಅವರು ಬಲಹೀನ ಎಂದು ಅರ್ಥವಲ್ಲ. ಈ ಸಣಕಲು ದೇಹದವರು ಮಾಡುವ ಕೆಲಸ ದಪ್ಪ ದೇಹದಾಢ್ಯತೆ ಕಾಣುವ ವ್ಯಕ್ತಿಗಳಿಂದ ಅಸಾಧ್ಯವಾಗಬಹುದು.
ಕೆಲವರು ಯೋಚಿಸುವಂತೆ ಸಣಕಲು ದೇಹ ಹಾಗು ಬಲಹೀನತೆಗೆ ರಕ್ತಹೀನತೆಯೇ ಕಾರಣ ಎಂದು ಅನಿಸಬಹುದು ಆದರೆ ಇದಕ್ಕೆ ಹಲವಾರು ಬೇರೆ ಕಾರಣಗಳು ಇವೆ.
ದೇಹದಾಢ್ಯತೆಯನ್ನು ಹೊಂದಲು ಮತ್ತು ದೇಹವನ್ನು ಬಲಗೊಳಿಸಲು ಇಲ್ಲಿವೆ ಕೆಲವು ಉಪಾಯಗಳು
- ಆಹಾರದಲ್ಲಿ ಯಾವಾಗಲೂ ಹಾಲು, ಮೊಸರು, ತುಪ್ಪ, ಹಣ್ಣು ಹಂಪಲು ತಪ್ಪದೇ ಇರಲಿ.
2. ಹಸಿರು ತರಕಾರಿ ಬೇಳೆ ಕಾಳುಗಳು ಬಲು ಅಗತ್ಯ.
3. ಅಲ್ಲದೆ ಬೆಣ್ಣೆ, ಮಾಂಸ, ಮೀನು, ಮೊಟ್ಟೆ, ಶೇಂಗಾ, ಬಹಳ ಒಳ್ಳೆಯದು.
4. ಪನೀರ್, ಮೊಳಕೆ ಕಟ್ಟಿದ ಕಾಳುಗಳು ಉಪಯೋಗಿಸುವುದು ಬಹಳ ಒಳ್ಳೆಯದು.
5. ಇದಲ್ಲದೆ ವಿಶೇಷವಾಗಿ ಹಾಲಿನ ಕೆನೆ ನಿಮ್ಮ ದೇಹದ ತ್ವಚೆಯನ್ನು ವಯಸ್ಸಾದ ಮೇಲು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.
ಇನ್ನು ಸಣ್ಣಕಲು ದೇಹದವರು ಬಹಳ ಹೊತ್ತು ತಮ್ಮ ಹೊಟ್ಟೆಯನ್ನು ಖಾಲಿ ಬಿಡುವ ಬದಲು, ದಿನಕ್ಕೆ ಆರು ಬಾರಿಯಾದರೂ ಸಣ್ಣ ಸಣ್ಣ ಊಟವನ್ನು ಅಥವಾ ತಿಂಡಿ ತಿನಿಸನ್ನು ತಿನ್ನುವುದರಿಂದ ತಮ್ಮ ದೇಹದ ಗಾತ್ರವನ್ನು ಹೆಚ್ಚಿಸಬಹುದು. ಈ ಮಧ್ಯದಲ್ಲಿ ಒಂದು ಅಥವಾ ಎರಡು ದಿನ ಉಪವಾಸ ವೃತ ದೇಹಕ್ಕೆ ಖಂಡಿತವಾಗಿಯೂ ಲಾಭದಾಯಕ ಒಂದು ವೇಳೆ ನಿಮಗೆ ಹಸಿವು ಬಹಳ ಕಡಿಮೆ ಇದ್ದರೆ ಮಜ್ಜಿಗೆಯನ್ನು ಹಲವು ಬಾರಿ ಕುಡಿಯುವುದರಿಂದ ನಿಮ್ಮ ಹಸಿವನ್ನು ಹೆಚ್ಚಿಸಬಹುದು. ದೇಹದಾಢ್ಯತೆಯನ್ನು ಹೆಚ್ಚಿಸಲು ಪ್ರತಿದಿನ ಊಟದ ನಂತರ ಒಂದು ಬಾಳೆಹಣ್ಣನ್ನು ತಿನ್ನುವುದು ಒಳ್ಳೆಯದು. ಅದರಂತೆ ಜೇನು ಬೆರೆಸಿದ ಹಾಲನ್ನು ಕುಡಿಯುವುದರಿಂದ ದೇಹದ ತೂಕವನ್ನು ಹೆಚ್ಚಿಸಬಹುದು.
ಇದರ ಜೊತೆಗೆ ಹಾಲು ಹಾಗೂ ಕರ್ಜೂರ ಹಾಲಿನಲ್ಲಿ ಮಾಡಿದ ತೆಂಗಿನ ಕಾಯಿಯ ಪಾಯಸ, ಹಾಲಿನಲ್ಲಿ ಬೆರೆಸಿದ ಅಶ್ವಗಂಧ ಹಾಗೂ ನೆನೆಸಿದ ಶೇಂಗಾ ಬೀಜ ತಿನ್ನುವುದರಿಂದ ಮತ್ತು ಬೆಣ್ಣೆ ಹಾಗೂ ತುಪ್ಪ ಊಟದ ಜೊತೆಗೆ ತಿಂದರೆ ಒಳ್ಳೆಯದು. ಬೆಳಗಿನ ಮುಂಜಾವ ತಾಜಾ ಗಾಳಿಯನ್ನು ಸೇವಿಸುವುದಲ್ಲದೆ ನಿಧಾನವಾಗಿ ಉಸಿರಾಡುತ್ತಾ, ನಿಧಾನವಾಗಿ ಉಸಿರನ್ನು ಚೆಲ್ಲುತ್ತಾ ಇದನ್ನು ಪುನರಾವರ್ತಿಸುತ್ತಾ ದಿನಕ್ಕೆ ನಿಯಮಿತ ಕಾಲದಲ್ಲಿ ಬೇಕಾದಷ್ಟು ನೀರನ್ನು ಸೇವಿಸುವುದರಿಂದ ದೇಹವನ್ನು ಆರೋಗ್ಯವಾಗಿ ಇಡಬಹುದು.
ಬೇರೆಯವರ ವಿಷಯಗಳಿಂದ ದೂರವಿದ್ದು ನಕಾರಾತ್ಮಕ ವ್ಯಕ್ತಿಗಳೊಡನೆ ಸಂಪರ್ಕ ಕಡಿತಗೊಳಿಸಿ ಯಾವಾಗಲೂ ಖುಷಿಖುಷಿಯಾಗಿರುವುದು ದೇಹಕ್ಕೆ ಒಳ್ಳೆಯದು. ಒಬ್ಬ ಆರೋಗ್ಯ ವ್ಯಕ್ತಿಗೆ ಏನಿಲ್ಲವೆಂದರು ಆರರಿಂದ ಎಂಟು ಗಂಟೆಗಳ ಕಾಲ ನಿದ್ರೆ ಅತ್ಯಗತ್ಯ. ಅದಲ್ಲದೆ ಯಾವುದೇ ಕಾಯಿಲೆಗಳು ಉಂಟಾಗುವ ಸಂದರ್ಭಗಳು ಒದಗಿ ಬಂದರೆ ತಕ್ಷಣವೇ ವೈದ್ಯರನ್ನು ಕಂಡು ಪರಿಹಾರ ಪಡೆಯುವುದು ಒಳ್ಳೆಯ ನಿರ್ಧಾರ.
Leave feedback about this