ಖರ್ಜೂರ ಹೇಗೆ ತಿನ್ನಬೇಕು ಯಾವ ಟೈಮಲ್ಲಿ ತಿನ್ನಬೇಕು?
ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕೆಂದು ಏನೆಲ್ಲ ಸರ್ಕಸ್ ಮಾಡ್ತೀವಿ. ಜಿಮ್, ವ್ಯಾಯಾಮ, ಡಯಟ್, ಆಹಾರದ ಲೆಕ್ಕಾಚಾರ ಮುಂತಾದ ಅನೇಕ ಪ್ರಯತ್ನಗಳನ್ನು ಮಾಡುತ್ತಿರುತ್ತೇವೆ. ಆರೋಗ್ಯ ಕಾಯ್ದುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ.
ಇಂದು ಬಹುತೇಕ ಜನರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಇದು ಅಲ್ಪಾವಧಿ ಅಥವಾ ದೀರ್ಘಕಾಲದ ಕಾಯಿಲೆ ಇರಬಹುದು ಒಂದೇ ರೀತಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ.
ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತ ವಯಸ್ಸಿನ ಅನುಗುಣವಾಗಿ ನೋಡಿಕೊಳ್ಳಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಖರ್ಜೂರವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಉಪವಾಸದ ಸಮಯದಲ್ಲಿ ಖರ್ಜೂರ ತಿನ್ನುವುದರಿಂದ ನಿರೋಧಕ ಶಕ್ತಿ ಸುಸ್ತಾಗದಂತೆ ನೋಡಿಕೊಳ್ಳುತ್ತದೆ. ಆರೋಗ್ಯದಲ್ಲಿ ಸಕ್ಕರೆ ಬೇಕೆಂದು ಅನಿಸಿದರೆ ಖರ್ಜೂರ ಸೇವನೆಯೂ ಆ ಕಡು ಬಯಕೆಗಳನ್ನು ಪೂರೈಸುತ್ತದೆ.
ಆಯುರ್ವೇದದ ಪ್ರಕಾರ ಖರ್ಜೂರವು ತಂಪು ಮತ್ತು ಹಿತವಾದ ಸ್ವಭಾವವನ್ನು ಹೊಂದಿದ್ದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಖರ್ಜೂರದಲ್ಲಿ ಹೆಚ್ಚಿನ ಫೈಬರ್ ಅಂಶವಿದೆ. ಇದು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯಮಾಡುತ್ತದೆ.
ಖರ್ಜೂರ ತಿನ್ನುವುದರಿಂದ ಅಧಿಕ ಕೊಲೆಸ್ಟ್ರಾಲ್ ಮಟ್ಟ ಮತ್ತು ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಖರ್ಜೂರದಲ್ಲಿ ಮೆಗ್ನೀಷಿಯಂ ಅಧಿಕವಾಗಿದೆ ಇದರಲ್ಲಿ ಸಾಕಷ್ಟು ವಿಟಮಿನ್ ಖನಿಜ ಫೈಬರ್ ಕ್ಯಾಲ್ಸಿಯಂ ಪೊಟಾಸಿಯಂ ಪಾಸ್ಪರಸ್ ಅಂಶಗಳು ಹೊಂದಿದೆ.
ಪ್ರತಿ ದಿನ ಖರ್ಜೂರವನ್ನು ಸೇವಿಸಬೇಕು ಮತ್ತು ಹೇಗೆ, ಯಾವ ಸಮಯದಲ್ಲಿ ಸೇವಿಸಿದರೆ ಉತ್ತಮ ಎಂದು ಇಲ್ಲಿ ಹೇಳಲಾಗಿದೆ.
ಕರ್ಜೂರದಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ ಗಳಿವೆ ನೋಡೋಣ ಬನ್ನಿ
ದಿನಾ ಹಸಿ ಖರ್ಜೂರ ತಿಂದರೆ ಹಾರ್ಟ್ ಅಟ್ಯಾಕ್ ಭಯ ಬೇಕಿಲ್ಲ.
ಹೃದಯದ ಆರೋಗ್ಯ ಸುಧಾರಿಸುತ್ತದೆ.
ಖರ್ಜೂರ ಸೇವನೆಯಿಂದ ಹೃದಯ ಆರೋಗ್ಯ ಕಾಯ್ದುಕೊಳ್ಳಬಹುದು, ಮತ್ತು ಚಳಿಗಾಲದಲ್ಲಿ ಹೃದಯಾಘಾತ ಹೆಚ್ಚು ಈ ಸಮಯದಲ್ಲಿ ದಿನಾಲು ಖರ್ಜೂರ ಸೇವಿಸುವುದರಿಂದ ಹೃದಯದ ಅಪಾಯವನ್ನು ತಡೆಯುತ್ತದೆ, ಮಲಬದ್ಧತೆ ತಡೆಯುತ್ತದೆ,
ಸೇವಿಸುವ ಆಹಾರ ಸರಿಯಾಗಿದ್ದರೆ ಕರುಳು ಸರಿಯಾಗಿ ಕೆಲಸ ಮಾಡುತ್ತದೆ ಕೆಲವೊಮ್ಮೆ ಕರುಳಿನ ಚಲನೆಯು ನಿಧಾನವಾದಾಗ ಮಲಬದ್ಧತೆ ಕಾಣಿಸಿಕೊಳ್ಳುತ್ತದೆ ಇದನ್ನು ತಡೆಯಲು ಖರ್ಜೂರ ಅತ್ಯುತ್ತಮ ಆಯ್ಕೆಯಾಗಿದೆ ಏಕೆಂದರೆ ಇದರಲ್ಲಿ ಕರಗುವ ಮತ್ತು ಕರಗದ ಫೈಬರ್ನ ಅಂಶ ಸಮೃದ್ಧವಾಗಿದೆ.
ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ
ಲೈಂಗಿಕ ಸಂಬಂಧ ಕಡಿಮೆಯಾಗಿದ್ದಲ್ಲಿ ಖರ್ಜೂರ ಸೇವಿಸುವುದರಿಂದ ಈ ಸಮಸ್ಯೆಯಿಂದ ದೂರ ಉಳಿಯಬಹುದು. ಏಕೆಂದರೆ ಇದು ಇಬ್ಬರ ನಡುವೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಆಯಾಸ ನಿವಾರಿಸುತ್ತದೆ
ಕೆಲಸ ಮಾಡಿಯೋ ಅಥವಾ ಇನ್ಯಾವುದೋ ಕಾರಣಕ್ಕೆ ಆಯಾಸ ಆಗುತ್ತಿದ್ದರೆ ಅಥವಾ ವೀಕ್ನೆಸ್ ಇರುವವರು ಖರ್ಜೂರ ಸೇವಿಸಿದರೆ ಆಯಾಸ ಕಡಿಮೆಯಾಗಿ ದೇಹಕ್ಕೆ ಅಗತ್ಯ ಶಕ್ತಿಯನ್ನು ಒದಗಿಸುತ್ತದೆ.
ರಕ್ತ ಹೀನತೆ ನಿಯಂತ್ರಣ
ಕಬ್ಬಿಣದ ಅಂಶದಿಂದ ಸಮೃದ್ಧವಾಗಿರುವ ಖರ್ಜೂರ ದೇಹದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮೂಲವ್ಯಾದಿ ತಡೆಯುತ್ತದೆ
ಅಧಿಕ ನಾರಿನಾಂಶ ಇರುವ ಖರ್ಜೂರ ಪೈಲ್ಸ್ ಗೆ ಸಹಾಯ ಮಾಡುತ್ತದೆ, ಉರಿಯೂತ ತಡೆಯುತ್ತದೆ, ಖರ್ಜೂರ ವು ಅನೇಕ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಸಂಧಿವಾತದಂತಹ ಸ್ವಯಂ ನಿರೋಧಕ ಅಸ್ವಸ್ಥತೆಗಳಿಗೆ ಸಹಾಯಮಾಡುತ್ತದೆ.
ಆರೋಗ್ಯಕರ ಗರ್ಭಧಾರಣೆ
ಕಬ್ಬಿಣದ ಅಂಶವು ಸಮೃದ್ಧವಾಗಿರುವುದರಿಂದ ಖರ್ಜೂರ ಸೇವಿಸುವುದರಿಂದ ಇದು ಗರ್ಭ ಚೀಲವನ್ನು ಬಲಗೊಳಿಸಿ ಮಗುವಿನ ಬೆಳವಣಿಗೆಗೆ ಸಹಕರಿಸುತ್ತದೆ. ಅಲ್ಲದೆ ಚರ್ಮ ಹಾಗೂ ಆರೋಗ್ಯಕರ ಕೂದಲ ಬೆಳವಣಿಗೆಗೂ ಸಹಾಯ ಮಾಡುತ್ತದೆ.
ಖರ್ಜೂರ ತಿನ್ನುವ ಸೂಕ್ತ ಸಮಯ
ಖರ್ಜೂರ ಡಯಟ್ ಫ್ರೆಂಡ್ಲಿಯಾಗಿದ್ದು ಯಾವಾಗ ಬೇಕು ಅವಾಗ ತಿನ್ನಬಾರದು. ಖರ್ಜೂರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಮಧ್ಯಾಹ್ನ ತಿಂಡಿಯಾಗಿ ಸೇವಿಸುವುದು ಒಳ್ಳೆಯ ಸಮಯ ಎಂದು ತಜ್ಞರು ಹೇಳಿದ್ದಾರೆ. ಸಿಹಿ ಬೇಕೆನಿಸಿದಾಗ ತೂಕ ಹೆಚ್ಚಿಸಿಕೊಳ್ಳಲು ಮಲಗುವ ಸಮಯದಲ್ಲಿ ತುಪ್ಪದೊಂದಿಗೆ ಖರ್ಜೂರವನ್ನು ಸೇವಿಸುವುದು ಒಳ್ಳೆಯದು ಪ್ರಾರಂಭದಲ್ಲಿ ಎರಡು ಕರ್ಜೂರವನ್ನು ತುಪ್ಪದೊಂದಿಗೆ ಸೇವಿಸಿದರೆ ತೂಕ ಹೆಚ್ಚಿಸಿಕೊಳ್ಳಲು ಹಾಗೂ ಜೀರ್ಣಕ್ರಿಯೆಗೆ ಉತ್ತಮವಾಗಿದೆ.
ಖರ್ಜೂರ ಏಕೆ ನೆನಸಿಡಬೇಕು
ಖರ್ಜೂರವನ್ನುನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ಬಹಳ ಒಳ್ಳೆಯದು ಇದು ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳಲು ಸಹಾಯಮಾಡುತ್ತದೆ. ನೀರಿನಲ್ಲಿ ನೆನೆಸುವುದರಿಂದ ಅವುಗಳನ್ನು ಲಘುವಾಗಿ ಅಥವಾ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಖರ್ಜೂರ ಸೇವ ಮೊದಲು ಸುಮಾರು ಎಂಟರಿಂದ 10 ಗಂಟೆಗಳ ಕಾಲ ಅಥವಾ ರಾತ್ರಿ ಇಡಿ ನೆನೆಸುವುದು ಒಳ್ಳೆಯದು.
Leave feedback about this