ಸುಖ ಜೀವನಕ್ಕೆ 18 ನಿಯಮಗಳು
1. ನಿಮ್ಮ ಸಮಯವನ್ನು ನಿಮ್ಮ ಅತ್ಯಂತ ಪ್ರೀತಿ ಪಾತ್ರರೊಂದಿಗೆ ಕಳೆಯಿರಿ.
2. ನಾಳೆ ಗಾಗಿ ಹಣವನ್ನು ಕಾದಿರಿಸಿ ಭವಿಷ್ಯಕ್ಕೆ ಹಣದ ಅವಶ್ಯಕತೆ ಇದೆ.
3. ಬದಲಾವಣೆಯನ್ನು ಒಪ್ಪಿಕೊಳ್ಳಿ ಅದು ಬಂದೇ ಬರುತ್ತದೆ.
4. ಸೋಲಿನಿಂದ ಪಾಠ ಕಲಿಯಿರಿ ಅದು ನಿಮ್ಮನ್ನು ಗೆಲುವಿನ ಕಡೆಗೆ ರೂಪಗೊಳ್ಳಲು ಸಹಕರಿಸುತ್ತದೆ.
5. ಗೆಲುವು ಮತ್ತು ಕರುಣೆಯಲ್ಲಿ ಕರುಣೆ ತುಂಬಾ ಅಗತ್ಯ.
6. ಆರೋಗ್ಯವೇ ಭಾಗ್ಯ ಆರೋಗ್ಯಕ್ಕೆ ಗಮನ ಕೊಡಿ.
7. ಸಹನೆ ಎಂಬುದು ಒಳ್ಳೆಯ ಸದ್ಗುಣ ಅದನ್ನು ಅಳವಡಿಸುವುದು ಉತ್ತಮ ವಿಶಾಲ ದೃಷ್ಟಿಕೋನವನ್ನು ಇಟ್ಟು ನಡೆಯಿರಿ.
8. ಸಣ್ಣ ಸಣ್ಣ ವಿಚಾರಗಳಲ್ಲೂ ಖುಷಿಪಡುವುದನ್ನು ಕಲಿಯಿರಿ.
9. ಕಲಿಯುವುದನ್ನು ಎಂದಿಗೂ ನಿಲ್ಲಿಸಬೇಡಿ. ಜ್ಞಾನವೇ ನಿಮ್ಮ ಶಕ್ತಿ.
10.ಮನಸ್ಸಿನ ಆರೋಗ್ಯಕ್ಕೆ ಮೊದಲ ಆದ್ಯತೆ ಕೊಡಿ. ಅದು ನಿರ್ಣಾಯಕ.
11. ನಿಮ್ಮ ಅಂತ ಪ್ರಜ್ಞೆಯನ್ನು ಕೇಳಿಸಿಕೊಳ್ಳಿ. ಅದು ತುಂಬಾ ಅಗತ್ಯ.
12. ಕ್ಷಮೆ ನಿಮ್ಮ ಆತ್ಮವನ್ನು ಮುಕ್ತಗೊಳಿಸುತ್ತದೆ.
13. ಕೃತಜ್ಞತೆಯು ಸಂತೋಷದ ಬಾಗಿಲನ್ನು ತೆರೆಯುತ್ತದೆ.
14. ಸಕಾರಾತ್ಮಕ ವ್ಯಕ್ತಿಗಳೊಂದಿಗೆ ಮಾತ್ರ ನಿಮ್ಮ ನೆಂಟಿರಲಿ.
15. ತಮ್ಮನ್ನು ತಾವು ಅವಲೋಕಿಸಲು ಏಕಾಂತವನ್ನು ಸ್ವೀಕರಿಸಿ.
16. ಸಣ್ಣ ಸಣ್ಣ ಸವಾಲುಗಳನ್ನು ತೆಗೆದುಕೊಳ್ಳಿ. ಅವು ನಿಮ್ಮ ವಿಜಯಕ್ಕೆ ಕಾರಣವಾಗಬಹುದು.
17. ಬದಲಾಗುತ್ತಿರುವ ಜಗತ್ತಿನಲ್ಲಿ ಹೊಂದಿಕೊಳ್ಳಲು ನೀವು ಬದಲಾಗಿ.
18. ಉತ್ಸಾಹ ಮತ್ತು ಉದ್ದೇಶದಿಂದ ಜೀವನವನ್ನು ನಡೆಸಿ.
Leave feedback about this