ಪ್ರತಿದಿನ ಬೆಳಿಗ್ಗೆ ಐಸ್ ನೀರಿನಲ್ಲಿ ಮುಖ ತೊಳೆದರೆ ಇದು ನಿಮ್ಮ ರಕ್ತ ಪರಿಚಲನೆ ಹೆಚ್ಚಿಸಿ ಮುಖದ ಚರ್ಮವನ್ನು ಬಿಗಿಯಾಗಿಸುತ್ತದೆ.
ಸುಮಾರು 10 ನಿಮಿಷ ಐಸ್ ನ್ನು ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಂಡರೆ ಕಣ್ಣಿನ ಕೆಳಗೆ ಉಂಟಾಗುವ ಚೀಲಗಳು ಕಡಿಮೆಯಾಗುತ್ತವೆ.
ಸ್ನಾನದ ನಂತರ ಮಂಜುಗಡ್ಡೆಯಿಂದ ನಿಮ್ಮ ಮುಖವನ್ನು ಮುಚ್ಚಿದರೆ ಇದು ಮುಖದಲ್ಲಿರುವ ರಂದ್ರಗಳನ್ನು ಕುಗ್ಗಿಸಿ ಮುಖ ಹೊಳೆಯುವಂತೆ ಮಾಡುತ್ತದೆ.
ಐಸನ್ನು ಮೊಡವೆಯ ಮೇಲೆ ಸ್ವಲ್ಪ ಸಮಯ ಉಜ್ಜಿದರೆ ಅದು ಮೊಡವೆಯನ್ನು ಹೋಗಲಾಡಿಸುತ್ತದೆ.
ಐಸ್ ನ್ನು ಮುಖ ಹಾಗು ಇತರ ಭಾಗಗಳಿಗೆ ಉಜ್ಜುವುದರಿಂದ ಸುಕ್ಕು ನೆರಿಗೆಗಳು ಕಡಿಮೆಯಾಗಿ ಯಾವಸ್ಸಾದಂತೆ ಕಾಣುವುದನ್ನು ತಡೆಯುತ್ತದೆ.
ಮೊಡವೆಗಳಿಂದ ಮುಖದ ಮೇಲೆ ಉಂಟಾಗುವ ರಂಧ್ರಗಳನ್ನು ಐಸ್ ಕಡಿತಗೊಳಿಸುತ್ತದೆ.
ಐಸ್ ನ್ನು ಒಡೆದ ತುಟಿಗಳ ಮೇಲೆ ಉಜ್ಜುವುದರಿಂದ ತುಟಿಗಳನ್ನು ಒಡೆಯುದನ್ನು ತಡೆಯಬಹುದು.