DID U KNOW

ಭೂಮಿಯ ಒಳಗೆ ಹೇಗಿರುತ್ತದೆ ? -ನಿಮಗಿದು ಗೊತ್ತೆ?

ಭೂಮಿಯು ಮುಖ್ಯವಾಗಿ ಮೂರು ಪದರಗಳಿಂದ ಕೂಡಿದೆ. ನಾವಿರುವ ಭಾಗ ಭೂಮಿಯ ಹೊರಪದರ( Earth’s Crust). ಅದರ ಕೆಳಗಿನ ಪದರ ಕಬ್ಬಿಣ ಮತ್ತು ಮೆಗ್ನೀಷಿಯಂ ಹಾಗೂ ದೊಡ್ಡ ಬಂಡೆಗಳಿಂದ ಕೂಡಿದೆ. ಈ ಪದರಕ್ಕೆ (Mantle)ಎಂದು ಹೆಸರು. ಭೂಮಿಯ ಮಧ್ಯಭಾಗ ಅಥವಾ ಭೂಗರ್ಭವನ್ನು ಕೋರ್ (Core)ಎಂದು ಕರೆಯಲಾಗುತ್ತದೆ.

ಭೂಮಿಯ ಮೇಲ್ಪದರ ತುಂಬಾ ಗಟ್ಟಿಯಾಗಿರುತ್ತದೆ. ಈ ಪದರದ ದಪ್ಪ 16 ಕಿಲೋಮೀಟರ್ ಗಳಿಂದ 50 ಕಿಲೋಮೀಟರ್ಗಳ ವರೆಗೆ ಇರುತ್ತದೆ. ಸಾಗರದ ತಳದಲ್ಲಿ ಇದು ಸುಮಾರು ಐದು ಕಿಲೋಮೀಟರ್ಗಳಷ್ಟಕ್ಕೆ ಇಳಿಯುತ್ತದೆ. ಈ ಪದರ ಮುಖ್ಯವಾಗಿ ಸಿಲಿಕಾನನ್ನು ಒಳಗೊಂಡಿದೆ.  ಈ ಹೊರ ಪದರ ಭೂಮಿಯ ಒಟ್ಟು ಪರಿಮಾಣದ ಶೇಕಡ 1 ರಷ್ಟು ಮಾತ್ರ ಇದೆ.

ಭೂಮಿಯ ಹೊರ ಪದರದಿಂದ ಕೆಳಕ್ಕೆ ಹೋಗುತ್ತಿದ್ದಂತೆ ಉಷ್ಣಾಂಶ ಹೆಚ್ಚುತ್ತದೆ. ಭೂಮಿಯ ಮಧ್ಯಭಾಗ ಮ್ಯಾಂಟಲ್ ಭೂಮಿಯ ಒಂದು ಪ್ರಮಾಣದಲ್ಲಿ 84 ಭಾಗವನ್ನು ಆವರಿಸಿದೆ. ಇಲ್ಲಿ ದ್ರವರೂಪದ ಲೋಹವನ್ನು ನೋಡಬಹುದು ಇಲ್ಲಿ 50 ರಿಂದ 9000 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇರುತ್ತದೆ. ಭೂಮಿಯ ಮಧ್ಯಭಾಗ ಅಂದರೆ ಕೋರ್ ಅತ್ಯಧಿಕ ಸಾಂದ್ರತೆ ಉಳ್ಳ ಘನ ಪಧಾರ್ಥಗಳನ್ನು ಮುಖ್ಯವಾಗಿ ಕಬ್ಬಿಣ, ಮತ್ತು ನಿಕ್ಕಲ್ ಗಳನ್ನು ಹೊಂದಿರುತ್ತದೆ. ಅದರ ವ್ಯಾಸ 2560 ಕಿಲೋಮೀಟರ್ ಉಷ್ಣಾಂಶ 8000 ಡಿಗ್ರಿ ಸೆಲ್ಸಿಯಸ್ ಅದರ ಗಾತ್ರ ಭೂಮಿಯ ಗಾತ್ರದ ಶೇಕಡ 15ರಷ್ಟು ಇರುತ್ತದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X