MOTIVATIONAL TIPS 4 LIFE

ಮನದೊಳಗಿನ ಅದ್ಬುತ ಶಕ್ತಿ -ಅವನ ಮಾತಿಗೆ ಎಲ್ಲರೂ ತಲೆಯಾಡಿಸಿದರು. ನಮ್ಮ ಇತಿಹಾಸದ ಪುಟವನ್ನೊಮ್ಮೆ ತಿರುವಿ ನೋಡಿದಾಗ ಯಾರು ತಮ್ಮೊಳಗಿನ ಶಕ್ತಿಯನ್ನು ಅರಿತಿರುವನೋ ಅವರೇ ಪರಿಪೂರ್ಣ ಜ್ಞಾನಿ.

ಮನದೊಳಗಿನ ಅದ್ಬುತ ಶಕ್ತಿ

ಒಮ್ಮೆ ಸ್ವರ್ಗದಲ್ಲಿ ದೇವಾನುದೇವತೆಗಳ ನಡುವೆ ಗಂಭೀರ ಚರ್ಚೆ ನಡೆಯುತ್ತಿತ್ತು. ಚರ್ಚೆಯ ವಿಷಯ “ಮನುಷ್ಯನಿಗೆ ಗೊತ್ತಾಗದ ಹಾಗೆ ಅದ್ಭುತವಾದ ಶಕ್ತಿಯನ್ನು ಎಲ್ಲಿ ಅಡಗಿಸುವುದು ಎಂಬುದಾಗಿತ್ತು”.
ಆಗ ದೇವನೊಬ್ಬ “ಅದನ್ನು ಸಾಗರದ ಆಳದಲ್ಲಿ ಬಚ್ಚಿಡಬೇಕು ಎಂದು ಸಲಹೆ ನೀಡಿದ. ಮತ್ತೊಬ್ಬ ನುಡಿದ ಪರ್ವತದ ಶಿಖರಗಳಲ್ಲಿ ಅಡಗಿಸಿಡಬಹುದು, ಇನ್ನೊಬ್ಬ ದೇವಾ ದಟ್ಟ ಕಾಡುಗಳ ನಡುವೆ ಹುಡುಗಿಸಿಟ್ಟರೆ ಹೇಗೆ ? ಎಂದು ಪ್ರಶ್ನಿಸಿದ.

ಅಷ್ಟರಲ್ಲಿ ಬುದ್ದಿವಂತ ದೇವನೊಬ್ಬ “ಅದ್ಬುತ ಶಕ್ತಿಯನ್ನು ಮನುಷ್ಯನ ಮನಸ್ಸಿನ ಅಂತರಾಳದಲ್ಲಿ ಹುಡುಗಿಸಿಡೋಣ. ಸದಾ ಲೌಕಿಕ ವಿಚಾರದಲ್ಲೇ ಮುಳುಗಿದ ತನ್ನೊಳಗಿನ ಶಕ್ತಿಯನ್ನು ಪರಿಗಣಿಸುವುದೇ ಇಲ್ಲ. ಯಾರೋ ಒಬ್ಬ ಚಾಣಾಕ್ಷ ಅದನ್ನು ಅರಿತು ಮಹಾತ್ಮನೆನಿಸಿಕೊಳ್ಳುತ್ತಾನೆ ಎಂದ.

ಅವನ ಮಾತಿಗೆ ಎಲ್ಲರೂ ತಲೆಯಾಡಿಸಿದರು. ನಮ್ಮ ಇತಿಹಾಸದ ಪುಟವನ್ನೊಮ್ಮೆ ತಿರುವಿ ನೋಡಿದಾಗ ಯಾರು ತಮ್ಮೊಳಗಿನ ಶಕ್ತಿಯನ್ನು ಅರಿತಿರುವನೋ ಅವರೇ ಪರಿಪೂರ್ಣ ಜ್ಞಾನಿ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X