INTERNATIONAL LATEST WITH HUB

ವಯನಾಡ್ ದುರಂತದಲ್ಲಿ ತನ್ನ ಕುಟುಂಬವನ್ನೇ ಕಳೆದ್ಕೊಂಡಿದ್ದ ಯುವತಿಯ ಜೀವನದಲ್ಲಿ ಮತ್ತೊಂದು ಘೋರ ದುರಂತ

ಮೆಪ್ಪಾಡಿ : ಇತ್ತೀಚಿಗೆ ಕೇರಳದ ವಯನಾಡಿನಲ್ಲಿ ನಡೆದ ಘೋರ ದುರಂತದ ಬಗ್ಗೆ ನಿಮಗೆಲ್ಲ ತಿಳಿದೇ ಇದೆ. ಈ ಘಟನೆಯಲ್ಲಿ ತನ್ನ ಕುಟುಂಬದ ಒಂಬತ್ತು ಮಂದಿ ಸದಸ್ಯರನ್ನು ಕಳೆದು ಕೊಂಡ ಶ್ರತಿಯ ಜೀವನದಲ್ಲಿ ಮತ್ತೊಂದು ಘೋರ ದುರಂತವೇ ನಡೆದಿದೆ.

ಇದೇ ಬರುವ ಡಿಸೆಂಬರ್ ನಲ್ಲಿ ಶ್ರುತಿಯ ಮದುವೆ ಜಿನ್ಸನ್ ಎಂಬ ಯುವಕನ ಜೊತೆಗೆ ನಿಶ್ಚಯವಾಗಿತ್ತು. ದುರಂತದ 40 ದಿನಗಳ ಬಳಿಕ ಶ್ರುತಿಯ ಸಂಬಂದಿಕರು ಮದುವೆಯ ತಯಾರಿಗೆಂದು ಮುಂದಾಗಿದ್ದರು. ಕುಟುಂಬದ ಎಲ್ಲಾ ಸದಸ್ಯರನ್ನು ಕಳೆದು ಕೊಂಡ ಶ್ರುತಿ ಮದುವೆ ಆಡಂಬರ ಇಲ್ಲದೆ ಸಿಂಪಲ್ಲಾಗಿ ರಿಜಿಸ್ಟರ್ ಮದುವೆಯಾಗಲು ನಿರ್ಧಾರ ಮಾಡಲಾಗಿತ್ತು.

ಸೆಪ್ಟೆಂಬರ್ 10 ರಂದು ಮಂಗಳವಾರ ಮದುವೆ ತಯಾರಿಗೆಂದು ಹೋಗುವಾಗ ಜಿನ್ಸನ್ ಚಲಾಯಿಸುತ್ತಿದ್ದ ಕಾರು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಜಿನ್ಸನ್ ಗಂಭೀರ ಗಾಯಗೊಂಡಿದ್ದು ಆತನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದರೂ ತಲೆ ಮತ್ತು ಮುಖ ಭಾಗಕ್ಕೆ  ಪೆಟ್ಟಾಗಿದ್ದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಸುಮಾರು 8 .50 ಕ್ಕೆ ಸಾವನ್ನಪಿದ್ದಾರೆ.

ಇದರಿಂದ ಹೊಸ ಜೀವನವನ್ನು ಕಟ್ಟಿ ಬಾಳಬೇಕಿದ್ದ ಶ್ರುತಿ ಜೀವನದಲ್ಲಿ ಮತ್ತೆ ಬಿರುಗಾಳಿಯೇ ಬೀಸಿದಂತಾಗಿದೆ .

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X