HEALTH 4 U HOME REMEDY

ದಟ್ಟವಾದ ಕೂದಲಿಗೆ – ನುಗ್ಗೆ ಸೊಪ್ಪು-ಸರಿಯಾಗಿ ಬಳಸಿದರೆ ಇದೊಂದೇ ಸಾಕು

 ನುಗ್ಗೆ ಸೊಪ್ಪು ನಿಮ್ಮ ದಟ್ಟವಾದ ಕೂದಲಿಗೆ ಹಾಗು ಕಾಂತಿಯುತ ಚರ್ಮಕ್ಕೆ 

ನುಗ್ಗೆ ಸೊಪ್ಪಿನ ಇನ್ನೊಂದು ಹೆಸರೇ ಮೋರಿಂಗ. ಇದು ಹಲವಾರು ರೀತಿಯ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದ್ದು ಕೂದಲನ್ನು ಪೋಷಿಸಲು ಹಾಗು ಚರ್ಮದ ಕಾಂತಿಯನ್ನು ಹೆಚ್ಚಿಸುವಲ್ಲಿ ಉತ್ತಮ ಪಾತ್ರ ವಹಿಸುವುದಲ್ಲದೆ ಜೀರ್ಣ ಕ್ರಿಯೆಯನ್ನು ಸುಲಭ ಗೊಳಿಸುವುದರಲ್ಲೂ ನಮ್ಮ ದೇಹದ ಮುಖ್ಯವಾದ ಯಕೃತ್ತನ್ನು ಸಮತೋಲನದಲ್ಲಿಡಿಸಲು, ಉದರದಲ್ಲಿ ಉಂಟಾಗುವ ತೊಂದರೆಗಳಿಗೆ ಉಪಶಮನ ನೀಡುವುದರಿಂದ ಹಿಡಿದು ಕಣ್ಣಿನ ಆರೋಗ್ಯವನ್ನು ಸುಧಾರಿಸುವಲ್ಲಿಯೂ ಬಹು ಮುಖ್ಯ ಪಾತ್ರ ವಹಿಸುತ್ತದೆ.  ಇದು ಎಲ್ಲಾ ವಿಟಮಿನ್, ಪ್ರೊಟೀನ್ ಹಾಗು ಖನಿಜಾಂಶಗಳನ್ನು ಹೊಂದಿರುವ ಏಕ ಮಾತ್ರ ಅಕ್ಷಯ ಪಾತ್ರೆ.

ವಿಟಮಿನ್ಗಳ ಆಗರ 

ನುಗ್ಗೆ ಸೊಪ್ಪಿನ ವೈಶಿಷ್ಟ್ಯವೆಂದರೆ ಯಾವುದೇ ಇತರೆ ತರಕಾರಿ ಹಣ್ಣು ಹಂಪಲುಗಳಿಂದ ಒಟ್ಟಾಗಿ ಸಿಗುವ ಎಲ್ಲಾ ವಿಟಮಿನ್ ಹಾಗು ಖನಿಜಾಂಶಗಳನ್ನು ಕೇವಲ ಈ ನುಗ್ಗೆ ಸೊಪ್ಪು ಕೊಡಬಲ್ಲದು.ವಿಟಮಿನ್ A  ವಿಟಮಿನ್  C ಮತ್ತು ವಿಟಮಿನ್ E  ಇಂದ ತುಂಬಿಕೊಂಡಿದೆ. ಇದನ್ನು ” ಮಿರಾಕಲ್ ಟ್ರೀ ” ಎಂದು ಕರೆಯಲಾಗುತ್ತದೆ.

ಇದು ಹಾಲಿಗಿಂತ ಬರೋಬ್ಬರಿ 13 ಪಟ್ಟು ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿದೆ.

ಬಾಳೆಹಣ್ಣಿಗಿಂತ ಬರೋಬ್ಬರಿ 15 ಪಟ್ಟು ಹೆಚ್ಚು ಪೊಟ್ಯಾಸಿಯಂ ಹೊಂದಿದೆ.

ಕಿತ್ತಳೆ ಹಣ್ಣಿಗಿಂತ ಬರೋಬ್ಬರಿ 7 ಪಟ್ಟು ಹೆಚ್ಚು ಸಿ ವಿಟಮಿನ್ ಹೊಂದಿದೆ. 

ಯೋಗರ್ಟ್ ಗಿಂತ 9 ಪಟ್ಟು ಹೆಚ್ಚು ಪ್ರೊಟೀನ್.

ಪಾಲಕ್ ಸೊಪ್ಪಿಗಿಂತ 25 ಪಟ್ಟು ಹೆಚ್ಚು ಕಬ್ಬಿಣಂಶ ಹಾಗು

ಕ್ಯಾರಟ್ ಗಿಂತ 10 ಪಟ್ಟು ಹೆಚ್ಚು ವಿಟಮಿನ್ A  ಯನ್ನು ಹೊಂದಿದೆ.

ಮೊರಿಂಗಾ ಎಲೆಗಳ ಲಾಭಗಳು:

ಪೋಷಕಾಂಶಗಳ ಸಮೃದ್ಧಿ:

ಮೊರಿಂಗಾ ಎಲೆಗಳು ವಿಟಮಿನ್ A, ವಿಟಮಿನ್ C, ಕಬ್ಬಿನಾಂಶ,  ಕ್ಯಾಲ್ಸಿಯಂ, ಹಲವಾರು ಜೀವಸತ್ವಗಳು ಮತ್ತು ಪ್ರೊಟೀನ್ ಗಳಿಗೆ ಸೀಮಿತವಾಗಿರದೆ ಅನೇಕ ಶಕ್ತಿ ನಿರೋಧಕ ಗಳಿಂದ  ಸಮೃದ್ಧವಾಗಿವೆ. ಮೋರಿಂಗ ಎಲೆಗಳನ್ನು ಬಳಸುವುದರಿಂದ ಕೂದಲು ಹಾಗು ಚರ್ಮದಲ್ಲಾಗುವ ಬದಲಾವಣೆಯನ್ನು ಕೇವಲ ಮೂರು ತಿಂಗಳಲ್ಲೇ ಗಮನಿಸಬಹುದು. 

ಆಂಟಿಆಕ್ಸಿಡೆಂಟ್ಸ್:

ಮೊರಿಂಗಾ ಎಲೆಗಳಲ್ಲಿ ಆಂಟಿಆಕ್ಸಿಡೆಂಟ್ಸ್ ಅಂಶಗಳು ಉನ್ನತ ಮಟ್ಟದಲ್ಲಿವೆ. ಇವು ದೇಹದ ಉಚಿತ ರ್ಯಾಡಿಕಲ್ಗಳನ್ನು ಹತೋಟಿಯಲ್ಲಿ ಇಡುತ್ತವೆ. ನುಗ್ಗೆ ಸೊಪ್ಪಿನಲ್ಲಿ ದೇಹಕ್ಕೆ ಬೇಕಾದ 9 ಅಮೈನೋ ಆಮ್ಲಗಳು ಹುದುಗಿವೆ. ಇವು ದೇಹದ ಸ್ನಾಯುಗಳ ದುರಸ್ತಿ ಹಾಗು ದೇಹದ ಇತರೆ ಕಾರ್ಯ ಚಟುವಟಿಕೆಗಳಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸಸ್ಯಾಹಾರಿಗಳು ಇದನ್ನ ಸೇವಿಸುವುದರಿಂದ ಅವರಿಗೆ ಬೇಕಾದ ಹೇರಳವಾದ ಪ್ರೊಟೀನ್ ಮೂಲಗಳು ಇದರಲ್ಲಿ ದೊರೆಯುತ್ತದೆ. 

ಬಲಿಷ್ಠ ರೋಗನಿರೋಧಕ ಶಕ್ತಿ:

ಮೊರಿಂಗಾ ಎಲೆಗಳಲ್ಲಿ ಇರುವ ಪೋಷಕಾಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನುಗ್ಗೆ ಸೊಪ್ಪಿನಲ್ಲಿ ಅತೀ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಹೊಂದಿದ್ದು ಅವುಗಳು ಮೂಳೆಯ ಅರೋಗ್ಯ ಹಾಗು ರಕ್ತ ಹೀನತೆಯಲ್ಲಿ ಬಹಳಷ್ಟ್ ಹೆಚ್ಚಿನ ಪಾತ್ರವಹಿಸುತ್ತದೆ.

ಅರೋಗ್ಯಕರ ಚರ್ಮ:

ಮೊರಿಂಗಾ ಎಲೆಗಳಲ್ಲಿ ವಿಟಮಿನ್ A ಮತ್ತು ವಿಟಮಿನ್ C ಇರುವುದರಿಂದ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.

ಅರೋಗ್ಯಕರ ಚಲನೆ:

ಮೊರಿಂಗಾ ಎಲೆಗಳಲ್ಲಿ ಇರುವ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ದೇಹದ ಚಲನೆಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತವೆ.

ಉತ್ತಮ ದೇಹದ ತೂಕ ನಿಯಂತ್ರಣ:

ಮೊರಿಂಗಾ ಎಲೆಗಳಲ್ಲಿ ಕಡಿಮೆ ಕ್ಯಾಲೊರಿಗಳು ಇರುವುದರಿಂದ ದೇಹದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ರಕ್ತದ ಶುದ್ಧೀಕರಣ:

ಮೊರಿಂಗಾ ಎಲೆಗಳಲ್ಲಿ ವಿಟಮಿನ್ C ಮತ್ತು ಫ್ಲಾವನಾಯಿಡ್ಸ್ ಇರುವುದರಿಂದ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯ:ಮೊರಿಂಗಾ ಎಲೆಗಳಲ್ಲಿ ಇರುವ ಪೋಷಕಾಂಶಗಳು ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳಲು ಸಹಾಯಕವಾಗಿವೆ.

ಮೋರಿಂಗ ಎಲೆಗಳು ದೇಹಕ್ಕೆ ಹೆಚ್ಚಿನ ಮೊತ್ತದ ಉಷ್ಣಾಂಶವನ್ನು ಉಂಟು ಮಾಡುವುದರಿಂದ ವಾರದಲ್ಲಿ ಕೇವಲ ಎರಡು ಬಾರಿ ಒಂದು ಹಿಡಿ ಸೊಪ್ಪನ್ನು ಅರೆದು ಸೋಸಿ ಯಾವುದಾದರು ಸೂಪ್ ನೊಂದಿಗೆ ಸೇವಿಸಬಹುದು. ಹೆಚ್ಚಿನ ಮೊತ್ತದ ಲಾಭ ಪಡೆಯಲು ನುಗ್ಗೆ ಸೊಪ್ಪನ್ನು ಚೆನ್ನಾಗಿ ತೊಳೆದು ಉರಿ ಬಿಸಿಲಲ್ಲಿ ಒಣಗಿಸಿ ಹುಡಿ ಮಾಡಿ ಶೇಖರಿಸಿ ಫ್ರಿಡ್ಜ್ ನಲ್ಲಿ ಇರಿಸುವುದರಿಂದ ವರ್ಷ್ ಪೂರ್ತಿ ಉಪಯೋಗಿಸಲು ಸಹಕಾರಿ.

ಒಟ್ಟಾಗಿ ಹೇಳುವುದಾದರೆ ನುಗ್ಗೆಕಾಯಿಕ್ಕಿಂತ ನುಗ್ಗೆ ಸೊಪ್ಪಿನಲ್ಲೇ ಖನಿಜಾಂಶಗಳು ದುಪ್ಪಟ್ಟಾಗಿವೆ.

ಮುರುಂಗ ಎಲೆಗಳನ್ನು ಆಹಾರದಲ್ಲಿ, ಜ್ಯೂಸ್, ಚಹಾ ಅಥವಾ ಪುಡಿಯಲ್ಲಿ ಬಳಸಬಹುದು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X