ಆ ಜಾತಿ…………. ಈ ಜಾತಿ…………….. ಎಷ್ಟೊಂದು ಮುನಿಸುಗಳು………. ಜಗಳಗಳು ಅಲ್ವಾ ?
ಈ ಜಗಳಗಳು ಒಂದು ಕಡೆಯಾದರೆ,,,,,,,,,,, ಸ್ಪರ್ಧೆಗಳು ಯಾವತರ………??????
ಸ್ಪರ್ಧೆ ಅಂದ್ರೆ ಸಣ್ಣ ಸಣ್ಣ ಮಕ್ಕಳಲ್ಲೂ ಸ್ಪರ್ಧೆ. ಇತ್ತೀಚಿಗೆ ಒಂದು ಸ್ಕೂಲ್ ಟೀಚರ್ ಸಿಕ್ಕಿ ಹೇಳಿದ್ದೇನಂದ್ರೇ……………………….
ಈಗಿನ ಸಣ್ಣ ಸಣ್ಣ ಮಕ್ಳು ಸಹ ತಮ್ಮ ತರಗತಿಯಲ್ಲಿ ಯಾರು ಜಾಸ್ತಿ ಅಂಕ ತಗೋತಾರೋ ಅವರ ಪಠ್ಯ ಪುಸ್ತಕ ನೋಟ್ಸ್ಗಳನ್ನ dustbin ನಲ್ಲಿ ಹಾಕಿರೋದು.
ಮಕ್ಕಳಿದು ಹಾಗೆ ಇರ್ಲಿ.
ದೊಡ್ಡವರ ಕಥೆಗೆ ಬರೋಣ.
ಜಾತಿ ಜಾತಿ ಅಂತ ಹೊಡ್ಕೊಂಡು ಮಾತ್ ಮಾತಿಗೂ ಹೊಡೆದಾಡುವ ಜನರ ಕಡೆಗೆ ಒಮ್ಮೆ ಕಣ್ ಹರಿಸಬೇಕು ……….
ಇತ್ತೀಚಿಗೆ ನಡೆದ ವಯನಾಡಿನ ಕಣ್ಣೀರ ಹಾಗು ಪ್ರಾಣ ಕಳೆದುಕೊಂಡ ದೇಹಗಳ ಕಥೆ.
ಅದೆಷ್ಟು ಜನ ಆನ್ಲೈನ್ ನಲ್ಲಿ ಹೊಸಬಟ್ಟೆಗಾಗಿ ಆರ್ಡರ್ ಹಾಕಿದ್ದರು……. ಅದೆಷ್ಟು……….. ಎಷ್ಟೋ ಹೆಣ್ಮಕ್ಳು ತಮ್ಮನ್ನು ಸುಂದರವಾಗಿಸಲು ಅದೇಷ್ಟೋ ಕ್ರೀಮ್ಗಳ ಆರ್ಡರ್ ಹಾಕಿದ್ದರು.
ಅದೆಷ್ಟೋ ಜನರು ಹೊಸ ಗಾಡಿಗಳನ್ನು ಬುಕ್ ಮಾಡಿದ್ದರು.
ಅದೆಷ್ಟೋ ಮನೆಗಳ ಪಾತ್ರೆಗಳು ತಯಾರಿಸಿದ ಆಹಾರವನ್ನು ಮರುದಿನಕ್ಕಾಗಿ ಕಾದಿರಿಸಿದ್ದರು.
ಅದೆಷ್ಟೋ ಜನರು ನಾಳೆ ಕರೆಮಾಡುವುದಾಗಿ ಮೆಸೇಜ್ ಕಳುಹಿಸಿದ್ದರು.
ಅದೆಷ್ಟೋ ಗರ್ಭಿಣಿಯರು ತನ್ನ ಹೊಟ್ಟೆಯಲ್ಲಿದ್ದ ಮಗುವಿನ ಬರುವಿಕೆಗೆ ಕಾದಿದ್ದರು…………….. ಅದಕ್ಕಾಗಿ ಹೆಣ್ಣು ಹುಟ್ಟಿದರೆ ಈ ಹೆಸರು………….. ಗಂಡು ಹುಟ್ಟಿದರೆ ಆ ಹೆಸರು ಎಂದು ನಿರ್ಧರಿಸಿದ್ದರು.
ಇನ್ನೂ ಕೆಲವರು ತನ್ನ ಹೆಂಡತಿ,,, ಮಕ್ಕಳು,,,,, ತಾಯಿಯನ್ನು ಅಲ್ಲೇ ಬಿಟ್ಟು ವಿದೇಶ ಸೇರಿದ್ದರು.
ಅದೆಷ್ಟೋ ಜನ ಮುಂದಿನ ತಿಂಗಳಲ್ಲಿ ಮದುವೆಯ ತಯಾರಿಯ್ಲಲಿದ್ದರು.
ಹುಡುಗ ಹುಡುಗಿಯ ಪ್ರೇಮ ಸಂದೇಶಗಳು ಒಂದು ಕಡೆಯಿಂದ ಇನ್ನೊಂದು ಕಡೆ ರಪ್ ರಪ್ ಎಂದು ಕುಣಿಯುತ್ತಿದ್ದವು.
ಜೀವನದಲ್ಲಿ ದುಡ್ಡಿಲ್ಲದವರಿಗೆ ಅಯ್ಯೋ ನನ್ನಲ್ಲಿ ಬೇಕಾದಷ್ಟು ದುಡ್ಡಿದ್ದರೆ ಅನ್ನೋ ಆಸೆ………….
ಇನ್ನೂ ಕೆಲವರಿಗೆ ನನ್ನಲ್ಲಿ ಇರೋ ದುಡ್ಡನ್ನು ಇನ್ನಷ್ಟು ಹೆಚ್ಚಿಸಬೇಕು ಎಂಬ ಆಸೆ.
ಇನ್ನೂ ಕೆಲವರಿಗೆ,,,,,,,,,,,,,,,,,,,,,,,,, ನನ್ನ ಕೂದಲು ಇನ್ನೆರಡು ಇಂಚು ಉದ್ದ ಬೆಳೆದರೆ ಸ್ಟ್ರೇಟನಿಂಗ್ ಮಾಡಬೇಕು ಅನ್ನೋ ಆಸೆ…………….
ಹೀಗೆ ಮನೋ ಸಹಜ ಆಸೆಗಳನ್ನು ಹೊತ್ತು ಎಲ್ಲರೂ ನಿದ್ರಾ ಲೋಕ್ಕಕ್ಕೆ ಜಾರಿದ್ದರು.
ಆದರೆ ಈ ಎಲ್ಲಾ ಆಸೆಗಳಿಗಾಗಿ,,,,,,,,,,,,,,,,,,,,,,,,,,,,,,,,,,,,,,,,,,,, ಅವಳೊಬ್ಬಳನ್ನು ಮಾತ್ರ ಹಿಂಸಿಸಲಾಗಿತ್ತು.
ಅವಳೋ ಎಲ್ಲರು ಕೊಡೊ ಚಿತ್ರ ಹಿಂಸೆಯನ್ನ ತುಂಬಾನೇ ಸಹಿಸಿದ್ದಳು.
ಈ ಹಿಂಸೆ ಹಲವು ಕಡೆ ಹಲವು ವರ್ಷಗಳಿಂದ ಮುಂದುವರೆದಿತ್ತು. ಆದರೂ ಅವಳೂ ತುಂಬಾನೇ ಮೌನ ವಹಿಸಿದ್ದಳು…………….
ಆದರೆ ಅಂದು ರಾತ್ರಿ ಅವಳಿಗೇನಾಯಿತೋ ಗೊತ್ತಿಲ್ಲ. ಸಂಜೆಯಾಗುತ್ತಲೇ ಕೋಪಗೊಂಡಿದ್ದಳು……………..
ಅವಳನ್ನು ಸಮಾಧಾನ ಪಡಿಸಲು ಅವಳ ಕಡೆ ತಿರುಗಿ ನೋಡಿದವರೇ ಇಲ್ಲ……………. ಅವಳ ಗೊಡವೆಗೆ ಯಾರು ಹೋಗಲಿಲ್ಲ ಅಂದು. ……………….
ಹೌದು ಅಂದು ಸಾಯಂಕಾಲವೇ ಅವಳ ಕಣ್ಣೀರ ಕಟ್ಟೆ ಒಡೆದು ಹೋಗಿತ್ತು …………………..
ಅವಳ ಒಡಲು ಬಾರವಾಗಿತ್ತು.
ಇನ್ನೆಷ್ಟು ಸಹಿಸಲಿ ನಾನು ಎಂದು ಅವಳೊಳಗೆ ಅವಳೇ ಮಾಡಿದ ಯುದ್ದದ್ದಲ್ಲಿ ಆವಳು ಸೋತುಹೋಗಿದ್ದಳು………..
ಅತ್ತು ಅತ್ತು ಸುಸ್ತಾಗಿದ್ದಳು ಅವಳನ್ನು ಸಮಾಧಾನ ಪಡಿಸಲು ಯಾರು ಹೋಗಲೇ ಇಲ್ಲ…………………..
ಸರಿ ಸುಮಾರು ಬೆಳಗಿನ ಮುಂಜಾವ………………….
ಇಡೀ ಮನುಕುಲವೇ ಗಾಢ ನಿದ್ರೆಯಲ್ಲಿ ತೇಲಿಕೊಂಡಿರುವಾಗ ತನ್ನ ದುಃಖ ಉಮ್ಮಳಿಸಿ ಹೊರ ಬಂದಿತ್ತು ಅವಳಿಗೆ………………….
ಅಂದು ಅವಳಿಗೆ ಅದೆಷ್ಟು ಕೋಪ ಬಂದಿತ್ತೆಂದರೆ………………….. ವಯ್ಯಸ್ಸಾದೌರು,,,,,,,,,,,,,,,,,,,, ಹಸುಗೂಸುಗಳು,,,,,,,,,,,,,,,,,, ಮಕ್ಕಳು ವೃದ್ದರು,,,,,,,,,,,,,,,,,,,,, ರೋಗಿಗಳು,,,,,,,,,,,,,,,,,, ಯುವಕರು,,,,,,,,,,, ಯಾರ ಮೇಲೂ ಕರುಣೆ ತೋರಲಿಲ್ಲ………….
ಯಾರಿಗೂ ಭಯ ಪಡಲೇ ಇಲ್ಲ………….
ಎಲ್ಲರನ್ನೂ ತನ್ನ ಒಡಲಿಗೆ ಕರೆದಿದ್ದಳು……………..
ಎಲ್ಲರನ್ನು ತನ್ನ ಒಡಲಿನಲ್ಲಿ ಸೇರಿಸುತ್ತಾ….. ತನ್ನ ಅಣ್ಣ ತಮ್ಮಂದಿರಿಗೂ ತನ್ನ ನೋವಿನ ಕರೆ ಕೊಟ್ಟಿದ್ದಳು.
ಹೌದು
ಅಂದು ಇದೆ
ಪ್ರಕೃತಿ ತಾನು ಕೋಪಗೊಳ್ಳುವುದಲ್ಲದೆ ತನ್ನ ಅಣ್ಣ ತಮ್ಮಂದಿರಂತಿದ್ದ ಮರ………… ಗಿಡ……….. ಕಲ್ಲು………… ಬಂಡೆ ಮಣ್ಣು……….. ಕೆಸರುಗಳಿಗೂ ಯುದ್ಧಕ್ಕೆ ಸನ್ನದ್ಧರಾಗಲು ಆಹ್ವಾನ ನೀಡಿದ್ದಳು,,,,,,,,,,,,,,,,,,,
ಅವಳು ಕರೆ ಕೊಟ್ಟಂತೆ ಅವರೆಲ್ಲರೂ ಸನ್ನದ್ಧರಾಗಿದ್ದರು.
ಇವರೆಲ್ಲರ ನೇತೃತ್ವ ವಹಿಸಿದ್ದಳು ಮತ್ತೊಬ್ಬಳು………….. ಅವಳು ಹೌದು ಅವಳೇ ಅವಳ ಪಾತ್ರವೇ ಮುಖ್ಯವಾಗಿತ್ತು….
ಅವಳು ತನ್ನ ವೇಗದ ಮಿತಿಯನ್ನು ಮೊದಲೇ ನಿರ್ಧರಿಸಿದ್ದಳು. ಹೌದು ಅವಳೇ ಜಲ,,,,,,,,,,,,,,,, ಜಲ ಕನ್ಯೆ,,,,,,,,,,, ಜಲದ ರಾಣಿ…
ಆದರೆ ಅಂದು ಅವಳು ತನ್ನನು ಶೃಂಗರಿಸಲೇ ಇಲ್ಲ.
ಅವಳ ಶೃಂಗಾರ ಅವಳ ಸೀರೆ ಎಲ್ಲವು ಆವಳು ನಿರ್ಗಮಿಸಿದ ಕೋಣೆಯಲ್ಲೇ ಬಿಟ್ಟಿದ್ದಳು.
ಅಂದು ಅವಳ ವಯ್ಯಾರ ಕಾಣಲೇ ಇಲ್ಲ.,,,,,,,,,,,,,,,,,,,,,,,
ಅತೀ ಕಾರವಾಗಿದ್ದಳು ಅತೀ ಭಯಂಕರವಾಗಿದ್ದಳು,,,,,,,,,,,, ಅತೀ ಕೋಪಗೊಂಡಿದ್ದಳು.
ಕೋಪದಿಂದ ಕಂಪಿಸುತಿದ್ದಳು. ಅದೆಷ್ಟೋ ಜನರು ಅವಳನ್ನು ಕೂಗಿ ಕರೆದರೂ ನಿಲ್ಲಲೂ ಇಲ್ಲ ತಿರುಗಿ ನೋಡಲೇ ಇಲ್ಲ…………
ಹೌದು………….. ಅವಳ ಕೋಣೆ ಹೊಕ್ಕು ನೋಡಿದಾಗ ಅಂದು ಆವಳು ಶೃಂಗಾರ ಮಾಡಲೇ ಇಲ್ಲ…………….
ತಾನು ಉಡುತಿದ್ದ ಹಸಿರು ಸೀರೆಯನ್ನ ಎಲ್ಲೆಂದರಲ್ಲಿ ಬಿಸಾಕಿದ್ದಳು.
ಅವಳ ಮುಗೂತಿ ಬೊಟ್ಟು ಅವಳ ಕುಂಕುಮ ಎಲ್ಲಾ ಚೆಲ್ಲಾ ಪಿಲ್ಲಿಯಾಗಿತ್ತು.
ಅವಳೇನೋ ಕೋಪಗೊಂಡು ಹೊರಟೇ ಹೋದಳು………….
ಆದರೆ ಅವಳ ನಿರ್ಗಮನದ ನಂತರ ನಡೆದ ದೃಶ್ಯ ನೋಡಲು ಅವಳಿಂದಲೂ ಸಾದ್ಯವಿರಲಿಲ್ಲ ಅನ್ನಿಸುವಂತಿತ್ತು.
ಅವಳ ಒಡಲಿಂದ ಅಗೆದು ಬಗೆದು ತೆಗೆದ ಎಲ್ಲಾ ವಸ್ತುಗಳು ಅವಳ ಒಡಲೊಳಗೆ ಅವಳಿಗೂ ಸಿಗದಂತೆ ಹುದುಗಿಸಿ ಹೋಗಿದ್ದಳು.
ವಸ್ತುಗಳೇನೋ ಕಿತ್ತುಕೊಂಡು ಹೋಗಿದ್ದಳು…………….. ಹೋಗಲಿ ಬಿಡಿ…………………. ಆದರೆ ಅವಳೇ ಪೋಷಿಸಿದ ಉಸಿರಾಡುವ ಕಂದಮ್ಮಗಳ ಕೈ ಕಾಲುಗಳನ್ನು ಬೇರ್ಪಡಿಸುವಷ್ಟು ಕೋಪ ಬೇಕಿತ್ತಾ………….. ನಿನಗೆ ಅನ್ನುವ ಕೋಪ ಎಲ್ಲರ ಮುಖದಲ್ಲೂ ಇತ್ತು……………..
ನಿನಗೆ ನಿನ್ನ ವಸ್ತುಗಳು ಬೇಕೆಂದಿದ್ದರೆ ಹಾಡ ಹಗಲೇ ಬಂದು ಕೊಂಡು ಹೋಗಬಹುದಿತ್ತು……………..
ನಿನ್ನನ್ನು ಯಾರು ತಡೆಯುವ ಸಾಹಸ ಮಾಡುತ್ತಿರಲಿಲ್ಲ. ಆದರೆ ಎಲ್ಲರು ನಿದ್ರೆಯಿಂದ ಅಮೇಲೇರಿರುವಾಗ ನೀ ಬಂದೆಯಲ್ಲ…….
ಇದು ಸರಿನಾ……………
ಆ ಎಳೆ ಕೂಸು ಕಂದಮ್ಮಗಳ ಕೈ ಕಾಲುಗಳನ್ನ ಎಲ್ಲೆಂದರಲ್ಲಿ ಎಳೆದಾಡಿ ಹೊದೆಯಲ್ಲಾ ಇದು ನ್ಯಾಯಾನಾ?
ಜಾತಿ ಜಾತಿ ಅಂತ ಹೊಡೆದಾಡುವ ಮನುಜರ ದೇಹಗಳನ್ನ ಯಾವ ಜಾತಿಯೆಂದು ಗುರುತು ಹಿಡಿಯಬಾರದು ಎಂದು ಎಲ್ಲಾ ಚೆಲ್ಲಾಪಿಲ್ಲಿಯಾಗಿಸಿ……………
ಹೆತ್ತ ತಂದೆಯೊಬ್ಬ ಅಯ್ಯೋ ಇದರಲ್ಲಿ ನನ್ನ ಮಗುವಿನ ಕೈ ಕಾಲುಗಳು ಯಾವುದಯ್ಯ………….. ಎಂದು ಬಿಕ್ಕಳಿಸಿ ಬೊಬ್ಬಿರಿಯುವಾಗ ನಿನ್ನ ಮನ ಕಲುಕಲಿಲ್ಲವೇ ? ????????????????
ಅಯ್ಯೋ ವಿಧಿಯೇ….. …!!!!!!!!!!!!!!!!!!!!!!!
ಯಾಕಿಷ್ಟು ಕ್ರೂರಿಯದೆ ನೀನು ?
ಗರ್ಭಿಣಿ ಹೆಂಗಸನ್ನು ಬಿಡದೆ ಸತಾಯಿಸಿದೆಯಲ್ಲ ತಾಯೀ…….
ಕೊನೆಯ ಒಂದು ಕ್ಷಮೆ ಅಥವಾ ಅವಕಾಶವನ್ನು ಕೊಟ್ಟು ನೋಡುತಿದ್ದೆಯಲ್ಲೇ ತಾಯಿ……
ಆ ಒಂದು ಸಣ್ಣ ಕಂದಮ್ಮನ ದೇಹ ನಿನ್ನ ಗಿಡಗಂಟಿಗಳು ಎಳೆದುಕೊಂಡು ಹೋದವಲ್ಲೇ ತಾಯಿ…….
ಅದೊಬ್ಬ ಯುವಕನನ್ನು ಬಾಯಿ ತೆರೆದು ಅರ್ಧಕ್ಕೆ ನುಂಗಿ ನಿಂತೆಯಲ್ಲೇ.
ನಿಜ ಹೇಳು ನಿನಗೆ ಹಿಂಸೆ ಮಾಡಿದವರು ನಿಜವಾಗಲೂ ಅಲ್ಲಿದ್ದವರೇನಾ ?
ನಿಜ ಹೇಳು……….. ಆ ಮುಗ್ಧ ಜನಗಳೇನಾ ?
ನಿಜ ಹೇಳು………. ಯೋಚಿಸಿ ನೋಡು…. ….
ನನ್ನ ಪ್ರಕಾರ ನಿನಗೆ ಹಿಂಸೆ ಮಾಡಿದವರು ಅಲ್ಲಿ ಇರಲೇ ಇಲ್ಲ.
ಅವರು ಅದೆಷ್ಟೋ ಸುರಕ್ಷಿತ ಜಾಗದಲ್ಲಿ ಸುರಕ್ಷಿತ ಮನೆಗಳಲ್ಲಿ ಬೆಚ್ಚಗೆ ಮಲಗಿದ್ದರು…………
ನಿಜ ತಾನೇ ?
ಎಮ್ಮೆಗೆ ಜ್ವರ ಬಂತು ಅಂತ ಎತ್ತಿಗೆ ಬರೆ ಹಾಕಿದರಂತೆ ಈ ಗಾದೆ ನಿಜ ಅನ್ನಿಸಲ್ವಾ ನಿನಗೆ ? ?????????????????
ನಾನು ನನ್ನದು…………. ನಾನು ಉತ್ತಮ………… ಅವ ಅಧಮ………… ಇವ ಮಧ್ಯಮ……………… ಇಂಥ ಅನೇಕ ಅನಿಸಿಕೆಗಳನ್ನೆಲ್ಲಾ ಅಡುಗೆಕೋಣೆಯ ಮುಸುರೆ ಬಟ್ಟೆಯಿಂದ ಒಂದೇ ಸಮನೆ ಒರೆಸಿಬಿಟ್ಟೆಯಲ್ಲ ತಾಯೀ………………..
ನಿನಗೆ ಹೇಳೋದಿಷ್ಟೇ……………… ತನ್ನ ಕಂದಮ್ಮಗಳು ತಪ್ಪು ಮಾಡಿದಾಗ ಹೆತ್ತ ತಾಯಿ ಸಣ್ಣ ಸಣ್ಣ ಪೆಟ್ಟುಗಳನ್ನು ನೀಡಿ ಸರಿ ಮಾಡುತ್ತಾಳೆಯೇ ಹೊರತು ಒಂದೇ ಸಮನೆ ಕತ್ತು ಕುಯ್ಯೋದ್ದಾಗಲಿ ನೇಣ್ ಹಾಕೋದಾಗಲಿ ಮಾಡೋದಿಲ್ಲ ಅಲ್ವೇ ………………..
ನಾನು ಹೇಳಿದ್ದರಿಂದ ನಿನಗೆ ನೋವಾದರೆ ಕ್ಷಮೆ ಇರಲಿ ಎಷ್ಟಾದರೂ ನಾವೆಲ್ಲ ಒಂದೇ ಅಲ್ಲವೇ ? ನಾವಿದ್ದರೆ ನೀನು ನೀನಿದ್ದರೆ ನಾವು……….
———————————————————————————–
ನಾನು ನೋಡಿದ ಗಮನಿಸಿದ ಮನಮುಟ್ಟವ ಸತ್ಯಘಟನೆಗಲ್ಲನ್ನೇ ಹೆಚ್ಚಾಗಿ ಬರೆಯಲಾಗಿದೆ. ನನ್ನ ಕಥೆ ಕವನ ಹಾಗು ನಿಜ ಜೀವನದ ನಿಶ್ಯಬ್ದ ಕಥೆಗಳು ಇಷ್ಟವಾದಲ್ಲಿ ನಿಮ್ಮ ಅನಿಸಿಕೆ ಬರೆಯಲು ಮರೆಯದಿರಿ ಇತರರಿಗೂ ಶೇರ್ ಮಾಡಲು ಮರೆಯದಿರಿ.
ನಿಶ್ಯಬ್ದ ಘಟನೆಗಳು
Leave feedback about this